ಇನ್ಮುಂದೆ ಬೈಕ್ ಚಲಾಯಿಸುತ್ತ ಹಾಡು ಕೇಳಿದರೂ ಬೀಳುತ್ತೆ ದಂಡ..!

ನಿಮ್ಮ ನೆಚ್ಚಿನ ಹಾಡುಗಳನ್ನು ಹೆಡ್‌ಫೋನ್‌ಗಳ ಮೂಲಕ ಕೇಳುತ್ತಾ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುವ ಯೋಜನೆಯಲ್ಲಿದ್ದರೆ, ಹುಷಾರಾಗಿರಿ. ಪೊಲೀಸರು ದಂಡ ವಿಧಿಸಬಹುದು. ಬೆಂಗಳೂರು, ಪುಣೆ ಸೇರಿದಂತೆ ದೇಶದ ವಿವಿಧ ನಗರಗಳ ಸಂಚಾರಿ ಪೊಲೀಸರು ಸವಾರಿ ಮಾಡುವಾಗ ಹೆಡ್‌ಫೋನ್ ಬಳಸುವ ದ್ವಿಚಕ್ರ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ದಂಡವನ್ನು ಪಡೆಯಲು ನೀವು ಪೋನ್‍‍ನಲ್ಲಿ ಮಾತನಾಡಬೇಕಾಗಿಲ್ಲ, ಸವಾರಿ ಮಾಡುವಾಗ ಸಂಗೀತವನ್ನು ಕೇಳುತ್ತಿದ್ದರೆ ಸಾಕು ನಿಮಗೆ ದಂಡ ವಿಧಿಸಲಾಗುವುದು.

ಇನ್ಮುಂದೆ ಬೈಕ್ ಚಲಾಯಿಸುತ್ತ ಹಾಡು ಕೇಳಿದರೂ ಬೀಳುತ್ತೆ ದಂಡ..!

ಗಾಡಿ ಚಲಾಯಿಸುತ್ತಾ ಹಾಡು ಕೇಳುವ ದ್ವಿಚಕ್ರ ವಾಹನ ಚಾಲಕರಿಗೆ 1,000 ರೂ. ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರಿ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಹೊಸ ಅಧಿಸೂಚನೆ ಹೊರಡಿಸಿದ್ದಾರೆ. ಬೆಂಗಳೂರು ಸಂಚಾರಿ ವಿಭಾಗದ ಉಸ್ತುವಾರಿ ವಹಿಸಿರುವ ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಬೆಂಗಳೂರು ಮಿರರ್‌ಗೆ ಮಾಹಿತಿ ನೀಡಿದ್ದಾರೆ.

ಇನ್ಮುಂದೆ ಬೈಕ್ ಚಲಾಯಿಸುತ್ತ ಹಾಡು ಕೇಳಿದರೂ ಬೀಳುತ್ತೆ ದಂಡ..!

ಇಯರ್‌ಫೋನ್‌ಗಳು ಮತ್ತು ಹೆಡ್‌ಫೋನ್‌ಗಳು ಕಿವಿಗಳನ್ನು ಮುಚ್ಚುತ್ತವೆ, ಇದರಿಂದಾಗಿ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಸವಾರಿ ಮಾಡುವಾಗ ಸಂಗೀತ ಕೇಳುವುದು ಹಾಗೂ ಮಾತನಾಡುವುದು ಎರಡೂ ಸಂಚಾರ ನಿಯಮಗಳ ಉಲ್ಲಂಘನೆಯಾಗಲಿದೆ. ಕಿವಿಗಳನ್ನು ಮುಚ್ಚದ ಕಾರಣಕ್ಕೆ ಕಾರುಗಳಲ್ಲಿ ಸಂಗೀತವನ್ನು ಕೇಳಲು ಅನುಮತಿ ನೀಡಲಾಗಿದೆ ಎಂದು ಸಂಚಾರಿ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಇಯರ್‌ಫೋನ್‌ಗಳನ್ನು ಬಳಸಿ ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಲಿದ್ದಾರೆ.

ಇನ್ಮುಂದೆ ಬೈಕ್ ಚಲಾಯಿಸುತ್ತ ಹಾಡು ಕೇಳಿದರೂ ಬೀಳುತ್ತೆ ದಂಡ..!

ಯಾವುದೇ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಇ-ಚಲನ್ ಕಳುಹಿಸಲಾಗುವುದು. ಹೊಸ ನಿಯಮದಿಂದಾಗಿ ದಿನನಿತ್ಯ ಸ್ಕೂಟರ್‌ ಹಾಗೂ ಬೈಕುಗಳಲ್ಲಿ ಓಡಾಡುವವರಿಗೆ ಕಷ್ಟವಾಗಲಿದೆ. ಏಕೆಂದರೆ ಅವರು ಹೆಡ್‌ಫೋನ್‌ಗಳನ್ನು ನಿಯಮಿತವಾಗಿ ಫೋನ್ ಕರೆಗಳನ್ನು ತೆಗೆದುಕೊಳ್ಳಲು ಹಾಗೂ ಗಾಡಿ ಚಲಿಸುವಾಗ ಸಂಗೀತವನ್ನು ಕೇಳಲು ಬಳಸುತ್ತಾರೆ. ಗಮನಿಸಬೇಕಾದ ಸಂಗತಿಯೆಂದರೆ ಬೆಂಗಳೂರು ನಗರದಲ್ಲಿ ಮಾತ್ರ ಈ ರೀತಿಯಾಗಿ ದಂಡವನ್ನು ವಿಧಿಸುತ್ತಿಲ್ಲ.

ಇನ್ಮುಂದೆ ಬೈಕ್ ಚಲಾಯಿಸುತ್ತ ಹಾಡು ಕೇಳಿದರೂ ಬೀಳುತ್ತೆ ದಂಡ..!

ಪುಣೆಯಲ್ಲಿಯೂ ಸಹ ಹೆಡ್‍‍ಫೋನ್‍‍ಗಳನ್ನು ಬಳಸಿ ನಿಯಮ ಉಲ್ಲಂಘಿಸುತ್ತಿರುವ ದ್ವಿಚಕ್ರ ವಾಹನ ಚಾಲಕರಿಗೆ ದಂಡ ವಿಧಿಸಲು ಪುಣೆ ಸಂಚಾರಿ ಪೊಲೀಸರು ಇದೇ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಪುಣೆ ಪೊಲೀಸರು ಹೆಡ್‍‍ಫೋನ್‍‍ಗಳನ್ನು ಕಿವಿಯಲ್ಲಿಟ್ಟುಕೊಂಡು ಚಾಲನೆ ಮಾಡುವ ಸವಾರರು ಕಂಡು ಬಂದಲ್ಲಿ ಅಂತಹ ಸವಾರರನ್ನು ನಿಲ್ಲಿಸಿ, ಅವರು ಸಂಗೀತವನ್ನು ಕೇಳುತ್ತಿದ್ದಾರೆಯೇ ಎಂದು ಪರೀಕ್ಷಿಸುತ್ತಿದ್ದಾರೆ. ಆದರೆ, ಪುಣೆಯ ನಗರ ಸಂಚಾರ ಪೊಲೀಸರು ಪುಣೆಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಇನ್ನೂ ಪ್ರಾರಂಭಿಸಿಲ್ಲ.

ಹೊಸ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೊದಲು ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಬಗ್ಗೆ ಸವಾರರಲ್ಲಿ ಜಾಗೃತಿ ಮೂಡಿಸುವುದಾಗಿ ಪುಣೆ ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಪುಣೆ ಶಾಸಕರು ನಡೆಸಿದ ಸಭೆಯ ನಂತರ ಪುಣೆ ಸಂಚಾರ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ವಸತಿ ಪ್ರದೇಶಗಳಲ್ಲಿ ಹಾಗೂ ನಗರ ರಸ್ತೆಗಳಲ್ಲಿ ಹೆಲ್ಮೆಟ್ ರಹಿತ ಸವಾರಿ ಮಾಡಲು ಅವಕಾಶ ನೀಡಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಇನ್ಮುಂದೆ ಬೈಕ್ ಚಲಾಯಿಸುತ್ತ ಹಾಡು ಕೇಳಿದರೂ ಬೀಳುತ್ತೆ ದಂಡ..!

ಕೊಲ್ಕತ್ತಾ ಸಂಚಾರಿ ಪೊಲೀಸರು ಸಹ ಕಳೆದ ವರ್ಷ ಈ ರೀತಿಯ ಅಭಿಯಾನವನ್ನು ಶುರು ಮಾಡಿದ್ದರು. ಹೆಲ್ಮೆಟ್‍‍ನ ಕೆಳಗೆ ಮೊಬೈಲ್ ಬಳಸಿದ್ದಕ್ಕಾಗಿ ಅನೇಕ ಸವಾರರಿಗೆ ದಂಡ ವಿಧಿಸಿದ್ದರು. ಅಂತಹ ಸವಾರರಿಗೆ ದಂಡ ವಿಧಿಸಲು ಕೋಲ್ಕತಾ ಪೊಲೀಸರು ಕಠಿಣ ಕಾನೂನನ್ನು ಜಾರಿಗೆ ತಂದಿದ್ದಾರೆ. ಇತ್ತೀಚಿಗೆ ಕೇರಳ ಪೊಲೀಸರು ಮೊಬೈಲ್‍‍ನಲ್ಲಿ ಮಾತನಾಡಲು ಹ್ಯಾಂಡ್ಸ್ ಫ್ರೀ ಬಳಸುವ ಕಾರು ಚಾಲಕರಿಗೆ ದಂಡ ವಿಧಿಸುವ ಅಧಿಸೂಚನೆ ಹೊರಡಿಸಿದ್ದಾರೆ. ಸಂಗೀತ ಕೇಳುವ ಕಾರು ಚಾಲಕರಿಗೆ ದಂಡ ವಿಧಿಸಲಾಗುವುದಿಲ್ಲ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

ಇನ್ಮುಂದೆ ಬೈಕ್ ಚಲಾಯಿಸುತ್ತ ಹಾಡು ಕೇಳಿದರೂ ಬೀಳುತ್ತೆ ದಂಡ..!

ಭವಿಷ್ಯದಲ್ಲಿ ಬ್ಲೂಟೂತ್ ಹೆಡ್‌ಸೆಟ್‌ಗಳನ್ನು ಹೊಂದಿ ಈ ರೀತಿಯ ಉಲ್ಲಂಘನೆಗಳನ್ನು ಮಾಡುವ ಸವಾರರನ್ನು ಪೊಲೀಸರು ಹೇಗೆ ಪರಿಶೀಲಿಸಲಿದ್ದಾರೆ ಎಂದು ತಿಳಿದು ಬಂದಿಲ್ಲ. ಇಯರ್‌ಫೋನ್‌ಗಳ ಮೂಲಕ ಸಂಗೀತ ಕೇಳುತ್ತಾ ಗಾಡಿ ಚಲಾಯಿಸುವ ಸವಾರನು ತನ್ನ ಸುತ್ತಮುತ್ತಲಿನ ಶಬ್ದವನ್ನು ಕೇಳಲು ಸಾಧ್ಯವಾಗುವುದಿಲ್ಲ. ಅದು ಹತ್ತಿರದಲ್ಲಿರುವ ವಾಹನವೇ ಆಗಿರಬಹುದು ಅಥವಾ ಇತರ ವಾಹನಗಳ ಶಬ್ದವಾಗಿರಬಹುದು. ಸವಾರಿ ಮಾಡುವಾಗ ಬೇರೆ ವಾಹನಗಳ ಶಬ್ದವನ್ನು, ಹಾರ್ನ್‍‍ಗಳನ್ನು ಕೇಳದಿರುವುದು ದೊಡ್ಡ ಸಮಸ್ಯೆಯಾಗಬಹುದು.

ಇನ್ಮುಂದೆ ಬೈಕ್ ಚಲಾಯಿಸುತ್ತ ಹಾಡು ಕೇಳಿದರೂ ಬೀಳುತ್ತೆ ದಂಡ..!

ಲೇನ್ ನಿಯಮಗಳನ್ನು ಹಾಗೂ ಇತರ ಪ್ರಮುಖ ನಿಯಮಗಳನ್ನು ಪಾಲಿಸದ ಹೆಚ್ಚಿನ ವಾಹನ ಚಾಲಕರ ಸ್ವಭಾವದಿಂದಾಗಿ ಭಾರತೀಯ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಹೆಚ್ಚಿನ ಮಟ್ಟದ ಏಕಾಗ್ರತೆಯ ಅಗತ್ಯವಿದೆ. ಗಾಡಿ ಚಲಾಯಿಸುವಾಗ ಹಾಡುಗಳನ್ನು ಕೇಳುವ ಹಾಗೂ ಮೊಬೈಲ್‍‍ನಲ್ಲಿ ಮಾತನಾಡುವ ವಾಹನ ಸವಾರರು ವಾಹನಗಳ ಹಾರ್ನ್‍‍ಗಳಿಗಾಗಲಿ ಹಾಗೂ ಇನ್ನಿತರ ಶಬ್ದಗಳಿಗಾಗಲಿ ಪ್ರತಿಕ್ರಿಯಿಸುವುದಿಲ್ಲ. ತಮ್ಮ ಸುತ್ತಲಿನ ಶಬ್ದವನ್ನು ಅವರು ಕೇಳದ ಕಾರಣ ಅನಾಹುತಗಳಾಗುವ ಸಾಧ್ಯತೆಗಳಿರುತ್ತವೆ.

ಇನ್ಮುಂದೆ ಬೈಕ್ ಚಲಾಯಿಸುತ್ತ ಹಾಡು ಕೇಳಿದರೂ ಬೀಳುತ್ತೆ ದಂಡ..!

ಇದು ಅಪಘಾತಗಳಿಗೂ ಕಾರಣವಾಗಲಿದೆ. ಈ ನಿಯಮವನ್ನು ಕಾರು ಚಾಲಕರಿಗೂ ಅನ್ವಯವಾಗುವಂತೆ ಜಾರಿಗೊಳಿಸಬೇಕು. ಕಾರು ಚಾಲನೆ ಮಾಡುವಾಗ ಹಾಡು ಕೇಳುವ ಕಾರು ಚಾಲಕರಿಗೆ ದಂಡ ವಿಧಿಸಲಾಗುವುದಿಲ್ಲ ಎನ್ನುವ ಸಂಚಾರಿ ಪೊಲೀಸರ ನಿಯಮ ಸರಿಯಲ್ಲ. ಕಾರನ್ನು ಚಾಲನೆ ಮಾಡುವಾಗ ಸಂಗೀತವನ್ನು ಕೇಳುವುದರಿಂದಲೂ ಸಹ ಚಾಲಕರ ಗಮನ ಬೇರೆ ಕಡೆಗೆ ಹೋಗಲಿದೆ.

ಇನ್ಮುಂದೆ ಬೈಕ್ ಚಲಾಯಿಸುತ್ತ ಹಾಡು ಕೇಳಿದರೂ ಬೀಳುತ್ತೆ ದಂಡ..!

ವಾಹನ ಚಾಲನೆ ಮಾಡುವಾಗ ಅಥವಾ ಸವಾರಿ ಮಾಡುವಾಗ ಸಹ ಪ್ರಯಾಣಿಕರೊಂದಿಗೆ ಮಾತನಾಡುವುದರಿಂದ, ನೀರು ಕುಡಿಯುವುದರಿಂದ, ತಿನ್ನುವುದರಿಂದ ವಾಹನ ಚಾಲಕರ ಗಮನವು ಬೇರೆಡೆಗೆ ಸಾಗಲಿದೆ. ಕಾನೂನು ಮಾಡುವವರು ಯಾವುದೋ ಒಂದು ಸಂಗತಿಯತ್ತ ಮಾತ್ರ ಗಮನ ಹರಿಸಿ ದಂಡ ವಿಧಿಸುವ ಮೊದಲು ಈ ಸಂಗತಿಗಳ ಮೇಲೆಯೂ ಗಮನಹರಿಸಿ ನಿಯಮಗಳನ್ನು ರೂಪಿಸಬೇಕಾಗಿದೆ.

Image Source: Punemirror

Most Read Articles

Kannada
English summary
Love listening to music while riding? Get ready to pay Rs. 1,000 FINE! - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X