ಆಟೋ ಎಕ್ಸ್ ಪೋ 2018: ಕವಾಸಕಿ ನಿಂಜಾ H2 SX ಮತ್ತು ನಿಂಜಾ H2 SX SE ಬಿಡುಗಡೆ

Written By: Rahul

ಜಪಾನ್ ಮೂಲದ ಪ್ರತಿಷ್ಠಿತ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾದ ಕವಾಸಕಿಯು ಭಾರತೀಯ ಮಾರುಕಟ್ಟೆಗಾಗಿ ನಿಂಜಾ ಹೆಚ್‌ 2 ಎಸ್ಎಕ್ಸ್ ಮತ್ತು ನಿಂಜಾ ಹೆಚ್2 ಎಸ್ಎಕ್ಸ್ ಎಸ್ಇ ಎಂಬ ಎರಡು ಸೂಪರ್ ಸ್ಪೋರ್ಟ್ ಟೂರ್ ಬೈಕ್ ಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಬೈಕಿನ ಬೆಲೆಗಳು ರೂ.21.80 ಲಕ್ಷಕ್ಕೆ ಹಾಗೂ ರೂ. 26.80ಕ್ಕೆ ನಿಗದಿ ಮಾಡಲಾಗಿದೆ.

ಆಟೋ ಎಕ್ಸ್ ಪೋ 2018 : ಕವಾಸಕಿ ನಿಂಜಾ H2 SX ಮತ್ತು ನಿಂಜಾ H2 SX SE ಬಿಡುಗಡೆ

ಹೆಚ್2 ಎಸ್ಎಕ್ಸ್ ಬೈಕ್ ಸೂಪರ್ ಚಾರ್ಜ್ಡ್ ಹೆಚ್ 2 ಬೈಕ್ ಅನ್ನು ಆಧರಿಸಿದ್ದು, ಸುಧೀರ್ಘ ಪ್ರಯಾಣಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ 998 ಸಿಸಿ ಇನ್ ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಒದಗಿಸಲಾಗಿದ್ದು, 199-ಬಿಹೆಚ್ ಪಿ ಮತ್ತು 136-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Recommended Video - Watch Now!
New Maruti Swift Launch: Price; Mileage; Specifications; Features; Changes
ಆಟೋ ಎಕ್ಸ್ ಪೋ 2018 : ಕವಾಸಕಿ ನಿಂಜಾ H2 SX ಮತ್ತು ನಿಂಜಾ H2 SX SE ಬಿಡುಗಡೆ

ತೂಕದಲ್ಲಿ ಕವಾಸಕಿ ನಿಂಜಾ ಹೆಚ್2 ಎಸ್ಎಕ್ಸ್ ಬೈಕ್ ನಿಂಜಾ ಹೆಚ್2ಗಿಂತ 18 ಕೆಜಿ ಹೆಚ್ಚು ತೂಕ ಪಡೆದುಕೊಂಡಿದ್ದಲ್ಲದೆ ಈ ಮೋಟಾರು ಸೈಕಲ್ನಲ್ಲಿ ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್ ಮತ್ತು ಕವಾಸಾಕಿಯ ಇತ್ತೀಚಿನ ಐಎಂಯು ಎಲೆಕ್ಟ್ರಾನಿಕ್ಸ್ ಪ್ಯಾಕೇಜ್‌ನಂತಹ ಟೂರ್ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದೆ.

ಆಟೋ ಎಕ್ಸ್ ಪೋ 2018 : ಕವಾಸಕಿ ನಿಂಜಾ H2 SX ಮತ್ತು ನಿಂಜಾ H2 SX SE ಬಿಡುಗಡೆ

ನಿಂಜಾ ಹೆಚ್2 ಎಸ್ಎಕ್ಸ್ ಮತ್ತು ಹೆಚ್2 ಎಸ್ಎಕ್ಸ್ ಎಸ್ಇ ವಿಭಿನ್ನ ವ್ಯೆತ್ಯಾಸಗಳನ್ನು ಹೊಂದಿದ್ದು, ಹೆಚ್2 ಎಸ್ಎಕ್ಸ್ ಪೂರ್ಣ ಡಿಜಿಟಲ್ ಎಲ್ ಸಿಡಿ ಡಿಸ್‌ಫೈ ಅನಾಲಾಗ್ ಟಾಚೊಮೀಟರ್ ಹಾಗು ಹೆಚ್2 ಎಸ್ಎಕ್ಸ್ ಎಸ್ಇ ಟೆಫ್ ಟಿ ಕ್ಲಸ್ಟರ್, ಪೂರ್ಣ ಪ್ರಮಾಣ ಎಲ್ ಇಡಿ ಲೈಟಿಂಗ್ ಮತ್ತು ಎಲ್ ಇಡಿ ಕಾರ್ನೆರಿಂಗ್ ಲೈಟ್ ಗಳನ್ನು ಹೊಂದಿವೆ.

ಆಟೋ ಎಕ್ಸ್ ಪೋ 2018 : ಕವಾಸಕಿ ನಿಂಜಾ H2 SX ಮತ್ತು ನಿಂಜಾ H2 SX SE ಬಿಡುಗಡೆ

ನಿಂಜಾ ಹೆಚ್2 ಎಸ್ಎಕ್ಸ್ ಸ್ಪೋರ್ಟ್ ಟೂರ್ ರೈಡಿಂಗ್‌‌ ಅನ್ನು ಉತ್ತಮಗೊಳಿಸಲು ಎಲೆಕ್ಟ್ರಾನಿಕ್ ಸಾಧನಗಳಾದ ಕ್ರೂಸ್ ಕಂಟ್ರೋಲ್, ಕವಾಸಕಿ ಟ್ರಾಕ್ಷನ್ ಕಂಟ್ರೋಲ್, ಕವಾಸಕಿ ಲಾಂಚ್ ಕಂಟ್ರೋಲ್ ಮೋಡ್ ಮತ್ತು ಕ್ವಿಕ್ ಶಿಫ್ಟರ್ ಅನ್ನು ಜೋಡಿಸಲಾಗಿದೆ.

ಆಟೋ ಎಕ್ಸ್ ಪೋ 2018 : ಕವಾಸಕಿ ನಿಂಜಾ H2 SX ಮತ್ತು ನಿಂಜಾ H2 SX SE ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾದ ಹೆಚ್2 ಎಸ್ಎಕ್ಸ್ ಎಸ್ಇ ಪ್ರದರ್ಶನವಾಗಿಲ್ಲವಾದರೂ ಮುಂದಿನ ದಿನಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಇದರ ಜೊತೆಗೆ ಈ ಹಿಂದೆ ಬಿಡುಗಡೆಗೊಳಿಸಲಾಗಿರುವ ವಾಲ್ಕನ್ 650 ಕ್ರೂಸರ್, ಝೆಡ್900 ಮತ್ತು ಝೆಡ್ಎಕ್ಸ್ 10ಆರ್ ಬೈಕ್‌ಗಳನ್ನು ಪ್ರದರ್ಶನಗೊಳಿಸಿದೆ.

ಆಟೋ ಎಕ್ಸ್ ಪೋ 2018 : ಕವಾಸಕಿ ನಿಂಜಾ H2 SX ಮತ್ತು ನಿಂಜಾ H2 SX SE ಬಿಡುಗಡೆ

ಒಟ್ಟಿನಲ್ಲಿ ಹಲವಾರು ಆಪ್ ರೋಡ್ ವೈಶಿಷ್ಟ್ಯತೆಗಳನ್ನು ಹೊಂದಿರುವ ನಿಂಜಾ ಹೆಚ್2 ಎಸ್ಎಕ್ಸ್ ಬೈಕ್ ಸ್ಪೋರ್ಟ್ಸ್ ರೈಡಿಂಗ್ ಪ್ರಿಯರನ್ನು ಸೆಳೆದಿದ್ದು, ಹೊಸ ಬೈಕ್‌ಗಳ ಖರೀದಿಗಾಗಿ ಇಂದಿನಿಂದಲೇ ನಿಮ್ಮ ಹತ್ತಿರ ಡೀಲರ್ಸ್‌ಗಳ ಬಳಿ ಬುಕ್ಕಿಂಗ್ ಮಾಡಬಹುದಾಗಿದೆ.

Read more on kawasaki auto expo 2018
English summary
Kawasaki Ninja H2 SX And H2 SX SE Launched In India; Prices Start At Rs 21.80 Lakh.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark