ಬರಲಿದೆ ಮೊದಲ ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್ ಸೈಕಲ್ 'ಯುಎಂ ರೆನೆಗೆಡ್ ಥೋರ್'

Written By: Rahul
Recommended Video - Watch Now!
Auto Rickshaw Explodes In Broad Daylight

ಅಮೆರಿಕದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಯುನೈಟೆಡ್ ಮೊಟಾರ್ಸ್ ಇದೇ ತಿಂಗಳು 7ರಂದು ಆರಂಭವಾಗಲಿರುವ 2018ರ ಆಟೋ ಎಕ್ಸ್ ಪೋದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್ ಸೈಕಲ್ ಮಾದರಿಯಾದ ರೆನೆಗೆಡ್ ಥೋರ್ ಅನ್ನು ಅನಾವರಣಗೊಳಿಸಲಿದೆ.

ಬರಲಿದೆ ಮೊದಲ ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್ ಸೈಕಲ್ 'ಯುಎಂ ರೆನೆಗೆಡ್ ಥೋರ್'

ಮಾಹಿತಿಗಳ ಪ್ರಕಾರ ಯುಎಮ್ ರೆನೆಗೆಡ್ ಥೋರ್ ಬೈಕ್‌ಗಳು ಪ್ರತಿ ಚಾರ್ಜಿಂಗ್‌ಗೆ 150 ಕಿಲೋಮೀಟರ್ ಗಳಷ್ಟು ಮೈಲೇಜ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 30ಕಿಲೋ ವ್ಯಾಟ್ಸ್ ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿವೆ ಎನ್ನಲಾಗಿದೆ.

ಬರಲಿದೆ ಮೊದಲ ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್ ಸೈಕಲ್ 'ಯುಎಂ ರೆನೆಗೆಡ್ ಥೋರ್'

ಈ ಮೂಲಕ 50 ಬಿಎಚ್‌ಪಿ ಉತ್ಪಾದನಾ ಗುಣ ಹೊಂದಿರುವ ಯುಎಂ ರೆನೆಗೆಡ್ ಥೋರ್ ಬೈಕ್‌ಗಳು ಕೇವಲ 40 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜಿಂಗ್ ಮಾಡಬಹುದಾಗಿದ್ದು, ಪ್ರಸ್ತುತ ಮಾದರಿಗಳಂತೆಯೇ ಹೊರ ವಿನ್ಯಾಸಗಳನ್ನು ಮುಂದುವರಿಸಲಾಗಿದೆ.

ಬರಲಿದೆ ಮೊದಲ ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್ ಸೈಕಲ್ 'ಯುಎಂ ರೆನೆಗೆಡ್ ಥೋರ್'

ಯುನೈಟೆಡ್ ಮೊಟಾರ್ಸ್ ಸಂಸ್ಥೆಯು ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಅನಾವರಣಗೊಳಿಸುವುದಲ್ಲದೆ, ರೆನೆಗೆಡ್ ಕಮಾಂಡೊ ಕ್ಲಾಸಿಕ್, ರೆನೆಗೆಡ್ ಕಮಾಂಡೊ ಕ್ಲಾಸಿಕ್ ಮೊಜಾವೆ, ರೆನೆಗೆಡ್ ಸ್ಪೋರ್ಟ್ಸ್ ಎಸ್ ದ್ವಿಚಕ್ರ ವಾಹನಗಳನ್ನು ಕೂಡ ಪರಿಚಯಿಸಲಿದೆ.

ಬರಲಿದೆ ಮೊದಲ ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್ ಸೈಕಲ್ 'ಯುಎಂ ರೆನೆಗೆಡ್ ಥೋರ್'

ಯುಎಮ್ ಎಲೆಕ್ಟ್ರಿಕ್ ಮೊಟಾರ್ ಸೈಕಲ್‌ಗಳು ಸದ್ಯ ಭಾರತದಲ್ಲಿ ಜನಪ್ರಿಯತೆ ಸಾಧಿಸುತ್ತಿದ್ದು, ಗ್ರಾಹಕರ ಬೇಡಿಕೆಯಂತೆ ಥೋರ್ ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು ಅಭಿವೃದ್ಧಿ ಮಾಡುತ್ತಿದೆ.

ಬರಲಿದೆ ಮೊದಲ ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್ ಸೈಕಲ್ 'ಯುಎಂ ರೆನೆಗೆಡ್ ಥೋರ್'

ಹೀರೊ ಎಲೆಕ್ಟ್ರಿಕ್, ಬಜಾಜ್ ಆಟೋ, ಮತ್ತು ಟಿವಿಎಸ್ ಗಳಂತಹ ಬ್ರ್ಯಾಂಡ್ ಗಳು ಸಹ ದೇಶಿಯ ಮಾರುಕಟ್ಟೆಯಲ್ಲಿ ವಿದ್ಯುತ್ ಬೈಕ್‌ ಮತ್ತು ಸ್ಕೂಟರ್ ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಥೋರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸಹ ಪ್ರಮುಖವಾಗಿವೆ.

ಬರಲಿದೆ ಮೊದಲ ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್ ಸೈಕಲ್ 'ಯುಎಂ ರೆನೆಗೆಡ್ ಥೋರ್'

ಭಾರತದಲ್ಲಿ ಯುಎಂ ಪರಿಚಯಿಸುತ್ತಿರುವ ಎಲೆಕ್ಟ್ರಿಕ್ ಕ್ರೂಸರ್ ಮೊದಲ ಮಾದರಿಯಾಗಿದ್ದು, 'ಯುಎಮ್ ರೆನೆಗೆಡ್ ಥೋರ್' ಬೈಕಿನ ಹೆಚ್ಚಿನ ಮಾಹಿತಿಗಳು ಇದೇ ತಿಂಗಳು 7ರಿಂದ ಆರಂಭವಾಗುವ 2018ರ ಆಟೋ ಎಕ್ಸ್ ಪೋ ಲಭ್ಯವಾಗಲಿವೆ.

English summary
Auto Expo 2018: UM Renegade Thor Electric Bike Unveil & Expected Launch Date.
Story first published: Monday, February 5, 2018, 19:48 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark