ಭಾರತದಲ್ಲಿ ಮತ್ತಷ್ಟು ಹೊಸ ಬೈಕ್‍‍ಗಳನ್ನು ಬಿಡುಗಡೆ ಮಾಡಲಿದೆ ಡುಕಾಟಿ..

Written By: Rahul TS

ಇಟಾಲಿ ಮೂಲದ ವಾಹನ ತಯಾರಕ ಸಂಸ್ಥೆಯಾದ ಡುಕಾಟಿಯು ಭಾರತದಲ್ಲಿ ಮೂರನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದು, ಇದೇ ವೇಳೆ ಮತ್ತಷ್ಟು ಹೊಸ ಸೂಪರ್ ಬೈಕ್‍ಗಳನ್ನು ಬಿಡುಗಡೆಗೊಳಿಸುವುದಾಗಿ ಸುಳಿವು ನೀಡಿದೆ.

ಭಾರತದಲ್ಲಿ ಮತ್ತಷ್ಟು ಹೊಸ ಬೈಕ್‍‍ಗಳನ್ನು ಬಿಡುಗಡೆ ಮಾಡಲಿದೆ ಡುಕಾಟಿ..

ಡುಕಾಟಿ ಸಂಸ್ಥೆಯು 2018ರ ಅವಧಿಯಲ್ಲಿ ತಮ್ಮ ಸಂಸ್ಥೆಯ ನಾಲ್ಕು ಹೊಸ ಸೂಪರ್ ಬೈಕ್‍ಗಳನ್ನು ಬಿಡುಗಡೆಗೊಳಿಸಲಿದ್ದು, ಮಲ್ಟಿಸ್ಟ್ರಾಡ್ 1260 ಅಡ್ವೆಂಚರ್ ಮೋಟಾರ್‍‍ಸೈಕಲ್ ಮತ್ತು ಸ್ಕ್ರಾಂಬ್ಲರ್ 1100 ಬೈಕ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲ್ಲಿದೆ.

ಭಾರತದಲ್ಲಿ ಮತ್ತಷ್ಟು ಹೊಸ ಬೈಕ್‍‍ಗಳನ್ನು ಬಿಡುಗಡೆ ಮಾಡಲಿದೆ ಡುಕಾಟಿ..

ಇದರ ಜೊತೆಗೆ ಡುಕಾಟಿ ಸಂಸ್ಥೆಯು ಸ್ಕಾರ್ಸ್ ಮತ್ತು ಡುಕಾಟಿ ಮಾನ್ಸ್ಟರ್ 821 ಎಂಬ ಇನ್ನೆರಡು ಬೈಕುಗಳನ್ನು ಬಿಡುಗಡೆಗೊಳಿಸಬಹುದೆಂದು ಹೇಳಲಾಗಿದ್ದು, 2017ರಲ್ಲಿ ಡುಕಾಟಿ 821 ಬೈಕುಗಳಲ್ಲಿ ಬಿಎಸ್ -4 ಎಂಜಿನ್‍‍ಗಳನ್ನು ಅಳವಡಿಸಲಾಗದಿರುವ ಕಾರಣ ಮಾರುಕಟ್ಟೆಯಲ್ಲಿ ಮಾರಾಟವನ್ನು ಸ್ಥಗಿತಗೊಳಿಸಿತ್ತು.

ಭಾರತದಲ್ಲಿ ಮತ್ತಷ್ಟು ಹೊಸ ಬೈಕ್‍‍ಗಳನ್ನು ಬಿಡುಗಡೆ ಮಾಡಲಿದೆ ಡುಕಾಟಿ..

ಈ ನಾಲ್ಕು ಬೈಕ್‍ಗಳನ್ನು ಹೊರತುಪಡಿಸಿ ಡುಕಾಟಿ ತಮ್ಮ ಪ್ಯಾನಿಗಲ್ 959 ಕೊರ್ಸ್ ಬೈಕ್ ಅನ್ನು ರೇಸಿಂಗ್ ಲಿವರಿ, ಪೂರ್ಣ ಒಹ್ಲಿನ್ಸ್ ಸಸ್ಪೆಷನ್ ಮತ್ತು ಹೊಸ ಆಕ್ರಪೋವಿಕ್ ಫುಲ್ ಎಕ್ಸಾಸ್ಟ್ ಸಿಸ್ಟಂ ವೈಶಿಷ್ಟ್ಯತೆಗಳ ಜೊತೆಗೆ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದೆ.

ಭಾರತದಲ್ಲಿ ಮತ್ತಷ್ಟು ಹೊಸ ಬೈಕ್‍‍ಗಳನ್ನು ಬಿಡುಗಡೆ ಮಾಡಲಿದೆ ಡುಕಾಟಿ..

ಡುಕಾಟಿ 959 ಪ್ಯಾನಿಗಲೆ ಕೊರ್ಸ್ ಬೈಕ್ 955ಸಿಸಿ ಎಲ್-ಟ್ವಿನ್ ಎಂಜಿನ್ ಪಡೆದಿದ್ದು, 150ಬಿಹೆಚ್‍ಪಿ ಮತ್ತು 102ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ. ಹಾಗೆಯೇ ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ 1,079ಸಿಸಿ ಎಲ್-ಟ್ವಿನ್ ಎಂಜಿನ್ 85ಬಿಹೆಚ್‍‍ಪಿ ಮತ್ತು 88ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ.

ಭಾರತದಲ್ಲಿ ಮತ್ತಷ್ಟು ಹೊಸ ಬೈಕ್‍‍ಗಳನ್ನು ಬಿಡುಗಡೆ ಮಾಡಲಿದೆ ಡುಕಾಟಿ..

ಇದಲ್ಲದೇ ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ ಸ್ಲಿಪ್ಪರ್ ಕ್ಲಚ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ವಿವಿಧ ರೈಡಿಂಗ್ ಮೋಡ್ಸ್ ಮತ್ತು ರೈಡ್ ಬೈ ವೈರ್ ಥ್ರೋಟಲ್ ಎಂಬ ಹಲವು ವೈಶಿಷ್ಟ್ಯತೆಗಳನ್ನು ಪಡೆಯಲಿದೆ.

ಭಾರತದಲ್ಲಿ ಮತ್ತಷ್ಟು ಹೊಸ ಬೈಕ್‍‍ಗಳನ್ನು ಬಿಡುಗಡೆ ಮಾಡಲಿದೆ ಡುಕಾಟಿ..

ಡುಕಾಟಿ ಇಂಡಿಯಾ ಸಂಸ್ಥೆಯು ಭಾರತದಲ್ಲಿ ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, 2015ರಲ್ಲಿ ಸಂಸ್ಥೆಯು ದೆಹಲಿಯಲ್ಲಿ ಮೊದಲ ಡೀಲರ್‍‍ಶಿಪ್ ಅನ್ನು ಪಡೆದುಕೊಂಡಿತ್ತು. ಈಗ ದೇಶದ ಹಲವು ನಗರಗಳಲ್ಲಿ ತಮ್ಮ ಡೀಲರ್‍‍ಶಿಪ್ ವ್ಯಾಪ್ತಿಯನ್ನು ಹೊಂದಿರುವುದು ಬೈಕ್ ಮಾರಾಟದಲ್ಲೂ ಬೆಳವಣಿಗೆ ಕಾಣುತ್ತಿದೆ.

ಭಾರತದಲ್ಲಿ ಮತ್ತಷ್ಟು ಹೊಸ ಬೈಕ್‍‍ಗಳನ್ನು ಬಿಡುಗಡೆ ಮಾಡಲಿದೆ ಡುಕಾಟಿ..

ಇದರೆ ಜೊತೆಗೆ ಡುಕಾಟಿ ಸಂಸ್ಥೆಯು ತಮ್ಮ ವಾರಂಟಿ ಅವಧಿಯನ್ನು ಎರಡು ವರ್ಷದ ವರೆಗೆ ವಿಸ್ತರಿಸಲಾಗಿದ್ದು, ಜೊತೆಗೆ ಝೀರೋ ಪರ್ಸೆಂಟ್ ಬಡ್ದಿಯೊಂದಿಗೆ ಡುಕಾಟಿ ಹಣಕಾಸು ಸೇವೆಗಳನ್ನು ಕೂಡ ಬಿಡುಗಡೆಗೊಳಿಸಿದೆ. ಇದಲ್ಲದೆ ಸಂಸ್ಥೆಯು ದೇಶದಲ್ಲಿ ರೈಡರ್ ಟ್ರೈನೊಂಗ್ ಪ್ರೋಗ್ರಾಂ‍ಗಳನ್ನು ಕೂಡಾ ಹಮ್ಮಿಕೊಳ್ಳಲಿದೆ ಎನ್ನಲಾಗಿದೆ.

ಭಾರತದಲ್ಲಿ ಮತ್ತಷ್ಟು ಹೊಸ ಬೈಕ್‍‍ಗಳನ್ನು ಬಿಡುಗಡೆ ಮಾಡಲಿದೆ ಡುಕಾಟಿ..

ಜಾಗತಿಕವಾಗಿ ತಮ್ಮ ಸೂಪರ್‍ ಬೈಕ್‍‍ಗಳಿಂದ ಪ್ರಸಿದ್ಧವಾದ ಡುಕಾಟಿ ಸಂಸ್ಥೆಯು ಈಗ ಹೊಸದಾಗಿ ಭಾರತದಲ್ಲಿ ತಮ್ಮ ಗ್ರಾಹಕರನ್ನು ಹೆಚ್ಚಿಸಿಕೊಳ್ಳುನ ಯೋಜನೆಯಲ್ಲಿದ್ದು, ಭಾರತದ ಮಾರುಕಟ್ಟೆಯಲ್ಲಿ 2018ರ ಒಳಗೆ ಹೊಸ ನಾಲ್ಕು ಹೊಸ ಮೋಟರ್‍‍ಬೈಕುಗಳನ್ನು ಬಿಡುಗಡೆಗೊಳಿಸುವುದು ಖಚಿತವಾಗಿದೆ.

ಭಾರತದಲ್ಲಿ ಮತ್ತಷ್ಟು ಹೊಸ ಬೈಕ್‍‍ಗಳನ್ನು ಬಿಡುಗಡೆ ಮಾಡಲಿದೆ ಡುಕಾಟಿ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಹೊಸ ಕಾರುಗಳ ಉತ್ಪಾದನೆಗಾಗಿ ಒಂದಾದ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್

2. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

3. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

4. 'ರೋಲ್ಸ್ ರಾಯ್ಸ್' ಕಾರನ್ನು ಕಸ ತುಂಬಲು ಬಳಸಿದ ಭಾರತದ ಹೆಮ್ಮೆಯ ರಾಜ !!

5. ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

Read more on ducati super bike
English summary
Ducati To Launch Four All-New Motorcycles In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark