ಆಟೋ ಎಕ್ಸ್ ಪೋ 2018: ಟ್ಯೂನೊ 150 ಮತ್ತು ಆರ್‌ಎಸ್ 150 ಬೈಕ್‌ಗಳನ್ನು ಪ್ರದರ್ಶಿಸಿದ ಎಪ್ರಿಲಿಯಾ

Written By: Rahul

ಇಟಲಿ ಮೂಲದ ಎಪ್ರಿಲಿಯಾ ಸಂಸ್ಥೆಯು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋನಲ್ಲಿ ತನ್ನ ಎರಡು ಹೊಸ ಬಗೆಯ ಟ್ಯೂನೊ 150 ಮತ್ತು ಆರ್‌ಎಸ್ 150 ಬೈಕುಗಳನ್ನು ಪ್ರದರ್ಶನಗೊಳಿಸಿದ್ದು, ಟ್ಯೂನೊ 150 ನಕೆಡ್ ಸ್ಟ್ರೀಟ್-ಫೈಟರ್ ಮತ್ತು ಆರ್ ಎಸ್ 150 ಆಕರ್ಷಕ ನೋಟ ಹೊಂದಿರುವ ಮೋಟಾರ್ ಸೈಕಲ್‌ಗಳಾಗಿವೆ.

ಆಟೋ ಎಕ್ಸ್ ಪೋ 2018: ಟ್ಯೂನೊ 150 ಮತ್ತು ಆರ್‌ಎಸ್ 150 ಬೈಕ‌್ಗಳನ್ನು ಪ್ರದರ್ಶಿಸಿದ ಎಪ್ರಿಲಿಯಾ

ಹಾಗೆಯೇ ಈ ಎರಡು ಬೈಕ್ ಗಳು ಲೀಟರ್-ಕ್ಲಾಸ್ ಆರ್ ಎಸ್ ವಿ4 ಮತ್ತು ಟ್ಯೂನೊ ವಿ4 ಬೈಕ್ ಗಳಿಂದ ಸ್ಪೂರ್ತಿ ಪಡೆದಿದ್ದು, ಎಪ್ರಿಲಿಯಾ ಸಂಸ್ಥೆಯು ಭಾರತದಲ್ಲಿ ಪರಿಚಯಿಸಲಿರುವ ಟ್ಯೂನೊ 150 ಮತ್ತು ಆರ್ ಎಸ್ 150 ಬೈಕುಗಳು ಮಾರುಕಟ್ಟೆಯಲ್ಲಿ ಬಿಡುಗಡೆಗು ಮುನ್ನವೆ ಸದ್ದು ಮಾಡಲು ಶುರುಮಾಡಿದೆ.

ಆಟೋ ಎಕ್ಸ್ ಪೋ 2018: ಟ್ಯೂನೊ 150 ಮತ್ತು ಆರ್‌ಎಸ್ 150 ಬೈಕ‌್ಗಳನ್ನು ಪ್ರದರ್ಶಿಸಿದ ಎಪ್ರಿಲಿಯಾ

ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಟ್ಯೂನೊ 150 ಮತ್ತು ಆರ್ ಎಸ್ 150 ಬೈಕುಗಳು 125 ಸಿಸಿ ಮಾದರಿಗಳಲ್ಲಿ ದೊರೆಯುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಇದೇ ಬೈಕುಗಳನ್ನು 150 ಸಿಸಿ ಬೈಕ್ ಗಳಾಗಿ ಬಿಡುಗಡೆಗೊಳ್ಳಬೇಕೆಂಬ ಸದ್ದು ಕೇಳಿಬರುತ್ತಿದೆ.

ಆಟೋ ಎಕ್ಸ್ ಪೋ 2018: ಟ್ಯೂನೊ 150 ಮತ್ತು ಆರ್‌ಎಸ್ 150 ಬೈಕ‌್ಗಳನ್ನು ಪ್ರದರ್ಶಿಸಿದ ಎಪ್ರಿಲಿಯಾ

ಎಂಜಿನ್ ಸಾಮರ್ಥ್ಯ

ಎಪ್ರಿಲಿಯಾ ಆರ್ ಎಸ್ 150 ಮತ್ತು ಟ್ಯೂನೊ 150 ಬೈಕ್ ಗಳು ಒಂದೇ ರೀತಿಯಾದ ಫ್ಯುಯಲ್ ಇಂಜೆಕ್ಟೆಡ್ ಎಂಜಿನನ್ನು ಹೊಂದಿದ್ದು, 17ಬಿಹೆಚ್ ಪಿ ಮತ್ತು 14ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಆಟೋ ಎಕ್ಸ್ ಪೋ 2018: ಟ್ಯೂನೊ 150 ಮತ್ತು ಆರ್‌ಎಸ್ 150 ಬೈಕ‌್ಗಳನ್ನು ಪ್ರದರ್ಶಿಸಿದ ಎಪ್ರಿಲಿಯಾ

ಇನ್ನು ಬೈಕುಗಳ ಬ್ರೇಕ್ ವಿಷಯಕ್ಕೆ ಬಂದಾಗ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದ ಚಕ್ರದಲ್ಲಿ 218 ಎಂಎಂ ಡಿಸ್ಕ್ ಹೊಂದಿದ ಎಬಿಎಸ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.

ಆಟೋ ಎಕ್ಸ್ ಪೋ 2018: ಟ್ಯೂನೊ 150 ಮತ್ತು ಆರ್‌ಎಸ್ 150 ಬೈಕ‌್ಗಳನ್ನು ಪ್ರದರ್ಶಿಸಿದ ಎಪ್ರಿಲಿಯಾ

ಎಪ್ರಿಲಿಯಾ ಸಂಸ್ಥೆಯು ಈ ಬೈಕ್ ಗಳನ್ನು ಪ್ರದರ್ಶನಗೊಳಿಸಿ, ಭಾರತದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುವ ತವಕದಲ್ಲಿದ್ದು, ಇನ್ನು ಬೈಕುಗಳ ಬಿಡುಗಡೆಯ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆಯಲಿದೆಯೆಂದು ಕಾದು ನೋಡಬೇಕಿದೆ.

ಆಟೋ ಎಕ್ಸ್ ಪೋ 2018: ಟ್ಯೂನೊ 150 ಮತ್ತು ಆರ್‌ಎಸ್ 150 ಬೈಕ‌್ಗಳನ್ನು ಪ್ರದರ್ಶಿಸಿದ ಎಪ್ರಿಲಿಯಾ

ಜೊತೆಗೆ ಈ ಬೈಕುಗಳು ಇತ್ತೀಚೆಗೆ ಬಿಡುಗಡೆಗೊಂಡ ಯಮಹಾ ಆರ್15 ವಿ3 ಮತ್ತು ಸುಜುಕಿ ಜಿಕ್ಸರ್ ಎಸ್ಎಫ್ ಬೈಕುಗಳಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಲಿದ್ದು, ಯುವ ಸಮುದಾಯದ ನೆಚ್ಚಿನ ಆಯ್ಕೆಯಾಗಲಿದೆ.

English summary
Aprilia Tuono 150 And RS 150 Showcased - Launch Date & Price, Specs.
Story first published: Saturday, February 10, 2018, 19:45 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark