TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ 500ಎಕ್ಸ್
ಚೆನ್ನೈ ಮೂಲದ ವಾಹನ ತಯಾರಕ ಕ್ಲಾಸಿಕ್ ವಿನ್ಯಾಸದ ಮೋಟಾರ್‍ಸೈಕಲ್ ತಯಾರಕ ಸಂಸ್ಥೆಯು ಇತ್ತೀಚೆಗೆ ತಮ್ಮ ಥಂಡರ್‍ಬರ್ಡ್ 350ಎಕ್ಸ್ ಬೈಕಿಗೆ ಎಬಿಎಸ್ ಅಳವಡಿಸಿ ಮತ್ತೆ ಬಿಡುಗಡೆಗೊಳಿಸಿದ್ದು, ಇದೀಗ ಅದೇ ಥಂಡರ್‍ಬರ್ಡ್ 500ಎಕ್ಸ್ ಬೈಕಿಗು ಸಹ ಎಬಿಎಸ್ ಅನ್ನು ಅಳವಡಿಸಿ ಮತ್ತೆ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದ ಆದೇಶದಂತೆ 2019 ಮಾರ್ಚ್ ತಿಂಗಳ ನಂತರ ಮಾರುಕಟ್ಟೆಯಲ್ಲಿರುವ ಎಲ್ಲಾ 125ಸಿಸಿ ಗಿಂತಾ ಹೆಚ್ಚಿನ ಸಾಮರ್ಥ್ಯದ ದ್ವಿಚಕ್ರ ವಾಹನಗಳಳ್ಳಿ ಎಬಿಎಸ್ ಬ್ರೇಕಿಂಗ್ ಕಡ್ಡಾಯವಾಗಿ ಇರಬೇಕೆಂದು ಹೇಳಿದ್ದು, ಈ ನಿಟ್ಟಿನಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ತಮ್ಮ ಕೆಲ ಬೈಕ್‍ಗಳಲ್ಲಿ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಲು ಮುಂದಾಗಿದೆ.
ಹೊಸದಾಗಿ ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ 500 ಎಕ್ಸ್ ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.60 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದ್ದು, ದೇಶದಲ್ಲಿನ ಎಲ್ಲಾ ಅಧಿಕೃತ ರಾಯಲ್ ಎನ್‍ಫೀಲ್ಡ್ ಡೀಲರ್‍ಗಳ ಬಳಿ ಖರೀದಿಗೆ ಲಭ್ಯವಿದೆ.
ಈಗಾಗಲೆ ದೇಶದಲ್ಲಿರುವ ಅಧಿಕೃತ ರಾಯಲ್ ಎನ್‍ಫೀಲ್ಡ್ ಡೀಲರ್‍ಗಳು ಎಬಿಎಸ್ ಪ್ರೇರಿತ ಥಂಡರ್‍ಬರ್ಡ್ 500ಎಕ್ಸ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರು ಮಾಡಿದ್ದು, ಆಸಕ್ತ ಗ್ರಾಹಾಕರು ರೂ. 5000 ಮೊತ್ತವನ್ನು ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ ಮತ್ತು ಬುಕ್ಕಿಂಗ್ ಕ್ಯಾನ್ಸಲ್ ಮಾದಿಕೊಂಡಲ್ಲಿ ನೀಡಿದ ಹಣವನ್ನು ಹಿಂತಿರುಗಿ ನೀಡಲಾಗುವುದು ಎನ್ನಲಾಗಿದೆ.
ಕೇವಲ ಎಬಿಎಸ್ ಅಳವಡಿಕೆಯನ್ನು ಹೊರತುಪದಿಸಿ ರಾಯಲ್ ಎನ್‍ಫೀಲ್ಡ್ ಬೈಕಿನ ವಿನ್ಯಾಸದಲ್ಲಿ ಅಥವಾ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಿಲ್ಲ. ಡ್ಯುಯಲ್ ಚಾನಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಸಿದ ನಂತರ ಈ ಬೈಕ್ ಇನ್ನಷ್ಟು ಸುರಕ್ಷತೆಯನ್ನು ಪ್ರಯಾಣಿಕರಿಗೆ ನೀಡುತ್ತದೆ.
ಎಂಜಿನ್ ಸಾಮರ್ಥ್ಯ
ಎಬಿಎಸ್ ಹೊಂದಿರುವ ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ 500ಎಕ್ಸ್ ಬೈಕ್ 499ಸಿಸಿ, ಏರ್ ಕೂಲ್ಡ್ , ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 41ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ರಾಯಲ್ ಎನ್‍ಪೀಲ್ಡ್ ಥಂಡರ್‍ಬರ್ಡ್ 500ಎಕ್ಸ್ ಬೈಕಿನ ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಗ್ಯಾಸ್-ಚಾರ್ಜ್ಡ್ ಶಾಕ್ ಅಬ್ಸಾರ್ಬರ್‍ಗಳನ್ನು ಒದಗಿಸಲಾಗಿದೆ. ಇದಲ್ಲದೇ 5 ವಿಧಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಕಾರ್ಯವನ್ನು ಹಿಂಭಾಗದ ಸಸ್ಪೆಂಷನ್‍ಗೆ ಅಳವಡಿಸಲಾಗಿದೆ.
ಇದೇ ಮೊದಲ ಬಾರಿಗೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಅಲಾಯ್ ವ್ಹೀಲ್ಸ್ ಮತ್ತು ಟ್ಯೂಬ್‍ಲೆಸ್ ಟೈರ್‍ಗಳನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 19 ಇಂಚಿನ ಮತ್ತು ಹಿಂಭಾಗದಲ್ಲಿ 187 ಇಂಚಿನ ಟೈರ್‍ಗಳನ್ನು ಒದಗಿಸಲಾಗಿದೆ.
ಇದೇ ಮೊದಲ ಬಾರಿಗೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಅಲಾಯ್ ವ್ಹೀಲ್ಸ್ ಮತ್ತು ಟ್ಯೂಬ್‍ಲೆಸ್ ಟೈರ್‍ಗಳನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 19 ಇಂಚಿನ ಮತ್ತು ಹಿಂಭಾಗದಲ್ಲಿ 187 ಇಂಚಿನ ಟೈರ್‍ಗಳನ್ನು ಒದಗಿಸಲಾಗಿದೆ.
ರಾಯಲ್ ಎನ್‍ಫೀಲ್ಡ್ ಥಂಡರ್‍ಬರ್ಡ್ 500ಎಕ್ಸ್ ಬೈಕ್ ಸಾಧಾರಣ ಥಂಡರ್‍ಬರ್ಡ್ 500 ಬೈಕ್‍ಗಿಂತಲೂ ಸ್ಟ್ರೀಟ್ ಓರಿಯೆಂಟೆಡ್ ಬೈಕ್ ಆಗಿದ್ದು, ಡ್ರಿಫ್ಟರ್ ಬ್ಲೂ ಮತ್ತು ಗೇಟ್‍ವೇ ಆರೆಂಜ್ ಎಂಬ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.