ಆರ್‌ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಹೊಸ ಅಸ್ತ್ರ

ಸುಮಾರು 1970 ಮತ್ತು 80ರ ದಶಕದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿ ಮಾಡಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಜಾವಾ ಬೈಕ್‍ಗಳು ಇದೀಗ ಹೊಸತನದೊಂದಿಗೆ ಮಾರುಕಟ್ಟೆಗೆ ಮರಳಿ ಬಂದಿದ್ದು, ಕ್ಲಾಸಿಕ್ ಮೋಟಾರ್‍‍ಬೈಕ್ ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿವೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಭಾರತದಲ್ಲಿ 80ರ ದಶಕದಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿ ಕ್ಲಾಸಿಕ್ ಬೈಕ್ ಪ್ರಿಯರ ಕ್ರೇಜ್‌ಗೆ ಕಾರಣವಾಗಿದ್ದ ಜಾವಾ ಸಂಸ್ಥೆಯು ತದನಂತರದ ದಿನಗಳಲ್ಲಿ ಭಾರೀ ನಷ್ಟ ಅನುಭವಿಸುವ ಮೂಲಕ ಮಾರುಕಟ್ಟೆಯಿಂದಲೇ ನಿರ್ಗಮಿಸಿತ್ತು. ಮಹೀಂದ್ರಾ ಕೈಗೊಂಡ ಹೊಸ ಯೋಜನೆ ಇಂದಾಗಿ ಜಾವಾಗೆ ಮರು ಜೀವ ಸಿಕ್ಕಿದ್ದು, ರಾಯಲ್ ಎನ್‍ಫೀಲ್ಡ್ ಸಂಸ್ಥೆಗೆ ತಳಮಳ ಶುರುವಾಗಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ರಾಯಲ್ ಎನ್‍ಫೀಲ್ಡ್ ಸಂಸ್ಥೆಯನ್ನೆ ಟಾರ್ಗೆಟ್ ಮಾಡಿ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ತಮ್ಮ ಬೈಕ್‍ಗಳಿಂದ ಜನಪ್ರಿಯತೆಯನ್ನು ಸಾಧಿಸಲು ಮುಂದಾಗಿರುವ ಜಾವಾ ಮೋಟಾರ್‍‍ಸೈಕಲ್ಸ್ ಸಂಸ್ಥೆಯು ಹೊಸ ಮೂರು ಬೈಕ್‍ಗಳನ್ನು ಪರಿಚಯಿಸುವುದಾಗಿ ಹೇಳಿಕೊಂಡಿದ್ದು, ಸದ್ಯಕ್ಕೆ ಅವುಗಳಲ್ಲಿ ಎರಡು ಬೈಕ್‍ಗಳನ್ನು ಬಿಡುಗಡೆಗೊಳಿಸಿ ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಸದ್ಯಕ್ಕೆ ಬಿಡುಗಡೆಗೊಂಡ ಜಾವಾ ಮತ್ತು ಜಾವಾ 42 ಬೈಕ್‍ಗಳು ಜನಪ್ರಿಯತೆಯನ್ನು ಗಳಿಸುತ್ತಿದ್ದು, ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್‍ಗಳಿಗೆ ಪೈಪೋಟಿ ನೀಡುತ್ತಿದೆ. ಆದರೆ ಇದೀಗ ಜಾವಾ ಸಂಸ್ಥೆಯು ಆರ್‍ಇ ಸಂಸ್ಥೆಗೆ ಪೈಪೋಟಿ ನೀಡಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಅದೇನೆಂದರೆ ದೇಶದಲ್ಲಿನ ಪ್ರಮುಖ ನಗರಗಳಲ್ಲಿರುವ ರಾಯಲ್ ಎನ್‍ಫೀಲ್ಡ್ ಡೀಲರ್‍‍ಗಳ ಸಮೀಪದಲ್ಲಿಯೇ ಜಾವಾ ಸಂಸ್ಥೆಯು ತಮ್ಮ ಅಧಿಕೃತ ಡೀಲರ್‍‍ಶಿಪ್ ಅನ್ನು ತೆರೆಯಲು ಸಿದ್ಧಗೊಂಡಿದ್ದು, ಈಗಾಗಲೆ ಈ ಬಗ್ಗೆ ಬ್ಯಾನರ್‍‍ಗಳನ್ನು ಅಲ್ಲಲ್ಲಿ ಅಂಟಿಸಲಾಗುತ್ತಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಜಾವಾ ಸಂಸ್ಥೆಯ ಹೊಸ ಅಸ್ತ್ರ.?

ಹೌದು, ಮೇಲೆ ಹೇಳಿರುವ ಹಾಗೆ ಮಾರುಕಟ್ಟೆಯಲ್ಲಿ ಜಾವಾ ಸಂಸ್ಥೆಯು ರಾಯಲ್ ಎನ್‍ಫೀಲ್ಡ್ ಸಂಸ್ಥೆಯನ್ನು ಟಾರ್ಗೆಟ್ ಮಾಡಲಾಗಿದ್ದು, ಜಾವಾ ಬೈಕ್‍ಗಳನ್ನು ಖರೀದಿಸಲು ಬರುವ ಗ್ರಾಹಕರಿಗೆ ಆರ್‍ಇ ಅಥವಾ ಜಾವಾ ಬೈಕ್‍ಗಳಲ್ಲಿ ಯಾವುದು ಉತ್ತಮ ಎಂಬುವುದರ ಬಗ್ಗೆ ಅರಿವು ಮೂಡಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಮೊದಲಿಗೆ ಜಾವಾ ಸಂಸ್ಥೆಯು ತಮ್ಮ ಡೀಲರ್‍‍ಶಿಪ್‍ಗಳನ್ನು ಮೊದಲನೆಯ ಹಂತದಲ್ಲಿ ಪ್ರಮುಖ ನಗರಗಳಾದ ಮುಂಬೈ, ಪುಣೆ, ದೆಹಲಿ ಮತ್ತು ಹೈದರಾಬಾದ್‍ನಲ್ಲಿ ಡಿಸೆಂಬರ್ ಅಂತ್ಯದೊಳಗೆ ತೆರೆಯಲಾಗುತ್ತಿದ್ದು, ಜನವರಿ ತಿಂಗಳ ಅಂತ್ಯದೊಳಗೆ ಎರಡನೆಯ ಹಂತವಾಗಿ ಬೆಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾ ನಗರಗಳಲ್ಲಿ ಪ್ರಾರಂಭಿಸಲಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಹೊಸ ಬೈಕ್‍ಗಳ ಬೆಲೆ

ಇನ್ನು ಜಾವಾ ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿ ಅಧಿಕವಾಗಿ ಮಾರಾಟಗೊಳ್ಳುತ್ತಿರುವ ಕ್ಲಾಸಿಕ್ 350 ಬೈಕ್‍ಗೆ ಜಾವಾ ಬೈಕ್‍ಗಳು ಪೈಪೊಟಿ ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ ಜಾವಾ ರಾಯಲ್ ಎನ್ಫೀಲ್ಡ್ ವಿತರಕರ ಹತ್ತಿರದಲ್ಲಿ ತಮ್ಮ ಡೀಲರ್‍‍‍ಶಿಪ್ ಅನ್ನು ತೆರೆಯುವುದಲ್ಲದೇ ರೆಟ್ರೊ ವಿನ್ಯಾಸವನ್ನು ಹೊಂದಿರುತ್ತದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಬುಕ್ಕಿಂಗ್ ಹೇಗೆ.?

ಹೊಸ ಡೀಲರ್‍‍ಶಿಪ್‍ಗಳು ಪ್ರಾರಂಭವಾಗುವುದಕ್ಕು ಮುನ್ನ ಜಾವಾ ಬೈಕ್‍ಗಳನ್ನು ಖರೀದಿಸಲು ಇಚ್ಛಿಸುವವರು ಸಮೀಪದಲ್ಲಿನ ಮಹೀಂದ್ರಾ ಡೀಲರ್‍‍‍ಗಳ ಬಳಿ ರೂ.5000 ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಬಿಡುಗಡೆಗೂ ಮುನ್ನವೇ ಬೈಕ್ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಜಾವಾ ಹೊಚ್ಚ ಹೊಸ ಬೈಕ್‌ಗಳು ನೀರಿಕ್ಷೆಗೂ ಮೀರಿ ಮಾರುಕಟ್ಟೆಗೆ ಮರಳಿ ಬಂದಿದ್ದು, ಹಳೆಯ ಜಾವಾ ಮೋಟರ್​‌ಸೈಕಲ್​ನ ಹೊಸ ರೂಪದಂತಿವೆ ಎಂದ್ರೆ ತಪ್ಪಾಗುವುದಿಲ್ಲ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಮಹೀಂದ್ರಾ ವಿರುದ್ಧ ಗರಂ ಆದ ಫ್ಯಾನ್ಸ್

ಜಾವಾ ಸಂಸ್ಥೆಯು ಗತಕಾಲದ ವೈಭವವನ್ನು ಕಾಪಾಡಲು ತನ್ನ ನೂತನ ಬೈಕುಗಳ ವಿನ್ಯಾಸದಲ್ಲಿ ಸುಧಾರಿತ ಮಾದರಿಯ ಬೈಕಿನ ಸ್ಪೀಡೋ ಮೀಟರ್, ಡ್ಯೂಮ್ ನ ಕ್ಲಾಸಿಕ್ ಲುಕ್ ಅನ್ನು ಹಾಗೇ ಉಳಿಸಿ, ಹೊಸದಾಗಿ ಟೂಲ್ ಬಾಕ್ಸ್ ಅನ್ನು ಸೇರಿಸುವ ಮೂಲಕ ಬೈಕಿನ ಅಂದವನ್ನು ಹೆಚ್ಚುವಂತೆ ಮಾಡಿದೆ. ಅಲ್ಲದೇ ಈ ಮೂರು ಬೈಕುಗಳು ಬಿಎಸ್6 ಮಾದರಿಯನ್ನು ಒಳಗೊಂಡಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಆದ್ರೆ ಹೊಸ ಜಾವಾ ಬೈಕಿನಲ್ಲಿ ಒದಗಿಸಲಾಗಿರುವ ಫ್ರಂಟ್ ಡಿಸ್ಕ್ ಬ್ರೇಕ್, ಸಿಂಗಲ್ ಚಾನೆಲ್ ಎಬಿಎಸ್ ಗಮನಸೆಳೆಯುವ ಅಂಶಗಳಾಗಿದ್ದರೂ ಬೈಕಿನ ಹಿಂಭಾಗದ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಇಲ್ಲದಿರುವ ಬಗ್ಗೆ ಜಾವಾ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಹೊಸ ಬೈಕ್ ಅನ್ನು ಮಾರ್ಡನ್ ರೆಟ್ರೋ ಲುಕ್ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ ಬೈಕಿನ ಸುರಕ್ಷತೆಯ ವಿಚಾರದಲ್ಲಿ ಅಸಡ್ಡೆ ಮಾಡಲಾಗಿದೆ ಎಂದು ದೂರಿರುವ ಕೆಲವು ಜಾವಾ ಪ್ರಿಯರು ಹೊಸ ಬೈಕ್‌ಗಳಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ನೀಡಿ ಅಂತಾ ಪಟ್ಟುಹಿಡಿದ್ದಾರೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಸದ್ಯ ಬಿಡುಗಡೆ ಮಾಡಲಾಗಿರುವ ಹೊಸ ಜಾವಾ ಮತ್ತು ಜಾವಾ 42 ಬೈಕ್‌ಗಳ ಹಿಂಭಾಗದ ಚಕ್ರಗಳಲ್ಲಿ ಡ್ರಮ್ ಬ್ರೇಕ್ ಸೌಲಭ್ಯ ನೀಡಲಾಗಿದ್ದು, ಮತ್ತೊಂದು ಬೈಕ್ ಮಾದರಿಯಾದ ಪೆರಾಕ್ ಬೈಕಿನಲ್ಲಿ ಮಾತ್ರವೇ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನಲ್ ಎಬಿಎಸ್ ಕಲ್ಪಿಸಲಾಗಿದೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಹೀಗಾಗಿ ಜಾವಾ ಮತ್ತು ಜಾವಾ 42 ಬೈಕಿನಲ್ಲೂ ಹಿಂದಿಯ ಚಕ್ರಗಳಿಗೂ ಡಿಸ್ಕ್ ಬ್ರೇಕ್ ಸೌಲಭ್ಯ ನೀಡುವಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಪಟ್ಟುಹಿಡಿರುವ ಜಾವಾ ಅಭಿಮಾನಿಗಳು, ಡಿಸ್ಕ್ ಬ್ರೇಕ್ ಸೌಲಭ್ಯ ನೀಡದೆ ಹೊದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಹಿಂದಿಕ್ಕಲು ಸಾಧ್ಯವಾಗುವುದಿಲ್ಲ ಎನ್ನುತ್ತಿದ್ದಾರೆ.

ಆರ್‍ಇ ಬೈಕ್‍ಗಳಿಗೆ ಟಕ್ಕರ್ ನೀಡಲು ಜಾವಾದಿಂದ ಮತ್ತೊಂದು ಅಸ್ತ್ರ

ಇದಕ್ಕೆ ಪ್ರಕ್ರಿಯೆ ನೀಡಿರುವ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯ ಅಧ್ಯಕ್ಷ ಅಶಿಸ್ ಜೋಶಿಯವರು, 1980-90ರ ಅವಧಿಯಲ್ಲಿನ ಕ್ಲಾಸಿಕ್ ಬೈಕ್‌ಗಳ ವಿನ್ಯಾಸವನ್ನೇ ಉಳಿಸಿಕೊಳ್ಳುವ ಉದ್ದೇಶದಿಂದ ಬೈಕಿನ ಹಿಂಬದಿಯ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಬದಲಾಗಿ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದೆ.

Most Read Articles

Kannada
English summary
Jawa Motorcycle Dealerships Will Be Opened Near Royal Enfield Dealerships.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X