ಕೇಫ್ ರೇಸರ್ ವಿನ್ಯಾಸ ಪಡೆದ ಯಮಹಾ ಆರ್‍‍ಡಿ350 ಬೈಕ್..

2 ಸ್ಟ್ರೋಕ್ ಮೋಟಾರ್‍‍‍ಸೈಕಲ್ ಉತ್ಸಾಹಕರು ಅಧಿಕವಾಗಿ ಅಭಿಮಾನಿಸುವ ಬೈಕ್ ಯಮಹಾ ಆರ್‍‍‍ಡಿ350. ಯಮಹಾ ಆರ್‍‍ಡಿ350 ಮೋಟರ್‍‍ಸೈಕಲ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿ ಮಾಡಿದ ಸದ್ದು ಕಡಿಮೆಯಲ್ಲ.

By Rahul Ts

2 ಸ್ಟ್ರೋಕ್ ಮೋಟಾರ್‍‍‍ಸೈಕಲ್ ಉತ್ಸಾಹಕರು ಅಧಿಕವಾಗಿ ಅಭಿಮಾನಿಸುವ ಬೈಕ್ ಯಮಹಾ ಆರ್‍‍‍ಡಿ350. ಯಮಹಾ ಆರ್‍‍ಡಿ350 ಮೋಟರ್‍‍ಸೈಕಲ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿ ಮಾಡಿದ ಸದ್ದು ಕಡಿಮೆಯಲ್ಲ. ಮಾರುಕಟ್ಟೆಯಿಂದ ಶಾಶ್ವತವಾಗಿ ದೂರವಾದರೂ ಅಗಾಗ ಇಂತಹ ಮಾಡಿಫೈ ವಿನ್ಯಾಸದಲ್ಲಿ ಕಾಣಿಸಿಕೊಳ್ಳುತ್ತಿದೆ.

ಕೇಫ್ ರೇಸರ್ ವಿನ್ಯಾಸ ಪಡೆದ ಯಮಹಾ ಆರ್‍‍ಡಿ350 ಬೈಕ್..

ಈ ಮಾಡೀಫೈಡ್ ಕೇಫ್ ರೇಸರ್ ಯಮಹಾ ಆರ್‍‍ಡಿ350 ಬೈಕ್ ಅಂದರೇ ನಂಬಲಾಗುತ್ತಿಲ್ಲ ಅಲ್ವಾ.? ನೀವು ಮಾತ್ರವಲ್ಲ ಮೊದಲಿಗೆ ನಾವು ಕೂಡಾ ನಂಬಲಿಲ್ಲ. 2 ಸ್ಟ್ರೋಕ್ ಮೋಟಾರ್‍‍ಸೈಕಲ್ ಅಭಿಮಾನಿಗಳನ್ನು ಹೆಚ್ಚಿನದಾಗಿ ಆಕರ್ಷಿಸಿದ ಮಾಡಿಫೈ ಯಮಹಾ ಆರ್‍‍ಡಿ350 ಕೇಫ್ ರೇಸರ್ ಬಗ್ಗೆ ಇನ್ನಷ್ಟು ಮಾಹಿತಿ ಮತ್ತು ಚಿತ್ರಗಳು ಇಂದಿನ ಲೇಖನದಲ್ಲಿ.

ಕೇಫ್ ರೇಸರ್ ವಿನ್ಯಾಸ ಪಡೆದ ಯಮಹಾ ಆರ್‍‍ಡಿ350 ಬೈಕ್..

ಅಧಿಕೃತ ತಯಾರಕರನ್ನು ಕೂಡಾ ಹಿಂದಿಕ್ಕುವ ಹಾಗೆ ಮಾಡಿಫೈ ಮಾಡಲಾಗಿರುವ ಈ ಯಮಹಾ ಆರ್‍‍‍ಡಿ350 ಕೇಫ್ ರೇಸರ್ ಬೈಕ್ ಅನ್ನು ಡೆಹ್ರಾಡೂನ್‍‍ಗೆ ಸೇರಿದ ಮೋಟೋ ಎಕ್ಸಾಟಿಕ್ ತಂಡವು ಹೀಗೆ ಮಾಡೀಫೈ ಮಾಡಿದೆ. ಅತ್ಯಂತ ಹಳೆಯ ಮಾಡಲ್‍‍ಗಳಿಂದ ಆಯ್ಕೆ ಮಾದಿಕೊಂಡ ಬಿಡಿಭಾಗಗಳಿಂದ ಮಾಡಿಫಿಕೇಷನ್ ಮಾಡಿರುವುದಾಗಿ ಎಕ್ಸಾಟಿಕ್ ಮಾಡಿಫಿಕೇಷನ್ ತಂಡವು ಹೇಳಿಕೊಂಡಿದೆ.

ಕೇಫ್ ರೇಸರ್ ವಿನ್ಯಾಸ ಪಡೆದ ಯಮಹಾ ಆರ್‍‍ಡಿ350 ಬೈಕ್..

ನಿಜಕ್ಕೆ, ಸೆಕಂಡ್ ಹ್ಯಾಂಡ್ ಬೈಕ್‍‍ಗಳ ಮಾರುಕಟ್ಟೆಯಲ್ಲಿ ಯಮಹಾ ಆರ್‍‍ಡಿ350 ಬೈಕ್ ದೊರೆಯುವುದು ತುಂಬಾನೇ ಕಷ್ಟ. 1983 ಕಾಲದಲ್ಲಿ ಅತ್ಯಂತ ಅಪರೂಪದ ಟೆಕ್ನಾಲಜಿಯಿಂದ ಪರಿಚಯಿಸಿದ ಆರ್‍‍ಡಿ350 ತೀವ್ರ ಕುತೂಹಲವನ್ನು ಹುಟ್ಟುಹಾಕಿತ್ತು.

ಕೇಫ್ ರೇಸರ್ ವಿನ್ಯಾಸ ಪಡೆದ ಯಮಹಾ ಆರ್‍‍ಡಿ350 ಬೈಕ್..

ಮೋಟೋ ಎಕ್ಸಾಟಿಕ್ ಸಭ್ಯರು ಧೃಢವಾದ ಚಾಸಿಸ್, ನೂತನ ಸ್ವಿಂಗ್‍ಆರ್ಮ್‍ನ ಮೇಲೆ ಕೈಗಳಿಂದ ತಯಾರು ಮಾಡಿದ ಫ್ಯುಯಲ್ ಟ್ಯಾಂಕ್ ಮತ್ತು ಉದ್ದದ ಸೀಟ್‍‍ನೊಂದಿಗೆ ಆರ್‍‍ಡಿ350 ಬೈಕ್ ಅನು ಪೂರ್ತಿಯಾಗಿ ಹೊಸದಾಗಿ ಬದಲಾಯಿಸಿದ್ದಾರೆ. ಮಾಡಿಫೈ ಕೇಫ್ ರೇಸರ್ ಸಿಎನ್‍‍ಸಿ ಮಿಶಿನಿಂಗ್ ಮಾಡಲಾದ ಟ್ರಿಪಲ್ ಕ್ಲಾಂಪ್ ಮತ್ತು ಬಾಟಮ್ ಕನೆಕ್ಟರ್ ಹ್ಯಾಂಡಲ್ ಅನ್ನು ಅಳವಡಿಸಲಾಗಿದೆ.

ಕೇಫ್ ರೇಸರ್ ವಿನ್ಯಾಸ ಪಡೆದ ಯಮಹಾ ಆರ್‍‍ಡಿ350 ಬೈಕ್..

ಮಾಡಿಫೈ ಯಮಹಾ ಆರ್‍‍ಡಿ350 ಕೇಫ್ ರೇಸರ್‍‍ನ ಮುಂಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ವೃತ್ತಾಕಾರದಲ್ಲಿನ ಹೆಡ್‍‍ಲ್ಯಾಂಪ್ ಮತ್ತು ಸಿಂಗಲ್ ಪಾಡ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಸಸ್ಪೆಂಷನ್ ವಿಚಾರದಕ್ಕೆ ಬಂದಲ್ಲಿ ಮುಂಭಾಗದಲ್ಲಿ ಅಪ್‍‍ಸೈಡ್ ಡೌನ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಅಡ್ಜಸ್ಟಬಲ್ ಮೋನೊಶಾಕ್ ಅಬ್ಸಾರ್ಬರ್ ಅನ್ನು ಅಳವಡಿಸಲಾಗಿದೆ.

ಕೇಫ್ ರೇಸರ್ ವಿನ್ಯಾಸ ಪಡೆದ ಯಮಹಾ ಆರ್‍‍ಡಿ350 ಬೈಕ್..

ಪ್ರಯಾಣಿಕರ ಸುರಕ್ಷತೆಗಾಗಿ ಮುಂದಿನ ಚಕ್ರಗಳಿಗೆ 4 ಪಿಸ್ಟನ್ ಕ್ಯಾಲಿಪರ್ ಹೊಂದಿರುವ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ಅನ್ನು ಅಳವಡಿಸಲಾಗಿದೆ. ಎರಡು ಬದಿಗಳಲ್ಲಿ 18 ಇಂಚಿನ ವೈರ್-ಸ್ಪಾಕ್ ವ್ಹೀಲ್ಸ್ ಮತ್ತು ಕಸ್ಟಮ್-ಮೇಡ್ ಸ್ಪ್ರಾಕೆಟ್‍‍ಗಳನ್ನು ಬಳಸಲಾಗಿದೆ. ಇದರಲ್ಲಿನ ವಿಶೇಷೇನೆಂದರೆ ಆಫ್-ರೋಡ್ ಬಟನ್ ಟೈರ್‍‍ಗಳನ್ನು ಕೂಡ ಬಳಸಲಾಗಿದೆ.

ಕೇಫ್ ರೇಸರ್ ವಿನ್ಯಾಸ ಪಡೆದ ಯಮಹಾ ಆರ್‍‍ಡಿ350 ಬೈಕ್..

ಮಾದಿಫೈ ಯಮಹಾ ಆರ್‍‍‍ಡಿ350 ಕೇಫ್ ರೇಸರ್ ಬೈಕ್‍ನಲ್ಲಿ ತಾಂತ್ರಿಕವಾಗಿ ಮಾಡಿಪೈ ಮಾಡಿರುವ ವಿವರಗಳು ದೊರೆತಿಲ್ಲ. ಆದರೆ ನಿಜವಾದ ಯಮಹಾ ಆರ್‍‍ಡಿ350 ಬೈಕ್‍ 347ಸಿಸಿ, 2 ಸ್ಟ್ರೋಕ್ ಪ್ಯಾರಲಲ್ ಟ್ವಿನ್ ಪೆಟ್ರೋಲ್ ಎಂಜಿನ್ ಸಹಾಯದಿಂದ 30.5 ಬಿಹೆಚ್‍‍ಪಿ ಮತ್ತು 32.3 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕೇಫ್ ರೇಸರ್ ವಿನ್ಯಾಸ ಪಡೆದ ಯಮಹಾ ಆರ್‍‍ಡಿ350 ಬೈಕ್..

ಇತಿಹಾಸದಲ್ಲಿ ಯಮಹಾ ಆರ್‍‍‍‍ಡಿ350 ಬೈಕ್‍‍ಗಳನ್ನು 1983 ರಿಂದ 1989ವರೆಗು ಭಾರತದಲ್ಲಿಯೇ ತಯಾರಿಸಲಾಗಿತ್ತು. ಆಗ ಇದು ಹೆಚ್‍‍ಟಿ (ಹೈ ಟಾರ್ಕ್) ಮತ್ತು ಎಲ್‍‍ಟಿ (ಲೋ ಟಾರ್ಕ್) ಎಂಬ ಎರಡು ವರ್ಷನ್‍‍ನಲ್ಲಿ ಲಭ್ಯವಾಗಿದ್ದವು. ಅಧಿಕ ನಿರ್ವಹಣೆಯ ಖರ್ಚು ಮತ್ತು ಕಡಿಮೆ ಮೈಲೇಜ್ ನೀಡುತ್ತಿದ್ದ ಕಾರಣಾದಿಂದಾಗಿ ಹಲವರು ಖರೀದಿಸುತ್ತಿರಲಿಲ್ಲ. ಆದರೇ ಈಗ ಈ ಬೈಕ್‍‍ಗೆ ಮಾರುಕಟ್ಟೆಯಲ್ಲಿರುವ ಬೇಡಿಕೆಯೆ ಬೇರೆ.

Most Read Articles

Kannada
Read more on bike modifications yamaha
English summary
Modified yamaha rd350 cafe racer by moto exotica.
Story first published: Monday, July 30, 2018, 11:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X