Just In
Don't Miss!
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
- News
ಮೌಢ್ಯದ ಪರಮಾವಧಿ: ಮೋಕ್ಷ ಪ್ರಾಪ್ತಿಗಾಗಿ ತಿರುಪತಿಯಲ್ಲಿ ಭಕ್ತ ಮಾಡಿದ್ದೇನು?
- Movies
ಸುದೀಪ್ 'ಫ್ಯಾಂಟಮ್' ಸಿನಿಮಾಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಖ್ಯಾತ ನಟ
- Technology
'ಟಿಕ್ಟಾಕ್' ಮಾತೃ ಸಂಸ್ಥೆಯಿಂದ ಹೊಸ 'ರೆಸ್ಸೊ' ಆಪ್ ಬಿಡುಗಡೆ!
- Education
PGCIL: 53 ಕ್ಷೇತ್ರ ಮೇಲ್ವಿಚಾರಕ ಮತ್ತು ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ...
- Sports
ಐಎಸ್ಎಲ್: ಗೋವಾ ಎದುರಾಳಿ ಎಟಿಕೆ, ಆಕ್ರಮಣಕಾರಿ ತಂಡಗಳ ಮುಖಾಮುಖಿ
- Lifestyle
ಶನಿವಾರದ ದಿನ ಭವಿಷ್ಯ 14-12-2019
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
ಡ್ಯುಯಲ್ ಚಾನಲ್ ಎಬಿಎಸ್ ಬೈಕ್ ವಿತರಣೆ ಶುರು ಮಾಡಿದ ಜಾವಾ
ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಕಡೆಗೂ ಡ್ಯೂಯಲ್ ಚಾನೆಲ್ ಎಬಿಎಸ್ ಹೊಂದಿರುವ ಜಾವಾ ಬೈಕುಗಳ ವಿತರಣೆಯನ್ನು ಶುರು ಮಾಡಿದೆ. ಜಾವಾ 42 ಮಾದರಿಯ ಮೊದಲ ಬೈಕ್ ಅನ್ನು ಪುಣೆಯಲ್ಲಿರುವ ಗ್ರಾಹಕರೊಬ್ಬರಿಗೆ ವಿತರಿಸಲಾಗಿದೆ.

ಕ್ಲಾಸಿಕ್ ಲೆಜೆಂಡ್ಸ್ ಕಳೆದ ವರ್ಷದ ನವೆಂಬರ್‍ನಲ್ಲಿ ಜಾವಾ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಜಾವಾ ಬೈಕುಗಳ ಪುನರಾಗಮನದ ಹಿನ್ನೆಲೆಯಲ್ಲಿ ದೇಶದಲ್ಲಿ ಭಾರೀ ಪ್ರಮಾಣದ ನಿರೀಕ್ಷೆಯುಂಟಾಗಿತ್ತು. ಬೈಕುಗಳು ಬಿಡುಗಡೆಯಾದ ತಕ್ಷಣವೇ ಬುಕ್ಕಿಂಗ್‍ಗಳು ಆರಂಭವಾದವು. ಆದರೆ ಈ ಬೈಕಿನ ಡೆಲಿವರಿಯನ್ನು ಈ ವರ್ಷದ ಮಾರ್ಚ್‍ನಿಂದ ಶುರು ಮಾಡಲಾಯಿತು.

ಮಾರ್ಚ್ನಿಂದ ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯ ಬೈಕುಗಳ ವಿತರಣೆಯನ್ನು ಆರಂಭಿಸಲಾಗಿತ್ತು. ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಗಳ ಡೆಲಿವರಿಯನ್ನು ಕ್ಲಾಸಿಕ್ ಲೆಜೆಂಡ್ಸ್ ಮುಂದೂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಗ್ರಾಹಕರ ಪ್ರಶ್ನೆಗೆ ಉತ್ತರಿಸಿರುವ ಅನುಪಮ್ ತಾರೆಜಾರವರು ಡ್ಯುಯಲ್ ಚಾನೆಲ್ ಬೈಕುಗಳ ವಿತರಣೆಯನ್ನು ಖಚಿತಪಡಿಸಿದ್ದಾರೆ.

ಕ್ಲಾಸಿಕ್ ಲೆಜೆಂಡ್ಸ್ ದೇಶಾದ್ಯಂತ 100 ಕ್ಕೂ ಹೆಚ್ಚು ಡೀಲರ್‍ಗಳನ್ನು ಸ್ಥಾಪಿಸಿದೆ. ಕಂಪನಿಯು ನಿರೀಕ್ಷೆಗೂ ಮೀರಿ ಬುಕ್ಕಿಂಗ್‍ಗಳನ್ನು ಪಡೆದಿದೆ. ಸದ್ಯಕ್ಕೆ ಕಂಪನಿಯು ಜಾವಾ ಬೈಕುಗಳ ವೇಟಿಂಗ್ ಪಿರಿಯಡ್ ಅನ್ನು 6 ರಿಂದ 9 ತಿಂಗಳುಗಳಿಗೆ ನಿಗದಿಪಡಿಸಿದೆ. ಮಾರಾಟಗಾರರ ಕಾರಣದಿಂದಾಗಿ ಬೈಕುಗಳ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಕ್ಲಾಸಿಕ್ ಲೆಜೆಂಡ್ಸ್ ಹೇಳಿದೆ.

ಬೈಕ್ ತಯಾರಕರು ಬ್ಯಾಚ್‌ಗಳಲ್ಲಿ ಹಾಗೂ ಬುಕ್ಕಿಂಗ್ ಕ್ರಮಾಂಕದ ಅನುಸಾರ ವಿತರಣೆಯನ್ನು ಆರಂಭಿಸಿದ್ದಾರೆ. ಕ್ಲಾಸಿಕ್ ಲೆಜೆಂಡ್ಸ್ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸಮಯಕ್ಕೆ ಸರಿಯಾಗಿ ಬೈಕುಗಳನ್ನು ವಿತರಿಸುವ ಭರವಸೆ ಹೊಂದಿದೆ.

ಜಾವಾ ಸ್ಟ್ಯಾಂಡರ್ಡ್ ಹಾಗೂ ಜಾವಾ 42, ಬೈಕುಗಳೆರಡೂ 293 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿವೆ. ಈ ಎಂಜಿನ್ 27 ಬಿಹೆಚ್‌ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡ್‍ನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಜಾವಾ ಸ್ಟ್ಯಾಂಡರ್ಡ್ ಹಾಗೂ ಜಾವಾ 42 ಡ್ಯುಯಲ್ ಚಾನೆಲ್ ಎಬಿಎಸ್ ಬೈಕುಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಕ್ರಮವಾಗಿರೂ.1.72 ಲಕ್ಷ ಹಾಗೂ ರೂ.1.63 ಲಕ್ಷಗಳಾಗಿದೆ. ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯ ಬೈಕುಗಳು, ಡ್ಯುಯಲ್ ಚಾನೆಲ್ ಎಬಿಎಸ್ ಬೈಕುಗಳಿಗಿಂತ ಸುಮಾರು ರೂ.9,000 ಕಡಿಮೆ ಬೆಲೆಯನ್ನು ಹೊಂದಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಈ ಸುದ್ದಿಯಿಂದಾಗಿ ಜಾವಾ ಬೈಕುಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು ಖುಷಿಯಾಗಿರುತ್ತಾರೆ. ಕ್ಲಾಸಿಕ್ ಲೆಜೆಂಡ್ಸ್ ವಿತರಣೆಯನ್ನು ಆರಂಭಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಂಡಿದೆ. ರಾಯಲ್ ಎನ್‌ಫೀಲ್ಡ್ 350 ಬೈಕಿನ ಹಿಡಿತದಲ್ಲಿರುವ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದುವ ಕಾರಣದಿಂದ ಜಾವಾ ಬೈಕುಗಳನ್ನು ಮತ್ತೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಕ್ಲಾಸಿಕ್ ಲೆಜೆಂಡ್ಸ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿ ಗ್ರಾಹಕರ ನಿರೀಕ್ಷೆಯನ್ನು ಪೂರೈಸಬೇಕಿದೆ.