ಹೊಸ ಬಣ್ಣಗಳನ್ನು ಹೊತ್ತ ಟಿವಿಎಸ್ ಅಪಾಚೆ ಆರ್‍ಟಿಆರ್ 200 4ವಿ ಬೈಕ್..
ದೇಶಿಯಾ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಕೆಲದಿನಗಳ ಹಿಂದಷ್ಟೆ ತಮ್ಮ ಅಪಾಚೆ 200 4ವಿ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಈ ಬೈಕ್ ಹೊಸ ಬಣ್ಣಗಳನ್ನು ಪಡೆದುಕೊಂಡಿದೆ.
ದೇಶಿಯಾ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ಕೆಲದಿನಗಳ ಹಿಂದಷ್ಟೆ ತಮ್ಮ ಅಪಾಚೆ 200 4ವಿ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಈ ಬೈಕ್ ಹೊಸ ಬಣ್ಣಗಳನ್ನು ಪಡೆದುಕೊಂಡಿದ್ದು, ಈ ಹಿಂದೆಯೆ ಬಿಡುಗಡೆಗೊಂಡ ರೇಸ್ ಎಡಿಶನ್ ಬೈಕ್‍ಗಳನ್ನು ಹೋಲುತ್ತವೆ.

ಟಿವಿಎಸ್ ಅಪಾಚೆ ಆರ್‍ಟಿಆರ್ 200 4ವಿ ಬೈಕ್ ವೈಟ್/ರೆಡ್, ಗ್ರೇ/ಎಲ್ಲೊ, ರೆಡ್/ಬ್ಲಾಕ್ ಮತ್ತು ಮೇಟ್ ಬ್ಲಾಕ್/ರೆಡ್ ಎಂಬ ನಾಲ್ಕು ಬಗೆಯ ಬಣ್ಣಗಳ ಕಾಂಬಿನೇಷನ್ ಅನ್ನು ಪಡೆದುಕೊಂಡಿವೆ. ಹೊಸ ಬಣ್ಣಗಳನ್ನು ಹೊರತುಪಡಿಸಿ ಫ್ಯುಯಲ್ ಟ್ಯಾಂಕ್‍ನ ಮೇಲೆ ಆರ್‍ಟಿಆರ್ ಬ್ರಾಂಡ್ ಲೋಗೊವನ್ನು ಅಳವಡಿಸಲಾಗಿದ್ದು, ಇನ್ನು ಬೈಕಿನ ಮುಂಭಾಗದ ಕೌಲ್, ಟ್ಯಾಂಕ್ ಶ್ರೌಡ್ಸ್ ಮತ್ತು ರಿಯರ್ ಕೌಲ್ ರೆಂಡರ್‍ಗಳಿಗೆ ಹೊಸ ಗ್ರಾಫಿಕ್ಸ್ ಅನ್ನು ನೀಡಲಾಗಿದೆ.

ಕಲರ್ ಕಾಂಬಿನೇಷನ್ ಅನ್ನು ಹೊರತು ಪಡಿಸಿ ಬೇರಾವ ಬದಲಾವಣೆಗಳಾನ್ನು ಪಡೆದುಕೊಂಡಿಲ್ಲ ಎನ್ನಲಾಗಿದ್ದು, ಹಿಂದಿನಂತೆಯೆ ಎಲ್ಇಡಿ ಡಿಆರ್‍ಎಲ್ ಹೊದಿರುವ ಶಾರ್ಪ್ ಹೆಡ್‍ಲೈಟ್, ಆಕ್ರಮಣಕಾರಿ ಟ್ಯಾಂಕ್ ಶ್ರೌಡ್ಸ್, ಸ್ಪೋರ್ಟಿ ಸ್ಪ್ಲಿಟ್ ಸೀಟ್ ಸೆಟಪ್ ಮತ್ತು ಎಲ್ಇಡಿ ಟೈಲ್ ಲೈಟ್ ಅನ್ನು ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಟಿವಿಎಸ್ ಅಪಾಚೆ ಆರ್‍ಟಿಆರ್ 200 4ವಿ ಬೈಕ್‍ಗಳು 198ಸಿಸಿ ಸಿಂಗಲ್ ಸಿಲೆಂಡರ್, ಏರ್/ಆಯಿಲ್ ಕೂಲ್ಡ್ ಎಂಜಿನ್ ಪಡೆದ ಕಾರ್ಬೋರೇಟೆಡ್ ವರ್ಷನ್ ಬೈಕ್‍ಗಳು ಸಹಾಯದಿಂದ 20.2 ಬಿಹೆಚ್‍ಪಿ ಮತ್ತು 18.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ.

ಇನ್ನು ಟಿವಿಎಸ್ ಅಪಾಚೆ ಆರ್‍ಟಿಆರ್ 200 4ವಿ ಫ್ಯುಯಲ್ ಇಂಜೆಕ್ಟೆಡ್ ಮಾಡಲ್ ಬೈಕ್‍ಗಳು 20.7ಬಿಹೆಚ್‍ಪಿ ಮತ್ತು 18.1 ಎನ್ಎಂ ಟಾರ್ಕ್ ಎನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ.

ಟಿವಿಎಸ್ ಅಪಾಚೆ ಆರ್‍ಟಿಆರ್ 200 4ವಿ ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಅನ್ನು ಅಳವಡಿಸಲಾಗಿದೆ. ಜೊತೆಗೆ ಮುಂಭಾಗದಲ್ಲಿ 270ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಎಬಿಎಸ್ ಟೆಕ್ನಾಲಜಿಯನ್ನು ಆಯ್ಕೆಯಾಗಿ ಪಡೆದುಕೊಂಡಿದೆ.

ಹೊಸ ಕಲರ್ ಕಾಂಬಿನೇಶನ್ ಅನ್ನು ಪಡೆದ ಟಿವಿಎಸ್ ಅಪಾಚೆ ಆರ್‍ಟಿಆರ್ 200 4ವಿ ಬೈಕ್‍ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಪಡೆದಿಲ್ಲ ಎಂದು ಹೇಳಲಾಗಿದ್ದು, ಬೈಕಿನ ಕಾರ್ಬೋರೇಟೆಡ್ ವರ್ಷನ್ ದೆಹಲಿಯ ಎಕ್ಸ್ ಶೋರಂ ಪ್ರಕಾರ 95,685 ಸಾವಿರ ಮತ್ತು ಫ್ಯುಯಲ್ ಇಂಜೆಕ್ಟೆಡ್ ಮಾಡಲ್ ಬೈಕ್‍ಗಳು ರೂ 1.08 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಇನ್ನು ಟಿವಿಎಸ್ ಅಪಾಚೆ ಆರ್‍ಟಿಆರ್ 200 4ವಿ ಎಬಿಎಸ್ ಆಯ್ಕೆಯನ್ನು ಪಡೆದಿರುವ ಬೈಕ್‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ1,09 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದು, ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಎನ್ಎಸ್200 ಬೈಕ್‍ಗೆ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು
ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..
ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....
ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..


Click it and Unblock the Notifications








