2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

2018ರ ಆಟೋ ಎಕ್ಸ್ ಪೋ ಹಲವು ಹೊಸತನಗಳಿಗೆ ಸಾಕ್ಷಿಯಾಗಿದ್ದು, ದ್ವಿಚಕ್ರ ವಾಹನಗಳ ವಿಭಾಗದಲ್ಲಿ 20ಕ್ಕೂ ಹೆಚ್ಚು ಬೈಕ್ ಆವೃತ್ತಿಗಳು ಪ್ರದರ್ಶನವಾಗುವ ಮೂಲಕ ವಾಹನ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿವೆ.

By Praveen

ರಾಜಧಾನಿ ದೆಹಲಿಯಲ್ಲಿ ಫೆಬ್ರುವರಿ 7ರಿಂದ ಆರಂಭವಾಗಿರುವ 2018ರ ಆಟೋ ಎಕ್ಸ್ ಪೋ ಹಲವು ಹೊಸತನಗಳಿಗೆ ಸಾಕ್ಷಿಯಾಗಿದ್ದು, ದ್ವಿಚಕ್ರ ವಾಹನಗಳ ವಿಭಾಗದಲ್ಲಿ 20ಕ್ಕೂ ಹೆಚ್ಚು ಬೈಕ್ ಆವೃತ್ತಿಗಳು ಪ್ರದರ್ಶನವಾಗುವ ಮೂಲಕ ವಾಹನ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿವೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಹೀರೋ ಮೋಟೋಕಾರ್ಪ್, ಟಿವಿಎಸ್, ಬಜಾಜ್, ಹೋಂಡಾ, ಸುಜುಕಿ, ಯಮಹಾ ಸೇರಿದಂತೆ ಸೂಪರ್ ಬೈಕ್ ಮಾದರಿಗಳಾದ ಎಪ್ರಿಲಿಯಾ, ಯುಎಂ ಮೋಟಾರ್ ಸೈಕಲ್, ಬಿಎಂಡಬ್ಲ್ಯು ಮತ್ತು ಕವಾಸಕಿ ನಿರ್ಮಾಣದ ಹತ್ತಾರು ಬೈಕ್ ಆವೃತ್ತಿಗಳ ಪ್ರದರ್ಶನ ಜೊತೆ ಜೊತೆಗೆ ಕೆಲ ಬೈಕ್ ಆವೃತ್ತಿಗಳನ್ನು ಬಿಡುಗಡೆ ಕೂಡಾ ಮಾಡಲಾಯ್ತು.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಹೋಂಡಾ ಎಕ್ಸ್ ಬ್ಲೇಡ್

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೆಯಾದ ಚಾಪನ್ನು ಮೂಡಿಸಿರುವ ಹೊಂಡಾ ಮೋಟಾರ್ ಸೈಕಲ್ ವಿಭಾಗವು ತನ್ನ ಹೊಸ ಮಾದರಿಯ ಎಕ್ಸ್-ಬ್ಲೇಡ್ ಮೊಟಾರ್ ಸೈಕಲ್ ಅನ್ನು 2018ರ ಆಟೋ ಎಕ್ಸ್ ಪೋದಲ್ಲಿ ಬಹಿರಂಗ ಪಡಿಸಿದ್ದು, ಮಧ್ಯಮ ಗಾತ್ರದ ಸ್ಪೋರ್ಟ್ ಬೈಕ್‌ಗಳಲ್ಲಿ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

162.7-ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್ -ಬ್ಲೇಡ್ ಬೈಕ್‌ಗಳು 13.93-ಬಿಹೆಚ್‌ಪಿ ಮತ್ತು 13.9-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಈ ಬೈಕ್‌ನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಜೋಡಣೆ ಇದ್ದು, ರೇಸರ್ ಶಾರ್ಪ್ ಡಿಸೈನ್ ಆಕರ್ಷಕ ಲುಕ್ ಕೊಟ್ಟಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ದೆಹಲಿ ಎಕ್ಸ್ ಶೋರಂ ಪ್ರಕಾರ ಹೊಸ ಬೈಕ್‌ಗಳ ಬೆಲೆಯು 80 ಸಾವಿರದಿಂದ 83 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ವರ್ಷದ ಕೊನೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸುವ ಬಗ್ಗೆ ಹೋಂಡಾ ಸುಳಿವು ನೀಡಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಹೋಂಡಾ ಆಕ್ಟಿವಾ 5ಜಿ

ಭಾರತೀಯ ಮಾರುಕಟ್ಟೆಯ ಸ್ಕೂಟರ್ ಮಾರಾಟ ವಿಭಾಗದಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ಆಕ್ಟಿವಾ ಸರಣಿಗಳು ಇದೀಗ ಹೊಸ ಹೊಸ ತಂತ್ರಜ್ಞಾನಗಳ ಪ್ರೇರಣೆಯ 5ಜಿ ಆವೃತ್ತಿಗಳು ಹೊರಬರುತ್ತಿದ್ದು, ವಿನೂತನ ಬಣ್ಣಗಳ ಆಯ್ಕೆ, ಫುಲ್ ಎಲ್ಇಡಿ ಹೆಡ್‌ಲೈಟ್ ಸೇರಿದಂತೆ ಹಲವು ಬದಲಾವಣೆ ಹೊಂದಿರುವುದು ಬಹಿರಂಗವಾಗಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಆಕ್ಟಿವಾ 4ಜಿ ಸ್ಕೂಟರ್‌ಗಳಿಂದಲೇ ಎರವಲು ಪಡೆಯಲಾಗಿರುವ 109.19 ಸಿಸಿ ಎಂಜಿನ್ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು, 8-ಬಿಎಚ್‌ಪಿ, 9-ಎನ್ಎಂ ಟಾರ್ಕ್ ಉತ್ಪಾದನಾ ಶೈಲಿಯನ್ನು ಹೊಂದಿವೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಮೊದಲ ಬಾರಿಗೆ 110 ಸಿಸಿ ಸ್ಕೂಟರ್ ಮಾದರಿಗಳಲ್ಲಿ ಫುಲ್ ಎಲ್ಇಡಿ ಹೆಡ್‌ಲೈಟ್ ನೀಡಲಾಗಿದ್ದು, ಡಿಜಿಟಲ್ ಅನ್‌ಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇಕೋ ಸ್ಪೀಡ್, ಸರ್ವಿಸ್ ಡಿವ್ ಇಂಡಿಕೇಟರ್ ಸಹ ಇದರಲ್ಲಿದೆ. ಹೀಗಾಗಿ 55 ಸಾವಿರ ಬೆಲೆ ನಿಗದಿಯಾಗುವ ಸಾಧ್ಯತೆಗಳಿದ್ದು, ಇದೇ ವರ್ಷ ಜೂನ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಸುಜುಕಿ ಬರ್ಗಮನ್ ಸ್ಟ್ರೀಟ್

ಈ ಹಿಂದೆ 150 ಸಿಸಿ ಸಾಮರ್ಥ್ಯದ ಇನ್‌ಟ್ರುಡರ್ 150 ಕ್ರೂಸರ್ ಬೈಕ್ ಪರಿಚಯಿಸಿದ್ದ ಸುಜುಕಿ ಇಂಡಿಯಾ ಮೋಟಾರ್ ಸೈಕಲ್ ವಿಭಾಗವು ಇದೀಗ ಎಪ್ರಿಲಿಯಾ 125 ಮತ್ತು ವೆಸ್ಪಾ 150 ಮಾದರಿಗಳನ್ನು ಹೋಲುವ ಬರ್ಗಮನ್ ಸ್ಟ್ರೀಟ್ ಎನ್ನುವ ಹೊಸ ನಮೂನೆಯ ಪ್ರಿಮಿಯಂ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್, ಟೆಲಿ ಸ್ಕೊಪಿಕ್ ಫೋರ್ಕ್, ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ಮಲ್ಟಿ ಫಂಕ್ಷನ್ ಕೀ ಸ್ಲಾಟ್, ದೊಡ್ಡದಾದ ರೈಡರ್ ಸೀಟ್, 12ವಿ ಚಾರ್ಜಿಂಗ್ ಪಾಯಿಂಟ್, ಟ್ಯೂಬ್ ಟೈರ್ಸ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿರಲಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳ ಬೆಲೆಯು ರೂ.60 ಸಾವಿರದಿಂದ ರೂ.65 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಏಪ್ರಿಲ್ ಅಥವಾ ಮೇ ಅಂತ್ಯಕ್ಕೆ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಎಪ್ರಿಲಿಯಾ ಎಸ್ಆರ್ 125 ಸಿಸಿ ಸ್ಕೂಟರ್

ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಈ ಬಾರಿಯ 2018ರ ಆಟೋ ಎಕ್ಸ್ ಪೋ ದಲ್ಲಿ ವಿವಿಧ ಮಾದರಿಯ ಸ್ಕೂಟರ್‌ಗಳು ಬಿಡುಗಡೆ ಹೊಂದುತ್ತಿದ್ದು, ಎಪ್ರಿಲಿಯಾ ಬಿಡುಗಡೆ ಮಾಡಿರುವ 125 ಸ್ಕೂಟರ್ ಬೆಲೆಯು ಎಕ್ಸ್ ಶೋರೂಂಗಳ ಪ್ರಕಾರ ರೂ. 65,310ಕ್ಕೆ ಖರೀದಿಗೆ ಲಭ್ಯವಾಗಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಎಸ್ಆರ್ 125 ಮಾದರಿಗಳು 124-ಸಿಸಿ 3-ವಾಲ್ವೆ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 9.46-ಬಿಹೆಚ್‌ಪಿ ಮತ್ತು 8.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಎಂಜಿನ್ ಸಿವಿಟಿ ಗೇರ್-ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, 7 ಲೀಟರ್ ಫ್ಯುಲ್ ಟ್ಯಾಂಕ್ ಹೊಂದಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್‌ಗಳು ಟೆಲಿಸ್ಕೊಪಿಕ್ ಹೈಡ್ರಾಲಿಕ್ ಫೋರ್ಕ್ಸ್ ಮತ್ತು ಮೊನೊಶಾರ್ಕ್ ರಿರ್ ಅನ್ನು ಹೊಂದಿದ್ದು, 200-ಎಂಎಂ ಡಿಸ್ಕ್ ಬ್ರೇಕ್ ಮತ್ತು 140-ಎಂಎಂ ಡ್ರಮ್ ಬ್ರೇಕ್ ಪಡೆದಿದೆ. ಜೊತೆಗೆ 14 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿವೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಹೀರೋ ಎಕ್ಸ್‌ಪಲ್ಸ್

ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ತನ್ನ ಮೊದಲ ಅಡ್ವೆಂಚರ್ ಬೈಕ್ ಮಾದರಿ ಎಕ್ಸ್ ಪಲ್ಸ್ ಅನಾವರಣಗೊಳಿಸಿದ್ದು, ಥ್ರಿಲ್ಲಿಂಗ್ ರೈಡ್‌ಗೆ ಇದು ಹೇಳಿ ಮಾಡಿಸಿದ ಬೈಕ್ ಆವೃತ್ತಿಯಾಗಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಹೀರೋ ಎಕ್ಸ್ ಪಲ್ಸ್ ಫುಲ್ ಎಲ್ಇಡಿ ಹೆಡ್ ಲೈಟ್, ಲಗೆಜ್ ರಾಕ್, ಧೀರ್ಘ ಕಾಲದ ಸವಾರಿಗೆ ಅನೂಕಲವಾಗುವಂತಹ ನಾಕಲ್ ಗಾರ್ಡ್ಸ್ ಹೊಂದಿದ್ದು, ವಿಂಡ್ ಶೀಲ್ಡ್ ಅನ್ನು ಬಳಸಲಾಗಿದೆ. ಜೊತೆಗೆ ಎಕ್ಸ್‌ಪಲ್ಸ್ ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಮ್ ಪಡೆದ ಮೊದಲ ಬೈಕ್ ಇದಾಗಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಹೊಸ ಬೈಕಿನಲ್ಲಿ 200-ಸಿಸಿ ಏರ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಒದಗಿಸಲಾಗಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಸೇರಿಸಲಾಗಿದೆ. ಇದು 18.1-ಬಿಹೆಚ್ ಪಿ ಮತ್ತು 17.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಒಟ್ಟಾರೆ ಈ ಬೈಕಿನ ಡಿಸೈನ್ ಸರಳವಾಗಿದ್ದು, ಧೀರ್ಘ ಪ್ರಮಾಣದ ಸಸ್ಪೆಷನ್ ಸೆಟಪ್ ಅನ್ನು ಪಡೆದಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಹೀರೊ ಎಕ್ಸ್ ಪಲ್ಸ್ ಮೋಟಾರ್ ಸೈಕಲನ್ನು 2018 ಕೊನೆಯಲ್ಲಿ ಅಥವಾ 2019ರ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಬೈಕಿನ ಬೆಲೆಯನ್ನು 1.20 ಲಕ್ಷದಿಂದ 1.30 ಲಕ್ಷದ ವರೆಗೆ ನಿಗದಿ ಮಾಡಲಿದ್ದಾರೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಯಮಹಾ ವೈಝೆಡ್ಎಫ್-ಆರ್15 ವಿ3.0

ಯಮಹಾ ತನ್ನ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ವೈಝೆಡ್ಎಫ್-ಆರ್15 ವಿ3.0 ಬೈಕ್‌ನ್ನು ಬಿಡುಗಡೆಗೊಳಿಸಿದ್ದು, ಆರ್15 ಬೈಕ್ ಹೊಸ ಡಿಸೈನ್ ಮತ್ತು ಸುಧಾರಿತ ಎಂಜಿನ್ ಮಾದರಿಯನ್ನು ಹೊಂದಿದ್ದು, ದೆಹಲಿ ಎಕ್ಸ್ ಶೋರಂ ಪ್ರಕಾರ ರೂ.1.25 ಲಕ್ಷ ಬೆಲೆ ಪಡೆದುಕೊಂಡಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಶಕ್ತಿಶಾಲಿ ಟ್ಯಾಂಕ್, ರೇಸಿಂಗ್ ಮೆಶಿನ್, ಏರೋಡೈನಾಮಿಕ್ ಫೇರಿಂಗ್ ಜತೆಗೆ YZF-R1 ಸೂಪರ್ ಬೈಕ್‌ನಿಂದಲೂ ಕೆಲವೊಂದು ವಿನ್ಯಾಸವನ್ನು ಆಮದು ಮಾಡಲಾಗಿದ್ದು, ಬೈಕಿನ ಮುಂಭಾಗದ ಕೊನೆಯಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್ ಲೈಟ್ಅನ್ನು ಹೊಂದಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಹಾಗೆಯೆ ಬೈಕಿನ ಟೈಲ್ ವಿಭಾಗವು ಹೊಸ ಟೈಲ್ ಲೈಟ್ ಮತ್ತು ಟೈರ್ ಹಗ್ಗರ್ ಅನ್ನು ಅಳವಡಿಸಲಾಗಿದ್ದು, ಹೊಸ ವೈಝೆಡ್ಎಫ್-ಆರ್15 ವಿ3.0 ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಗೇರ್ ಪೊಸಿಷನ್ ಮತ್ತು 18 ಪಾರಾಮಿಟರ್ ಡಿಸ್‌ಪ್ಲೆಯನ್ನು ಜೋಡಿಸಲಾಗಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಎಲೆಕ್ಟ್ರಿಕ್ ಸೂಪರ್ ಬೈಕ್ ಎಂಫ್ಲಕ್ಸ್ ಒನ್

ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯಾದ ಎಂಫ್ಲಕ್ಸ್ ಮೋಟಾರ್ಸ್ ಸಂಸ್ಥೆಯು ಮೊದಲ ಪ್ರಯತ್ನದಲ್ಲೇ ವಿನೂತನ ಎಂಫ್ಲಕ್ಸ್ ಒನ್ ಎನ್ನುವ ಎಲೆಕ್ಟ್ರಿಕ್ ಸೂಪರ್ ಬೈಕ್ ಮಾದರಿಯನ್ನು ದೆಹಲಿಯಲ್ಲಿ ನಡೆಯುತ್ತಿರುವ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಎಂಫ್ಲಕ್ಸ್ ಒನ್ ಎಲೆಕ್ಟ್ರಿಕ್ ಸೂಪರ್ ಬೈಕ್‌ಗಳು ಕೋಟೆಡ್ ಅಲಾಯ್ ಚಕ್ರಗಳು ಮತ್ತು ಅಲ್ಟ್ರಾಲೈಟ್ ಕಾರ್ಬನ್ ಫೈಬರ್ ಪ್ಯಾನೆಲ್ ಹೊಂದಿದ್ದು, ಬೈಕಿನ ಆರಂಭಿಕ ಬೆಲೆ 6 ಲಕ್ಷ ಮತ್ತು ಉನ್ನತ ಮಾದರಿಯ ಬೈಕಿನ ಬೆಲೆಯನ್ನು ರೂ.11 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಎಂಫ್ಲಕ್ಸ್ ಒನ್ ಬೈಕ್‌ಗಳು 3 ಹಂತದ ಎಸಿ ಇಂಡಕ್ಷನ್ ಮೋಟಾರ್ ಮೂಲಕ ಕ್ರಮಿಸಲಿದ್ದು, 9.7kwh ಬ್ಯಾಟರಿ ಪ್ಯಾಕ್ ಹೊಂದಿದೆ. ಜೊತೆಗೆ ಸ್ಯಾಮ‌್ಸಂಗ್ ಸೆಲ್ಸ್ ಮಾದರಿಯ ಏರ್ ಕೂಲ್ಡ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಪವರ್ ಟ್ರೈನ್‌ನೊಂದಿಗೆ 71 ಬಿಎಚ್‌ಪಿ ಉತ್ಪಾದಿಸಬಲ್ಲದು.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಟ್ವೆಂಟಿ ಟು ಫ್ಲೋ ಎಲೆಕ್ಟ್ರಿಕ್ ಸ್ಕೂಟರ್

ಸ್ಟಾರ್ಟ್ ಅಪ್ ಯೋಜನೆ ಅಡಿ ಈಗಾಗಲೇ ದೇಶಾದ್ಯಂತ ಸಾವಿರಾರು ಹೊಸ ಸಂಸ್ಥೆಗಳು ಕಾರ್ಯೋನ್ಮುಖವಾಗಿದ್ದು, ಈ ನಡುವೆ ಟ್ವೆಂಟಿ ಟು ಎನ್ನುವ ಸಂಸ್ಥೆಯೊಂದು ವಿನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಅಭಿವೃದ್ಧಿಗೊಳಿಸಿ ಬಿಡುಗಡೆಗೆ ಮಾಡಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

2018ರ ಆಟೋ ಎಕ್ಸ್ ಪೋ ದಲ್ಲಿ ತನ್ನ ಹೊಸ ಮಾದರಿಯ ಸ್ಕೂಟರ್‌ಗಳನ್ನು ಪರಿಚಯಿಸಿ ಬಿಡುಗಡೆಗೊಳಿಸಿದ ಟ್ವಿಂಟಿ ಟು ಸಂಸ್ಥೆಯು ಹೊಸ ಸ್ಕೂಟರಿನ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 74,740ಕ್ಕೆ ನಿಗದಿ ಮಾಡಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಫ್ಲೋ ಸ್ಕೂಟರ್‌ಗಳು 150 ಕೆಜಿ ಭಾರವಿದ್ದು, ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜ್ ಪಡೆಯಲು 2 ಗಂಟೆ ತೆಗದುಕೊಳ್ಳಲಿದೆ. ಈ ಮೂಲಕ 80 ಕಿಮಿ ಮೈಲೇಜ್ ನೀಡುವುದಲ್ಲದೇ 9 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಟಿವಿಎಸ್ ಮೊದಲ ಕ್ರೂಸರ್ ಬೈಕ್ ಝೆಪ್ಲಿನ್

ಮೆಟ್ರೋ ನಗರ ಪ್ರದೇಶಗಳಲ್ಲಿ ಕ್ರೂಸರ್ ಬೈಕ್‌ಗಳಿಗೆ ಯುವ ಸಮುದಾಯ ವಿಶೇಷ ಆಸಕ್ತಿ ತೋರುತ್ತಿದ್ದು, ಈ ಹಿನ್ನೆಲೆ ಬಜಾಜ್ ಅವೆಂಜರ್‌ಗೆ ಪ್ರತಿಸ್ಪರ್ಧಿಯಾಗಿ ಟಿವಿಎಸ್ ಮೋಟಾರ್ಸ್ ಕೂಡಾ ಝೆಪ್ಲಿನ್ ಎನ್ನುವ ಕ್ರೂಸರ್ ಬೈಕ್ ಅನ್ನು ನಿರ್ಮಾಣ ಮಾಡಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ದೆಹಲಿಯಲ್ಲಿ ನಡೆದಿರುವ 2018ರ ಆಟೋ ಎಕ್ಸ್ ಪೋದಲ್ಲಿ ಝೆಪ್ಲಿನ್ ಪ್ರದರ್ಶನ ಮಾಡಲಾಗಿದ್ದು, ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿರುವ ಈ ಬೈಕ್‌ಗಳು ಇನ್‌ಟ್ರಾಗೆಟೆಡ್ ಸ್ಟಾರ್ಟರ್ ಜನರೇಟರ್(ಐಎಸ್‌ಜಿ) ತಂತ್ರಜ್ಞಾನ ಪ್ರೇರಣೆ ಹೊಂದಿವೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಇದರಿಂದಾಗಿ ಕ್ರೂಸರ್ ಬೈಕ್ ಮಾದರಿಗಳಲ್ಲೇ ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಹೊಂದಿರುವ ಝೆಪ್ಲಿನ್ ಬೈಕ್‌ಗಳು ಇ-ಬೂಸ್ಟ್ ಆಯ್ಕೆಯೊಂದಿಗೆ ಯುವ ಸಮುದಾಯವನ್ನು ತನ್ನತ್ತ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಲಿವೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಈ ಮೂಲಕ ಬಜಾಜ್ ಅವೆಂಜರ್ 220 ಕ್ರೂಸರ್ ಬೈಕ್ ತೀವ್ರ ಪೈಪೋಟಿ ನಡೆಸಲಿರುವ ಝೆಪ್ಲಿನ್ ಬೈಕ್‌ಗಳು ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದ್ದು, ಹೊಸ ಬೈಕಿನ ಬೆಲೆಯು 1.20 ಲಕ್ಷದಿಂದ 1.30 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಹೀರೋ ಡ್ಯುಯೆಟ್ 125, ಮ್ಯಾಸ್ಟ್ರೋ ಎಡ್ಜ್ 125

ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೊಟೊಕಾರ್ಪ್ ಸಂಸ್ಥೆಯು ಡ್ಯುಯೆಟ್ 125 ಮತ್ತು ಮಾಸ್ಟ್ರೋ ಎಡ್ಜ್ 125 ಸ್ಕೂಟರ್ ಗಳನ್ನು ಅನಾವರಣಗೊಳಿಸಿದ್ದು, ಇವು ಡ್ಯುಯೆಟ್ ಮತ್ತು ಮಾಯೆಸ್ಟ್ರೋ 110ಸಿಸಿ ಆವೃತ್ತಿಯನ್ನು ಆಧರಿಸಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಡ್ಯುಯೆಟ್ 125 ಮತ್ತು ಮಾಯೆಸ್ಟ್ರೋ 125 ಸ್ಕೂಟರ್ ಡಿಜಿಟಲ್ ಡಿಸ್‌ಫ್ಲೇ ಹೊಂದಿದ್ದು, ಅನ್‌ಲಾಗ್ ಇನ್ಸ್ಟ್ರೂಮೆಂಟ್ ಕಂಸೋಲ್ ಮತ್ತು ಹೀರೋ ಐ3ಎಸ್ ಸಿಸ್ಟಮ್ (ಐಡ್ಲ್-ಸ್ಟಾರ್ಟ್-ಸ್ಟಾಪ್-ಸಿಸ್ಟಮ್) ಅನ್ನು ಹೊಂದಿದೆ.

2018ರ ಆಟೋ ಎಕ್ಸ್ ಪೋದಲ್ಲಿ ರಂಜಿಸಿದ ಟಾಪ್ 10 ಬೈಕ್‌ಗಳು ಇಲ್ಲಿವೆ ನೋಡಿ..

ಇನ್ನು ಈ ಹೊಸ ಸ್ಕೂಟರ್ ಗಳನ್ನು 2018-19 ಆರ್ಥಿಕ ವರ್ಷದ ಎರಡನೆ ದ್ವಿತಿಯ ತ್ರೈಮಾಸಿಕದ ಅವಧಿಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ನೂತನ ಸ್ಕೂಟರ್‌ಗಳು ಈಗಿರುವ 110 ಸಿಸಿ ಮಾದರಿಗಳ ತಳಹದಿಯಲ್ಲಿ ನಿರ್ಮಿಸಲಾಗಿದೆ.

Most Read Articles

Kannada
English summary
Top Best Bikes & Scooters At Auto Expo 2018: Launches, Unveils And Concepts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X