ಹೊಸ ಬೈಕ್ ಹರಾಜು ಮೂಲಕ ರೂ.1.43 ಕೋಟಿ ಸಂಗ್ರಹಿಸಿದ ಜಾವಾ..!

ಸುಮಾರು 2 ದಶಕಗಳ ನಂತರ ಮಾರುಕಟ್ಟೆಗೆ ಮರಳಿ ಪ್ರವೇಶ ಪಡೆಯುತ್ತಿರುವ ಜಾವಾ ಮೋಟಾರ್‌ಸೈಕಲ್ ಸಂಸ್ಥೆಯ ಕಳೆದ ನವೆಂಬರ್‌ನಲ್ಲಿ ತನ್ನ ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಹೊಸ ವಿತರಣೆಗೆ ಚಾಲನೆ ನೀಡುತ್ತಿದೆ. ಹೀಗಿರುವಾಗ ಜಾವಾ ಸಂಸ್ಥೆಯು ತೆಗೆದುಕೊಂಡಿರುವ ಮಹತ್ವದ ನಿರ್ಧಾರವೊಂದು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

ಹೊಸ ಬೈಕ್ ಹರಾಜು ಮೂಲಕ ರೂ.1.43 ಕೋಟಿ ಸಂಗ್ರಹಿದ ಜಾವಾ..!

ಹೌದು, ಏಪ್ರಿಲ್ ಮೊದಲ ವಾರದಲ್ಲಿ ಜಾವಾ ಬಿಡುಗಡೆಗೊಳಿಸಿರುವ ಹೊಸ ಬೈಕ್‌ಗಳ ವಿತರಣೆಗೆ ಚಾಲನೆ ದೊರೆಯಲಿದ್ದು, ಅದಕ್ಕೂ ಮುನ್ನ ಬಿಡುಗಡೆಯಾಗಿರುವ ಹೊಸ ಬೈಕ್‌ಗಳನ್ನು ಹರಾಜು ಮಾಡಿದೆ. ಹರಾಜಿನಲ್ಲಿ ಮಾರಾಟವಾದ ಬೈಕ್‌ಗಳಿಂದ ಬಂದ ಹಣವನ್ನು ಹುತಾತ್ಮ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಲು ಯೋಜನೆ ರೂಪಿಸಿದ್ದು, ಈಗಾಗಲೇ ಬರೋಬ್ಬರಿ 13 ಬೈಕ್‌ಗಳು ದಾಖಲೆಯ ಬೆಲೆಗೆ ಮಾರಾಟಗೊಂಡಿವೆ.

ಹೊಸ ಬೈಕ್ ಹರಾಜು ಮೂಲಕ ರೂ.1.43 ಕೋಟಿ ಸಂಗ್ರಹಿದ ಜಾವಾ..!

ಮುಂಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 13 ಬೈಕ್‌ಗಳು ಮಾರಾಟಗೊಂಡಿದ್ದು, ಹರಾಜು ಪ್ರಕ್ರಿಯೆ ಭಾಗಿಯಾಗಿದ್ದ ಸಾವಿರಾರು ಜಾವಾ ಪ್ರಿಯರು ದಾಖಲೆಯ ಬೆಲೆಗೆ ತಮ್ಮ ನೆಚ್ಚಿನ ಬೈಕ್‌ಗಳನ್ನು ಖರೀದಿಸಲು ಮುಗಿಬಿದ್ದರು. ಅಂತಿಮವಾಗಿ 13 ಬೈಕ್‌ಗಳನ್ನು ಹರಾಜು ಮಾಡುವಲ್ಲಿ ಯಶಸ್ವಿಯಾದ ಜಾವಾ ಸಂಸ್ಥೆಯು ಹೊಸ ದಾಖಲೆಯನ್ನೇ ಸೃಷ್ಠಿಸಿತು.

ಹೊಸ ಬೈಕ್ ಹರಾಜು ಮೂಲಕ ರೂ.1.43 ಕೋಟಿ ಸಂಗ್ರಹಿದ ಜಾವಾ..!

ಇದರಲ್ಲಿ ಚಾರ್ಸಿ ನಂ.1 ಹೊಂದಿರುವ ಜಾವಾ ಬೈಕ್ ಬರೋಬ್ಬರಿ ರೂ.43 ಲಕ್ಷಕ್ಕೆ ಹರಾಜುಗೊಂಡಿದ್ದು, ಇನ್ನುಳಿದಂತೆ ಚಾರ್ಸಿ ನಂಬರ್ ಆಧಾರಿಸಿ ವಿವಿಧ ಬೆಲೆಗಳಿಗೆ ಬೈಕ್ ಹರಾಜುಗೊಂಡವು. ಈ ಮೂಲಕ 13 ಬೈಕ್‌ಗಳಿಂದ ರೂ.1.43 ಕೋಟಿ ಸಂಗ್ರಹವಾಗಿದ್ದು, ಹರಾಜಿನಲ್ಲಿ ಬೈಕ್ ಖರೀದಿ ಮಾಡಿರುವ ಗ್ರಾಹಕರಿಗೆ ಜಾವಾ ವಿಶೇಷ ಗ್ರಾಹಕ ಸೌಲಭ್ಯಗಳನ್ನು ಘೋಷಣೆ ಮಾಡಿದೆ.

ಇನ್ನು ಸಂಗ್ರವಾದ ಹಣವನ್ನು ಹುತ್ಮಾತ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ಈ ನಿಧಿಯನ್ನು ಬಳಕೆ ಮಾಡಲಿರುವ ಜಾವಾ ಸಂಸ್ಥೆಯು, ದೇಶವೇ ಮೊದಲು ಎನ್ನುವ ಸಂದೇಶವನ್ನು ತನ್ನ ಗ್ರಾಹಕರಲ್ಲಿ ಅರಿವು ಮೂಡಿಸಿದಲ್ಲದೇ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ದಾಖಲೆ ಬೆಲೆಗೆ ಬೈಕ್ ಖರೀದಿಸಿದ ಗ್ರಾಹಕರಿಗೆ ಧನ್ಯವಾದಗಳನ್ನು ತಿಳಿಸಿದೆ.

ಹೊಸ ಬೈಕ್ ಹರಾಜು ಮೂಲಕ ರೂ.1.43 ಕೋಟಿ ಸಂಗ್ರಹಿದ ಜಾವಾ..!

ಜೊತೆಗೆ ಜಾವಾ ಸಂಸ್ಥೆಯ ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದ್ದು, ದೇಶದ ಭದ್ರತೆಗಾಗಿ ತಮ್ಮ ಪ್ರಾಣವನ್ನೇ ಸಮರ್ಪಣೆ ಮಾಡುತ್ತಿರುವ ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರುವುದಕ್ಕೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಹೊಸ ಬೈಕ್ ಹರಾಜು ಮೂಲಕ ರೂ.1.43 ಕೋಟಿ ಸಂಗ್ರಹಿದ ಜಾವಾ..!

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

MOST READ: ರಿಯಲ್ ಎಸ್ಟೇಟ್‌ನಲ್ಲಿ ವಂಚಿಸಿದ್ದ ಮುದಿಯನ ಐಷಾರಾಮಿ ಕಾರುಗಳು ಇದೀಗ ಅನಾಥ..!

ಹೊಸ ಬೈಕ್ ಹರಾಜು ಮೂಲಕ ರೂ.1.43 ಕೋಟಿ ಸಂಗ್ರಹಿದ ಜಾವಾ..!

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಹೊಸ ಬೈಕ್ ಹರಾಜು ಮೂಲಕ ರೂ.1.43 ಕೋಟಿ ಸಂಗ್ರಹಿದ ಜಾವಾ..!

ಹಾಗೆಯೇ ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಹೊಸ ಬೈಕ್ ಹರಾಜು ಮೂಲಕ ರೂ.1.43 ಕೋಟಿ ಸಂಗ್ರಹಿದ ಜಾವಾ..!

ಎಂಜಿನ್ ಸಾಮರ್ಥ್ಯ

ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಬೈಕ್ ಹರಾಜು ಮೂಲಕ ರೂ.1.43 ಕೋಟಿ ಸಂಗ್ರಹಿದ ಜಾವಾ..!

ಇದರಲ್ಲಿ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ.

Most Read Articles

Kannada
English summary
Jawa Raises Rs 1.43 Crore In Auction — Amount To Be Donated To The Armed Forces Flag Day Fund. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X