ಹೊಚ್ಚ ಹೊಸ ಬಜಾಜ್ ಪಲ್ಸರ್ 150 ಬೈಕಿನ ರಹಸ್ಯ ಚಿತ್ರಗಳು ಸೋರಿಕೆ..

ದಶಕಗಳಿಂದ ಭಾರತದಲ್ಲಿ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವಂತಹ ಬಜಾಜ್ ಸಂಸ್ಥೆಯು ಇದೀಗ ಸುಧಾರಿತ ತಂತ್ರಜ್ಞಾನ ಪ್ರೇರಿತ ಪಲ್ಸರ್ 150 ಬೈಕ್ ಅನ್ನು ಬಿಡುಗಡೆಗೊಳಿಸುತ್ತಿದ್ದು, ಇದಕ್ಕೂ ಮುನ್ನ ಹೊಸ ಬೈಕಿನ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ.

By Rahul Ts

ಸುಮಾರು 7 ವರ್ಷಗಳ ನಂತರ ಪಲ್ಸರ್ ಸರಣಿಯ ಪಲ್ಸರ್ 150 ಬೈಕ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿದ್ದು, ನಾಲ್ಕನೇ ತಲೆಮಾರಿನ ಹೊಸ ಲುಕ್ ಮತ್ತು ಇನ್ನಿತರೆ ನವಿಕರಿಸಲಾಗಿರುವ ವೈಶಿಷ್ಟ್ಯತೆಗಳೊಂದಿಗೆ ಹೊಸ ಬೈಕ್‌ಗಳು ಅಭಿವೃದ್ಧಿಗೊಂಡಿರುವ ಖಚಿತವಾಗಿದೆ.

ಹೊಚ್ಚ ಹೊಸ ಬಜಾಜ್ ಪಲ್ಸರ್ 150 ಬೈಕಿನ ರಹಸ್ಯ ಚಿತ್ರಗಳು ಸೋರಿಕೆ..

ಸದ್ಯದಲ್ಲೇ 2018ರ ಹೊಸ ಪಲ್ಸರ್ 150 ಬೈಕ್ಅನ್ನು ಬಿಡುಗಡೆಗೊಳಿಸಲು ಬಜಾಜ್ ಸಂಸ್ಥೆಯು ಯೋಜನೆ ರೂಪಿಸುತ್ತಿದ್ದು, ಈ ಮಧ್ಯೆ ಬೈಕಿನ ರಹಸ್ಯ ಚಿತ್ರಗಳು ಸಾಮಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿವೆ.

ಹೊಚ್ಚ ಹೊಸ ಬಜಾಜ್ ಪಲ್ಸರ್ 150 ಬೈಕಿನ ರಹಸ್ಯ ಚಿತ್ರಗಳು ಸೋರಿಕೆ..

ರಹಸ್ಯ ಚಿತ್ರಗಳಲ್ಲಿ ಕಂಡಂತೆ, 2018ರ ಪಲ್ಸರ್ ಬೈಕ್‌ಗಳು ವಿನ್ಯಾಸದಲ್ಲಿ ಗುರುತರ ಬದಲಾವಣೆಗಳಾದ ಹೊಸ ಗ್ರಾಫಿಕ್ ಲುಕ್, ಸ್ಪ್ಲಿಟ್ ಸೀಟ್ಸ್, ಸ್ಪ್ಲಿಟ್ ಗ್ರಾಬ್‍ರೈಲ್, ಎಕ್ಸಾಸ್ಟ್ ಮಫ್ಲರ್, ಮೆಟಲ್ ಹೀಟ್ ಶೀಲ್ಡ್ ಉಪಕರಣಗಳನ್ನು ಪಲ್ಸರ್ 180 ಬೈಕ್‍ನಿಂದ ಪಡೆದುಕೊಳ್ಳಲಾಗಿದೆ.

ಹೊಚ್ಚ ಹೊಸ ಬಜಾಜ್ ಪಲ್ಸರ್ 150 ಬೈಕಿನ ರಹಸ್ಯ ಚಿತ್ರಗಳು ಸೋರಿಕೆ..

ಇದರೊಂದಿಗೆ ಹೊಸದಾಗಿ ಫುಟ್ ಪೆಗ್ಸ್, ಅಪ್‍ಫ್ರಂಟ್ 37ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಅನ್ನು ಕೂಡ ಪಡೆದಿದ್ದು, 2018ರ ಬಜಾಜ್ ಪಲ್ಸರ್ ಬೈಕ್‍ನಲ್ಲಿ ವಿಶೇಷವಾಗಿ ಚಾಲಕರ ಸೇಫ್ಟಿಗಾಗಿ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಪಡೆದಿರುವುದು ಗಮನಿಸಬೇಕಾಗಿದೆ. ಜೊತೆಗೆ 17 ಎಂಚಿನ ಅಲಾಯ್ ಚಕ್ರಗಳನ್ನು ಕೂಡ ಪಡೆದಿರಲಿದೆ.

ಹೊಚ್ಚ ಹೊಸ ಬಜಾಜ್ ಪಲ್ಸರ್ 150 ಬೈಕಿನ ರಹಸ್ಯ ಚಿತ್ರಗಳು ಸೋರಿಕೆ..

ಎಂಜಿನ್ ಸಾಮರ್ಥ್ಯ

ಹೊಸ ಪಲ್ಸರ್ 150 ಬೈಕ್ 149ಸಿಸಿ ಎಂಜಿನ್, ಸಿಂಗಲ್ ಸಿಲಿಂಡರ್, 2 ವಾಲ್ವೆ, ಟ್ವಿನ್ ಸ್ಪಾರ್ಕ್ ಮೋಟಾರ್ ಹೊಂದಿದ್ದು, 13.8-ಬಿಹೆಚ್‍ಪಿ ಮತ್ತು 13.4-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ. ಇದಲ್ಲದೇ ಇದನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಚ್ಚ ಹೊಸ ಬಜಾಜ್ ಪಲ್ಸರ್ 150 ಬೈಕಿನ ರಹಸ್ಯ ಚಿತ್ರಗಳು ಸೋರಿಕೆ..

ಪಲ್ಸರ್ ಬೈಕ್‍ಗಳು ಮಾರುಕಟ್ಟೆಯಲ್ಲಿ ತಮ್ಮದೆಯಾದ ಜನಪ್ರಿಯತೆಯನ್ನು ಪಡೆದಿದ್ದು, ಹೊಸ ರೂಪದೊಂದಿಗೆ ಬರಲಿರುವ ಪಲ್ಸರ್ 150 ಬೈಕ್ ಮಾರುಕಟ್ಟೆಯಲ್ಲಿನ ಹೋಂಡಾ ಸಿಬಿ ಯುನಿಕಾರ್ನ್ 150, ಹೀರೋ ಎಕ್ಸ್ ಟ್ರೀಮ್ ಸ್ಪೋರ್ಟ್ಸ್, ಮತ್ತೆ ಇತ್ತೇಚೆಗೆ ಬಿಡುಗಡೆಗೊಂಡ ಟಿವಿಎಸ್ ಅಪಾಚೆ 160 4ವಿ ಬೈಕುಗಳಿಗೂ ತೀವ್ರ ಪೈಪೋಟಿಯನ್ನು ನೀಡಲಿದೆ.

ಹೊಚ್ಚ ಹೊಸ ಬಜಾಜ್ ಪಲ್ಸರ್ 150 ಬೈಕಿನ ರಹಸ್ಯ ಚಿತ್ರಗಳು ಸೋರಿಕೆ..

ಹೊಸ ಬೈಕಿನ ಬೆಲೆ

ಹೊಸ ಬಜಾಜ್ ಪಲ್ಸರ್ 150 ಬೈಕ್ ನ ಬೆಲೆ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ.73,626 ಸಾವಿರ ಇರಲಿದೆಯೆಂದು ಅಂದಾಜಿಸಲಾಗಿದ್ದು, ಸಂಸ್ಥೆಯ ಮತ್ತೊಂದು ಬೈಕ್ ಪಲ್ಸರ್ 180 ಬೈಕ್ ಇದೇ ತಿಂಗಳ 31 ರಂದು ಬಿಡುಗಡೆಗೊಳ್ಳಲಿದೆ.

Image Source : NDTV Autoಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣದಲ್ಲಿನ ವೈರಲ್ ಸ್ಟೋರಿಗಳು:

1. ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು..?

2. ಪಲ್ಸರ್ ಆರ್‌ಎಸ್ 200 ರೇಸಿಂಗ್ ರೆಡ್ ಎಡಿಷನ್ ಪರಿಚಯಿಸಿದ ಬಜಾಜ್

3.ಸೆಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

4. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

5. ಬೈಕ್ ರೈಡಿಂಗ್‌ನಲ್ಲಿ ಲಿಮ್ಕಾ ದಾಖಲೆ ಮಾಡಿದ ಬೆಂಗಳೂರಿನ ಮಹಿಳೆಯರು

6. ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...

More from DriveSpark

Article Published On: Friday, March 23, 2018, 15:11 [IST]
English summary
Bajaj Pulsar 150 For 2018 Spied With Upgrades.
Read more on pulsar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+