ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಒ‍‍ಟಿ‍ಒ ಕ್ಯಾಪಿಟಲ್ ದ್ವಿ ಚಕ್ರ ವಾಹನಗಳನ್ನು ಖರೀದಿಸ ಬಯಸುವವರಿಗೆ ಮೈ ಒ‍ಎಂ‍ಐ ಯೋಜನೆಯನ್ನು ಬಿಡುಗಡೆಗೊಳಿಸಿದೆ. ಒ‍ಎಂ‍ಐ ಅಂದರೆ ಒನರ್‍‍ಶಿಪ್ ಮಂತ್ಲಿ ಇನ್ಸ್ಟಾಲ್‍‍ಮೆಂಟ್. ಈ ಯೋಜನೆಯು ಚಂದಾದಾರಿಕೆಯಂತೆ ಕಂಡರೂ, ಅದಕ್ಕಿಂತ ಹೆಚ್ಚಾಗಿ ಸುಲಭವಾದ ಹಾಗೂ ವಿಸ್ತಾರವಾದ ಯೋಜನೆಯಾಗಿದೆ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಮೈ ಒ‍ಎಂ‍ಐ ಯೋಜನೆಯನ್ನು ಸದ್ಯಕ್ಕೆ ಬೆಂಗಳೂರು ಹಾಗೂ ಮುಂಬೈನಲ್ಲಿ ಬಿಡುಗಡೆಗೊಳಿಸಲಾಗಿದೆ. ಒ‍‍ಟಿ‍ಒ ಕ್ಯಾಪಿಟಲ್ ಶೀಘ್ರದಲ್ಲೇ ಈ ಯೋಜನೆಯನ್ನು ಹತ್ತು ನಗರಗಳಲ್ಲಿ ಬಿಡುಗಡೆಗೊಳಿಸಲಿದೆ. ಒ‍‍ಟಿ‍ಒ ಕಂಪನಿಯ ಪ್ರಕಾರ ಈ ಯೋಜನೆಯು ಸಂಕಷ್ಟದಲ್ಲಿರುವ ಆಟೋಮೊಬೈಲ್ ಉದ್ಯಮಕ್ಕೆ ಚೇತರಿಕೆ ನೀಡಲಿದೆ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಭಾರತದ ಆಟೋಮೊಬೈಲ್ ಉದ್ಯಮವು ಹಲವು ತಿಂಗಳುಗಳಿಂದ ಕುಸಿತವನ್ನು ಕಾಣುತ್ತಿದ್ದು, ವಾಹನಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಉಂಟಾಗಿದೆ. ಆಟೋಮೊಬೈಲ್ ಉದ್ಯಮದ ತಜ್ಞರ ಪ್ರಕಾರ, ಗ್ರಾಹಕರ ಖರೀದಿ ಭಾವನೆಗಳು ದುರ್ಬಲವಾಗಿರುವ ಕಾರಣಕ್ಕೆ, ಗ್ರಾಹಕರು ಹೊಸ ವಾಹನಗಳನ್ನು ಖರೀದಿಸಲು ಮುಂದಾಗುತ್ತಿಲ್ಲ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಬಿ‍ಎಸ್ 4 ಎಂಜಿನ್ ಹೊಂದಿರುವ ವಾಹನಗಳ ಬದಲಿಗೆ ಬಿ‍ಎಸ್ 6 ಎಂಜಿನ್‍ ವಾಹನಗಳನ್ನು ಬಿಡುಗಡೆಗೊಳಿಸುತ್ತಿರುವುದು ಹಾಗೂ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರುವ ಕಾರಣಕ್ಕೆ ಗ್ರಾಹಕರು ಹೊಸ ವಾಹನಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಒ‍‍ಟಿ‍ಒ ಕ್ಯಾಪಿಟಲ್ ಪ್ರಕಾರ, ಗ್ರಾಹಕರು ಹೊಸ ವಾಹನಗಳನ್ನು ಖರೀದಿಸದೇ ಇರುವುದಕ್ಕೆ ಮುಖ್ಯ ಕಾರಣವೆಂದರೆ, ಹೊಸ ವಾಹನಗಳನ್ನು ಖರೀದಿಸುವುದಕ್ಕೆ ಸುಲಭವಾಗಿ ಹಣಕಾಸಿನ ನೆರವು ದೊರಕದೇ ಇರುವುದು. ಈ ಕಾರಣಕ್ಕಾಗಿ ಮೈ ಒ‍ಎಂ‍ವೈ ವಿಭಿನ್ನವಾಗಿ ನಿಲ್ಲುತ್ತದೆ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಮೈ ಒ‍ಎಂ‍‍ವೈ ಯೋಜನೆಯನ್ನು ಹಲವಾರು ವರ್ಷಗಳ ಹಿಂದೆಯೇ ನಾಲ್ಕು ಚಕ್ರದ ವಾಹನಗಳ ಖರೀದಿಗಾಗಿ ಜಾರಿಗೊಳಿಸಲಾಗಿದೆ. ಈಗ ಇದೇ ಯೋಜನೆಯನ್ನು ದ್ವಿ ಚಕ್ರ ವಾಹನಗಳ ಮಾರುಕಟ್ಟೆಗೂ ವಿಸ್ತರಿಸಲಾಗುತ್ತಿದೆ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಸದ್ಯದ ಪರಿಸ್ಥಿತಿಯಲ್ಲಿ ಗ್ರಾಹಕರು ದ್ವಿ ಚಕ್ರ ವಾಹನ ಖರೀದಿಸಲು ಹಣಕಾಸಿನ ನೆರವು ಬಯಸಿದರೆ, ಬ್ಯಾಂಕ್ ಸಾಲ ಮಂಜೂರು ಮಾಡಬೇಕಾಗುತ್ತದೆ. ಸಾಲ ಮಂಜೂರಾಗಲು ಸಾಮಾನ್ಯವಾಗಿ 2 - 3ದಿನಗಳು ಬೇಕಾಗುತ್ತವೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಗ್ರಾಹಕನು ಡೌನ್‍ ಪೇಮೆಂಟ್ ಮಾಡಿದ ನಂತರ ಪ್ರತಿ ತಿಂಗಳು ನಿಗದಿಪಡಿಸಲಾದ ಬಡ್ಡಿ ದರದಲ್ಲಿ ಇ‍ಎಂ‍ಐಗಳನ್ನು ಪಾವತಿಸಬೇಕಾಗುತ್ತದೆ. ಆದರೆ ಬಡ್ಡಿ ದರವು ಹೆಚ್ಚಿನ ಪ್ರಮಾಣದಲ್ಲಿದೆ. ಮೈ ಒ‍ಎಂ‍ಐ ಯೋಜನೆಯು ಸಾಲ ಪಡೆಯುವ ಈ ವಿಧಾನವನ್ನೇ ಬದಲಿಸಲಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಒ‍‍ಟಿ‍ಒ ಕ್ಯಾಪಿಟಲ್‍‍ನಲ್ಲಿ ಗ್ರಾಹಕರು ಕಂಪನಿಯ ವೆಬ್‍‍ಸೈಟಿಗೆ ಲಾಗಿನ್ ಮಾಡಿ, ಸಂಬಂಧಪಟ್ಟ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ 30 ನಿಮಿಷದಲ್ಲಿ ಸಾಲ ಮಂಜೂರಾಗಲಿದೆ. ಇದರ ಜೊತೆಗೆ ಗ್ರಾಹಕರು ಯಾವುದೇ ಕಂಪನಿಯ ದ್ವಿ ಚಕ್ರ ವಾಹನಗಳ ಶೋರೂಂಗೆ ಭೇಟಿ ನೀಡಿ ತಾವು ಬಯಸುವ ದ್ವಿಚಕ್ರ ವಾಹನವನ್ನು ಆಯ್ಕೆ ಮಾಡಿಕೊಳ್ಳಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ನಂತರ ಒ‍‍ಟಿ‍ಒ ಕ್ಯಾಪಿಟಲ್‍‍ಗೆ ಆ ಡೀಲರ್ ಬಗ್ಗೆ ಮಾಹಿತಿಯನ್ನು ನೀಡಬೇಕು. ನಂತರ ಒ‍‍ಟಿ‍ಒ ಕ್ಯಾಪಿಟಲ್‍‍‍ನ ಪ್ರತಿನಿಧಿಗಳು ಆ ಡೀಲರ್ ಅನ್ನು ಸಂಪರ್ಕಿಸಿ, 30 ನಿಮಿಷದೊಳಗೆ ಸಾಲ ಮಂಜೂರು ಮಾಡುತ್ತಾರೆ. ಮೈ ಒ‍ಎಂ‍ಐ ಯೋಜನೆಯಲ್ಲಿ ಯಾವುದೇ ಡೌನ್‍ ಪೇಮೆಂಟ್ ಇರುವುದಿಲ್ಲ. ಬದಲಿಗೆ ವಾಹನದ ಬೆಲೆಯ 10%ನಷ್ಟು ಹಣವನ್ನು ಡೆಪಾಸಿಟ್ ಮಾಡಬೇಕಾಗುತ್ತದೆ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ವಾಹನದ ಡೆಲಿವರಿಯನ್ನು ಪಡೆದ ನಂತರ, ಗ್ರಾಹಕರು 1ರಿಂದ 3 ವರ್ಷಗಳ ಕಾಲ ಪ್ರತಿ ತಿಂಗಳು ಇ‍ಎಂ‍ಐ ಪಾವತಿಸಬೇಕಾಗುತ್ತದೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮೈ ಒ‍‍ಎಂ‍ಐ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಯು ಚಂದಾದಾರಿಕೆಯಂತೆ ಕಾಣುತ್ತದೆ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ನಿಗದಿ ಪಡಿಸಿರುವ ಅವಧಿಯು ಮುಗಿದ ನಂತರ ಮೈ ಒ‍ಎಂ‍ಐ ಯೋಜನೆಯ ವಿಭಿನ್ನತೆ ತಿಳಿಯಲಿದೆ. ಮರು ಪಾವತಿ ಅವಧಿ ಮುಗಿದ ನಂತರ ಗ್ರಾಹಕರಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗುತ್ತದೆ. ಗ್ರಾಹಕರು ತಾವು ಖರೀದಿಸಿದ್ದ ವಾಹನಗಳನ್ನು ಒ‍‍ಟಿ‍ಒ ಕ್ಯಾಪಿಟಲ್‍‍‍ಗೆ ಹಿಂತಿರುಗಿಸಿ, ಯಾವುದೇ ಜವಾಬ್ದಾರಿಯಿಲ್ಲದೇ ನಡೆಯಬಹುದು.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಅಥವಾ ಗ್ರಾಹಕರು ಈ ಯೋಜನೆಯನ್ನು ಅಪ್‍‍ಗ್ರೇಡ್ ಮಾಡಿಕೊಂಡು ಹೊಸ ವಾಹನವನ್ನು ಹೊಸ ಒ‍ಎಂ‍ಐ ಯೋಜನೆಯಲ್ಲಿ ಪಡೆಯಬಹುದು. ಗ್ರಾಹಕರು ಎಲ್ಲಾ ಸಾಲವನ್ನು ಒಂದೇ ಬಾರಿಗೆ ಪಾವತಿಸಬಹುದು ಅಥವಾ ದೊಡ್ಡ ಗಾತ್ರದ ಮೊತ್ತವನ್ನು ಮಾಸಿಕವಾಗಿ ಪಾವತಿಸಬಹುದು.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಒ‍‍ಟಿ‍ಒ ಕ್ಯಾಪಿಟಲ್‍ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ 30% ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ದ್ವಿಚಕ್ರ ವಾಹನಗಳನ್ನು ಖರೀದಿಸಲು ಸಾಲ ನೀಡುವುದಕ್ಕಾಗಿ ಕಂಪನಿಯು ಹಲವಾರು ಡೀಲರ್‍‍ಗಳ ಜೊತೆಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಯಾವುದಾದರೂ ಡೀಲರ್ ಅಥವಾ ಕಂಪನಿಯು ಈ ಸಹಭಾಗಿತ್ವದಲ್ಲಿ ಕಂಡು ಬರದಿದ್ದಲ್ಲಿ ಗ್ರಾಹಕರು ಒ‍‍ಟಿ‍ಒ ಕ್ಯಾಪಿಟಲ್‍‍‍ನ ಹೆಲ್ಪ್ ಲೈನ್ ನಂಬರಿಗೆ ಮಿಸ್ ಕಾಲ್ ಕೊಟ್ಟರೆ ಕಂಪನಿಯ ಪ್ರತಿನಿಧಿಗಳು ಸಾಲ ನೀಡಲು ಅಗತ್ಯವಿರುವ ಅಂಶಗಳನ್ನು ಪೂರೈಸುತ್ತಾರೆ. ಈ ವಿಭಿನ್ನವಾದ ಸಾಲದ ಯೋಜನೆಯ ಜೊತೆಗೆ ಒ‍‍ಟಿ‍ಒ ಕಂಪನಿಯು ಇನ್ಶೂರೆನ್ಸ್ ಹಾಗೂ ಮೆಂಟೆನೆನ್ಸ್ ಗಳನ್ನು ಸಹ ನೀಡುತ್ತದೆ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತವು ಪ್ರಪಂಚದ ಬಹುದೊಡ್ಡ ದ್ವಿಚಕ್ರ ವಾಹನಗಳ ಮಾರುಕಟ್ಟೆಯಾಗಿದೆ. ಭಾರತದಲ್ಲಿರುವ 50%ಗೂ ಹೆಚ್ಚಿನ ದ್ವಿಚಕ್ರ ವಾಹನಗಳನ್ನು ಸಾಲದ ಮೂಲಕವೇ ಖರೀದಿಸಲಾಗುತ್ತದೆ. ಆದರೆ ಈ ರೀತಿಯ ಸಾಲವು ಗ್ರಾಹಕರಿಗೆ ಸಾಲವನ್ನು ನೀಡಲು ಸಹಾಯ ಮಾಡುತ್ತವೆಯೇ ಹೊರತು, ವಾಹನಗಳ ಮೆಂಟೆನೆನ್ಸ್ ಗೆ ಯಾವುದೇ ನೆರವು ನೀಡುವುದಿಲ್ಲ.

ದ್ವಿಚಕ್ರ ವಾಹನ ಖರೀದಿಗೆ ಆಕರ್ಷಕ ಸಾಲ ಸೌಲಭ್ಯ ನೀಡಲಿದೆ ಒ‍‍ಟಿ‍ಒ..!

ಆ ವಾಹನಗಳ ಮರು ಮಾರಾಟದ ಭಾರವು ಗ್ರಾಹಕರನ ಮೇಲಿರಲಿದೆ. ಒ‍‍ಟಿ‍ಒ ಕ್ಯಾಪಿಟಲ್‍‍‍ನ ಮೈ ಒ‍ಎಂ‍ಐ ಯೋಜನೆಯಿಂದಾಗಿ ಗ್ರಾಹಕರು ನಿಶ್ಚಿಂತೆಯಿಂದಿರ ಬಹುದು. ಎರಡು ಮೂರು ವರ್ಷಗಳ ನಂತರ ಹೊಸ ದ್ವಿ ಚಕ್ರ ವಾಹನಗಳನ್ನು ಖರೀದಿಸ ಬಯಸುವವರಿಗೆ ಈ ಯೋಜನೆಯು ಹೇಳಿ ಮಾಡಿಸಿದಂತಿದೆ.

Most Read Articles

Kannada
English summary
OTO Capital Launches Smart Finance Options For Two-Wheeler Purchase - Read in kannada
Story first published: Thursday, September 26, 2019, 13:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X