ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಬಜಾಜ್ ಆಟೊ ಸಂಸ್ಥೆಯು ಕೆಲದಿನಗಳ ಹಿಂದೆ ತನ್ನ ಹೊಸ ಅವೆಂಜರ್ ಸ್ಟ್ರೀಟ್ 180 ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಅವೆಂಜರ್ ಸ್ಟ್ರೀಟ್ 150 ಬೈಕಿನ ಮುಂದುವರೆದ ಕ್ರೂಸರ್ ಮಾದರಿಯಾಗಿದೆ.

By Rahul Ts

ಬಜಾಜ್ ಆಟೊ ಸಂಸ್ಥೆಯು ಕೆಲದಿನಗಳ ಹಿಂದೆ ತನ್ನ ಹೊಸ ಅವೆಂಜರ್ ಸ್ಟ್ರೀಟ್ 180 ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಅವೆಂಜರ್ ಸ್ಟ್ರೀಟ್ 150 ಬೈಕಿನ ಮುಂದುವರೆದ ಕ್ರೂಸರ್ ಮಾದರಿಯಾಗಿದೆ. ಇನ್ನು ಅವೆಂಜರ್ ಸ್ಟ್ರೀಟ್ 180 ಬೈಕ್ 180ಸಿಸಿ ಬೈಕ್ ಸರಣಿಯಲ್ಲಿ ಎಂಟ್ರಿ ಲೆವೆಲ್ ಬೈಕ್ ಆಗಿದ್ದು, ಸುಜುಕಿ ಇನ್‌ಟ್ರುಡರ್ 150 ಬೈಕಿಗೆ ತೀವ್ರ ಪೈಪೋಟಿ ನೀಡಲಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಕ್ರೂಸರ್ ಬೈಕ್‌ಗಳಲ್ಲಿ ಸದ್ಯ ಬಜಾಜ್ ಅವೆಂಜರ್ ಸ್ಟ್ರೀಟ್ 180 ಮತ್ತು ಸುಜುಕಿ ಇನ್‌ಟ್ರುಡರ್ 150 ಬೈಕ್‍ಗಳ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಆಧುನಿಕ ವಿನ್ಯಾಸಗಳನ್ನು ಹೊಂದಿರುವ ಇವೆರಡು ಬೈಕ್‌ಗಳಲ್ಲಿ ಯಾವುದು ಉತ್ತಮವೆಂಬ ಮಾಹಿತಿ ಇಲ್ಲಿದೆ ನೋಡಿ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಡಿಸೈನ್

ಬಜಾಜ್ ಅವೆಂಜರ್ ಸ್ಟ್ರೀಟ್ 180 ಬೈಕ್ ಅವೆಂಜರ್ ಸ್ಟ್ರೀಟ್ 220 ಬೈಕಿನ ವಿನ್ಯಾಸವನ್ನು ಪಡೆದಿದ್ದು, ಮುಂಭಾಗದಲ್ಲಿ ಎಲ್ಇಡಿ ಡಿಆರ್‍ಎಲ್ ಕ್ಲಾಸಿಕ್ ಹೆಡ್‍ಲ್ಯಾಂಪ್, ಚಿಕ್ಕ ವಿಂಡ್‍ಸ್ಕ್ರೀನ್ ಮತ್ತು ಅಗಲವಾದ ಹ್ಯಾಂಡಲ್‍ಬಾರ್‍ ಅನ್ನು ಹೊಂದಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಇನ್ನು ಬೈಕಿನ ಸೈಡ್ ಪ್ರೊಫೈಲ್ ಕೂಡ ಅವೆಂಜರ್ ಸ್ಟ್ರೀಟ್ 220 ಮಾದರಿಯಂತೆಯೇ ಟೆಯರ್‍ ಡ್ರಾಪ್ ಫ್ಯುಯಲ್ ಟ್ಯಾಂಕ್ ಮತ್ತು ಸ್ಕಲ್ಪ್ಟೆಡ್ ಬಾಡಿ ಪ್ಯಾನೆಲ್‍ಗಳನ್ನು ಹೊಂದಿದೆ. ಇದಲ್ಲದೆ ಈ ಬೈಕ್ ಬಜಾಜ್ ವೀ ಸರಣಿ ಮಾದರಿಯ ಬಾಡಿ ಗ್ರಾಫಿಕ್ ಅನ್ನು ಪಡೆದಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಟೈಲ್ ಸೆಕ್ಷನ್ ಪಿಲ್ಲಿಯಾನ್ ಗ್ರಾಬ್ ರೈಲ್ ಮತ್ತು ಚಿಕ್ಕ ಫೆಂಡರ್‍ ಅನ್ನು ಹೊಂದಿರಲಿದ್ದು, ಕ್ಲಾಸಿಕ್ ಎಕ್ಸಾಸ್ಟ್ ಬೈಕಿಗೆ ವಿನೂತನ ಮಾದರಿಯ ಕ್ರೂಸರ್ ಲುಕ್ ಅನ್ನು ನೀಡಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಸುಜುಕಿ ಇನ್‌ಟ್ರುಡರ್ 150 ಬೈಕ್ ಆವೃತ್ತಿಯು ಇನ್‌ಟ್ರುಡರ್ ಎಮ್1800 ಬೈಕಿನ ವಿನ್ಯಾಸವನ್ನು ಹೊಂದಿರಲಿದ್ದು, ಕ್ಲಾಸಿಕ್ ಮತ್ತು ಆಧುನಿಕ ಡಿಸೈನ್‍ನ ಮಿಶ್ರಣವಾಗಿದೆ. ಎಲ್ಇಡಿ ಡಿಆರ್‍ಎಲ್ ಹೊಂದಿರುವ ತ್ರಿಕೋನಾವೃತಿಯ ಹೆಡ್‍ಲ್ಯಾಂಪ್, ಫ್ಲೋಟಿಂಗ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಚಿಕ್ಕ ಕ್ರಾವ್ಲ್ ಗಳನ್ನು ಹೊಂದಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಅವೆಂಜರ್ ಬೈಕಿಗೆ ಹೋಲಿಸಿದರೆ ಇನ್‌ಟ್ರುಡರ್ 150 ಬೈಕ್ ಹೆಚ್ಚು ಆಧುನಿಕತೆ ಮತ್ತು ವಿನೂತನ ಶೈಲಿಯನ್ನು ಹೊಂದಿದ್ದು, ಸೈಡ್ ಪ್ರೋಫೈಲ್ ವಿಷಯದಲ್ಲಿ ಇಂಟ್ರೂಡರ್ ಬೈಕ್ ದಟ್ಟವಾದ ಶ್ರಾಡ್‍ಗಳನ್ನು ಹೊಂದಿರುವ ಮಸ್ಕ್ಯುಲಾರ್ ಫ್ಯುಯಲ್ ಟ್ಯಾಂಕ್ ಪಡೆದಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಇನ್‌ಟ್ರುಡರ್ 150ಯಲ್ಲಿ ಎಂಜಿನ್ ಬೆಲ್ಲಿ ಪ್ಯಾನ್‍ ಕೂಡಾ ಇದ್ದು, ಇದರ ಸ್ಕಲ್ಪ್ಟೆಡ್ ರೀರ್ ಕಾವ್ಲ್ ಹಯಾಬುಸಾ ವಿನ್ಯಾಸವನ್ನು ಹೋಲಿಕೆ ಇದೆ. ಡ್ಯುಯಲ್ ಪೋರ್ಟ್ ಮಫ್ಲರ್ ನೊಂದಿಗೆ ಕ್ರೋಮ್ ಟ್ರೀಟ್ಮೆಂಟ್ ಬೈಕಿಗೆ ಪ್ರೀಮಿಯಂ ಟಚ್ ನೀಡಿದೆ.

ಡಿಸೈನ್ ರೇಟಿಂಗ್

ಬಜಾಜ್ ಅವೆಂಜರ್ ಸ್ಟ್ರೀಟ್ 180 - 8/10

ಸುಜುಕಿ ಇನ್‌ಟ್ರುಡರ್ 150 - 8/10

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ವೈಶಿಷ್ಟ್ಯತೆಗಳು

ಬಜಾಜ್ ಅವೆಂಜರ್ ಸ್ಟ್ರೀಟ್ 180 ಬೈಕ್ ಎಲ್ಇಡಿ ಡಿಆರ್‍ಎಲ್ ಹೊಂದಿರುವ ಹೊಸ ರೋಡ್‍ಸ್ಟರ್ ವಿನ್ಯಾಸದ ಹೆಡ್‍ಲ್ಯಾಂಪ್, ಹೊಸ ಬಾಡಿ ಗ್ರಾಫಿಕ್ಸ್ ನೊಂದಿಗೆ ಅಗಲಾವಾದ ಇಗ್ನಿಸ್, ಹೊಸ ಟೈಲ್‍ಲ್ಯಾಂಪ್, ಅಗಲಾವಾದ ಹ್ಯಾಂಡಲ್‍ಬಾರ್, ಲೋ ಸ್ಲಂಗ್ ಸೀಟಿನ ಸ್ಥಿತಿ ಮತ್ತು ಪಿಲ್ಲಿಯಾನ್ ಗ್ರಾಬ್ ರೈಲ್ ವೈಶಿಷ್ಟ್ಯಗಳನ್ನು ಪಡೆದಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಇನ್ನು ಬೈಕ್ ಹೊಸ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್‍ಅನ್ನು ಹೊಂದಿಲ್ಲದಿರುವುದನ್ನು ನಾವು ಕಾಣಬಹುದಾಗಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಹೊಸದಾಗಿ ಬಜಾಜ್ ಅವೆಂಜರ್ ಸ್ಟ್ರೀಟ್ 180 ಅಪ್‍ಫ್ರಾಂಟ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಡ್ಯುಯಲ್ ಶಾಕ್‌ಬ್ಸರ್ ಅನ್ನು ಹಿಂಭಾಗದಲ್ಲಿ ಪಡೆದಿದ್ದು, ಮುಂಭಾಗದಲ್ಲಿ 260ಎಂಎಂ ಡಿಸ್ಕ್ ಬ್ರೆಕ್ ಮತ್ತು ಹಿಂಭಾಗದಲ್ಲಿ 130ಎಂಎಂ ಡಿಸ್ಕ್ ಬ್ರೇಕಿಂಗ್ ಸಿಸ್ಟಾಂಅನ್ನು ಹೊಂದಿರಲಿದೆ. ಇನ್ನು ಈ ಬೈಕ್ ಟ್ಯೂಬ್‍ಲೆಸ್ ಟೈರ್ ಹೊಂದಿದ ಅಲಾಯ್ ವೀಲ್‍ಗಳನ್ನು ಪಡೆದಿದ್ದು 13 ಲೀಟರ್‍‍ನ ಫ್ಯುಯಲ್ ಟ್ಯಾಂಕನ್ನು ಹೊಂದಿರಲಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಸುಜುಕಿ ಇನ್‌ಟ್ರುಡರ್ 150 ಸ್ಪೋರ್ಟ್ಸ್ ಎಲ್ಇಡಿ ಪೊಸಿಶನ್ ಲ್ಯಾಂಪ್ ಹೊಂದಿರುವ ಸ್ಟೈಲಿಶ್ ಹೆಡ್‍ಲ್ಯಾಂಪ್ ಪಡೆದಿದ್ದು, ಎಲ್ಇಡಿ ಟೈಲ್ ಲೈಟ್, ಪ್ರೀಮಿಯಂ ಇಂಟ್ರುಡರ್ ಬಾಡ್ಜಿಂಗ್, ಟ್ವಿನ್ ಎಕ್ಸಾಸ್ಟ್ ಮಫ್ಲರ್ ಮತ್ತು ಸೆಟ್ ಫೂಟ್‍ಪೆಗ್ಸ್ ಅನ್ನು ಪಡೆದಿದೆ. ಇನ್ನು ಲೋ ಸ್ಲಂಗ್ ರೈಡರ್ ಸೀಟ್, ಮತ್ತು ಪಿಲ್ಲಿಯಾನ್ ಸೀಟ್ ಧೀರ್ಘಕಾಲದ ಪ್ರಯಾಣಕ್ಕೆ ಸಹಾಯ ಮಾಡುತ್ತದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಅಪ್ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಸಸ್ಪೆಷನ್ ಅನ್ನು ಪಡೆದಿದೆ. ಇನ್ನು ಈ ಬೈಕಿನಲ್ಲಿ ಎರಡು ಬದಿಯಲ್ಲಿ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದ ವೀಲ್‍ಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಒದಗಿಸಲಾಗಿದೆ. ಸ್ಟ್ರೀಟ್ 180 ಬೈಕಿಗೆ ಹೋಲಿಸಿದರೆ ಬ್ರೇಕಿಂಗ್ ಸಿಸ್ಟಂ ವಿಭಾಗದಲ್ಲಿ ಇನ್‌ಟ್ರುಡರ್ 150 ಬೈಕ್ ಹೆಚ್ಚಿನ ಸೇಫ್ಟಿ ಸಿಸ್ಟಂ ಅನ್ನು ಪಡೆದಿದೆ.

ವೈಶಿಷ್ಟ್ಯಗಳ ರೇಟಿಂಗ್

ಬಜಾಜ್ ಅವೆಂಜರ್ ಸ್ಟ್ರೀಟ್ 180 - 7/10

ಸುಜುಕಿ ಇನ್‌ಟ್ರುಡರ್ 150- 9/10

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಎಂಜಿನ್ ಸಾಮರ್ಥ್ಯ

ಬಜಾಜ್ ಅವೆಂಜರ್ ಸ್ಟ್ರೀಟ್ 180 ಬೈಕ್ 178 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 15.3 ಬಿಹೆಚ್‍ಪಿ ಮತ್ತು 13.7 ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇ‍ರ್‍‍ಬಾಕ್ಸಿಗೆ ಜೋಡಿಸಲಾಗಿದೆ. 13 ಲೀಟರ್ ಫ್ಯುಯಲ್ ಟ್ಯಾಂಕ್ ಮತ್ತು150 ಕಿಲೋಗ್ರಾಂ ತೂಕವನ್ನು ಪಡೆದಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಸುಜುಕಿ ಇನ್‌ಟ್ರುಡರ್ 150 ಬೈಕ್ 154 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್, 14 ಬಿಹೆಚ್‍ಪಿ ಮತ್ತು 14 ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ಟಿಯನ್ನು ಪದೆದಿದ್ದು, 5 ಸ್ಪೀಡ್ ಗೇರ್‍‍‍ಬಾಕ್ಸಿಗೆ ಜೋಡಿಸಲಾಗಿದೆ. 11 ಲೀಟರ್ ಫ್ಯುಯಲ್ ಟ್ಯಾಂಕ್ ಮತ್ತು 148 ಕಿಲೋಗ್ರಾಂ ತೂಕವನ್ನು ಪಡೆದಿದೆ.

ಎಂಜಿನ್ ರೇಟಿಂಗ್

ಬಜಾಜ್ ಅವೆಂಜರ್ ಸ್ಟ್ರೀಟ್ 180 - 8/10

ಸುಜುಕಿ ಇನ್‌ಟ್ರುಡರ್ 150- 7/10

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಬೆಲೆ (ದೆಹಲಿ ಎಕ್ಸ್‌ಶೋರಂ ಪ್ರಕಾರ)

ಬಜಾಜ್ ಅವೆಂಜರ್ ಸ್ಟ್ರೀಟ್ 180 ಭಾರತದ ಮಾರುಕಟ್ಟೆಯಲ್ಲಿ ರೂ. 84,499 ಬೆಲೆ ಹೊಂದಿದ್ದರೇ ಸುಜುಕಿ ಇನ್‌ಟ್ರುಡರ್ ಬೈಕ್ ರೂ. 99,995 ಬೆಲೆ ಪಡೆದುಕೊಂಡಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಎರಡೂ ಕ್ರೂಸರ್ ಬೈಕುಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಎರಡೂ ಬೈಕುಗಳು ಹೊಸ ವಿನ್ಯಾಸ ಮತ್ತು ಆಧುನಿಕ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಕೈಗಟ್ಟುವ ಬೆಲೆಯಲ್ಲಿ ಖರೀದಿಸಬೇಕಾದರೆ ಅವೆಂಜರ್ ಸ್ಟ್ರೀಟ್ 180 ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಸುಜುಕಿ ಇನ್‌ಟ್ರುಡರ್ 150 ಬೈಕ್ ಕೂಡ ಎಂಟ್ರಿ ಲೆವೆಲ್ ಕ್ರೂಸರ್ ಬೈಕಾಗಿದ್ದು, ವಿನೂತನ ಡಿಸೈನ್ ಮತ್ತು ಆಧುನಿಕ ವೈಶಿಷ್ಟ್ಯಗಳಾದಂತಹ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಎಬಿಎಸ್ ಅನ್ನು ಪಡಿದಿದೆ.

ಬಜಾಜ್ ಅವೆಂಜರ್ ಸ್ಟ್ರೀಟ್ 180 v/s ಸುಜುಕಿ ಇನ್‌ಟ್ರುಡರ್ 150. ಯಾವುದು ಉತ್ತಮ.?

ಒಂದೇ ವೇಳೆ ನೀವು ಆಧುನಿಕ ಮತ್ತು ಸೆಫ್ಟಿ ಕ್ರೂಸರ್ ಬೈಕ್ ಖರೀದಿಸುವ ಯೋಜನೆಯಲ್ಲಿದ್ದರೇ ಸುಜುಕಿ ಇನ್‌ಟ್ರುಡರ್ 150 ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
Read more on suzuki
English summary
Bajaj Avenger Street 180 Vs. Suzuki Intruder 150 Comparison: Design, Specs, Features & Price.
Story first published: Tuesday, February 27, 2018, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X