2018ರ ಸುಜುಕಿ ಜಿಕ್ಸರ್ ಮತ್ತು ಜಿಕ್ಸರ್ ಎಸ್ಎಫ್ ಬಿಡುಗಡೆ

2018ರ ಸುಜುಕಿ ಜಿಕ್ಸರ್ ಮತ್ತು ಜಿಕ್ಸರ್ ಎಸ್ಎಫ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಸಾಮಾನ್ಯ ಜಿಕ್ಸರ್ ಬೆಲೆಯನ್ನು ರೂ.80,928 ಮತ್ತು ಜಿಕ್ಸರ್ ಎಸ್ಎಫ್ ಬೈಕ್ ಬೆಲೆಯನ್ನು ರೂ.90,037ಕ್ಕೆ ನಿಗದಿಪಡಿಸಲಾಗಿದೆ.

By Praveen Sannamani

2018ರ ಸುಜುಕಿ ಜಿಕ್ಸರ್ ಮತ್ತ ಜಿಕ್ಸರ್ ಎಸ್ಎಫ್ ಬಿಡುಗಡೆ

2018ರ ಸುಜುಕಿ ಜಿಕ್ಸರ್ ಸರಣಿಗಳು ಸೂಕ್ಷ್ಮ ಕಾಸ್ಮೆಟಿಕ್ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಹೊಸ ಗ್ರಾಫಿಕ್ಸ್ ವಿನ್ಯಾಸ, ಮೋಟೋ ಜಿಪಿ ಪ್ರೇರಿತ ಇಸಿಎಸ್ಟಿಆರ್ ಲಾಂಛನ ಮತ್ತು ಹೊಸ ಬಣ್ಣದ ಆಯ್ಕೆಯನ್ನು ಪಡೆದಿರುತ್ತವೆ.

2018ರ ಸುಜುಕಿ ಜಿಕ್ಸರ್ ಮತ್ತ ಜಿಕ್ಸರ್ ಎಸ್ಎಫ್ ಬಿಡುಗಡೆ

ಹೊರ ವಿನ್ಯಾಸಗಳನ್ನು ಹೊರತುಪಡಿಸಿ ತಾಂತ್ರಿಕವಾಗಿ ಈ ಹಿಂದಿನ ಬೈಕ್‌ಗಳಂತೆಯೇ ಎಂಜಿನ್ ಸೌಲಭ್ಯಗಳನ್ನು ಹೊಂದಿರುವ ಜಿಕ್ಸರ್ ಬೈಕ್‌ಗಳು, ಕ್ಯಾಂಡಿ ಸೋನಾಮ್ ರೆಡ್ ಮತ್ತು ಮೆಟಾಲಿಕ್ ಸೋನಿಕ್ ಸಿಲ್ವರ್ ಎಂಬ ಎರಡು ಹೊಸ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

2018ರ ಸುಜುಕಿ ಜಿಕ್ಸರ್ ಮತ್ತ ಜಿಕ್ಸರ್ ಎಸ್ಎಫ್ ಬಿಡುಗಡೆ

ಎಂಜಿನ್ ವೈಶಿಷ್ಟ್ಯತೆ

ಇಕೋ ಪರ್ಫಾಮೆನ್ಸ್ (ಎಸ್ಇಪಿ) ತಂತ್ರಜ್ಞಾನ ಪ್ರೇರಿತ ಅಲ್ಟ್ರಾ ಲೈಟ್ 155 ಸಿಸಿ ವಿದ್ಯುತ್ ಚಾಲಿತ ಎಂಜಿನ್ ಮಾದರಿಯನ್ನು ಜಿಕ್ಸರ್ ಎಸ್ಎಫ್ ಸರಣಿಗಳಲ್ಲಿ ಮುಂದುವರಿಸಲಾಗಿದ್ದು, ಸಾಮಾನ್ಯ ಜಿಕ್ಸರ್ ಮಾದರಿಗಳಲ್ಲಿ 155 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಜೋಡಿಸಲಾಗಿದೆ.

2018ರ ಸುಜುಕಿ ಜಿಕ್ಸರ್ ಮತ್ತ ಜಿಕ್ಸರ್ ಎಸ್ಎಫ್ ಬಿಡುಗಡೆ

ಈ ಮೂಲಕ 14.6 ಬಿಎಚ್‌ಪಿ ಮತ್ತು 14ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಮುಂಭಾಗದ ಚಕ್ರಗಳಲ್ಲಿ ಟೆಲಿಸ್ಕೋಪಿಕ್ ಸಸ್ಪೆಷನ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಮೊನೊ ಶಾರ್ಕ್ ಸಸ್ಪೆಷನ್ ವ್ಯವಸ್ಥೆ ಹೊಂದಿವೆ.

2018ರ ಸುಜುಕಿ ಜಿಕ್ಸರ್ ಮತ್ತ ಜಿಕ್ಸರ್ ಎಸ್ಎಫ್ ಬಿಡುಗಡೆ

ಇನ್ನು ಹೊಸ ಬೈಕ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಗಮನಹರಿಸಲಾಗಿದ್ದು, ಡಿಸ್ಕ್ ಬ್ರೇಕ್ ಹಾಗೂ ಸಿಂಗಲ್ ಚಾನೆಲ್ ಎಬಿಎಸ್ ಟೆಕ್ನಾಲಜಿಯನ್ನು ಒದಗಿಸಿರುವ ಸುಜುಕಿ ಸಂಸ್ಥೆಯು ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೈಕ್ ಹೊರ ವಿನ್ಯಾಸದಲ್ಲಿ ಬದಲಾವಣೆ ತಂದಿದೆ.

2018ರ ಸುಜುಕಿ ಜಿಕ್ಸರ್ ಮತ್ತ ಜಿಕ್ಸರ್ ಎಸ್ಎಫ್ ಬಿಡುಗಡೆ

ಈ ಬಗ್ಗೆ ಮಾತನಾಡಿರುವ ಸುಜುಕಿ ದ್ವಿಚಕ್ರ ವಾಹನಗಳ ಮಾರಾಟ ವಿಭಾಗ ಹಿರಿಯ ಅಧಿಕಾರಿ ರಾಜಶೇಖರನ್, "ಸ್ಪೋರ್ಟಿ ಲುಕ್ ಹೊಂದಿರುವ ಹೊಸ ಜಿಕ್ಸರ್‌ಗಳು ಯುವ ಸಮುದಾಯವನ್ನು ಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ದಾಖಲೆ ಪ್ರಮಾಣದ ಮಾರಾಟ ಗುರಿಹೊಂದಲಾಗಿದೆ" ಎಂದಿದ್ದಾರೆ.

2018ರ ಸುಜುಕಿ ಜಿಕ್ಸರ್ ಮತ್ತ ಜಿಕ್ಸರ್ ಎಸ್ಎಫ್ ಬಿಡುಗಡೆ

ಹೀಗಾಗಿ ಹೊಸ ಬೈಕ್‌ಗಳು ಗ್ರಾಹಕರನ್ನು ಸೆಳೆಯಲು ಸಿದ್ದವಾಗಿದ್ದು, ಈಗಾಗಲೇ ದೇಶದಾದ್ಯಂತ ತನ್ನೆಲ್ಲಾ ಅಧಿಕೃತ ಮಾರಾಟಗಾರರಿಗೆ ಹೊಸ ಬೈಕ್‌ಗಳನ್ನು ರವಾನೆ ಮಾಡಿರುವ ಸುಜುಕಿ ಸಂಸ್ಥೆಯು ಇಂದಿನಿಂದಲೇ ಖರೀದಿ ಪ್ರಕ್ರಿಯೆಗೆ ಚಾಲನೆ ಕೂಡಾ ನೀಡಿದೆ.

Trending On DriveSpark Kannada:

ಮಾಡಿಫೈನಲ್ಲಿ ಹೊಸ ರೂಪ ಪಡೆದ ಕೆಎಂಟಿ ಡ್ಯೂಕ್ 200 ಸ್ಟ್ರೀಟ್ ಎಕ್ಸ್2

ರಾಯಲ್ ಎನ್‌ಫೀಲ್ಡ್ ವಿನೂತನ ಥಂಡರ್‌ಬರ್ಡ್ 350ಎಕ್ಸ್ ಮತ್ತು ಥಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

Most Read Articles

Kannada
English summary
2018 Suzuki Gixxer And Gixxer SF Launched In India.
Story first published: Tuesday, March 6, 2018, 16:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X