ಟ್ರಾಫಿಕ್ ಭರಿತ ಬೆಂಗಳೂರಿನ ರಸ್ತೆಗಳಲ್ಲಿ ಹೋಂಡಾ ಸಿಬಿ300ಆರ್ ಬೈಕಿನ ಮೈಲೇಜ್ ಚೆಕ್

ಹೋಂಡಾ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ತಮ್ಮ ಬಹುನಿರೀಕ್ಷಿತ ಸಿಬಿ300ಆರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಅನ್ನು ಪದೆದುಕೊಳ್ಳುತ್ತಿದೆ. ಹೋಂಡಾ ಸಿಬಿ300ಆರ್ ಬೈಕ್ ಎಕ್ಸ್ ಶೋರುಂ ಪ್ರಕಾರ ರೂ. 2.41 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಈ ಬೈಕಿನ ಕುರಿತಾದ ಮೈಲೇಜ್ ಬಗ್ಗೆ ಇಂದಿನ ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಟ್ರಾಫಿಕ್ ಭರಿತ ಬೆಂಗಳೂರಿನ ರಸ್ತೆಗಳಲ್ಲಿ ಹೋಂಡಾ ಸಿಬಿಆರ್300 ಬೈಕಿನ ಮೈಲೇಜ್ ಚೆಕ್

ಯಾವುದಾದರು ಹೊಸ ವಾಹನ ಖರೀದಿ ಮಾಡಬೇಕಾದರೆ ಮೊದಲಿಗೆ ಅದು ಎಷ್ಟು ಮೈಲೇಜ್ ನೀಡುತ್ತೆ ಮತ್ತು ವಾಹನದಲ್ಲಿ ಏನೆಲ್ಲಾ ಫೀಚರ್ಸ್ ಇದೇ ಎಂದು ನಾವು ನೋಡುತ್ತೇವೆ. ಈ ನಿಟ್ಟಿನಲ್ಲಿ ನಾವೀಗಾಗಲೇ ಹೋಂಡಾ ಸಿಬಿ300ಆರ್ ಬೈಕಿನ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿಯನ್ನು ನೀಡೆದ್ದೇವೆ. ಆದರೆ ಇದೇ ಮೊದಲ ಬಾರಿಗೆ ಈ ಬೈಕಿನ ಮೈಲೇಜ್ ಅನ್ನು ಮಾಚೊ ಬೈಕರ್ ಎಂಬ ಯೂಟ್ಯೂಬರ್ ಪರೀಕ್ಷಿಸಲಾಗಿದ್ದು, ಈ ಕುರಿತಾದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.

ಟ್ರಾಫಿಕ್ ಭರಿತ ಬೆಂಗಳೂರಿನ ರಸ್ತೆಗಳಲ್ಲಿ ಹೋಂಡಾ ಸಿಬಿಆರ್300 ಬೈಕಿನ ಮೈಲೇಜ್ ಚೆಕ್

ಬೈಕ್ ಬಿಡುಗಡೆಯಾದ ನಂತರ ಯಾವುದೇ ಯೂಟ್ಯೂಬ್ ಚಾನೆಲ್‍ಗಳು ಈ ಕಾರ್ಯ ಮಾಡಲಿಲ್ಲವಾಗಿದ್ದು ಮಾಚೋ ಬೈಕರ್ ಈ ಕಾರ್ಯ ಮಾಡಿದ್ದಾರೆ. ಈತ ಬೆಂಗಳೂರಿನ ರಸ್ತೆಗಳಲ್ಲಿ ಹೋಂಡಾ ಸಿಬಿ300ಆರ್ ಬೈಕಿನ ಮೈಲೇಜ್ ಅನ್ನು ಪರೀಕ್ಷಿಸಿದ್ದು, ಊಹಿಸಲಾಗದಷ್ಟು ಮಟ್ಟದಲ್ಲಿ ಈ ಬೈಕ್ ಮೈಲೇಜ್ ಅನ್ನು ನೀಡುತ್ತದೆ.

ಹೌದು, ಅಧಿಕ ಸಾಮರ್ಥ್ಯ ಹೊತ್ತು ಬಂದ ಹೋಂಡಾ ಸಿಬಿ300ಆರ್ ಬೈಕ್ ಒಂದು ಲೀಟರ್ ಪೆಟ್ರೋಲ್‍‍ಗೆ ಸುಮಾರು 28 ಕಿಲೋಮೀಟರ್ ಮೈಲೇಜ್ ನೀಡಬಲ್ಲದು ಎಂದು ವಿಡಿಯೋನಲ್ಲಿ ಸಾಭೀತಾಗಿದೆ. ಆದ್ರೆ ಇನ್ನು ಎಆರ್‍ಎಇ ಅಧಿಕೃತವಾಗಿ ಈ ಬೈಕಿನ ಮೈಲೇಜ್ ಕುರಿತಾದ ಮಾಹಿತಿಯನ್ನು ಹೊರಹಾಕಲಿಲ್ಲ.

ಟ್ರಾಫಿಕ್ ಭರಿತ ಬೆಂಗಳೂರಿನ ರಸ್ತೆಗಳಲ್ಲಿ ಹೋಂಡಾ ಸಿಬಿಆರ್300 ಬೈಕಿನ ಮೈಲೇಜ್ ಚೆಕ್

ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಖರೀದಿ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, 250ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯೇ ಈ ಹೊಸ ಬೈಕ್ ಪರಿಚಯಿಸುತ್ತಿರುವ ಪ್ರಮುಖ ಕಾರಣವಾಗಿದೆ.

ಟ್ರಾಫಿಕ್ ಭರಿತ ಬೆಂಗಳೂರಿನ ರಸ್ತೆಗಳಲ್ಲಿ ಹೋಂಡಾ ಸಿಬಿಆರ್300 ಬೈಕಿನ ಮೈಲೇಜ್ ಚೆಕ್

ಹೋಂಡಾ ಸಿಬಿ 300ಆರ್ ಬೈಕ್ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ರೆಟ್ರೋ ಮಾದರಿಯ ವೃತ್ತಾಕಾರದ ಎಲ್ಇಡಿ ಹೆಡ್‍ಲ್ಯಾಂಪ್ಸ್, ಪೆಟಲ್ ಡಿಸ್ಕ್ ಬ್ರೇಕ್ಸ್, 5 ಟ್ವಿನ್ ಸ್ಪೋಕ್ ಅಲಾಯ್ ವ್ಹೀಲ್ಸ್ ಮತ್ತು ಆಕ್ರಮಣಕಾರಿ ವಿನ್ಯಾಸವನ್ನು ಪಡೆದಿರುವ ಪ್ಯುಯಲ್ ಟ್ಯಾಂಕ್ ಅನ್ನು ನೀಡಲಾಗಿದೆ.

ಟ್ರಾಫಿಕ್ ಭರಿತ ಬೆಂಗಳೂರಿನ ರಸ್ತೆಗಳಲ್ಲಿ ಹೋಂಡಾ ಸಿಬಿಆರ್300 ಬೈಕಿನ ಮೈಲೇಜ್ ಚೆಕ್

ಈ ಬೈಕ್ ಸೆಗ್ಮೆಂಟ್‍‍ನಲ್ಲಿ ಅತೀ ಕಡಿಮೆ ತೂಕವನ್ನು ಹೊಂದಿರುವ ಬೈಕ್ ಇದಾಗಿದ್ದು, ಹೋಂಡಾ ಸಿಬಿ 300ಆರ್ ಬೈಕ್ ಸುಮಾರು 143 ಕಿಲೋಗ್ರಾಂನ ತೂಕವನ್ನು ಹೊಂದಿದೆ. ಇಷ್ಟೆ ಅಲ್ಲದೇ ಈ ಬೈಕಿನ ಹಿಂಭಾಗದಲ್ಲಿ ಸಾಧಾರಣವಾದ ಟೈಲ್ ಲ್ಯಾಂಪ್ಸ್ ಮತ್ತು ಟರ್ನ್ ಇಂಡಿಕೇಟರ್ ಸೇಟಪ್ ಅನ್ನು ಒದಗಿಸಲಾಗಿದೆ.

ಟ್ರಾಫಿಕ್ ಭರಿತ ಬೆಂಗಳೂರಿನ ರಸ್ತೆಗಳಲ್ಲಿ ಹೋಂಡಾ ಸಿಬಿಆರ್300 ಬೈಕಿನ ಮೈಲೇಜ್ ಚೆಕ್

ಎಂಜಿನ್ ಸಾಮರ್ಥ್ಯ

286ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂಂದಿರುವ ಸಿಬಿ300ಆರ್ ಬೈಕ್‌ಗಳು 31.4-ಬಿಎಚ್‌ಪಿ ಮತ್ತು 27.5-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದಿದೆ.

ಟ್ರಾಫಿಕ್ ಭರಿತ ಬೆಂಗಳೂರಿನ ರಸ್ತೆಗಳಲ್ಲಿ ಹೋಂಡಾ ಸಿಬಿಆರ್300 ಬೈಕಿನ ಮೈಲೇಜ್ ಚೆಕ್

ಜೊತೆಗೆ ಸುರಕ್ಷೆತೆಗಾಗಿ ಎಬಿಎಸ್ ಟೆಕ್ನಾಲಜಿ ಪಡೆದಿರುವ ಸಿಬಿ300ಆರ್ ಬೈಕ್‌ಗಳು ಮುಂಭಾಗದಲ್ಲಿ 41ಎಂಎಂ ಅಪ್ ಸೈಡ್ ಡೌನ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಷೆನ್ ಜೋಡಣೆಯಿದ್ದು, ರೆಟ್ರೋ ಡಿಸೈನ್‌ನೊಂದಿಗೆ ಮಾರ್ಡನ್ ಟೆಕ್ನಾಲಜಿ ಪ್ರೇರಣೆ ಹೊಂದಿದೆ.

ಟ್ರಾಫಿಕ್ ಭರಿತ ಬೆಂಗಳೂರಿನ ರಸ್ತೆಗಳಲ್ಲಿ ಹೋಂಡಾ ಸಿಬಿಆರ್300 ಬೈಕಿನ ಮೈಲೇಜ್ ಚೆಕ್

ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿರುವ ಹೊಸ ಹೋಂಡಾ ಸಿಬಿ 300ಆರ್ ಬೈಕ್‍ಗಳು ಈಗಾಗಲೆ ಮಾರಾಟಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 3390, ಕವಾಸಕಿ ನಿಂಜಾ 400 ಮತ್ತು ಯಮಹಾ ವೆಜೆಡ್ಎಫ್-ಆರ್3 ಬೈಕ್‍ಗಳಿಗೆ ಟಾಂಗ್ ನೀಡಲಿದೆ.

Most Read Articles

Kannada
English summary
Honda CB300 R Sportsbike’s First Mileage Test On Video. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X