2018ರ ಬಹುನೀರಿಕ್ಷಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

Written By:

ಕಮ್ಯುಟರ್ ಬೈಕ್ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕಿನ 2018ರ ಆವೃತ್ತಿಯು ಬಿಡುಗಡೆಯಾಗಿದ್ದು, ಹೊಸ ಬೈಕ್‌ಗಳನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಬೆಲೆಗಳನ್ನು ರೂ.84,675ಕ್ಕೆ ನಿಗದಿಪಡಿಸಲಾಗಿದೆ.

2018ರ ಬಹುನೀರಿಕ್ಷಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

ಕಳೆದ ತಿಂಗಳ ಹಿಂದಷ್ಟೇ 2018ರ ಆಟೋ ಎಕ್ಸ್‌ಪೋದಲ್ಲಿ ತನ್ನ ಹೊಸ ಸಿಬಿ ಹಾರ್ನೆಟ್ 160ಆರ್ ಬೈಕ್ ಅನ್ನು ಪ್ರದರ್ಶನಗೊಳಿಸಿದ್ದ ಹೋಂಡಾ ಸಂಸ್ಥೆಯು, ಹಿಂದಿನ ಮಾದರಿಗಿಂತಲೂ ಅತ್ಯತ್ತಮ ಸುರಕ್ಷಾ ಸೌಲಭ್ಯಗಳನ್ನು ಒದಗಿಸುವ ಕುರಿತು ಭರವಸೆ ನೀಡಿತ್ತು.

2018ರ ಬಹುನೀರಿಕ್ಷಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

ಅಂತೆಯೇ ಹೊಸ ಬೈಕಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಒದಗಿಸಿರುವ ಹೋಂಡಾ ಸಂಸ್ಥೆಯು ಹಳೆಯ ಮಾದರಿಗಿಂತಲೂ ಹೆಚ್ಚು ಆಕರ್ಷಣೆ ಕಾಣುವಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಸಹ ಪರಿಚಯಿಸಿದೆ.

2018ರ ಬಹುನೀರಿಕ್ಷಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

ಹೊಸದಾಗಿ ಪರಿಚಯಿಸಿರುವ ಸಿಂಗಲ್ ಚಾನೆಲ್ ಸೌಲಭ್ಯವನ್ನು ಆಯ್ಕೆ ರೂಪದಲ್ಲಿ ನೀಡಲಾಗಿದ್ದು, ಗ್ರಾಹಕರು ತಮ್ಮ ಆದ್ಯತೆ ಮೆರೆಗೆ ವಿವಿಧ ಮಾದರಿಯ ಬೈಕ್ ಆವೃತ್ತಿಗಳನ್ನು ಆಯ್ಕೆ ಮಾಡಬಹುದಾದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಹೀಗಾಗಿ ವಿವಿಧ ಮಾದರಿಗಳಿಗೆ ಅನುಗುಣ ವಿವಿಧ ಬೆಲೆ ಪಡೆದುಕೊಂಡಿವೆ.

2018ರ ಬಹುನೀರಿಕ್ಷಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

ಬೈಕ್ ಮಾದರಿಗಳು ಮತ್ತು ಅವುಗಳ ಬೆಲೆ ಪಟ್ಟಿ ಹೀಗಿದೆ....

ಬೈಕ್ ಮಾದರಿ ಬೆಲೆ(ಎಕ್ಸ್‌ಶೋರಂ ಪ್ರಕಾರ)
ಸ್ಟ್ಯಾಂಡರ್ಡ್ ರೂ. 84.675
ಸಿಬಿಎಸ್ ರೂ. 89,175
ಎಬಿಎಸ್ ಸ್ಟ್ಯಾಂಡರ್ಡ್ ರೂ. 90,175
ಎಬಿಎಸ್ ಡಿಎಲ್ಎಕ್ಸ್ ರೂ. 92,675
2018ರ ಬಹುನೀರಿಕ್ಷಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಬೈಕಿನ ವಿನ್ಯಾಸಗಳು ಮತ್ತು ಸಿಂಗಲ್ ಚಾಲೆನ್ ಎಬಿಎಸ್ ಹೊರತುಪಡಿಸಿ ಈ ಹಿಂದಿನ ಮಾದರಿಯೆಂತೆಯೇ 162.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಒದಗಿಸಲಾಗಿದ್ದು, 14.9ಬಿಎಚ್‌ಪಿ ಮತ್ತು 14.5ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಗುಣಹೊಂದಿವೆ.

2018ರ ಬಹುನೀರಿಕ್ಷಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿರುವ 2018ರ ಸಿಬಿ ಹಾರ್ನೆಟ್ 160ಆರ್ ಬೈಕ್‌ಗಳು, ಸುಧಾರಿತ ಎಲ್‌ಇಡಿ ಹೆಡ್‌ಲೈಟ್, ಮರು ವಿನ್ಯಾಸದ ಬಾಡಿ ಗ್ರಾಫಿಕ್ಸ್‌ಗಳು ಮತ್ತು ಹೊಸ ಬಣ್ಣಗಳ ಆಯ್ಕೆಯನ್ನು ನೀಡಿರುವುದೇ ಹೊಸ ಬೈಕ್‌ಗಳ ಹೈಲೆಟ್ಸ್.

2018ರ ಬಹುನೀರಿಕ್ಷಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

ಇತರೆ ವಿನ್ಯಾಸಗಳ ಬಗೆಗೆ ಹೇಳುವುದಾದರೇ, ಹೋಂಡಾದ ಮತ್ತೊಂದು ಎಕ್ಸ್ ಬ್ಲೇಡ್ ಬೈಕಿನಂತೆಯೇ ಈ ಬೈಕಿನಲ್ಲೂ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಕ್ಸ್ ಸೇಫ್ ಎಲ್ಇಡಿ ಲೈಟ್ ಮತ್ತು ಮರು ವಿನ್ಯಾಸದ ಅಗಲ ಸೀಟುಗಳನ್ನು ಸಹ ಪಡೆದಿದೆ.

2018ರ ಬಹುನೀರಿಕ್ಷಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

ಟೈರ್ ಮತ್ತು ಸುರಕ್ಷಾ ವಿಧಾನಗಳು

ಮೇಲೆ ಹೇಳಿದ ಹಾಗೆ ಹೊಸ ಬೈಕ್‌ಗಳಲ್ಲಿ ಸುರಕ್ಷಾ ಮಾರ್ಗಗಳಿಗೆ ಹೆಚ್ಚಿನ ಒತ್ತುನೀಡಲಾಗಿದ್ದು, ಬ್ರೇಕಿಂಗ್ ಸಿಸ್ಟಂ ಸುಧಾರಿಸಲು ಆಯ್ಕೆ ರೂಪದ ಸಿಂಗಲ್ ಚಾನೆಲ್ ಎಬಿಎಸ್ ಮತ್ತು 276ಎಂಎಂ ಪೆಟಲ್ ಡಿಸ್ಕ್ ಬ್ರೇಕ್, 220ಎಂಎಂ/130ಎಂಎಂ ಡ್ರಮ್ ಬ್ರೇಕ್ ಒದಗಿಸಲಾಗಿದೆ.

2018ರ ಬಹುನೀರಿಕ್ಷಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬಿಡುಗಡೆ

ಇನ್ನು ಬೈಕಿನ ಸಸ್ಪೆಷನ್‌ಗಳನ್ನು ಈ ಹಿಂದನಂತೆ ಮುಂದುವರಿಸಲಾಗಿದ್ದು, ಮುಂಭಾಗದ ಚಕ್ರಗಳಲ್ಲಿ ಟೆಲಿಸ್ಕೊಪಿಕ್ ಫೋರ್ಕ್ ಸಸ್ಪೆಷನ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಮೊನೊಶಾರ್ಕ್ ಸಸ್ಪೆಷನ್‌ನೊಂದಿಗೆ ಡೈಮಂಡ್ ಟೈಪ್ ಫ್ರೆಮ್ ಪಡೆದಿರಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

02. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

03. ವಯಸ್ಸು 103, ಆದ್ರು ಕಡಿಮೆ ಆಗಿಲ್ಲಾ ಇವರ ಕ್ಯಾಬ್ ಚಾಲನೆಯಲ್ಲಿನ ಹುಮ್ಮಸ್ಸು...

04. ಜಗತ್ತಿನ ದುಬಾರಿ ಬೈಕ್‌ಗಳು ಯಾವವು ಗೊತ್ತಾ..!!

05. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Read more on honda ಹೋಂಡಾ
English summary
2018 Honda CB Hornet 160R Launched In India.
Story first published: Monday, March 26, 2018, 19:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark