ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಕಳೆದ ಅಕ್ಟೋಬರ್‌ನಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಡೆಸ್ಟಿನಿ 125 ಸ್ಕೂಟರ್ ಮಾರಾಟಕ್ಕೆ ಹೀರೋ ಮೊಟೋಕಾರ್ಪ್ ಸಂಸ್ಥೆಯು ಚಾಲನೆ ನೀಡಿದ್ದು, ಇಷ್ಟು ದಿನಗಳ ಕಾಲ ರಾಜಧಾನಿ ದೆಹಲಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದ ಹೊಸ ಡೆಸ್ಟಿನಿ 125 ಸ್ಕೂಟರ್ ಇದೀಗ ದೇಶಾದ್ಯಂತ ಖರೀದಿಗೆ ಲಭ್ಯವಾಗಿವೆ.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಡೆಸ್ಟಿನಿ 125 ಸ್ಕೂಟರ್ ಬಿಡುಗಡೆಗೊಂಡ ನಂತರ ರಾಜಧಾನಿ ದೆಹಲಿಯಲ್ಲಿ ಮಾತ್ರವೇ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದ್ದ ಹೀರೋ ಸಂಸ್ಥೆಯು ತಾಂತ್ರಿಕ ಕಾರಣಗಳಿಂದ ದೇಶದ ಇತರೆ ನಗರಗಳಲ್ಲಿ ಹೊಸ ಸ್ಕೂಟರ್ ಮಾರಾಟ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ತಡೆನೀಡಿತ್ತು. ಇದರಿಂದಾಗಿ ಹೊಸ ಸ್ಕೂಟರ್ ಖರೀದಿ ಯೋಜನೆಯಲ್ಲಿದ್ದ ಸಾವಿರಾರು ಗ್ರಾಹಕರಿಗೆ ನಿರಾಸೆಯಾಗಿತ್ತು. ಇದೀಗ ಸಮಸ್ಯೆ ಬಗೆಹರಿದಿದ್ದು, ಹೊಸ ಸ್ಕೂಟರ್ ದೇಶ ಎಲ್ಲಾ ಹೀರೋ ಡಿಲರ್ಸ್‌ಗಳಲ್ಲೂ ಸ್ಕೂಟರ್ ಖರೀದಿಗೆ ಲಭ್ಯವಾಗಿವೆ.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಹೀರೋ ಸಂಸ್ಥೆಯು ತನ್ನ ಈ ಹಿಂದಿನ ಜನಪ್ರಿಯ ಡ್ಯುಯೆಟ್ ಸ್ಕೂಟರ್ ಮಾದರಿಯ ಮುಂದುವರಿದ ಭಾಗವಾಗಿ ಡೆಸ್ಟಿನಿ 125 ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, 125ಸಿಸಿ ಸ್ಕೂಟರ್‌ ವಿಭಾಗದಲ್ಲೇ ಈ ಹೊಸ ಸ್ಕೂಟರ್ ವಿಶೇಷ ಸೌಲಭ್ಯಗಳನ್ನು ಹೊತ್ತು ಬಂದಿದೆ.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಹೀರೋ ಡ್ಯುಯೆಟ್ 110 ಸ್ಕೂಟರ್‌ಗಳಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳೊಂದಿಗೆ ಪ್ರೀಮಿಯಂ ವಿನ್ಯಾಸಗಳನ್ನು ಹೊಂದಿರುವ ಡೆಸ್ಟಿನಿ 125 ಸ್ಕೂಟರ್ ಮಾದರಿಯು 125ಸಿಸಿ ಎಂಜಿನ್ ಮಾದರಿಗಳಲ್ಲೇ ವಿಶೇಷ ಎನ್ನಿಸಲಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಡೆಸ್ಟಿನಿ 125 ಸ್ಕೂಟರ್‌ಗಳಲ್ಲಿ ಎಲ್ಎಕ್ಸ್ ಮತ್ತು ವಿಎಕ್ಸ್ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು. ಹೀಗಾಗಿ ವೆರಿಯೆಂಟ್‌ಗೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾಗಿದೆ.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಸ್ಕೂಟರ್ ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)

ನಗರಗಳು - ಬೆಲೆ(ಎಲ್ಎಕ್ಸ್) -ಬೆಲೆ(ವಿಎಕ್ಸ್)

ಮುಂಬೈ -ರೂ. 55,550 -ರೂ. 58,800

ಬೆಂಗಳೂರು -ರೂ. 56,050 -ರೂ. 58,900

ಚೆನ್ನೈ -ರೂ. 56,950 -ರೂ. 60,200

ಹೈದ್ರಾಬಾದ್ -ರೂ. 56,250 -ರೂ. 59,500

ಪುಣೆ -ರೂ. 55,550 -ರೂ. 58,800

ಅಹಮದಾಬಾದ್ -ರೂ. 55,650 -ರೂ. 58,800

ಕೋಲ್ಕತ್ತಾ -ರೂ. 56,950 -ರೂ. 59,600

ದೆಹಲಿ -ರೂ. 54,650 -ರೂ. 57,500

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಹೀರೋ ಸಂಸ್ಥೆಯು ಈ ಹಿಂದೆ 110ಸಿಸಿ ಸಾಮರ್ಥ್ಯದ ಡ್ಯುಯೆಟ್ ಸ್ಕೂಟರ್‌ಗಳನ್ನು ಪರಿಚಯಿಸಿದ್ದಲ್ಲದೇ ಅದೇ ಹೆಸರಿನೊಂದಿಗೆ 125ಸಿಸಿ ಸಾಮರ್ಥ್ಯದ ಸ್ಕೂಟರ್ ಅನ್ನು ಸಹ ಬಿಡುಗೊಳಿಸುವ ಸಂಬಂಧ 2018ರ ಆಟೋ ಎಕ್ಸ್‌ಪೋದಲ್ಲಿ ಡ್ಯುಯೆಟ್ 125 ಸ್ಕೂಟರ್ ಅನ್ನು ಪ್ರದರ್ಶನ ಮಾಡಿತ್ತು.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಆದ್ರೆ ಹೊಸ ಸ್ಕೂಟರ್‌ ಮಾದರಿಗೆ ಡ್ಯುಯೆಟ್ ಹೆಸರನ್ನು ಮುಂದುವರಿಸುವ ಬಗ್ಗೆ ಮಹತ್ವದ ನಿರ್ಣಯ ಕೈಗೊಂಡ ಹೀರೋ ಸಂಸ್ಥೆಯು ಕೊನೆಯ ಗಳಿಗೆಯಲ್ಲಿ ಡ್ಯುಯೆಟ್ 125 ಹೆಸರು ಬದಲಿಸಿ ಡೆಸ್ಟಿನಿ 125 ಎಂದು ಮರುನಾಮಕರಣ ಮಾಡಿ ಬಿಡುಗಡೆ ಮಾಡಿದೆ.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಹೊಸ ಸ್ಕೂಟರ್ ಎಂಜಿನ್ ವೈಶಿಷ್ಟ್ಯತೆ:

ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು 125 ಸಿಸಿ ಸಿಂಗಲ್ ಸಿಲಿಂಡರ್, ಎನರ್ಜಿ ಬೂಸ್ಟ್ ಎಂಜಿನ್ ಸಹಾಯದಿಂದ 8.7-ಬಿಹೆಚ್‍‍ಪಿ ಮತ್ತು 10.2-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ವೇರಿಯೊಮೇಟಿಕ್ ಡ್ರೈವ್ ಆಟೋಮ್ಯಾಟಿಕ್ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಇದಲ್ಲದೆ ಹೊಸ ಸ್ಕೂಟರ್‌ನಲ್ಲಿ ವಿಶೇಷವಾದ ಹೀರೋ ಸಂಸ್ಥೆಯ ಐ3ಎಸ್ (ಐಡಲ್ ಸ್ಟಾರ್ಟ್-ಸ್ಟಾಪ್ ಟೆಕ್ನಾಲಜಿ)ಯನ್ನು ಪಡೆದಿದ್ದು, ಕೆಲವು ಸೆಕೆಂಡುಗಳಿಗಿಂತ ಹೆಚ್ಚು ಕಾಲ ವಾಹನ ನಿಷ್ಕ್ರಿಯವಾಗಿದ್ದಾಗ ಐ3ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಸ್ವಯಂಚಾಲಿತವಾಗಿ ಎಂಜಿನ್ ಅನ್ನು ಬದಲಿಸುತ್ತದೆ.

MOST READ: ರಸ್ತೆಗಿಳಿದ ಹೊಸ ಜಾವಾ ಬೈಕ್‌ಗಳು- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಬೈಕಿನ ವೈಶಿಷ್ಟ್ಯತೆಗಳು

ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಎಲ್ಇಡಿ ಟೈಲ್ ಲೈಟ್, ಹೊರ ಭಾಗದಲ್ಲಿ ಇರುವ ಫ್ಯೂಲ್ ಟ್ಯಾಂಕ್ ಕ್ಯಾಪ್, ಬಾಡಿ ಕಲರ್ ಮಾದರಿಯಲ್ಲೇ ರಿಯರ್ ವ್ಯೂ ಮಿರರ್ ಬಣ್ಣದ ಆಯ್ಕೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೂಟ್ ಲೈಟ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನ ಇದರಲ್ಲಿ ನೀಡಲಾಗಿದೆ.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಇನ್ನು ಬಿಡುಗಡೆಯಾಗಿರುವ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್‌ಗಳು 1,830ಎಂಎಂ ಉದ್ದ, 726ಎಂಎಂ ಅಗಲ ಮತ್ತು 1,155ಎಂಎಂ ಎತ್ತರ ಹೊಂದಿದ್ದು, 1245ಎಂಎಂ ವ್ಹೀಲ್ ಬೇಸ್ ಹಾಗು 155ಎಂಎಂ ನಷ್ಟು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಹಾಗೆಯೇ ಈ ಸ್ಕೂಟರ್‍‍ನ ಸಸ್ಷೆಷನ್ ವಿಚಾರಕ್ಕೆ ಬಗ್ಗೆ ಹೇಳುವುದಾದರೇ, ಮುಂಭಾಗದಲ್ಲಿ ಅಪ್‍‍ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಿಂಭಾಗದಲ್ಲಿ ಸ್ಪ್ರಿಂಗ್ ಮಾದರಿಯ ಹೈಡ್ರಾಲಿಕ್ ಶಾಕ್ಬರ್ಜರ್ ಅನ್ನು ಪಡೆದುಕೊಂಡಿರಲಿದೆ.

MOST READ: ಕಿಸೆಯಲ್ಲಿ 5 ಸಾವಿರಕ್ಕು ಗತಿ ಇಲ್ಲ ಎಂದಿದ್ದ ನಟ ಸಿಂಬು ಈಗ ಬೆಂಟ್ಲಿ ಒಡೆಯ

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಇನ್ನು ಡೆಸ್ಟಿನಿ 125 ವಿಎಕ್ಸ್ ವೆರಿಯೆಂಟ್ ಮಾದರಿಯು ಎಲ್ಎಕ್ಸ್ ವೆರಿಯೆಂಟ್‌ಗಿಂತ ಉತ್ತಮ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಮೊಬೈಲ್ ಚಾರ್ಜಿಂಗ್, ಬೂಟ್ ಲೈಟ್ ಸೇರಿದಂತೆ ಇಂಟ್ರಾಗೆಟೆಡ್ ಬ್ರೇಕಿಂಗ್ ಸಿಸ್ಟಂ(ಐಬಿಎಸ್) ಹೊಂದಿರುತ್ತದೆ.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಲಭ್ಯವಿರುವ ಬಣ್ಣಗಳು ಡೆಸ್ಟಿನಿ 125

ಸ್ಕೂಟರ್‌ಗಳು ನಾಲ್ಕು ಪ್ರಮುಖ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ನೊಬೆಲ್ ರೆಡ್(ವಿಎಕ್ಸ್ ವೆರಿಯೆಂಟ್‌ನಲ್ಲಿ ಮಾತ್ರ), ಚೆಸ್ಟ್‌ನಟ್ ಬ್ರೋನ್ಜ್, ಪ್ಯಾಂತರ್ ಬ್ಲ್ಯಾಕ್ ಮತ್ತು ಪರ್ಲ್ ಸಿಲ್ವರ್ ವೈಟ್ ಬಣ್ಣಗಳನ್ನು ಆಯ್ಕೆ ಮಾಡಬಹುದು.

ಬಿಡುಗಡೆಯಾಗಿ ತಿಂಗಳ ನಂತರ ಹೊಸ ಡೆಸ್ಟಿನಿ 125 ಸ್ಕೂಟರ್ ವಿತರಣೆ ಆರಂಭ..!

ಒಟ್ಟಿನಲ್ಲಿ ಹೀರೋ ಡೆಸ್ಟಿನಿ 125 ಸ್ಕೂಟರ್ ಮಾದರಿಯು ಪ್ರೀಮಿಯಂ ಸ್ಕೂಟರ್‌ಗಳಲ್ಲೇ ವಿಶೇಷ ಎನ್ನಿಸಲಿದ್ದು, ಡ್ಯುಯಲ್ ಟೋನ್ ಸೀಟು, ಸ್ಟೈಲಿಷ್ ಕಾಸ್ಟ್ ವೀಲ್ಹ್‌ಗಳು, ಫ್ರಂಟ್ ಆಪ್ರಾನ್ ಮತ್ತು ಸೈಡ್ ಕ್ರೋಮ್ ಗಾರ್ನಿಶ್ ಹೊಂದಿರುವುದು ಹೋಂಡಾ ಆಕ್ಟಿವಾ 125 ಮತ್ತು ಆಕ್ಸೆಸೆಸ್ 125 ಸ್ಕೂಟರ್‌ಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಿದೆ.

Most Read Articles

Kannada
Read more on hero motocorp scooter
English summary
Hero Destini 125 India-Sales Commence; Was Limited To New Delhi Till Now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X