Just In
Don't Miss!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- News
ಕೊಟ್ಟ ಮಾತು ಉಳಿಸಿಕೊಂಡ ಬೈಡನ್, ಸಂಪುಟದಲ್ಲಿ ಭಾರತೀಯರೇ ಮಿಂಚಿಂಗ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗ್ರಾಹಕನ ಬುಕ್ಕಿಂಗ್ ರದ್ದು ಪಡಿಸಿದ ಜಾವಾ..!
ಒಳ್ಳೆಯದಿರಲಿ, ಕೆಟ್ಟದಿರಲಿ, ಜಾವಾ ಮೋಟಾರ್‌ಸೈಕಲ್ ಸದಾ ಸುದ್ದಿಯಲ್ಲಿರುತ್ತದೆ. ಇತ್ತೀಚಿನ ಹೊಸ ಸುದ್ದಿಯೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರೊಬ್ಬರು ತಾವು ಜಾವಾ ಬೈಕಿನ ವಿತರಣೆಯನ್ನು ನಿರೀಕ್ಷೆಗಿಂತ ಮುಂಚೆಯೇ ಪಡೆದಿರುವುದಾಗಿ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಸೌರಭ್ ಯಾದವ್ ಎಂಬುವವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಾನು 2019ರ ಮೇ ತಿಂಗಳಿನಲ್ಲಿ ಜಾವಾ 42 ಬೈಕ್ ಅನ್ನು ಬುಕ್ ಮಾಡಿದ್ದೆ. ಈ ಬೈಕಿನ ವಿತರಣೆಯನ್ನು ಅಕ್ಟೋಬರ್‌ನಲ್ಲಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ ತಾವು ಸಿಂಗಲ್ ಚಾನೆಲ್ ಎಬಿಎಸ್ ಬೈಕ್ ಅನ್ನು ಬುಕ್ಕಿಂಗ್ ಮಾಡಿದ್ದರೆ, ತಮಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಜಾವಾ ಮೋಟರ್‍ಸೈಕಲ್ ಈ ಸುದ್ದಿಯನ್ನು ಸಂಪೂರ್ಣವಾಗಿ ನಿರಾಕರಿಸಿದೆ.

ಈ ಬಗ್ಗೆ ತನ್ನ ಸಾಮಾಜಿಕ ಜಾಲತಾಣಗಳಿಂದ ಪೋಸ್ಟ್ ಮಾಡಿರುವ ಜಾವಾ ಮೋಟರ್‍ಸೈಕಲ್ ಇಂತಹ ಸುಳ್ಳು ಪೋಸ್ಟ್ ಗಳನ್ನು ನಂಬದಂತೆ ಸಲಹೆ ನೀಡಿದೆ. ಗ್ರಾಹಕರಲ್ಲಿ ಭೀತಿ ಹಾಗೂ ಗೊಂದಲವನ್ನು ಸೃಷ್ಟಿಸುವುದು ಈ ರೀತಿಯ ಪೋಸ್ಟ್ ಗಳ ಹಿಂದಿರುವ ಏಕೈಕ ಉದ್ದೇಶ ಎಂದು ಕಂಪನಿ ಹೇಳಿದೆ.

ಜಾವಾ ಕಂಪನಿಯು ಈ ವಿಷಯದ ಬಗ್ಗೆ ತನಿಖೆ ನಡೆಸಿದ್ದು, ಆ ವ್ಯಕ್ತಿಯು ಗೊಂದಲ ಸೃಷ್ಟಿಸುವ ಉದ್ದೇಶದಿಂದ ಈ ರೀತಿಯಾಗಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ ಎಂದು ಹೇಳಿದೆ. ಇದರ ಪರಿಣಾಮವಾಗಿ, ಜಾವಾ ಕಂಪನಿಯು ಸೌರಭ್ ಯಾದವ್‍ರವರು ಮಾಡಿದ್ದ ಬುಕ್ಕಿಂಗ್ ಅನ್ನು ರದ್ದುಗೊಳಿಸಿದೆ.

ಜಾವಾ ಕಂಪನಿಯು ಈ ಪೋಸ್ಟ್ ನ ಮೇಲೆ ಕಮೆಂಟ್ ಮಾಡಿರುವುದು ಹಲವು ಗ್ರಾಹಕರನ್ನು ಗೊಂದಲಕ್ಕೀಡು ಮಾಡಿದೆ. ಕೆಲವು ಗ್ರಾಹಕರು ಇದೇ ರೀತಿಯ ಅನೇಕ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿರುವುದಾಗಿ ತಿಳಿಸಿದ್ದಾರೆ.

ಜಾವಾ ಬೈಕುಗಳ ವಿತರಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ಇಂತಹ ಸುಳ್ಳು ಪೋಸ್ಟ್ ಗಳನ್ನು ಮಾಡಲಾಗುತ್ತಿದೆ ಎಂದು ಹಲವರು ಹೇಳಿದ್ದಾರೆ. ಬೈಕುಗಳ ವಿತರಣೆಯನ್ನು ಸಮಯಕ್ಕೆ ಸರಿಯಾಗಿ ಮಾಡಿದ್ದರೆ, ಇಂತಹ ನಕಲಿ ಪೋಸ್ಟ್‌ಗಳು ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಜಾವಾ ಕಂಪನಿಗೆ ವಿವಾದಗಳು ಹೊಸತಲ್ಲ. ಈ ಹಿಂದೆಯೂ ಸಹ ಇದೇ ರೀತಿಯ ಹಲವಾರು ಘಟನೆಗಳು ನಡೆದಿದ್ದವು. ಕೆಲವು ತಿಂಗಳ ಹಿಂದೆ, ಜಾವಾ ಮಾಲೀಕರು ತಮ್ಮ ಜಾವಾ ಬೈಕಿನಲ್ಲಿ ತುಕ್ಕು ಹಿಡಿದಿರುವ ಭಾಗಗಳನ್ನು ತೋರಿಸುವ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದ್ದರು.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಆದರೆ, ಆ ಬೈಕಿಗೆ ನಿಜವಾಗಲೂ ತುಕ್ಕು ಹಿಡಿದಿತ್ತು. ಆ ಪೋಸ್ಟ್ ನ ನಂತರ ಸಮಸ್ಯೆಯನ್ನು ಸಂಬಂಧಪಟ್ಟ ಜಾವಾ ಡೀಲರ್ ಸರಿಪಡಿಸಿದ್ದರು. ಕಂಪನಿಯು ತನ್ನ 90ನೇ ವಾರ್ಷಿಕೋತ್ಸವದ ನೆನಪಿಗಾಗಿ ಸ್ಪೆಷಲ್ ಎಡಿಷನ್ ಬೈಕುಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಕಂಪನಿಯು ಈ ವಿಶೇಷ ಬೈಕುಗಳ 90 ಯುನಿಟ್‍ಗಳನ್ನು ತಕ್ಷಣವೇ ವಿತರಿಸುವುದಾಗಿ ಹೇಳಿದೆ. ಕೆಲವರು ಸಂತಸ ಪಟ್ಟರೂ, ಸುದೀರ್ಘ ಅವಧಿಯಿಂದ ಜಾವಾ ಬೈಕುಗಳನ್ನು ಬುಕ್ಕಿಂಗ್ ಮಾಡಿ ವಿತರಣೆಗಾಗಿ ಕಾಯುತ್ತಿರುವವರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಜಾವಾ ಕಂಪನಿಯು ಹೊಸದಾಗಿ ಮೂರು ಬೈಕುಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಈ ಸುದ್ದಿ ನಿಜವೋ ಸುಳ್ಳೋ ಎಂಬುದು ತಿಳಿದು ಬಂದಿಲ್ಲ. ಆದರೆ ಜಾವಾ ಮೋಟಾರ್‌ಸೈಕಲ್‌ನೊಂದಿಗಿನ ಅನುಭವದ ಕಾರಣ ಗ್ರಾಹಕರು ಈ ಸುದ್ದಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Source: Jawa Owners & Lovers/Facebook