ಬಜಾಜ್‌ ನಿರ್ಮಾಣದ ಹೊಚ್ಚ ಹೊಸ ಪಲ್ಸರ್ ಎಸ್ಎಸ್125 ಸದ್ಯದಲ್ಲೇ ಮಾರುಕಟ್ಟೆಗೆ..!

ದೇಶದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ಬಜಾಜ್ ಹೊಸ ಮಾದರಿಯು ಮತ್ತಷ್ಟು ಬೈಕ್ ಆವೃತ್ತಿಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಪಲ್ಸರ್ 135ಎಲ್ಎಸ್ ಡಿಸೈನ್ ಆಧರಿತ ಪಲ್ಸರ್ 125ಎನ್ಎಸ್ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಬಜಾಜ್‌ ನಿರ್ಮಾಣದ ಹೊಚ್ಚ ಹೊಸ ಪಲ್ಸರ್ ಎಸ್ಎಸ್125 ಸದ್ಯದಲ್ಲೇ ಮಾರುಕಟ್ಟೆಗೆ..!

ಬಜಾಜ್ ಸಂಸ್ಥೆಯು ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ವಿವಿಧ ಮಾದರಿಯ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಸದ್ಯ ಪೋಲ್ಯಾಂಡ್‌ನಲ್ಲಿ ಪಲ್ಸರ್ 125ಎನ್ಎಸ್ ಬಿಡುಗಡೆ ಮಾಡಿರುವುದರಿಂದ ಹೊಸ ಬೈಕ್ ಸದ್ಯದಲ್ಲೇ ಭಾರತದಲ್ಲೂ ಬಿಡುಗಡೆಯಾಗುವುದು ಖಚಿತವಾಗಿದೆ.

ಬಜಾಜ್‌ ನಿರ್ಮಾಣದ ಹೊಚ್ಚ ಹೊಸ ಪಲ್ಸರ್ ಎಸ್ಎಸ್125 ಸದ್ಯದಲ್ಲೇ ಮಾರುಕಟ್ಟೆಗೆ..!

ಪಲ್ಸರ್ 125ಎನ್ಎಸ್ ಬೈಕ್ ಮಾದರಿಯು ಪೋಲ್ಯಾಂಡ್‌ನಲ್ಲಿ ಭಾರತೀಯ ಬೆಲೆಗಳ ಪ್ರಕಾರ ರೂ. 1.60 ಲಕ್ಷಕ್ಕೆ ಬಿಡುಗಡೆಯಾಗಿದ್ದು, ಭಾರತದಲ್ಲಿ ಇದು ತುಸು ಅಗ್ಗದ ಬೆಲೆಗಳಿಗೆ ದೊರೆಯುವ ಸಾಧ್ಯತೆಗಳಿವೆ. ಯಾಕೆಂದ್ರೆ ವಿದೇಶಿ ಮಾರುಕಟ್ಟೆ ಮಾರಾಟ ಮಾಡಲಾಗುತ್ತಿರುವ ಬೈಕ್‌ಗಳಲ್ಲಿ ಹಲವು ಸುಧಾರಿತ ತಂತ್ರಜ್ಞಾನ ಇರುವುದು ಬೈಕ್ ದುಬಾರಿಯಾಗಿರಲು ಪ್ರಮುಖ ಕಾರಣವಾಗಿದೆ.

ಬಜಾಜ್‌ ನಿರ್ಮಾಣದ ಹೊಚ್ಚ ಹೊಸ ಪಲ್ಸರ್ ಎಸ್ಎಸ್125 ಸದ್ಯದಲ್ಲೇ ಮಾರುಕಟ್ಟೆಗೆ..!

ಆದ್ರೆ, ಭಾರತದಲ್ಲಿ ಬಿಡುಗಡೆಯಾಗಲಿರುವ ಪಲ್ಸರ್ 125ಎನ್ಎಸ್ ಬೈಕ್‌ಗಳು ಕೆಲವು ಫೀಚರ್ಸ್ ಕಳೆದುಕೊಳ್ಳಲಿದ್ದು, ಇದು ಭಾರತೀಯ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸಿದ್ದಗೊಳ್ಳಲಿದೆ. ಇದರಿಂದಾಗಿ ಹೊಸ ಬೈಕ್‌ ಮಾದರಿಯು ಅತಿ ಕಡಿಮೆ ಬೆಲೆ ದೊರೆಯಲಿದೆ ಎನ್ನಬಹುದು.

ಬಜಾಜ್‌ ನಿರ್ಮಾಣದ ಹೊಚ್ಚ ಹೊಸ ಪಲ್ಸರ್ ಎಸ್ಎಸ್125 ಸದ್ಯದಲ್ಲೇ ಮಾರುಕಟ್ಟೆಗೆ..!

ಇನ್ನು ಹೊಸ ಪಲ್ಸರ್ ಎನ್ಎಸ್125 ಬೈಕ್‌ಗಳು ಎನ್ಎಸ್ ಸರಣಿಯಲ್ಲೇ ವಿನೂತನ ಡಿಸೈನ್ ಪಡೆದುಕೊಳ್ಳಲಿದ್ದು, ಮ್ಯಾಟೆ ವಿನ್ಯಾಸದ ಎಕ್ಸಾಸ್ಟ್ ಮಫ್ಲರ್, ಡ್ಯುಯಲ್ ಟೋನ್ ಕಲರ್, ಗ್ರೇ ಟ್ಯಾಂಕ್ ಶೋಲ್ಡರ್ಸ್, ವಿಭಜಿತ ಸೀಟು, ಅಗಲವಾದ ಟೈರ್ ಸೌಲಭ್ಯವು ಬೈಕಿನ ಮುಖ್ಯ ಆಕರ್ಷಣೆಯಾಗಿದೆ.

ಬಜಾಜ್‌ ನಿರ್ಮಾಣದ ಹೊಚ್ಚ ಹೊಸ ಪಲ್ಸರ್ ಎಸ್ಎಸ್125 ಸದ್ಯದಲ್ಲೇ ಮಾರುಕಟ್ಟೆಗೆ..!

ಜೊತೆಗೆ ಎನ್ಎಸ್200 ಬೈಕಿನಿಂದಲೂ ಕೆಲವು ಡಿಸೈನ್‌ಗಳನ್ನು ಸಹ ಹೊಸ ಎನ್ಎಸ್125 ಬೈಕಿನ ವಿನ್ಯಾಸಕ್ಕಾಗಿ ಎರವಲು ಪಡೆಯಲಾಗಿದ್ದು, ಸಣ್ಣದಾದ ಎಂಜಿನ್ ಕೌಲ್ ವಿನ್ಯಾಸವು ಬೈಕಿಗೆ ಸ್ಪೋರ್ಟಿ ಲುಕ್ ನೀಡಿರುವುದು ಮಾತ್ರ ಸುಳ್ಳಲ್ಲ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಬಜಾಜ್‌ ನಿರ್ಮಾಣದ ಹೊಚ್ಚ ಹೊಸ ಪಲ್ಸರ್ ಎಸ್ಎಸ್125 ಸದ್ಯದಲ್ಲೇ ಮಾರುಕಟ್ಟೆಗೆ..!

ಎಂಜಿನ್ ಸಾಮರ್ಥ್ಯ

124.45 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್, ಫ್ಯೂಲ್ ಇಂಜೆಕ್ಷಡ್ ಎಂಜಿನ್ ಹೊಂದಲಿರುವ ಪಲ್ಸರ್ ಎನ್ಎಸ್125 ಬೈಕ್ ಮಾದರಿಗಳು ಪರ್ಫಾಮೆನ್ಸ್‌ನಲ್ಲೂ ಉತ್ತಮ ಎನ್ನಿಸಲಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 12-ಬಿಎಚ್‌ಪಿ ಮತ್ತು 11-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಬಜಾಜ್‌ ನಿರ್ಮಾಣದ ಹೊಚ್ಚ ಹೊಸ ಪಲ್ಸರ್ ಎಸ್ಎಸ್125 ಸದ್ಯದಲ್ಲೇ ಮಾರುಕಟ್ಟೆಗೆ..!

ಹೀಗಾಗಿ 125ಸಿಸಿ ವಿಭಾಗದ ಬೈಕ್‌ಗಳಲ್ಲೇ ಇದು ಪವರ್‌ಫುಲ್ ಬೈಕ್ ಆಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುವ ನೀರಿಕ್ಷೆಯಿದ್ದು, ಬೈಕ್ ಸವಾರರ ಸುರಕ್ಷತೆಗಾಗಿ ಹಲವು ಗುಣಮಟ್ಟದ ಸುರಕ್ಷಾ ಸೌಲಭ್ಯಗಳು ಸಹ ಈ ಬೈಕಿನಲ್ಲಿರಲಿವೆ.

ಬಜಾಜ್‌ ನಿರ್ಮಾಣದ ಹೊಚ್ಚ ಹೊಸ ಪಲ್ಸರ್ ಎಸ್ಎಸ್125 ಸದ್ಯದಲ್ಲೇ ಮಾರುಕಟ್ಟೆಗೆ..!

2019ರ ಏಪ್ರಿಲ್‌ನಿಂದ 125ಸಿಸಿ ಮೇಲ್ಪಟ್ಟ ಎಲ್ಲಾ ಬೈಕ್ ಮತ್ತು ಸ್ಕೂಟರ್‌ಗಳು ಎಬಿಎಸ್ ಕಡ್ಡಾಯವಾಗಿ ಹೊಂದಿರಬೇಕಾದ ನಿಯಮ ಜಾರಿಯಾಗಲಿದ್ದು, ಇದರಿಂದ ಪಲ್ಸರ್ ಎನ್ಎಸ್125 ಬೈಕ್ ಸಹ ಎಬಿಎಸ್ ಪ್ರೇರಣೆ ಹೊಂದಿರಲಿದೆ. ಇಲ್ಲವಾದ್ರೆ ಸಿಬಿಎಸ್(ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ) ಇರಲಿದ್ದು, ಇದು ಕೂಡಾ ಎಬಿಎಸ್‌ನಂತೆಯೇ ಬ್ರೇಕಿಂಗ್ ಸೌಲಭ್ಯದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ.

MOST READ: ಪಲ್ಸರ್ ಬೈಕ್ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು- ಇದಕ್ಕೆ ಕಾರಣ ಏನು ಗೊತ್ತಾ..?

ಬಜಾಜ್‌ ನಿರ್ಮಾಣದ ಹೊಚ್ಚ ಹೊಸ ಪಲ್ಸರ್ ಎಸ್ಎಸ್125 ಸದ್ಯದಲ್ಲೇ ಮಾರುಕಟ್ಟೆಗೆ..!

ಇದರ ಹೊರತಾಗಿ ಹೊಸ ಪಲ್ಸರ್ ಎನ್ಎಸ್125 ಬೈಕ್‌ಗಳು ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಫ್ರಂಟ್ ಡಿಸ್ಕ್ ಬ್ರೇಕ್ ಸೇರಿದಂತೆ ಯುನಿಕ್ ಡಿಸೈನ್ ಪಡೆಯಲಿದ್ದು, ಹೊಸ ಬೈಕ್ ಮಾದರಿಯು ರೂ. 65 ಸಾವಿರದಿಂದ ರೂ. 72 ಸಾವಿರ ಬೆಲೆಗಳೊಂದಿಗೆ 2019ರ ಎರಡನೇ ತ್ರೈಮಾಸಿಕ ಅವಧಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

Most Read Articles

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡಿರುವ ಟಿವಿಎಸ್ ಹೊಸ ರೆಡಿಯಾನ್ ಬೈಕ್ ಇಲ್ಲಿದೆ ನೋಡಿ..!

Kannada
Read more on ಬಜಾಜ್ pulsar
English summary
Bajaj Pulsar NS125 Revealed — Gets Fuel Injection And CBS.
Story first published: Saturday, October 13, 2018, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X