ABS ಇಲ್ಲದ ಬಜಾಜ್ ಡೋಮಿನಾರ್ 400 ಬೈಕ್ ಖರೀದಿಗೆ ಬಿತ್ತು ಬ್ರೇಕ್..!!

Written By:

ಮಧ್ಯಮ ಗಾತ್ರದ ಸೂಪರ್ ಬೈಕ್ ಮಾದರಿಯಾಗಿರುವ ಬಜಾಜ್ ಡೋಮಿನಾರ್ 400(ಎಬಿಎಸ್ ಹೊರತಾದ) ಆವೃತ್ತಿಗಳ ಮಾರಾಟ ಬ್ರೇಕ್ ಹಾಕಲಾಗಿದ್ದು, ಸುರಕ್ಷತೆಯ ಬೈಕ್ ಚಾಲನೆಯನ್ನು ಪ್ರೋತ್ಸಾಹಿಸುವ ಉದ್ದೇಶ ಎಬಿಎಸ್ ಮಾದರಿಯನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ABS ಇಲ್ಲದ ಬಜಾಜ್ ಡೋಮಿನಾರ್ 400 ಬೈಕ್ ಖರೀದಿಗೆ ಬಿತ್ತು ಬ್ರೇಕ್..!!

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಡೋಮಿನಾರ್ 400 ಬೈಕ್‌ಗಳಿಗೆ ಉತ್ತಮ ಬೇಡಿಕೆಯಿದ್ದು, ಶೇ. 80 ರಷ್ಟು ಗ್ರಾಹಕರು ಎಬಿಎಸ್ ತಂತ್ರಜ್ಞಾನ ಪ್ರೇರಿತ ಡೋಮಿನಾರ್ 400 ಖರೀದಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಎಬಿಎಸ್ ಇಲ್ಲದ ಡೋಮಿನಾರ್ 400 ಬೈಕ್ ಮಾರಾಟವನ್ನು ಬಜಾಜ್ ಇಂದಿನಿಂದಲೇ ಸ್ಥಗಿತಗೊಳಿಸಿದೆ.

ABS ಇಲ್ಲದ ಬಜಾಜ್ ಡೋಮಿನಾರ್ 400 ಬೈಕ್ ಖರೀದಿಗೆ ಬಿತ್ತು ಬ್ರೇಕ್..!!

ಸುರಕ್ಷತೆಯ ದೃಷ್ಠಿಯಿಂದ ನೋಡುವುದಾದರೇ ಎಬಿಎಸ್ ಬೈಕ್‌ಗಳ ಆಯ್ಕೆ ಪ್ರಮುಖವಾಗಿದ್ದು, ಹೆಚ್ಚಿನ ಮಟ್ಟದ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್‌ಗಳಲ್ಲಿ ಈಗಾಗಲೇ ಈ ವ್ಯವಸ್ಥೆಯು ಕಡ್ಡಾಯವಾಗುತ್ತಿರುವುದು ಉತ್ತಮ ಬೆಳವಣಿಗೆ.

ABS ಇಲ್ಲದ ಬಜಾಜ್ ಡೋಮಿನಾರ್ 400 ಬೈಕ್ ಖರೀದಿಗೆ ಬಿತ್ತು ಬ್ರೇಕ್..!!

ಆದರೂ ಕೆಲ ಬೈಕ್ ಖರೀದಿದಾರರು ಬೆಲೆ ಕಡಿಮೆ ಎನ್ನುವ ಕಾರಣಕ್ಕೆ ಎಬಿಎಸ್ ಇಲ್ಲದ ಬೈಕ್‌ಗಳನ್ನು ಸಹ ಖರೀದಿಸುತ್ತಿದ್ದು, ಇದೀಗ ಬಜಾಜ್ ಆ ಆಯ್ಕೆಯನ್ನೇ ತೆಗೆದುಹಾಕಿದ್ದಲ್ಲೇ ಕೇವಲ ಎಬಿಎಸ್ ಪ್ರೇರಿತ ಡೋಮಿನಾರ್ 400 ಮಾರಾಟ ಮಾಡಲು ಮುಂದಾಗಿದೆ.

ABS ಇಲ್ಲದ ಬಜಾಜ್ ಡೋಮಿನಾರ್ 400 ಬೈಕ್ ಖರೀದಿಗೆ ಬಿತ್ತು ಬ್ರೇಕ್..!!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಎಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಮಾದರಿಗಳಿಗೂ ಬೆಲೆಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಹೊಂದಿವೆಯಾದರೂ, ವೇಗದ ಬೈಕ್ ಚಾಲನೆ ವೇಳೆ ಎಬಿಎಸ್ ತಂತ್ರಜ್ಞಾವು ಬೈಕ್ ಸವಾರರಿಗೆ ಸಾಕಷ್ಟು ಸಹಕಾರಿಯಾಗುವುದನ್ನು ನಾವು ಅಲ್ಲಗಳೆಯುವಂತಿಲ್ಲ.

ABS ಇಲ್ಲದ ಬಜಾಜ್ ಡೋಮಿನಾರ್ 400 ಬೈಕ್ ಖರೀದಿಗೆ ಬಿತ್ತು ಬ್ರೇಕ್..!!

ಇನ್ನು ಎಬಿಎಸ್ ಡೋಮಿನಾರ್ 400 ಮಾದರಿಯನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸುವ ಬಜಾಜ್ ಸಂಸ್ಥೆಯು ಈ ಹಿಂದಿನ ತಾಂತ್ರಿಕ ಅಂಶಗಳನ್ನು ಮುಂದುವರಿಸಲಿದ್ದು, ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ರೂ. 1.58 ಲಕ್ಷಕ್ಕೆ ನಿಗದಿ ಮಾಡಿದೆ.

ABS ಇಲ್ಲದ ಬಜಾಜ್ ಡೋಮಿನಾರ್ 400 ಬೈಕ್ ಖರೀದಿಗೆ ಬಿತ್ತು ಬ್ರೇಕ್..!!

ಎಂಜಿನ್ ಸಾಮರ್ಥ್ಯ

ಡೋಮಿನಾರ್ 400 ಬೈಕ್‌ಗಳು 373ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 35 ಬಿಎಚ್‌ಪಿ ಮತ್ತು 35ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ABS ಇಲ್ಲದ ಬಜಾಜ್ ಡೋಮಿನಾರ್ 400 ಬೈಕ್ ಖರೀದಿಗೆ ಬಿತ್ತು ಬ್ರೇಕ್..!!

ಹೀಗಾಗಿ ಸೂಪರ್ ಬೈಕ್‌ಗಳಲ್ಲಿ ಎಬಿಎಸ್ ತಂತ್ರಜ್ಞಾನ ಅವಶ್ಯಕವಾಗಿದ್ದು, ಡೋಮಿನಾರ್ 400 ಮಾರಾಟದಲ್ಲಿ ಬಜಾಜ್ ನಿರ್ಧಾರವು ಒಂದು ರೀತಿ ಉತ್ತಮ ಎಂದು ಹೇಳಬಹುದು.

Read more on bajaj ಬಜಾಜ್
English summary
Bajaj Dominar 400 Non-ABS Variant Discontinued.
Story first published: Saturday, March 10, 2018, 11:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark