ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗೆ ಟಾಂಗ್ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಬೆನೆಲ್ಲಿ ಇಂಡಿಯಾ ಸಂಸ್ಥೆಯು ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗಳಿಗೆ ಪೈಪೋಟಿ ನೀಡಲು ದೇಶಿಯ ಮಾರುಕಟ್ಟೆಗೆ ಹೊಸ ಬೈಕ್ ಅನ್ನು ತಯಾರಿಸುವ ಯೋಜನೆಯಲಿದೆ.

By Rahul Ts

ಬೆನೆಲ್ಲಿ ಇಂಡಿಯಾ ಸಂಸ್ಥೆಯು ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗಳಿಗೆ ಪೈಪೋಟಿ ನೀಡಲು ದೇಶಿಯ ಮಾರುಕಟ್ಟೆಗೆ ಹೊಸ ಬೈಕ್ ಅನ್ನು ತಯಾರಿಸುವ ಯೋಜನೆಯಲಿದ್ದು, ರೆಟ್ರೋ ಸ್ಟೈಲ್ ವಿನ್ಯಾಸದಲ್ಲಿ ಬೆನೆಲಿ ಇಂಡಿಯಾ ತಮ್ಮ ಹೊಸ ಇಂಪೀರಿಯಲ್ 400 ಬೈಕ್ ಅನ್ನು ಪರಿಚಯಿಸಲಿದೆ.

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗೆ ಟಾಂಗ್ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ರೆಟ್ರೋ ಸ್ಟೈಲ್ ಪಡೆಯಲಿರುವ ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್‍‍ಗಳು ಮೊದಲ ಬಾರಿಗೆ ಮಿಲಾನ್‍‍ನಲ್ಲಿ ನಡೆದ 2017ರ ಇಐಸಿಎಮ್ಎ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಲಾಗಿದ್ದು, ಮಾರುಕಟ್ಟೆಗೆ ಇಂಡಿಯನ್ ಮಹಾವೇರ್ ಗ್ರೂಪ್‍‍ನ ಮಾರ್ಗವಾಗಿ ಎಂಟ್ರಿ ಕೊಡಲಿದೆ.

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗೆ ಟಾಂಗ್ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ರೆಟ್ರೊ ಹಾಗು ಕಾಂಟೆಪ್ರರಿ ಶೈಲಿಯ ಟ್ವಿನ್ ಪವರ್ ಕ್ಲಸ್ಟರ್ ಅನ್ನು ಪಡೆದಿರಲಿದ್ದು, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಮತ್ತು ಡಬಲ್ ಕ್ರೆಡಲ್ ಸ್ಟೀಲ್ ಫ್ರೇಮ್ ಅನ್ನು ಪಡೆದುಕೊಂಡಿರಲಿದೆ.

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗೆ ಟಾಂಗ್ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಪ್ರಯಾಣಿಕರ ಸುರಕ್ಷತೆಗಾಗಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್‍‍ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಒಟ್ಟಾರೆಯಾಗಿ 200 ಕಿಲೋಗ್ರಾಮ್ ತೂಕವನ್ನು ಪಡೆದುಕೊಂಡ ಈ? ಬೈಕ್ 12 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ.

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗೆ ಟಾಂಗ್ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಬೆನೆಲ್ಲಿ ಇಂಪೀರಿಯಲ್ 400 ಬೈಕ್‍‍ನಲ್ಲಿ ಅಳವಡಿಸಲಾಗಿರುವ ಅನಲಾಗ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ - ಸ್ಪೀಡೊಮೀಟರ್, ಟಾಚೊ ಮೀಟರ್, ಒಡೊ ಮೀಟರ್ ಮತ್ತು ಫ್ಯುಯಲ್ ಗೌಜ್ ಅಯ್ಕೆಗಳನ್ನು ತೋರಿಸಬಲ್ಲದು.

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗೆ ಟಾಂಗ್ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಮುಂಭಾಗದಲ್ಲಿ 19 ಇಂಚಿನ ಟೈರ್‍‍ಗಳು ಮತ್ತು ಹಿಂಭಾಗದಲ್ಲಿ 18ಇಂಚಿನ ಟೈರ್‍‍ಗಳನ್ನು ಪದೆದುಕೊಂಡಿರಲಿದ್ದು, ಸರ್ಕಾರದ ಅದೇಶದಂತೆ ಎಮಿಷನ್ ಅನ್ನು ಎದುರುಗೊಳ್ಳಲು ಯೂರೊ ಬಿಎಸ್4 ಕಂಪ್ಲಿಯಂಟ್ ಅನ್ನು ಪಡೆದುಕೊಳ್ಳಲಿದೆ.

ವಿನ್ಯಾಸದಲ್ಲಿ ಬೆನೆಲ್ಲಿ ಇಂಡಿಯಾ ತಮ್ಮ ಹೊಸ ಇಂಪೀರಿಯಲ್ 400 ಬೈಕ್ ಅನ್ನು ಪರಿಚಯಿಸಲಿದೆ.

ಎಂಜಿನ್ ಸಾಮರ್ಥ್ಯ

ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಯೂರೊ 4 ಕಂಪ್ಲಿಯಂಟ್ 373.3ಸಿಸಿ ಸಿಂಗಲ್ ಸಿಲೆಂಡರ್, ಎಸ್‍ಒಹೆಚ್‍‍ಸಿ ಎಂಜಿನ್ ಸಹಾಯದಿಂದ 19ಬಿಹೆಚ್‍‍ಪಿ ಮತ್ತು 28ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ವಿನ್ಯಾಸದಲ್ಲಿ ಬೆನೆಲ್ಲಿ ಇಂಡಿಯಾ ತಮ್ಮ ಹೊಸ ಇಂಪೀರಿಯಲ್ 400 ಬೈಕ್ ಅನ್ನು ಪರಿಚಯಿಸಲಿದೆ.

ಬೆನೆಲ್ಲಿ ಇಂಪೀರಿಯಲ್ 400 ಬೆಲೆ (ಅಂದಾಜು)

ಬಿಡುಗಡೆಗೊಳ್ಳಲಿರುವ ಬೆನೆಲ್ಲಿ ಇಂಪೀರಿಯಲ್ 400 ಬೈಕ್‍‍ಗಳ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ಸುಮಾರು ರೂ. 2.5 ರಿಂಡ 3 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗುತ್ತಿದ್ದು, ಇದೇ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

ವಿನ್ಯಾಸದಲ್ಲಿ ಬೆನೆಲ್ಲಿ ಇಂಡಿಯಾ ತಮ್ಮ ಹೊಸ ಇಂಪೀರಿಯಲ್ 400 ಬೈಕ್ ಅನ್ನು ಪರಿಚಯಿಸಲಿದೆ.

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕ್ಲಾಸಿಕ್ ಬೈಕ್‍‍ಗಳ ನಿರ್ಮಾಣದಲ್ಲಿ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಈಗಾಗಲೆ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ಬೆನೆಲ್ಲಿ ಸಂಸ್ಥೆಯು ಈ ಸೆಗ್ಮೆಂಟ್‍‍ನಲ್ಲಿ ಕಾಲಿಡಲಿದೆ. ಇದಲ್ಲದೇ ಬಜಾಜ್ ಸಂಸ್ಥೆ ಕೂಡಾ ಈ ಸೆಗ್ಮೆಂಟ್‍‍ನಲ್ಲಿ ಹೊಸ ಬೈಕ್ ಅನ್ನು ಪರಿಚಯಿಸುವ ಯೋಜನೆಯಲಿದ್ದು, ಟ್ರಯಂಫ್ ಸಂಸ್ಥೆಯೊಂದಿಗೆ ಸೇರಿ ಹೊಸ ಬೈಕ್ ಅನ್ನು ತಯಾರಿಸಲಿದೆ.

ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕ್‍‍ಗೆ ಟಾಂಗ್ ನೀಡಲು ಬರಲಿದೆ ಬೆನೆಲ್ಲಿಯ ಹೊಸ ಬೈಕ್..

ಇದಲ್ಲದೆ ಹಾರ್ಲೆ ಡೇವಿಡ್‍‍ಸನ್ ಕೂಡಾ 500ಸಿಸಿ ಸೆಗ್ಮೆಂಟ್‍‍ನಲ್ಲಿ ಹೊಸ ಬೈಕ್ ಅನ್ನು ಪರಿಚಯಿಸಲಿದ್ದು, ಈ ಸೆಗ್ಮೆಂಟ್‍‍‍ಗೆ ಹೊಸದಾಗಿ ಕಾಲಿಡಲಿರುವ ಸಂಸ್ಥೆಗಳು ರಾಯಲ್‍ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಎಷ್ಟರ ಮಟ್ಟಿಗೆ ಪೈಪೋಟಿ ನೀಡಲಿದೆ ಎಂದಿ ಕಾಯ್ದು ನೋಡಬೇಕಿದೆ.

Most Read Articles

Kannada
Read more on benelli
English summary
Benelli India to launch a Royal Enfield rival motorcycle next year – Imperiale 400.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X