ಹೊಸ ವೈಶಿಷ್ಟ್ಯತೆಗಳೊಂದಿಗೆ ಮತ್ತೆ ಬಂದ ಟಿವಿಎಸ್ ಎಕ್ಸ್ಎಲ್100 ಹೆವಿ ಡ್ಯುಟಿ..

1980ರಲ್ಲಿ ಬಿಡುಗಡೆಗೊಂಡು ದಶಕಗಳಿಂದ ಸಣ್ಣ ವ್ಯಾಪರಸ್ಥರ ಪಾಲಿನ ರಥ ಎಂದೆ ಹೆಸರುವಾಸಿಯಾದ ಟಿವಿಎಸ್ ಎಕ್ಸ್ಎಲ್100 ಸ್ಕೂಟರ್ ಇದೀಗ ಹೊಸ ವೈಶಿಷ್ಟ್ಯತೆಗಳೊಂದಿಗೆ ಹೊಸ ವೇರಿಯಂಟ್‍‍ ಐ-ಸ್ಟಾರ್ಟ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

By Rahul Ts

1980ರಲ್ಲಿ ಬಿಡುಗಡೆಗೊಂಡು ದಶಕಗಳಿಂದ ಸಣ್ಣ ವ್ಯಾಪರಸ್ಥರ ಪಾಲಿನ ರಥ ಎಂದೆ ಹೆಸರುವಾಸಿಯಾದ ಟಿವಿಎಸ್ ಎಕ್ಸ್ಎಲ್100 ಸ್ಕೂಟರ್ ಇದೀಗ ಹೊಸ ವೈಶಿಷ್ಟ್ಯತೆಗಳೊಂದಿಗೆ ಹೊಸ ವೇರಿಯಂಟ್‍‍ ಐ-ಟಚ್‍‍ಸ್ಟಾರ್ಟ್ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 36,109 ಸಾವಿರಕ್ಕೆ ಮಾರಾಟಗೊಳ್ಳುತ್ತಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಮತ್ತೆ ಬಂದ ಟಿವಿಎಸ್ ಎಕ್ಸ್ಎಲ್100 ಹೆವಿ ಡ್ಯುಟಿ..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಿವಿಎಸ್ ತಮ್ಮ ಜನಪ್ರಿಯ ಎಕ್ಸ್ಎಲ್100 ಸ್ಕೂಟ‍‍‍ರ್‍‍ನ ಐ-‍ಟಚ್‍ಸ್ಟಾರ್ಟ್ ವೇರಿಯಂಟ್‍‍ನಲ್ಲಿ ಈ ಬಾರಿ ಎಲೆಕ್ಟ್ರಿಕ್ ಸ್ಟಾರ್ಟ್ ಮತ್ತು ಯುಎಸ್‍‍ಬಿ ಚಾರ್ಜರ್ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದ್ದು, ಜೊತೆಗೆ ಬಿಎಸ್‍-4 ಕಂಪ್ಲಿಯಂಟ್ ಎಂಜಿನ್ ಮತ್ತು ಡೇ ಟೈಮ್ ರನ್ನಿಂಗ್ ಲೈಟ್‍‍ಗಳನ್ನು ಅಳವಡಿಸಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಮತ್ತೆ ಬಂದ ಟಿವಿಎಸ್ ಎಕ್ಸ್ಎಲ್100 ಹೆವಿ ಡ್ಯುಟಿ..

ಮೇಲೆ ಹೇಳಿರುವ ಹಾಗೆ 1980ರಲ್ಲಿ ಬಿಡುಗಡೆಗೊಂಡ ಟಿವಿಎಸ್ ಎಕ್ಸ್ಎಲ್100 ಸ್ಕೂಟರ್‍‍ಗಳು ಗ್ರಾಮಾಂತರ ಹಾಗು ನಗರ ಪ್ರದೇಶಗಳಲ್ಲಿ ಜನಪ್ರಿಯತೆಯನ್ನು ಪಡೆದಿತ್ತು. ಹೊಸದಾಗಿ ಎಂಟ್ರಿ ಕೊಟ್ಟ ಸ್ಕೂಟರ್‍ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಪಡೆದಿರುವುದಿಲ್ಲ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಮತ್ತೆ ಬಂದ ಟಿವಿಎಸ್ ಎಕ್ಸ್ಎಲ್100 ಹೆವಿ ಡ್ಯುಟಿ..

ಹೊಸ ಟಿವಿಎಸ್ ಎಕ್ಸ್ಎಲ್100 ಸ್ಕೂಟರ್ ಈಗಾಗಲೆ ಲಭ್ಯವಿರುವ ರೆಡ್, ಬ್ಲಾಕ್, ಗ್ರೀನ್ ಮತ್ತು ಗ್ರೇ ಬಣ್ಣಗಳನ್ನು ಹೊರತುಪಡಿಸಿ, ಇದೀಗ ಐ-ಟಚ್‍‍ಸ್ಟಾರ್ಟ್ ವರ್ಷನ್ ಸ್ಕೂಟರ್‍‍ಗಳು ಮಿನೆರಲ್ ಪರ್ಪಲ್ ಹಾಗು ಕಾಪರ್ ಶೈನ್ ಎಂಬ ಎರಡು ಹೊಸ ಬಣ್ಣವನ್ನು ಪಡೆದುಕೊಂಡಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಮತ್ತೆ ಬಂದ ಟಿವಿಎಸ್ ಎಕ್ಸ್ಎಲ್100 ಹೆವಿ ಡ್ಯುಟಿ..

ಎಂಜಿನ್ ಸಾಮರ್ಥ್ಯ

ಟಿವಿಎಸ್ ಎಕ್ಸ್ಎಲ್100ಐ-‍ಟಚ್‍ಸ್ಟಾರ್ಟ್ ಸ್ಕೂಟರ್‍‍ಗಳು 99.7ಸಿಸಿ ಸಿಂಗಲ್ ಸಿಲೆಂಡರ್, 4 ಸ್ಟ್ರೋಕ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 4 ಬಿಹೆಚ್‍‍ಪಿ ಮತ್ತು 6.5ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಸಿಂಗಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಮತ್ತೆ ಬಂದ ಟಿವಿಎಸ್ ಎಕ್ಸ್ಎಲ್100 ಹೆವಿ ಡ್ಯುಟಿ..

ಆಧುನಿಕ ದ್ವಿಚಕ್ರವಾಹನಗಳಿಗೆ ಹೋಲಿಸಿದರೆ ಈ ಸ್ಕೂಟರ್ ನಿರಾಶಾದಾಯಕವಾಗಿ ಕಾಣಿಸಬಹುದು ಆದರೆ XL 100 ಹೆವಿ ಡ್ಯೂಟಿ ಕೇವಲ 86 ಕೆಜಿ ತೂಕವನ್ನು ತೂಗುತ್ತದೆ ಎಂದು ಗಮನಿಸಬೇಕು. ಇದಲ್ಲದೆ ಈ ಸ್ಕೂಟರ್ ಪ್ರತೀ ಲೀಟರ್‍‍ಗೆ 67ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಮತ್ತೆ ಬಂದ ಟಿವಿಎಸ್ ಎಕ್ಸ್ಎಲ್100 ಹೆವಿ ಡ್ಯುಟಿ..

ಇದಲ್ಲದೆ ಟಿವಿಎಸ್ ಎಕ್ಸ್ಎಲ್100 ಸ್ಕೂಟರ್‍‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಹೈಡ್ರಾಲಿಕ್ ಶಾಕ್‍ ಅಬ್ಸಾರ್ಬರ್ ಅನ್ನು ಹೊಂದಿದೆ. ಇದಲ್ಲದೆ ಮುಂಭಾಗದಲ್ಲಿ 80ಎಮ್ಎಮ್ ಮತ್ತು ಹಿಂಭಾಗದಲ್ಲಿ 110ಎಮ್ಎಮ್ ಡ್ರಮ್ ಬ್ರೇಕ್ ಅನ್ನು ಪಡೆದುಕೊಂಡಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಮತ್ತೆ ಬಂದ ಟಿವಿಎಸ್ ಎಕ್ಸ್ಎಲ್100 ಹೆವಿ ಡ್ಯುಟಿ..

ಹೊಸ ಟಿವಿಎಸ್ ಎಕ್ಸ್ಎಲ್ 100 ಹೆವ್ ಡ್ಯುಟಿ ಐ-ಟಚ್‍‍ಸ್ಟಾರ್ಟ್ ಸ್ಕೂಟರ್ ಹೆವಿ ಡ್ಯುಟಿ ಮಾಡಲ್‍‍‍ಗಿಂತ ರೂ. 2,450 ಮತ್ತು ಕಂಫರ್ಟ್ ವೇರಿಯಂಟ್‍‍ಗೆ ಹೋಲಿಸಿದರೆ ರೂ. 3.350 ಸಾವಿರ ಅಧಿಕ ಇದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ ಮತ್ತೆ ಬಂದ ಟಿವಿಎಸ್ ಎಕ್ಸ್ಎಲ್100 ಹೆವಿ ಡ್ಯುಟಿ..

ಟಿವಿಎಸ್ ಎಕ್ಸ್ಎಲ್100 ಐ-ಟಚ್‍‍‍ ವೇರಿಯಂಟ್ ಸ್ಕೂಟರ್‍‍ಗಳು ಪ್ರಸ್ಥುತ ದೆಹಲಿ, ಉತ್ತರ ಪ್ರದೇಶ್ ಮತ್ತು ಉತ್ತರಾಖಂಡ್ ಪ್ರಾಂತ್ಯಗಳಲ್ಲಿ ಮಾತ್ರ ಲಭ್ಯವಿರಲಿದ್ದು, ಈ ಸ್ಕೂಟರ್ ಹೋಂಡಾ ಕ್ಲಿಕ್‍‍ಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on scooter new launches
English summary
TVS XL 100 i-Touch Start Launched In India.
Story first published: Thursday, July 5, 2018, 11:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X