ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

Written By:

ವಾಹನ ಉದ್ಯಮದಲ್ಲಿ ಅತಿ ದುಬಾರಿ ಮಾದರಿಯ ಬೈಕ್ ಉತ್ಪಾದಿಸುವಲ್ಲಿ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಕೂಡಾ ಒಂದು. ಇದುವರೆಗೆ ನೂರಾರು ಬಗೆಯ ಬೈಕ್ ಮಾದರಿಗಳನ್ನು ಪರಿಚಯಿಸಿ ಮೂಲಕ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಈ ಬಾರಿ ಹತ್ತಾರು ವಿಶೇಷತೆಗಳನ್ನು ಹೊಂದಿರುವ ದುಬಾರಿ ಬೈಕ್ ಒಂದನ್ನು ಅಭಿವೃದ್ಧಿಗೊಳಿಸಿ ಪ್ರದರ್ಶನ ಮಾಡಿದೆ.

ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಸಿದ್ದಪಡಿಸಿರುವ ಬ್ಲ್ಯೂ ಎಡಿಷನ್ ಬೈಕ್ ಜಗತ್ತಿನಲ್ಲಿ ಇದುವರೆಗೆ ಉತ್ಪಾದನೆಯಾದ ದುಬಾರಿ ಬೈಕ್‌ಗಳಿಂತಲೂ ಹೆಚ್ಚಿನ ಮಟ್ಟದ ಸೌಲಭ್ಯಗಳನ್ನು ಹೊಂದಿರುವುದಲ್ಲದೇ ಐಷಾರಾಮಿ ಸವಲತ್ತು ಹೊಂದಿರುವುದು ಮತ್ತೊಂದು ವಿಶೇಷ. ಬೈಕಿನ ಪ್ರತಿಯೊಂದು ತಾಂತ್ರಿಕ ಅಂಶಗಳು ಸಹ ಹ್ಯಾಂಡ್‌ಮೆಡ್ ಕೌಶಲ್ಯದೊಂದಿಗೆ ಸಿದ್ದವಾಗಿದ್ದು, ಇದಕ್ಕಾಗಿ 105 ದಿನಗಳ ಕಾಲ ಶ್ರಮವಹಿಸಲಾಗಿದೆಯೆಂತೆ.

ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಸದ್ಯ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಸ್ವಿಟ್ಜರ್ಲ್ಯಾಂಡ್‌ನ ಜುರಿಕ್‌ ಆಟೋ ಮೇಳದಲ್ಲಿ ತನ್ನ ಹೊಸ ಬೈಕ್ ಮಾದರಿಯನ್ನು ಪ್ರದರ್ಶನ ಮಾಡಿದ್ದು, ಹೊಸ ನಮೂನೆಯ ಬೈಕ್ ಕಂಡ ವಾಹನ ಪ್ರೇಮಿಗಳು ಹಾರ್ಲೆಡೇವಿಡ್ಸನ್ ಹೊಸ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಮತ್ತೊಂದು ವಿಶೇಷ ಅಂದ್ರೆ, ಸ್ವಿಸ್ ಜನಪ್ರಿಯ ಗಡಿಯಾರ ಮತ್ತು ಆಭರಣ ತಯಾರಕ ಸಂಸ್ಥೆಯಾದ ಬುಕೆರೆರ್ ಮತ್ತು ಐಷಾರಾಮಿ ಬೈಕ್ ವಿನ್ಯಾಸ ಮಾಡುವ ಬುನ್‌ಡರ್ ಸಂಸ್ಥೆಯ ಸಹಯೋಗದೊಂದಿಗೆ ಬ್ಲ್ಯೂ ಎಡಿಷನ್ ಸಿದ್ದ ಮಾಡಿರುವ ಹಾರ್ಲೆ ಡೇವಿಡ್ಸನ್, ತನ್ನದೇ ಮತ್ತೊಂದು ಬೈಕ್ ಸಾಪ್ಟ್ ಸ್ಲಿಮ್ ಎಸ್ ಮಾದರಿಯಲ್ಲೇ ಬೈಕಿನ ಕೆಲವು ವಿನ್ಯಾಸಗಳನ್ನು ಹೊಲಿಕೆ ನೀಡಿದೆ.

ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಆದರೂ ಸಾಪ್ಟ್ ಸ್ಮಿಮ್ ಎಸ್ ಬೈಕಿಗಿಂತಲೂ ಭಿನ್ನವಾಗಿವೇ ಸಿದ್ದವಾಗಿರುವ ಬ್ಲ್ಯೂ ಎಡಿಷನ್ ಬೈಕ್ ಮಾದರಿಯಲ್ಲಿ ವಿಶ್ವದರ್ಜೆ ಗುಣಮಟ್ಟದ ವಜ್ರ ಮತ್ತು ಬೈಕಿನ ಪ್ರಮುಖ ಭಾಗಗಳಲ್ಲಿ ಗೋಲ್ಡ್ ಪ್ಲೇಟ್‌ಗಳನ್ನು ಬಳಕೆ ಮಾಡಿರುವುದು ಬೈಕಿಗೆ ಮತ್ತಷ್ಟು ಅಂದ ನೀಡಿದೆ.

ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಬೈಕಿನ ಮುಂಭಾಗದಲ್ಲಿ ಹಕ್ಕಿಯ ಕತ್ತಿನಂತೆ ಸಿದ್ದವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್ ಇಡಿ ಬೈಕಿನ ಅಂದಕ್ಕೆ ಮೆರಗು ತಂದಿದ್ದು, ಬೈಕಿನ ಫ್ಯೂಲ್ ಟ್ಯಾಂಕ್ ಮೇಲೆ 5.40-ಕ್ಯಾರೆಟ್ ಡಿಜಿಲ್ಲರ್ ರಿಂಗ್ ಮತ್ತು ವಿಶ್ವದ ದುಬಾರಿ ಬೆಲೆಯ ಬುಕೆರೆರ್ ಗಡಿಯಾರವನ್ನು ಜೋಡಣೆ ಮಾಡಿರುವುದೇ ಬೈಕಿನ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಇನ್ನು ಬೈಕಿನ ಫ್ಯೂಲ್ ಟ್ಯಾಂಕ್ ಮೇಲೆ ಅಳವಡಿಸಲಾಗಿರುವ ಗಡಿಯಾರ್ ಮತ್ತು ಡೈಮಂಡ್ ರಿಂಗ್ ಸದಾ ಕಾಲ ಹೊಳೆಯುವಂತೆ ಮಾಡಲು ವಿದ್ಯುತ್ ಪ್ರೇರಣೆ ಒದಗಿಸಲಾಗಿದ್ದು, ದುಬಾರಿ ಬೆಲೆ ರಿಂಗ್ ಮತ್ತು ಗಡಿಯಾರಕ್ಕೆ ಯಾವುದೇ ದಕ್ಕೆಯಾಗದಂತೆ ಆರು ಸುತ್ತಿನ ಭದ್ರತೆ ಒದಗಿಸಲಾಗಿದೆ.

ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಎಂಜಿನ್ ಸಾಮರ್ಥ್ಯ

1,800 ಸಿಸಿ ಏರ್ ಕೂಲ್ಡ್ ವಿ-ಟ್ವಿನ್ ಎಂಜಿನ್ ಹೊಂದಿರುವ ಬ್ಲ್ಯೂ ಎಡಿಷನ್ ಬೈಕ್, 148 ಎನ್ಎಂ ಟಾರ್ಕ್ ಉತ್ಪಾದನೆ ಶಕ್ತಿಯನ್ನು ಪಡೆದಿದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯವಿದ್ದು, ಸ್ಪೋಕ್ ಅಲಾಯ್ ಚಕ್ರಗಳು, ಬೋಲ್ಡ್ ಟೈರ್ ಮತ್ತು ಫ್ಯೂಲ್ ಟ್ಯಾಂಕ್ ಡಿಸೈನ್‌ಗಳು ನೋಡುಗರನ್ನು ಗಮನಸೆಳೆಯುತ್ತವೆ.

ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಬೈಕಿನ ಬೆಲೆಗಳು

ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಗಾಗಿ ಸಿದ್ದವಾಗಿರುವ ಈ ಬೈಕಿನ ಬೆಲೆಯನ್ನು 1.79 ಮಿಲಿಯನ್ ಯುಎಸ್ಎ ಡಾಲರ್‌ಗೆ ನಿಗದಿಗೊಳಿಸಲಾಗಿದ್ದು, ಇದು ಭಾರತೀಯ ಬೆಲೆಗಳಲ್ಲಿ ಬರೋಬ್ಬರಿ ರೂ.12.2 ಕೋಟಿಗೆ ಮಾರಾಟವಾಗಲಿದೆ.

ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಇದಷ್ಟೇ ಅಲ್ಲದೇ ಈ ಬೈಕ್ ಖರೀದಿಸಲು ಹೆಚ್ಚುವರಿಯಾಗಿ 14 ಲಕ್ಷ ರೂಪಾಯಿ ತೆರಿಗೆ ಪಾವತಿಸಬೇಕಾಗಿದ್ದು, ಬೈಕಿನ ಬಣ್ಣಗಳಿಗೆ ಮತ್ತು ದುಬಾರಿಯ ಗಡಿಯಾರ, ಡೈಮಂಡ್ ರಿಂಗ್ ಕಾಪಾಡಿಕೊಳ್ಳಲು ಕೆಲವು ರಹಸ್ಯ ಸುರಕ್ಷಾ ಕ್ರಮಗಳನ್ನು ಇದರಲ್ಲಿ ಇರಿಸಲಾಗಿದೆ.

ಡೈಮಂಡ್ ರಿಂಗ್ ಹೊಂದಿರುವ ಈ ಬೈಕಿನ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ..!!

ಹೀಗಾಗಿ ಇದೊಂದು ಆಧುನಿಕ ತಂತ್ರಜ್ಞಾನದ ಮೇರು ವಿನ್ಯಾಸವೆಂದೇ ಬಿಂಬಿತವಾಗಿದ್ದು, ಮುಂಬರುವ ದಿನಗಳಲ್ಲಿ ಮಾರಾಟಕ್ಕೆ ಸಿದ್ದವಾಗುತ್ತಿದೆ. ಇದರಿಂದಾಗಿ ಆಸಕ್ತ ಗ್ರಾಹಕರು ಈ ಬೈಕ್ ಖರೀದಿಸುವ ಮುನ್ನ ಬುಕ್ ಮಾಡಿದ ನಂತರ ಒಂದು ವರ್ಷವಾದ್ರೂ ಕಾಯಲೇಬೇಕು. ಯಾಕೆಂದ್ರೆ ಗ್ರಾಹಕರ ಬೇಡಿಕೆ ಮೆರೆಗೆ ಮಾತ್ರ ಇಂತಹ ಬೈಕ್‌ಗಳನ್ನು ಉತ್ಪಾದನೆ ಮಾಡಲಾಗುತ್ತದೆ.

ಹಾರ್ಲೆ ಡೇವಿಡ್ಸನ್ ಬ್ಲ್ಯೂ ಎಡಿಷನ್ ಬೈಕಿನ ಉತ್ಪಾದನಾ ವಿಡಿಯೋ ಇಲ್ಲಿದೆ ನೋಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕೇವಲ 9 ನಿಮಿಷದಲ್ಲಿ 100 ಲೀಟರ್ ಇಂಧನ ಖಾಲಿ ಮಾಡುತ್ತೆ ಈ ಬುಗಾಟಿ ಕಾರು..!!

ಮಿನಿ ಫಾರ್ಚೂನರ್ ಖ್ಯಾತಿಯ ಟೊಯೊಟಾ ರಷ್ ಸುರಕ್ಷಾ ರೇಟಿಂಗ್ ಎಷ್ಟು ಗೊತ್ತಾ?

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...

Read more on harley davidson
English summary
Harley-Davidson Blue Edition — Officially The World’s Most Expensive & Exclusive Motorcycle.
Story first published: Wednesday, May 16, 2018, 11:52 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark