ಬೈಕ್ ರೈಡಿಂಗ್‌ನಲ್ಲಿ ಲಿಮ್ಕಾ ದಾಖಲೆ ಮಾಡಿದ ಬೆಂಗಳೂರಿನ ಮಹಿಳೆಯರು

Written By:

ಇತ್ತೀಚೆಗೆ ಮಹಿಳೆಯರು ಕೂಡಾ ಬೈಕ್ ಅಡ್ವೆಂಚರ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದು, ಬೆಂಗಳೂರು ಮೂಲದ ಇಬ್ಬರು ಮಹಿಳೆಯರು ಕೇವಲ 129 ಗಂಟೆಗಳಲ್ಲಿ ಕನ್ಯಾಕುಮಾರಿನಿಂದ ಕಾಶ್ಮೀರದ ಲೇಹ ತಲುಪಿ ಲಿಮ್ಕಾ ದಾಖಲೆ ಬರೆದಿದ್ದಾರೆ.

ಬೈಕ್ ರೈಡಿಂಗ್‌ನಲ್ಲಿ ಲಿಮ್ಕಾ ದಾಖಲೆ ಮಾಡಿದ ಬೆಂಗಳೂರಿನ ಮಹಿಳೆಯರು

ಮಹಿಳಾ ಬೈಕರ್‌ಗಳಾದ ಅಮೃತಾ ಕಾಶಿನಾಥ್ ಮತ್ತು ಶುಬ್ರಾ ಆಚಾರ್ಯಾ ಎನ್ನುವವರು ದಕ್ಷಿಣದ ತುದಿಯಿಂದ ಉತ್ತರದ ತುದಿಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ್ದು, ಇದು ಬೈಕ್ ರೈಡಿಂಗ್ ವಿಭಾಗದಲ್ಲಿನ ವಿನೂತನ ದಾಖಲೆ ಎನ್ನಲಾಗಿದೆ.

ಬೈಕ್ ರೈಡಿಂಗ್‌ನಲ್ಲಿ ಲಿಮ್ಕಾ ದಾಖಲೆ ಮಾಡಿದ ಬೆಂಗಳೂರಿನ ಮಹಿಳೆಯರು

ಅಚ್ಚರಿ ಅಂದ್ರೆ ಸತತ 5 ದಿನಗಳ ಬೈಕ್ ರೈಡಿಂಗ್‌ನಲ್ಲಿ ಕೇವಲ ಐದೂವರೆ ಗಂಟೆ ಮಾತ್ರ ವಿಶ್ರಾಂತಿ ಪಡೆದಿರುವ ಅಮೃತಾ ಕಾಶಿನಾಥ್ ಮತ್ತು ಶುಬ್ರಾ ಆಚಾರ್ಯಾ ಅವರು ಸುರಕ್ಷಿತವಾಗಿ ನಿಗದಿ ಗುರಿ ತಲುಪುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.

ಬೈಕ್ ರೈಡಿಂಗ್‌ನಲ್ಲಿ ಲಿಮ್ಕಾ ದಾಖಲೆ ಮಾಡಿದ ಬೆಂಗಳೂರಿನ ಮಹಿಳೆಯರು

ಅಮೃತಾ ಕಾಶಿನಾಥ್ ಮತ್ತು ಶುಬ್ರಾ ಆಚಾರ್ಯಾ ಅವರು ಈಗಾಗಲೇ ಹಲವು ಬಾರಿ ಬೈಕ್ ರೈಡಿಂಗ್ ಮೂಲಕವೇ ಲೇಹ ಪ್ರದೇಶಕ್ಕೆ ಭೇಟಿ ನೀಡಿದ್ದಲ್ಲೇ ದೇಶದ ವಿವಿಧ ಕಡೆಗೂ ತಮ್ಮ ಆಪ್ ರೋಡಿಂಗ್ ಕೌಶಲ್ಯವನ್ನು ಪ್ರದರ್ಶನ ಮಾಡಿದ್ದಾರೆ.

ಬೈಕ್ ರೈಡಿಂಗ್‌ನಲ್ಲಿ ಲಿಮ್ಕಾ ದಾಖಲೆ ಮಾಡಿದ ಬೆಂಗಳೂರಿನ ಮಹಿಳೆಯರು

ಆದರೇ ಈ ಬಾರಿ ಹೊಸ ಪ್ರಯತ್ನ ಕೈ ಹಾಕಿದ್ದ ಅಮೃತಾ ಕಾಶಿನಾಥ್ ಮತ್ತು ಶುಬ್ರಾ ಆಚಾರ್ಯಾ ಅವರು ಕನ್ಯಾಕುಮಾರಿಯಿಂದ ಲೇಹ ಪ್ರದೇಶಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲಿ ಗುರಿತಲುಪುವ ಗುರಿಯೊಂದಿಗೆ ಬೈಕ್ ರೈಡಿಂಗ್ ಆರಂಭಿಸಿದ್ದರು.

ಬೈಕ್ ರೈಡಿಂಗ್‌ನಲ್ಲಿ ಲಿಮ್ಕಾ ದಾಖಲೆ ಮಾಡಿದ ಬೆಂಗಳೂರಿನ ಮಹಿಳೆಯರು

ಅಂದುಕೊಂಡಂತೆ 129 ಗಂಟೆಗಳಲ್ಲಿ ಗುರಿತುಲುಪಿದ ಅಮೃತಾ ಕಾಶಿನಾಥ್ ಮತ್ತು ಶುಬ್ರಾ ಆಚಾರ್ಯಾ ಅವರು ಇತರೆ ಬೈಕ್ ರೈಡರ್‌ಗಳಿಗೆ ಅಚ್ಚರಿ ಉಂಟು ಮಾಡಿದ್ದಲ್ಲದೇ ಈ ನಿಟ್ಟಿನಲ್ಲಿ ಮತ್ತಷ್ಟು ಹೊಸ ದಾಖಲೆಗಳನ್ನು ಮಾಡಬಹುದೆಂದು ತೊರಿಸಿಕೊಟ್ಟಿದ್ದಾರೆ.

ಬೈಕ್ ರೈಡಿಂಗ್‌ನಲ್ಲಿ ಲಿಮ್ಕಾ ದಾಖಲೆ ಮಾಡಿದ ಬೆಂಗಳೂರಿನ ಮಹಿಳೆಯರು

ಕನ್ಯಾಕುಮಾರಿಯಿಂದ ಲೇಹಕ್ಕೆ ಪ್ರಯಾಣ ಬೆಳೆಸಲು ಕೆಟಿಎಂ ಡ್ಯೂಕ್ ಬಳಕೆ ಮಾಡಲಾಗಿದ್ದು, ಕೇವಲ 129 ಗಂಟೆಗಳಲ್ಲಿ 3,825 ಕಿಮಿ ದೂರವನ್ನು ಕ್ರಮಿಸುವಲ್ಲಿ ಅಮೃತಾ ಕಾಶಿನಾಥ್ ಮತ್ತು ಶುಬ್ರಾ ಆಚಾರ್ಯಾ ಅವರ ಪರಿಶ್ರಮ ನಿಜಕ್ಕೂ ಅಚ್ಚರಿ ತರಿಸದೇ ಇರಲಾರದು.

ಬೈಕ್ ರೈಡಿಂಗ್‌ನಲ್ಲಿ ಲಿಮ್ಕಾ ದಾಖಲೆ ಮಾಡಿದ ಬೆಂಗಳೂರಿನ ಮಹಿಳೆಯರು

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸದ್ಯ ಲೇಹ ತಲುಪಿರುವ ಈ ಮಹಿಳಾ ಬೈಕ್ ರೈಡರ್‌ಗಳು ಸದ್ಯ ನೇಪಾಳ ಮತ್ತು ಭೂತಾನ್ ತುಲುಪುವ ಗುರಿ ಹೊಂದಿದ್ದು, ಅವರ ಈ ಸಾಧನೆಯ ಹಾದಿ ಸುಖಕರವಾಗಿರಲೆಂದು ಹಾರೈಸೋಣ.

ಡ್ರೈವ್‌ಸ್ಪಾರ್ಕ್ ಕನ್ನಡ ಜಾಲತಾಣದಲ್ಲಿನ ವೈರಲ್ ಸ್ಟೋರಿಗಳು:

01. ಕಾರು ಶುಚಿಯಾಗಿಡಲು 10 ಸುಲಭ ವಿಧಾನಗಳು

02. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

03. ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?

ನಿಯಂತ್ರಣ ತಪ್ಪಿ ಮನೆ ಮೇಲೆ ಜಂಪ್ ಮಾಡಿದ ಮಾರುತಿ ಸುಜುಕಿ ಬಲೆನೊ..

Read more on off beat
English summary
Kanyakumari To Leh In 129 Hours — Two Women, Two Motorcycles And One 4,000 km Journey.
Story first published: Thursday, March 22, 2018, 19:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark