ರಾಯಲ್ ಎನ್‌ಫೀಲ್ಡ್ ವಿನೂತನ ಥಂಡರ್‌ಬರ್ಡ್ 350ಎಕ್ಸ್ ಮತ್ತು ಥಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಥಂಡರ್‌ಬರ್ಡ್ ಎಕ್ಸ್ 350 ಮತ್ತು ಥಂಡರ್‌ಬರ್ಡ್ ಎಕ್ಸ್ 500 ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಟಂಡರ್ ಬರ್ಡ್ ಎಕ್ಸ್ 350 ಬೆಲೆಯನ್ನು ರೂ.1.56 ಲಕ್ಷಕ್ಕೆ ಮತ್ತು ಟಂಡರ್ ಬರ್ಡ್ ಎಕ್ಸ್ 500 ಬೆಲೆಯನ್ನು 1.98 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

By Praveen Sannamani

ಜನಪ್ರಿಯ ಕ್ಲಾಸಿಕ್ ಬೈಕ್ ನಿರ್ಮಾಣ ಸಂಸ್ಥೆಯಾದ ರಾಯಲ್ ಎನ್‌ಫೀಲ್ಡ್ ತನ್ನ ಬಹುನೀರಿಕ್ಷಿತ ಥಂಡರ್‌ಬರ್ಡ್ 350ಎಕ್ಸ್ ಮತ್ತು ಥಂಡರ್‌ಬರ್ಡ್ 500ಎಕ್ಸ್ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಥಂಡರ್ ಬರ್ಡ್ 350ಎಕ್ಸ್ ಬೆಲೆಯನ್ನು ರೂ.1.56 ಲಕ್ಷಕ್ಕೆ ಮತ್ತು ಥಂಡರ್ ಬರ್ಡ್ 500ಎಕ್ಸ್ ಬೆಲೆಯನ್ನು 1.98 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ರಾಯಲ್ ಎನ್‌ಫೀಲ್ಡ್ ವಿನೂತನ ಟಂಡರ್‌ಬರ್ಡ್ 350ಎಕ್ಸ್ ಮತ್ತು ಟಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಬಿಡುಗಡೆ ಮಾಡುವ ತವಕಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಅದಕ್ಕೂ ಮುನ್ನ ಥಂಡರ್‌ಬರ್ಡ್ ಸರಣಿಯ ಮುಂದುವರಿದ ಬೈಕ್ ಮಾದರಿಗಳಾದ 350ಎಕ್ಸ್ ಮತ್ತು 500ಎಕ್ಸ್ ಬಿಡುಗಡೆ ಮಾಡಿದೆ.

ರಾಯಲ್ ಎನ್‌ಫೀಲ್ಡ್ ವಿನೂತನ ಟಂಡರ್‌ಬರ್ಡ್ 350ಎಕ್ಸ್ ಮತ್ತು ಟಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಸಾಮಾನ್ಯ ಥಂಡರ್‌ಬರ್ಡ್ ಆವೃತ್ತಿಗಳಿಂದ ವಿಭಿನ್ನವಾಗಿರುವ ಹೊಸ ಥಂಡರ್‌ಬರ್ಡ್ 350ಎಕ್ಸ್ ಮತ್ತು 500ಎಕ್ಸ್ ಬೈಕ್‌ಗಳು ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವುದಲ್ಲದೇ ವಿಶೇಷ ಚಾಲನಾ ಅನುಭೂತಿ ನೀಡಲಿವೆ.

ರಾಯಲ್ ಎನ್‌ಫೀಲ್ಡ್ ವಿನೂತನ ಟಂಡರ್‌ಬರ್ಡ್ 350ಎಕ್ಸ್ ಮತ್ತು ಟಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಬೈಕ್ ವಿನ್ಯಾಸಗಳನ್ನು ಹೊರತುಪಡಿಸಿ ಈ ಹಿಂದಿನ ಥಂಡರ್‌ಬರ್ಡ್ ಬೈಕ್‌ಗಳ ತಾಂತ್ರಿಕ ಅಂಶಗಳನ್ನೇ ಹೊಸ ಬೈಕಿನಲ್ಲೂ ಮುಂದುವರಿಸಲಾಗಿದ್ದು, ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ಫ್ಯೂಲ್ ಟ್ಯಾಂಕ್ ಡಿಸೈನ್ ಹೊಸ ಲುಕ್ ನೀಡಲಿವೆ.

ರಾಯಲ್ ಎನ್‌ಫೀಲ್ಡ್ ವಿನೂತನ ಟಂಡರ್‌ಬರ್ಡ್ 350ಎಕ್ಸ್ ಮತ್ತು ಟಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಇನ್ನು ಈ ಹಿಂದಿನಂತೆಯೇ ರೌಂಡ್ ಹೆಡ್‌ಲ್ಯಾಂಪ್, ಪ್ರೋಜೆಕ್ಟರ್ ಲೈಟ್ ಮತ್ತು ಎಲ್ಇಡಿ ಡಿಆರ್‌ಎಲ್ ನೀಡಲಾಗಿದ್ದು, ಎಲ್ಇಡಿ ಟೈಲ್ ಲ್ಯಾಂಪ್, ಅಲಾಯ್ ವೀಲ್ಹ್ ಜೊತೆಗೆ ರಿಮ್ ಸ್ಟಿಕರ್ ಡಿಸೈನ್ ಕೂಡಾ ಬೈಕಿನ ಅಂದವನ್ನು ಹೆಚ್ಚಿಸಿವೆ.

ರಾಯಲ್ ಎನ್‌ಫೀಲ್ಡ್ ವಿನೂತನ ಟಂಡರ್‌ಬರ್ಡ್ 350ಎಕ್ಸ್ ಮತ್ತು ಟಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಥಂಡರ್‌ಬರ್ಡ್ 350ಎಕ್ಸ್ ಮಾದರಿಯು 346 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 19 ಬಿಎಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಪಡೆದಿವೆ.

Trending On DriveSpark Kannada:

ಬೈಕ್ ಸವಾರರೇ ಹುಷಾರ್- ಹೊಸ ಕೆಟಿಎಂ ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

ರಾಯಲ್ ಎನ್‌ಫೀಲ್ಡ್ ವಿನೂತನ ಟಂಡರ್‌ಬರ್ಡ್ 350ಎಕ್ಸ್ ಮತ್ತು ಟಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಹಾಗೆಯೇ ಥಂಡರ್‌ಬರ್ಡ್ 500ಎಕ್ಸ್ ಮಾದರಿಯಲ್ಲಿ 499 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಜೋಡಣೆ ಮಾಡಲಾಗಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 27 ಬಿಎಚ್‌ಪಿ ಮತ್ತು 41.3 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ರಾಯಲ್ ಎನ್‌ಫೀಲ್ಡ್ ವಿನೂತನ ಟಂಡರ್‌ಬರ್ಡ್ 350ಎಕ್ಸ್ ಮತ್ತು ಟಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಜೊತೆಗೆ ಹೊಸ ಬೈಕುಗಳಲ್ಲಿ ಕಪ್ಪು ಬಣ್ಣದೊಂದಿಗೆ ವಿನ್ಯಾಸ ಹೊಂದಿರುವ ಎಂಜಿನ್ ವಿಭಾಗ, ಫ್ರಂಟ್ ಮಡ್‌ಗಾರ್ಡ್, ಸೈಡ್ ಪ್ಯಾನೆಲ್, ರಿರ್ ಫೆಂಡರ್, ಫ್ರಂಟ್ ಫೋಕ್ಸ್, ಸಸ್ಪೆಷನ್ ಅಳವಡಿಸಲಾಗಿದ್ದು, ಎಕ್ಸಾಸ್ಟ್ ವಿನ್ಯಾಸವು ಕೂಡಾ ವಿಶೇಷವಾಗಿದೆ.

ರಾಯಲ್ ಎನ್‌ಫೀಲ್ಡ್ ವಿನೂತನ ಟಂಡರ್‌ಬರ್ಡ್ 350ಎಕ್ಸ್ ಮತ್ತು ಟಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಇದಲ್ಲದೇ ಹೊಸ ಬೈಕುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್, 9-ಸ್ಪೋಕ್ ಅಲಾಯ್ ಚಕ್ರಗಳು, ಅನುಕೂಲಕರ ಹ್ಯಾಂಡಲ್ ಬಾರ್, ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ಎಂಆರ್‌ಎಫ್ ಟ್ಯೂಬ್‌ಲೇಸ್ ಟೈರ್ ಒದಗಸಲಾಗಿದೆ.

ರಾಯಲ್ ಎನ್‌ಫೀಲ್ಡ್ ವಿನೂತನ ಟಂಡರ್‌ಬರ್ಡ್ 350ಎಕ್ಸ್ ಮತ್ತು ಟಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಲಭ್ಯವಿರುವ ಬಣ್ಣಗಳು

ಡ್ರಿಫ್ಟರ್ ಬ್ಲೂ, ಗೇಟ್ ವೇ ಆರೇಂಜ್, ರೊವಿಂಗ್ ರೆಡ್ ಮತ್ತು ವಿಸ್ಕಿಮಲ್ ವೈಟ್ ಬಣ್ಣಗಳಲ್ಲಿ ಥಂಡರ್‌ಬರ್ಡ್ 350ಎಕ್ಸ್ ಮತ್ತು 500ಎಕ್ಸ್ ಬೈಕ್‌ಗಳು ಖರೀದಿಗೆ ಲಭ್ಯವಿರಲಿವೆ.

ರಾಯಲ್ ಎನ್‌ಫೀಲ್ಡ್ ವಿನೂತನ ಟಂಡರ್‌ಬರ್ಡ್ 350ಎಕ್ಸ್ ಮತ್ತು ಟಂಡರ್‌ಬರ್ಡ್ 500ಎಕ್ಸ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕ್ಲಾಸಿಕ್ ಬೈಕ್ ನಿರ್ಮಾಣ ಮತ್ತು ಮಾರಾಟದಲ್ಲಿ ತನ್ನದೇ ಆದ ಮುನ್ನಡೆ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬದಲಾದ ಮಾರುಕಟ್ಟೆ ಸನ್ನಿವೇಶಗಳಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು, ಸದ್ಯದ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಥಂಡರ್‌ಬರ್ಡ್ 350ಎಕ್ಸ್ ಮತ್ತು 500ಎಕ್ಸ್ ಬೈಕ್‌ಗಳನ್ನು ಹೊರತಂದಿದೆ ಎನ್ನಬಹುದು.

Trending On DriveSpark Kannada:

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಆಕ್ಟಿವಾ 4ಜಿ v/s ಆಕ್ಟಿವಾ 5ಜಿ... ಯಾವುದು ಉತ್ತಮ?

Most Read Articles

Kannada
English summary
Royal Enfield Thunderbird 350X And 500X Launched In India; Prices Start At Rs 1.56 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X