ವರ್ಷಾಂತ್ಯಕ್ಕೆ ಕೆಟಿಎಂ ಬಿಎಸ್-6 ಬೈಕ್‌ಗಳ ಮಾರಾಟಕ್ಕೆ ಸಿಗಲಿದೆ ಭರ್ಜರಿ ಚಾಲನೆ

ಬಿಎಸ್-6 ನಿಯಮ ಜಾರಿಗೆ ದಿನಗಣನೆ ಶುರುವಾಗಿದ್ದು, ಹೊಸ ನಿಯಮ ಅನುಸಾರ ಕೆಟಿಎಂ ಸಂಸ್ಥೆಯು ಬಿಎಸ್-6 ಬೈಕ್ ಬಿಡುಗಡೆಯ ಸುಳಿವು ನೀಡಿದೆ. ಹಾಗಾದ್ರೆ ಹೊಸ ನಿಯಮದಿಂದಾಗಿ ಬೈಕ್ ಮಾರಾಟದಲ್ಲಿ ಯಾವೆಲ್ಲಾ ಬದಲಾವಣೆಗಳಾಗಲಿವೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ವರ್ಷಾಂತ್ಯಕ್ಕೆ ಕೆಟಿಎಂ ಬಿಎಸ್-6 ಬೈಕ್‌ಗಳ ಮಾರಾಟಕ್ಕೆ ಸಿಗಲಿದೆ ಭರ್ಜರಿ ಚಾಲನೆ

2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಈಗಾಗಲೇ ಹೊಸ ನಿಯಮ ಅನುಸಾರ ವಾಹನಗಳ ಮಾರಾಟವನ್ನು ಆರಂಭಿಸಲಾಗಿದೆ. ಆದರೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಜನವರಿ ಮತ್ತು ಫೆಬ್ರುವರಿ ಹೊತ್ತಿಗೆ ಬಿಎಸ್-6 ವಾಹನಗಳ ಮಾರಾಟಕ್ಕೆ ಚಾಲನೆ ನೀಡಲು ಸಜ್ಜಾಗುತ್ತಿದ್ದು, ಕೆಟಿಎಂ ಸಂಸ್ಥೆಯು ಸಹ ಮುಂದಿನ ತಿಂಗಳಿನಿಂದಲೇ ಬಿಎಸ್-6 ಬೈಕ್ ಮಾದರಿಗಳ ಮಾರಾಟವನ್ನು ಆರಂಭಿಸುವುದಾಗಿ ಹೇಳಿಕೊಂಡಿದೆ.

ವರ್ಷಾಂತ್ಯಕ್ಕೆ ಕೆಟಿಎಂ ಬಿಎಸ್-6 ಬೈಕ್‌ಗಳ ಮಾರಾಟಕ್ಕೆ ಸಿಗಲಿದೆ ಭರ್ಜರಿ ಚಾಲನೆ

ಬಿಎಸ್-6 ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನ ಮಾದರಿಗಳು ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್ ಪಡೆದುಕೊಳ್ಳಲಿದ್ದು, ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ವರ್ಷಾಂತ್ಯಕ್ಕೆ ಕೆಟಿಎಂ ಬಿಎಸ್-6 ಬೈಕ್‌ಗಳ ಮಾರಾಟಕ್ಕೆ ಸಿಗಲಿದೆ ಭರ್ಜರಿ ಚಾಲನೆ

ಹೊಸ ನಿಯಮದಿಂದ ವಾಹನಗಳ ಬೆಲೆಯಲ್ಲೂ ಕೂಡಾ ಹೆಚ್ಚಳವಾಗಲಿದ್ದು, ಇದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ. ಮಾಹಿತಿಗಳ ಪ್ರಕಾರ ಸದ್ಯ ಮಾರುಕಟ್ಟೆಯಲ್ಲಿನ ಬೆಲೆಗಿಂತ ಬಿಎಸ್-6 ಬೈಕ್‌ಗಳ ಬೆಲೆಯಲ್ಲಿ ರೂ.3 ಸಾವಿರದಿಂದ ರೂ.15 ಸಾವಿರ ತನಕ ದುಬಾರಿಯಾಗಲಿರವೆ.

ವರ್ಷಾಂತ್ಯಕ್ಕೆ ಕೆಟಿಎಂ ಬಿಎಸ್-6 ಬೈಕ್‌ಗಳ ಮಾರಾಟಕ್ಕೆ ಸಿಗಲಿದೆ ಭರ್ಜರಿ ಚಾಲನೆ

125 ಸಿಸಿ ಒಳಗಿನ ಸ್ಕೂಟರ್ ಮತ್ತು ಬೈಕ್ ಮಾದರಿಗಳ ಬೆಲೆಯು ರೂ.3 ಸಾವಿರದಿಂದ ರೂ.5 ಸಾವಿರ ತನಕ, 125 ಸಿಸಿಯಿಂದ 150ಸಿಸಿ ಸ್ಕೂಟರ್ ಮತ್ತು ಬೈಕ್‌ಗಳ ಬೆಲೆಯಲ್ಲಿ ರೂ.4 ಸಾವಿರದಿಂದ 6 ಸಾವಿರ, 150 ಸಿಸಿಯಿಂದ 200 ಸಿಸಿ ಒಳಗಿನ ಬೈಕ್‌ಗಳ ಬೆಲೆಯಲ್ಲಿ ರೂ. 5 ಸಾವಿರದಿಂದ ರೂ. 8 ಸಾವಿರ, 200ಸಿಸಿಯಿಂದ 350 ಸಿಸಿ ಬೈಕ್ ಮಾದರಿಗಳ ಬೆಲೆಯು ರೂ. 7 ಸಾವಿರ ರೂ.10 ಸಾವಿರ ಮತ್ತು 350 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳ ಬೆಲೆಯು ರೂ.8 ಸಾವಿರದಿಂದ ರೂ.15 ಸಾವಿರ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ವರ್ಷಾಂತ್ಯಕ್ಕೆ ಕೆಟಿಎಂ ಬಿಎಸ್-6 ಬೈಕ್‌ಗಳ ಮಾರಾಟಕ್ಕೆ ಸಿಗಲಿದೆ ಭರ್ಜರಿ ಚಾಲನೆ

ಕೆಟಿಎಂ ನಿರ್ಮಾಣದ ಬೈಕ್‌ಗಳು ಕೂಡಾ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಸಾಮಾನ್ಯ ಬೈಕ್‌ಗಳಿಂತಲೂ ತುಸು ದುಬಾರಿ ಎನ್ನಿಸಲಿದ್ದು, ಬಿಎಸ್-6 ಜಾರಿ ನಂತರ ರೂ.7 ಸಾವಿರ ರೂ.10 ಸಾವಿರ ತನಕ ಹೆಚ್ಚುವರಿ ದರ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ವರ್ಷಾಂತ್ಯಕ್ಕೆ ಕೆಟಿಎಂ ಬಿಎಸ್-6 ಬೈಕ್‌ಗಳ ಮಾರಾಟಕ್ಕೆ ಸಿಗಲಿದೆ ಭರ್ಜರಿ ಚಾಲನೆ

ಕೆಟಿಎಂ ಸದ್ಯ ಭಾರತದಲ್ಲಿ ಡ್ಯೂಕ್ 125, ಆರ್‌ಸಿ 125, ಡ್ಯೂಕ್ 200, ಆರ್‌ಸಿ 200, ಡ್ಯೂಕ್ 250, ಡ್ಯೂಕ್ 390, ಆರ್‌ಸಿ 390, ಡ್ಯೂಕ್ 790 ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಆನ್ ರೋಡ್ ಪ್ರಕಾರ ಆರಂಭಿಕ ಬೈಕ್ ಆವೃತ್ತಿಯು ರೂ. 1.43 ಲಕ್ಷದಿಂದ ಟಾಪ್ ಬೈಕ್ ಆವೃತ್ತಿಯು ರೂ.9.28 ಲಕ್ಷ ಬೆಲೆ ಹೊಂದಿದೆ.

MOST READ: ನಮ್ಮ ಬೆಂಗಳೂರಿನಲ್ಲಿ K-1000 ರ‍್ಯಾಲಿ- ಗೌರವ್ ಗಿಲ್ ಔಟ್, ಚೇತನ್ ಶಿವರಾಮ್ ಶೈನ್..!

ವರ್ಷಾಂತ್ಯಕ್ಕೆ ಕೆಟಿಎಂ ಬಿಎಸ್-6 ಬೈಕ್‌ಗಳ ಮಾರಾಟಕ್ಕೆ ಸಿಗಲಿದೆ ಭರ್ಜರಿ ಚಾಲನೆ

ಇತ್ತೀಚೆಗೆ ಬಿಡುಗಡೆಯಾಗಿರುವ ಡ್ಯೂಕ್ 790 ಬೈಕ್ ಸಹ ಬಿಎಸ್-4 ನಿಯಮ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದ್ದು, ಹೊಸ ಬೈಕ್ ಸಹ ಮುಂದಿನ ಕೆಲವೇ ದಿನಗಳಲ್ಲಿ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಣಗೊಳ್ಳಬೇಕಿದೆ.

MOST READ: ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಪಿಕ್ಅಪ್ ಟ್ರಕ್ ಅನಾವರಣ

ವರ್ಷಾಂತ್ಯಕ್ಕೆ ಕೆಟಿಎಂ ಬಿಎಸ್-6 ಬೈಕ್‌ಗಳ ಮಾರಾಟಕ್ಕೆ ಸಿಗಲಿದೆ ಭರ್ಜರಿ ಚಾಲನೆ

ಹೀಗಾಗಿ ಸದ್ಯ ಬಿಡುಗಡೆಯಾಗಬೇಕಿದ್ದ 390 ಅಡ್ವೆಂಚರ್ ಬೈಕ್ ಆವೃತ್ತಿಯ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿರುವ ಕೆಟಿಎಂ ಸಂಸ್ಥೆಯು ಬಿಎಸ್-6 ನಿಯಮದಂತೆಯೇ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

Most Read Articles

Kannada
Read more on ಕೆಟಿಎಂ ktm
English summary
KTM India Confirms Launch Of BS-VI Compliant Models From Next Month. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X