ಬಿಡುಗಡೆಯಾಯ್ತು 2500 ಸಿಸಿಯ ಟ್ರಯಂಫ್ ರಾಕೆಟ್ 3 ಬೈಕ್

ಟ್ರಯಂಫ್ ಮೋಟಾರ್‌ಸೈಕಲ್‌ ಕಂಪನಿಯು ತನ್ನ ರಾಕೆಟ್ 3 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಟ್ರಯಂಫ್ ರಾಕೆಟ್ 3 ಬೈಕ್ ಅನ್ನು 2019ರ ಇಂಡಿಯಾ ಬೈಕ್ ವೀಕ್(ಐ‍ಬಿ‍ಡಬ್ಲ್ಯು)ನಲ್ಲಿ ನಂತರ ಪ್ರದರ್ಶನಕ್ಕೆ ಇಡಲಿದೆ.

ಬಿಡುಗಡೆಯಾಯ್ತು 2500 ಸಿಸಿಯ ಟ್ರಯಂಫ್ ರಾಕೆಟ್ 3 ಬೈಕ್

ಈ ಬೈಕಿನ ಬೆಲೆಯು ರೂ.18 ಲಕ್ಷಗಳಾಗಿದೆ. ಈ ಬೈಕ್‍ ಅನ್ನು ಹೊಸ ಫೀಚರ್ಸ್ ಮತ್ತು 2500 ಸಿಸಿ ಎಂಜಿನ್‍‍ನೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಟ್ರಯಂಫ್ 3 ಬೈಕ್ ಅನ್ನು ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬಿಡುಗಡೆಯಾಯ್ತು 2500 ಸಿಸಿಯ ಟ್ರಯಂಫ್ ರಾಕೆಟ್ 3 ಬೈಕ್

ರಾಕೆಟ್ 3 ಆಗ್ರೇಸಿವ್ ರೈಡ್‍ಗೆ ಪ್ರಸಿದ್ದಿಯಾಗಿರುವ ರೋಡ್‍ಸ್ಟರ್ ಆಗಿದ್ದರೆ, ಇನ್ನೊಂದು ರಾಕೆಟ್ 3 ಜಿಟಿ ಆರಾಮದಾಯಕ ರೈಡ್‍ಗೆ ಪ್ರಸಿದ್ದಿಯಾಗಿದೆ.ರಾಕೆಟ್ 3 ಬೈಕ್ ಅನ್ನು ಬ್ರಿಟಿನ್ ಮೂಲದ ಟ್ರಯಂಫ್ ಕಂಪನಿಯ ಹೊಸ ಪ್ಲಾಟ್‍‍ಫಾರಂ ಆಧಾರದ ಮೇಲೆ ನಿರ್ಮಿಸಲಾಗಿದೆ.

ಬಿಡುಗಡೆಯಾಯ್ತು 2500 ಸಿಸಿಯ ಟ್ರಯಂಫ್ ರಾಕೆಟ್ 3 ಬೈಕ್

ರಾಕೆಟ್ 3 ಜಿಟಿ ಬೈಕ್ ಕಡಿಮೆ ಎತ್ತರದ ಸೀಟ್, ಅಡ್ಜಸ್ಟಬಲ್ ಬ್ಯಾಕ್ ರೆಸ್ಟ್ ಮುಂದೆ ವಿಂಡ್‍‍ಸ್ಕ್ರೀನ್‍ನೊಂದಿಗೆ ಅರಾಮದಾಯಕ ಸವಾರಿ ಮಾಡಲು ಸೂಕ್ತವಾಗಿದೆ. ಜಿಟಿ ಬೈಕಿಗೆ ಹೋಲಿಸಿದರೆ ಪರ್ಫಾಮೆನ್ಸ್ ಬೈಕ್ ಹೆಚ್ಚು ಪವರ್‍‍ಫುಲ್ ಆಗಿದೆ.

ಬಿಡುಗಡೆಯಾಯ್ತು 2500 ಸಿಸಿಯ ಟ್ರಯಂಫ್ ರಾಕೆಟ್ 3 ಬೈಕ್

2020ರ ಹೊಸ ಟ್ರಯಂಫ್ ರಾಕೆಟ್ 3 ಬೈಕ್ 2,500 ಸಿಸಿಯ ಇನ್ ಲೈನ್ 3 ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 167 ಬಿ‍‍ಹೆಚ್‍‍ಪಿ ಪವರ್ ಮತ್ತು 4,000 ಆರ್‍‍ಪಿ‍ಎಂನಲ್ಲಿ 221 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು 2500 ಸಿಸಿಯ ಟ್ರಯಂಫ್ ರಾಕೆಟ್ 3 ಬೈಕ್

ಈ ಎಂಜಿನ್ ಹೊಸದಾದ ಕ್ರಾಂಕ್‍‍ಕೇಸ್ ಅಸೆಂಬ್ಲಿ, ಬ್ಯಾಲೆನ್ಸರ್ ಶಾಫ್ಟ್ ಹಾಗೂ ಲ್ಯುಬ್ರಿಕೇಷನ್ ಸಿಸ್ಟಂಗಳನ್ನು ಹೊಂದಿದೆ. ಇದರಿಂದಾಗಿ ಈ ಎಂಜಿನ್‍‍ನ ತೂಕವು 18 ಕೆ.ಜಿಯಷ್ಟು ಕಡಿಮೆಯಾಗಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ತೂಕವನ್ನು ಹಳೆಯ ತಲೆಮಾರಿನ ಬೈಕಿಗೆ ಹೋಲಿಸಿದರೆ ಸುಮಾರು 40 ಕೆ.ಜಿಯಷ್ಟು ಕಡಿಮೆಗೊಳಿಸಿದೆ.

ಬಿಡುಗಡೆಯಾಯ್ತು 2500 ಸಿಸಿಯ ಟ್ರಯಂಫ್ ರಾಕೆಟ್ 3 ಬೈಕ್

2020ರ ರಾಕೆಟ್ 3 ಬೈಕಿನಲ್ಲಿ ಹೀಟೆಡ್ ಗ್ರಿಪ್, ಟಾರ್ಕ್ ಅಸಿಸ್ಟೆಡ್ ಕ್ಲಚ್, ಎಲ್ಇಡಿ ಹೆಡ್‌ಲ್ಯಾಂಪ್‌, ಟೇಲ್‌ಲೈಟ್‌, ಎಕ್ಸ್ ಟೆಂಡೆಡ್ ಫ್ಲೈ ಸ್ಕ್ರೀನ್, ಅಡ್ಜಸ್ಟಬಲ್ ಫುಟ್‌ಪೆಗ್‌, ಸ್ಪೊರ್ಟಿ 20 ಸ್ಪೋಕ್ ಅಲ್ಯೂಮಿನಿಯಂ ವ್ಹೀಲ್ ಸೇರಿದಂತೆ ಹಲವು ಸ್ಟಾಂಡರ್ಡ್ ಫೀಚರ್‍‍ಗಳಿವೆ.

ಬಿಡುಗಡೆಯಾಯ್ತು 2500 ಸಿಸಿಯ ಟ್ರಯಂಫ್ ರಾಕೆಟ್ 3 ಬೈಕ್

ಟ್ರಯಂಫ್ ರಾಕೆಟ್ 3 ಬೈಕ್ ಹೊಸ ಅಲ್ಯುಮಿನಿಯಂ ಚಾಸೀಸ್ ಅನ್ನು ಸಹ ಹೊಂದಿದೆ. ರಾಕೆಟ್ 3 ಬೈಕಿನಲ್ಲಿ ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ 47 ಎಂಎಂ ಯುಎಸ್‍‍ಡಿ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್‍‍ಗಳಿವೆ.

ಬಿಡುಗಡೆಯಾಯ್ತು 2500 ಸಿಸಿಯ ಟ್ರಯಂಫ್ ರಾಕೆಟ್ 3 ಬೈಕ್

ಟ್ರಯಂಫ್ ರಾಕೆಟ್ 3 ಬೈಕಿನಲ್ಲಿ ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಸಿಂಗಲ್ 300 ಎಂಎಂ ಡಿಸ್ಕ್ ಗಳಿವೆ. 2020ರ ರಾಕೆಟ್ 3 ಬೈಕಿನಲ್ಲಿ ಫೂಚರಿಸ್ಟಕ್ ವೈರ್ಡ್ ಹ್ಯಾಂಡಲ್‍‍ಬಾರ್‍, ಟಾರ್ಕ್ ಅಸಿಸ್ಟ್ ಹೈಡ್ರಾಲಿಕ್ ಕ್ಲಚ್, ಫುಲ್ ಅಡ್ಜಸ್ಟಬಲ್ ಶೋವಾ ಮೊನೊಶಾಕ್ ಆರ್‍ಎಸ್‍ಯು, ಶೋವಾ ಯುಎಸ್‍ಡಿ ಫ್ರಂಟ್ ಪೋರ್ಕ್, ಬ್ರೆಂಬೊ ಬ್ರೇಕ್ ಮತ್ತು ಟ್ರಿಪಲ್ ಎಕ್ಸಾಸ್ಟ್ ಸಿಸ್ಟಂ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು 2500 ಸಿಸಿಯ ಟ್ರಯಂಫ್ ರಾಕೆಟ್ 3 ಬೈಕ್

ಹೊಸ ರಾಕೆಟ್ 3 ಬೈಕಿನಲ್ಲಿ ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಟಿಎಫ್‍‍ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಕೀಲೆಸ್ ಇಗ್ನಿಷನ್ ಮತ್ತು ಸ್ಟೀರಿಂಗ್ ಲಾಕ್‍ಗಳನ್ನು ಅಳವಡಿಸಲಾಗಿದೆ. ಹೊಸ ರಾಕೆಟ್ 3 ಬೈಕ್ ರೋಡ್, ರೈನ್, ಸ್ಪೋರ್ಟ್ ಎಂಬ ಮೋಡ್‍‍ಗಳನ್ನು ಹೊಂದಿದೆ.

Most Read Articles

Kannada
English summary
Triumph Rocket 3 launch price Rs 18 L – 2500cc, 167 PS, 221 Nm - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X