ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್ ಬಿಡುಗಡೆ

Written By:

ಟಿವಿಎಸ್ ಮೋಟಾರ್ಸ್ ಸಂಸ್ಥೆಯು ಭಾರತೀಯ ಗ್ರಾಹಕರಿಗಾಗಿ ಮಗದೊಂದು ಅಪಾಚಿ ಬೈಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಸುಧಾರಿತ ತಂತ್ರಜ್ಞಾನ ಆಧರಿತ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.95,185ಕ್ಕೆ ಖರೀದಿಗೆ ಲಭ್ಯವಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್ ಬಿಡುಗಡೆ

ಬಿಡುಗಡೆಗೊಂಡಿರುವ ವಿನೂತನ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಮಾದರಿಯು ಕಾರ್ಬ್ಯುಟರ್ ಮತ್ತು ಆ್ಯಂಟಿ ರಿವರ್ಸ್ ಟಾರ್ಕ್ ಸ್ಲಿಪ್ಪರ್ ಕ್ಲಚ್ ಟೆಕ್ನಾಲಜಿ ಸೌಲಭ್ಯ ಹೊಂದಿರಲಿದ್ದು, ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ರೇಸ್ ಟ್ರ್ಯಾಕ್ ಸಹಕಾರಿಯಾಗಬಲ್ಲ ಹೈ ಫ್ರಿಕ್ಷನ್ ಮತ್ತು ಲೋ ಫ್ರಿಕ್ಷನ್ ಸೌಲಭ್ಯ ಸಹ ಒದಗಿಸಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್ ಬಿಡುಗಡೆ

ವಿಶೇಷವಾಗಿ ರೇಸಿಂಗ್ ಪ್ರಿಯರಿಗಾಗಿಯೇ ಈ ಬೈಕ್ ಮಾದರಿಯನ್ನು ಸಿದ್ದಗೊಳಿಸಲಾಗಿದ್ದು, ಗುರುತರ ಗ್ರಾಫಿಕ್ಸ್ ವಿನ್ಯಾಸಗಳು ಮತ್ತು ಆ್ಯಂಟಿ ರಿವರ್ಸ್ ಟಾರ್ಕ್ ಸ್ಲಿಪ್ಪರ್ ಕ್ಲಚ್ ಟೆಕ್ನಾಲಜಿ ಸೌಲಭ್ಯಗಳು ಬೈಕ್ ಪ್ರಿಯರನ್ನು ಸೆಳೆಯದೆ ಇರಲಾರದು.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್ ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಹೊಸ ಬೈಕಿನಲ್ಲಿ ಒದಗಿಸಲಾಗಿರುವ ಆ್ಯಂಟಿ ರಿವರ್ಸ್ ಟಾರ್ಕ್ ಸ್ಲಿಪ್ಪರ್ ಕ್ಲಚ್ ಟೆಕ್ನಾಲಜಿಯು ಬೈಕ್ ಸಮತೋತನ ಕಾಯ್ದುಕೊಳ್ಳುವುದಲ್ಲದೇ ಕನಿಷ್ಠ ಪ್ರಯತ್ನಗಳಲ್ಲೇ ಗೇರ್ ವರ್ಗಾವಣೆಗೆ ಸಹಕಾರಿಯಾಗುತ್ತದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಯಾಂತ್ರಿಕವಾಗಿ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ರೇಸ್ ಎಡಿಷನ್ 2.0 ಮಾದರಿಯು 197.75 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದ್ದು, 20-ಬಿಎಚ್‌ಪಿ ಮತ್ತು 18.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್ ಬಿಡುಗಡೆ

ಈ ಬಗ್ಗೆ ಮಾತನಾಡಿರುವ ಟಿವಿಎಸ್ ರೇಸಿಂಗ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಅರುಣ್ ಸಿದ್ದಾರ್ಥ, ಪರ್ಫಾಮೆನ್ಸ್ ಉತ್ಸಾಹಿಗಳಿಗಾಗಿಯೇ ಹೊಸ ಮಾದರಿಯ ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್ ಹೊರತರಲಾಗಿದ್ದು, ಬೈಕಿನಲ್ಲಿ ಒದಗಿಸಲಾಗಿರುವ ಆ್ಯಂಟಿ ರಿವರ್ಸ್ ಟಾರ್ಕ್ ಸ್ಲಿಪ್ಪರ್ ಕ್ಲಚ್ ಸೌಲಭ್ಯ ಬೈಕ್ ಸವಾರರಿಗೆ ಹೊಸ ಚಾಲನಾ ಸ್ಪೂರ್ತಿ ನೀಡಲಿವೆ ಎಂದಿದ್ದಾರೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್ ಬಿಡುಗಡೆ

ಇದಲ್ಲದೇ ಕಳೆದ 35 ವರ್ಷಗಳಿಂದ ಬೈಕ್ ರೇಸಿಂಗ್ ವಿಭಾಗದಲ್ಲಿ ಹೊಸ ಹೊಸ ಸಂಶೋಧನೆ ಕೈಗೊಳ್ಳಲಾಗಿದ್ದು, ಅಗ್ಗದ ಬೆಲೆಯಲ್ಲಿ ಟಿವಿಎಸ್ ಸಂಸ್ಥೆಯು ಆ್ಯಂಟಿ ರಿವರ್ಸ್ ಟಾರ್ಕ್ ಸ್ಲಿಪ್ಪರ್ ಕ್ಲಚ್ ಟೆಕ್ನಾಲಜಿ ಸೌಲಭ್ಯವನ್ನು ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್‌ಗಳಲ್ಲಿ ನೀಡಿರುವುದೇ ವಿಶೇಷ ಎನ್ನಲಾಗಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ಬೈಕ್ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದಿನ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ಗಳ ವಿನ್ಯಾಸಗಳನ್ನೇ ಅಪಾಚೆ ಆರ್‌ಟಿಆರ್ 200 4ವಿ ರೆಸ್ ಎಡಿಷನ್ 2.0 ನಲ್ಲೂ ಮುಂದುವರಿಸಲಾಗಿದ್ದು, ಹೊಸದಾಗಿ ಆ್ಯಂಟಿ ರಿವರ್ಸ್ ಟಾರ್ಕ್ ಸ್ಲಿಪ್ಪರ್ ಕ್ಲಚ್ ಟೆಕ್ನಾಲಜಿ ಸೌಲಭ್ಯ ಒದಗಿಸಿರುವುದು ಪರ್ಫಾಮೆನ್ಸ್ ಬೈಕ್ ಸವಾರರಿಗೆ ಮತ್ತಷ್ಟು ಅನೂಕಲಕರವಾಗಲಿದೆ.

Read more on tvs ಟಿವಿಎಸ್
English summary
TVS Apache RTR 200 4V Race Edition 2.0 Launched In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark