ಬಿಡುಗಡೆಯಾಯ್ತು ಡುಕಾಟಿ ಡಯಾವೆಲ್ 1260 ಬೈಕ್

ಇಟಲಿ ಮೂಲದ ಸೂಪರ್ ಬೈಕ್ ತಯಾರಕ ಕಂಪನಿ ಡುಕಾಟಿ, ತನ್ನ ಹೊಸ ಡಯಾವೆಲ್ 1260 ಹಾಗೂ 1260 ಎಸ್ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಡುಕಾಟಿ ಡಯಾವೆಲ್ 1260 ಬೈಕಿನ ಬೆಲೆಯು ರೂ.17.70 ಲಕ್ಷಗಳಾದರೆ, 1260 ಎಸ್ ಬೈಕಿನ ಬೆಲೆ ರೂ.19.25 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಡುಕಾಟಿ ಡಯಾವೆಲ್ 1260 ಬೈಕ್

ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ. ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಹಲವಾರು ಅಪ್‍‍ಡೇಟ್‍‍ಗಳನ್ನು ಹೊಂದಿದೆ. ಇದರಿಂದಾಗಿ ಈ ಹಿಂದಿನ ಬೈಕಿಗಿಂತ ಹೆಚ್ಚು ಬಲಿಷ್ಟವಾಗಿ ಕಾಣುತ್ತದೆ. ಡುಕಾಟಿ ಡಯಾವೆಲ್ 1260 ಬೈಕಿನ ಬುಕ್ಕಿಂಗ್‍‍ಗಳನ್ನು ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಕೊಚ್ಚಿ, ಅಹಮದಾಬಾದ್, ಚೆನ್ನೈ ಹಾಗೂ ಹೈದರಾಬಾದ್‍‍ಗಳಲ್ಲಿ ಆರಂಭಿಸಲಾಗಿದೆ.

ಬಿಡುಗಡೆಯಾಯ್ತು ಡುಕಾಟಿ ಡಯಾವೆಲ್ 1260 ಬೈಕ್

ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೆರ್ಗಿ ಕ್ಯಾನೊವಾಸ್‍‍ರವರು ಮಾತನಾಡಿ, ಡಯಾವೆಲ್ ಬೈಕ್ ಅನ್ನು ಬಿಡುಗಡೆಗೊಳಿಸಿದಾಗ, ಅದು ತನ್ನದೇ ಆದ ಹೊಸದೊಂದು ವರ್ಗವನ್ನು ಸೃಷ್ಟಿಸಿತು. ಡಯಾವೆಲ್ ಪವರ್ ಕ್ರೂಸರ್‍‍ಗಳಿಗೆ ಹೊಸ ವ್ಯಾಖ್ಯಾನವನ್ನು ನೀಡುವ ಬೈಕ್ ಆಗಿ ಮಾರ್ಪಟ್ಟಿದೆ. ತನ್ನ ವಿಶಿಷ್ಟ ರೀತಿಯ ಲುಕ್ ಹಾಗೂ ಸೂಪರ್‍‍ಬೈಕ್ ರೀತಿಯ ಪರ್ಫಾಮೆನ್ಸ್ ನಿಂದಾಗಿ ಯುವ ಜನತೆಯನ್ನು ಹೆಚ್ಚಾಗಿ ತನ್ನತ್ತ ಆಕರ್ಷಿಸಿದೆ.

ಬಿಡುಗಡೆಯಾಯ್ತು ಡುಕಾಟಿ ಡಯಾವೆಲ್ 1260 ಬೈಕ್

ಹೊಸ ಡಯಾವೆಲ್ 1260 ಬೈಕ್, ಅದರ ಹಿಂದಿನ ಬೈಕಿಗಿಂತ ಅಡ್ವಾನ್ಸ್ ಆಗಿದ್ದು, ನೇಕೆಡ್ ರೋಡ್‍‍ಸ್ಟರ್ ಹಾಗೂ ಪವರ್ ಕ್ರೂಸರ್‍‍ನ ರೀತಿಯಲ್ಲಿ ಮೆಗಾ ಮಾನ್‍‍‍ಸ್ಟರ್ ಆಗಿ ರೂಪುಗೊಂಡಿದೆ. ಡಯಾವೆಲ್ ಭಾರತದ ಅತ್ಯಂತ ಜನಪ್ರಿಯವಾದ ಪವರ್ ಕ್ರೂಸರ್‍‍ಗಳಲ್ಲಿ ಒಂದಾಗಿದ್ದು, ನಮ್ಮ ಜನಪ್ರಿಯ ಬೈಕ್‍‍ಗಳಲ್ಲಿ ಒಂದಾಗಿದೆ.

ಬಿಡುಗಡೆಯಾಯ್ತು ಡುಕಾಟಿ ಡಯಾವೆಲ್ 1260 ಬೈಕ್

ಹೊಸ ಡಯಾವೆಲ್ 1260 ಬೈಕ್ ಸಹ ಜನಪ್ರಿಯವಾಗಲಿದ್ದು, ಯುವ ಸಮುದಾಯವು ಹೆಚ್ಚಿನ ಸಂಖೆಯಲ್ಲಿ ಖರೀದಿಸುವ ಭರವಸೆಯಿದೆ ಎಂದು ಹೇಳಿದರು. ಹೊಸ ಡುಕಾಟಿ ಡಯಾವೆಲ್ 1260 ಬೈಕ್, 1,262 ಸಿಸಿ ಟ್ವಿನ್ ಸಿಲಿಂಡರ್ ಟೆಸ್ಟಾಸ್ಟ್ರೆಟಾ ಎಸ್‌ವಿಟಿ ಎಂಜಿನ್ ಹೊಂದಿದೆ.

ಬಿಡುಗಡೆಯಾಯ್ತು ಡುಕಾಟಿ ಡಯಾವೆಲ್ 1260 ಬೈಕ್

ಈ ಎಂಜಿನ್ 9,500 ಆರ್‍‍ಪಿ‍ಎಂನಲ್ಲಿ 159 ಬಿ‍‍ಹೆಚ್‍‍ಪಿ ಹಾಗೂ 7,500 ಆರ್‍‍ಪಿ‍ಎಂ‍‍ನಲ್ಲಿ 129 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಡುಕಾಟಿಯ ಡೆಸ್ಮೊಡ್ರೊಮಿಕ್ ವಾಲ್ವ್ ಟೈಮಿಂಗ್ ಅಳವಡಿಸಲಾಗಿದೆ. ಇದು ರೆವ್ ಸರಣಿಯ ಬೈಕುಗಳಿಗೆ ವೇರಿಯಬಲ್ ವಾಲ್ವ್ ಟೈಮಿಂಗ್ ಟಾರ್ಕ್ ನೀಡುತ್ತದೆ.

ಬಿಡುಗಡೆಯಾಯ್ತು ಡುಕಾಟಿ ಡಯಾವೆಲ್ 1260 ಬೈಕ್

ಡುಕಾಟಿ ಹೊಸ ಡಯಾವೆಲ್ 1260 ಬೈಕಿನಲ್ಲಿ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಇದು 6 ಆಕ್ಸಿಸ್‍‍ನ ಬಾಷ್ ಇನ್‍‍ಹರ್ಶಿಯಲ್ ಮೆಷರ್ ಯೂನಿಟ್, ಬಾಷ್ ಕಾರ್ನರಿಂಗ್ ಎಬಿಎಸ್, ಡುಕಾಟಿ ಟ್ರಾಕ್ಷನ್ ಕಂಟ್ರೋಲ್, ಡುಕಾಟಿ ವ್ಹೀಲಿ ಕಂಟ್ರೋಲ್, ಪವರ್ ಲಾಂಚ್, ಕ್ರೂಸ್ ಕಂಟ್ರೋಲ್ ಹಾಗೂ ಹಲವಾರು ರೈಡಿಂಗ್ ಮೋಡ್‍‍ಗಳನ್ನು ಒಳಗೊಂಡಿದೆ.

MOST READ: ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಬಿಡುಗಡೆಯಾಯ್ತು ಡುಕಾಟಿ ಡಯಾವೆಲ್ 1260 ಬೈಕ್

ಡುಕಾಟಿ ಡಯಾವೆಲ್ 1260 ಎಸ್ ಬೈಕಿನಲ್ಲಿ ಸ್ಟ್ಯಾಂಡರ್ಡ್ ಅಪ್ / ಡೌನ್ ಕ್ವಿಕ್‌ಶಿಫ್ಟರ್, ಎಲ್‌ಇಡಿ ಡಿಆರ್‌ಎಲ್ ಹಾಗೂ ಡುಕಾಟಿ ಮಲ್ಟಿಮೀಡಿಯಾ ಸಿಸ್ಟಂಗಳಿವೆ. ಈ ಸಿಸ್ಟಂ ಅನ್ನು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದೆ.

MOST READ: ಕಳಪೆ ಕಾಮಗಾರಿ ಮಾಡಿದ ಎಂಜಿನಿಯರ್ ಮೇಲೆ ಕೆಸರು ಸುರಿದ ಶಾಸಕ

ಬಿಡುಗಡೆಯಾಯ್ತು ಡುಕಾಟಿ ಡಯಾವೆಲ್ 1260 ಬೈಕ್

ಡುಕಾಟಿ ಡಯಾವೆಲ್ 1260 ಬೈಕ್ ಅನ್ನು ಕಪ್ಪು ಬಣ್ಣದ ಫ್ರೇಮ್‌ ಹೊಂದಿರುವ ಸ್ಯಾಂಡ್‌ಸ್ಟೋನ್ ಗ್ರೇ ಎಂಬ ಒಂದೇ ಬಣ್ಣದಲ್ಲಿ ಮಾರಾಟ ಮಾಡಲಾಗುವುದು. ಆದರೆ ಡಯಾವೆಲ್ 1260 ಎಸ್ ಬೈಕ್ ಅನ್ನು ಥ್ರಿಲ್ಲಿಂಗ್ ಬ್ಲ್ಯಾಕ್ ಹಾಗೂ ಡಾರ್ಕ್ ಸ್ಟೆಲ್ತ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಎರಡೂ ಬಣ್ಣಗಳೂ ಕೆಂಪು ಬಣ್ಣದ ಫ್ರೇಂ ಹೊಂದಿರುತ್ತವೆ.

MOST READ: ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಬಿಡುಗಡೆಯಾಯ್ತು ಡುಕಾಟಿ ಡಯಾವೆಲ್ 1260 ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2019ರ ಹೊಸ ಡುಕಾಟಿ ಡಯಾವೆಲ್ 1260 ಹಾಗೂ 1260 ಎಸ್ ಬೈಕುಗಳು ಹಲವಾರು ಅಪ್‍‍ಡೇಟ್‍‍ಗಳನ್ನು ಹೊಂದಿವೆ. ಇದರ ಜೊತೆಗೆ ಪರಿಷ್ಕರಿಸಿದ ಮೆಕಾನಿಕಲ್ ಅಂಶಗಳು ಬೈಕ್ ಅನ್ನು ಈ ಹಿಂದಿದ್ದ ಬೈಕಿಗಿಂತ ಹೆಚ್ಚು ಬಲಶಾಲಿಯಾಗಿಸುತ್ತವೆ. ಭಾರತದಲ್ಲಿ ಬುಕ್ಕಿಂಗ್ ಮಾಡಲಾಗುವ ಹೊಸ ಬೈಕುಗಳನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು.

Most Read Articles

Kannada
Read more on ಡುಕಾಟಿ ducati
English summary
New Ducati Diavel 1260 Launched In India With A Starting Price Of Rs 17.70 Lakh - Read in kannada
Story first published: Saturday, August 10, 2019, 10:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X