ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

ಹೋಂಡಾ ಆಕ್ಟೀವಾ ದೇಶದಲ್ಲಿನ ಅತ್ಯಂತ ಜನಪ್ರೀಯ ಸ್ಕೂಟರ್ ಆಗಿದ್ದು, ಪ್ರತೀ ತಿಂಗಳು ಮಾರಾಟವಾದ ಟಾಪ್ 10 ಬೆಸ್ಟ್ ಸೆಲ್ಲಿಂಗ್ ಸ್ಕೂಟರ್‍‍ಗಳಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಆಕ್ಟೀವಾ 5ಜಿ ಸ್ಕೂಟರ್ ಅನ್ನು ಮಾರಾಟ ಮಾದುತ್ತಿರುವ ಹೋಂಡಾ ಸಂಸ್ಥೆಯು, ಮುಂದಿನ ಕೆಲವೇ ದಿನಗಳಲ್ಲಿ ಆಕ್ಟೀವಾ 6ಜಿ ಸ್ಕೂಟರ್ ಅನ್ನು ಪರಿಚಯಿಸುತ್ತಿದೆ.

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

ಏಪ್ರಿಲ್ 2020ರಿಂದ ಜಾರಿಯಾಗಲಿರುವ ಹೊಸ ಎಮಿಷನ್ ನಿಯಮಾವಳಿಗಳ ಮುನ್ನವೇ ಹೋಂಡಾ ಸಂಸ್ಥೆಯು ತಮ್ಮ ಆಕ್ಟೀವಾ 6ಜಿ ಸ್ಕೂಟರ್ ಆನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಈಗಾಗಲೇ ಎಂಜಿನ್ ಕಾರ್ಯಕ್ಷಮತೆಯ ಕುರಿತಾಗಿ ದೇಶದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ರಶ್‍ಲೇನ್ ವರದಿ ಪ್ರಕಾರ ಹಲವರು ವಿಶೇಷತೆಗಳನ್ನು ಮತ್ತು ಹೊಸ ಎಂಜಿನ್ ಅನ್ನು ಹೊತ್ತು ಬರಲಿರುವ ಹೋಂಡಾ ಆಕ್ಟೀವಾ 6ಜಿ ಸ್ಕೂಟರ್‍ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ನಿಮಗೇ ತಿಳಿಸಲಿದ್ದೇವೆ.

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

1. ಹೊಸ ಕನೆಕ್ಟಿವಿಟಿ ಫೀಚರ್

ಮಾಹಿತಿಗಳ ಪ್ರಕಾರ ಹೋಂಡಾ 6ಜಿ ಸ್ಕೂಟರ್ ಸ್ಮಾರ್ಟ್‍‍ಫೋನ್ ಕನೆಕ್ಟಿವಿಯನ್ನು ಸಪೋರ್ಟ್ ಮಾಡುವ ಅಡ್ವಾನ್ಸ್ಡ್ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯಲಿದೆ. ಈ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಟರ್ನ್ ನ್ಯಾವಿಗೇಷನ್ ಮತ್ತು ಟಿವಿಎಸ್ ಎನ್‍ಟಾರ್ಕ್ ಸ್ಕೂಟರ್‍‍ನಲ್ಲಿ ಕಾಣಬಹುದಾದ ಹಾಗೆ ಕಾಲ್ ಕೆನೆಕ್ಟಿವಿಟಿ ಫೀಚರ್ ಅನ್ನು ಸಹ ಪಡೆದುಕೊಳ್ಳಲಿದೆಯಂತೆ.

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

2. ನವೀಕರಿಸಲಾದ ಸಸ್ಪೆನ್ಷನ್ ಸಿಸ್ಟಂ

ಹೋಂಡಾ ಆಕ್ಟೀವಾ ಸ್ಕೂಟರ್ ಕ್ಲಾಸಿಕ್ ವಿನ್ಯಾಸವನ್ನು ಪಡೆದುಕೊಂಡಿರುವ ಸ್ಕೂಟರ್‍‍ಗಳಗಿದ್ದು, ಬಹು ಪ್ರಾಚೀನದಿಂದ ಒಂದೇ ಮಾದರಿಯ ಸಸ್ಪೆನ್ಷನ್ ಅನ್ನು ಎಲ್ಲಾ ಮಾದರಿಗಳಲ್ಲಿ ಪಡೆಯುತ್ತಾ ಬಂದಿದೆ. ಆದರೆ ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಅಕ್ಟೀವಾ 6ಜಿ ಸ್ಕೂಟರ್‍‍ನಲ್ಲಿ ಈ ಬಾರಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಅನ್ನು ಪಡೆಯಲಿದ್ದು, ಸ್ಕೂಟರ್‍‍ನ ನಿಭಾಯಿಸಲು ಮತ್ತು ಚಾಲನಾ ಅನುಭವವನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ.

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

3. ಮರುವಿನ್ಯಾಸ ಮಾಡಲಾದ ಸ್ಟೈಲ್

ಹೊಸ ಆಕ್ಟೀವಾ 6ಜಿ ಸ್ಕೂಟರ್‍‍ನಲ್ಲಿ ಮರುವಿನ್ಯಾಸ ಮಾಡಲಾದ ಎಲ್ಇಡಿ ಹೆಡ್‍ಲ್ಯಾಂಪ್ ಮತ್ತು ವಿಶೇಷವಾದ ಎಲ್ಇಡಿ ಡಿಆರ್‍ಎಲ್ ಅನ್ನು ಪಡೆಯಲಿದ್ದು, ಹೊಸ ಗ್ರಾಫಿಕ್ಸ್ ಅನ್ನು ಒಳಗೊಂಡಂತೆಗೆ ಮುಂಭಾಗದಲ್ಲಿ ಚೂಪಾದ ವಿನ್ಯಾಸ, ಫ್ರಂಟ್ ಏಪ್ರಾನ್ ಮತ್ತು ಇಂಟಿಗ್ರೆಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಪಡೆದುಕೊಳ್ಳಲಿದೆ. ಇವುಗಳ ಜೊತೆಗೆ ಈ ಸ್ಕೂಟರ್ ಅಪ್ಡೇಟೆಡ್ ಟೈಲ್‍ಲ್ಯಾಂಪ್ ಅನ್ನು ಸಹ ಪಡೆದುಕೊಳ್ಳಲಿದೆಯಂತೆ.

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

4 ನವೀಕರಿಸಲಾದ ಬಿಎಸ್-6 ಎಂಜಿನ್

ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಹೊಸ ಹೋಂಡಾ ಆಕ್ಟೀವಾ 6ಜಿ ಸ್ಕೂಟರ್‍‍ಗಳು ಈ ಬರಿ 110ಸಿಸಿ ಏರ್‍ ಕೂಲ್ಡ್ ಎಂಜಿನ್ ಅನ್ನು ಪಡೆಯಬಹುದಾಗಿದ್ದು, ಹೊಸ ಎಂಜಿನ್ ಹೋಂಡಾ ಸಂಸ್ಥೆಯ ಐಡೆಲಿಂಗ್ ಸ್ಟಾಪಿಂಗ್ ಸಿಸ್ಟಂ ಹಾಗು ಫ್ಯುಯೆಲ್ ಇಂಜೆಕ್ಷನ್ ಸಿಸ್ಟಂ ಅನ್ನು ಸಹ ಪಡೆದುಕೊಳ್ಳಲಿದೆ. ದೀರ್ಘಕಾಲದ ಟ್ರಾಫಿಕ್ ಸಮಯಗಳಾಲ್ಲಿ ಈ ಟೆಕ್ನಾಲಜಿಯು ಸಹಕಾರಿಯಾಗಿದ್ದು, ಸ್ಕೂಟರ್‍‍ನ ಮೈಲೇಜ್ ವಿಚಾರದಲ್ಲಿ ಇದು ತಪ್ಪದೆಯಾಗಿ ಸಹಕರಿಸುತ್ತದೆ.

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

5. ಉತ್ತಮ ಬ್ರೇಕಿಂಗ್ ಸಾಮರ್ಥ್ಯ

ಹೋಂಡಾ ಸಂಸ್ಥೆಯು ತಮ್ಮ ಆಕ್ಟೀವಾ 6ಜಿ ಸ್ಕೂಟರ್‍‍ನ ಟಾಪ್ ಸ್ಪೆಕ್ ವೇರಿಯೆಂಟ್‍‍ನಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದ್ದು, ಇದು ಸ್ಕೂಟರ್‍‍ನ ಒಟ್ಟಾರೆಯ ಬ್ರೇಕಿಂಗ್ ಪರ್ಫಾರ್ಮೆನ್ಸ್ ಅನ್ನು ಹೆಚ್ಚುಗೊಳಿಸುತ್ತದೆ. ಇದಲ್ಲದೆಯೆ ರೈಡರ್‍‍ಗಳ್ ಸುರಕ್ಷತೆಗಾಗಿ ಈ ಸ್ಕೂಟರ್‍‍ನಲ್ಲಿ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಸಹ ನೀಡಲಾಗುತ್ತದೆ.

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

ಇದಲ್ಲದೆಯೆ ಹೋಂಡಾ ಸಂಸ್ಥೆಯು ಬಿಎಸ್-6 ಎಂಜಿನ್ ಆಧಾರಿತ ಆಕ್ಟೀವಾ 125ಸಿಸಿ ಸ್ಕೂಟರ್‍ ಅನಾವರಣಗೊಳಿಸಿದ್ದು, ಅನಾವರಣಗೊಂಡ ಬಿಎಸ್‍-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ 125 ಸ್ಕೂಟರ್‍‍ನಲ್ಲಿ ಈ ಬಾರಿ ಇಂಧನವನ್ನು ಉಳಿಸಲು ಹೊಸ ಪದ್ದತಿಯನ್ನು ಅಳವಡಿಸಲಾಗಿದ್ದು, ಇದರಲ್ಲಿ ಹೊಸದಾಗಿ ನೀಡಿದ ಐಡಲಿಂಗ್ ಸ್ಟಾಪ್ ಸಿಟಂ ಟ್ರಾಫಿಕ್ ಸಮಯದಲ್ಲಿ ನಿಮ್ಮ ಇಂಧನವನ್ನು ಉಳಿಸುವಲ್ಲಿ ಸಹಕರಿಸುತ್ತದೆ.

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

ಹೊಸ ಹೋಂಡಾ 125 ಸ್ಕೂಟರ್‍‍ನ ಅಂದವನ್ನು ಹೆಚ್ಚಿಸಲು ಸ್ಕೂಟರ್‍‍ನ ಬಹುತೇಕ ಭಾಗಗಳಲ್ಲಿ ಕ್ರೋಮ್ ಅನ್ನು ನೀಡಲಾಗಿದ್ದು, ಎಲ್ಇಡಿ ಹೈಡ್‍ಲೈಟ್ ಹಾಗು ರಿಫ್ಲೆಕ್ಟರ್, ಟಾರ್ಕ್ ರಿಸೀವರ್, ಏಕ್ಸ್ಟರ್ನಲ್ ಫ್ಯುಯೆಲ್ ಲಿಡ್, ಮರು ವಿನ್ಯಾಸ ಮಾಡಲಾದ ರಿಯರ್ ಡಿಸೈನ್, ರಿಫ್ಲೆಕ್ಟರ್ ಫೆಂಡರ್, ಹೈ ಎಫಿಶಿಯೆನ್ಸಿ ಇಂಟೇಕ್ ಸ್ಟ್ರಕ್ಚರ್ ಒಳಗೊಂಡಂತೆ ಇನ್ನು ಹಲವಾರು ಗುರುತರ ಬದಲಾವಣೆಗಳನ್ನು ಕಾಣಬಹುದಾಗಿದೆ.

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

ಹಾಗೆಯೆ ಇವುಗಳ ಜೊತೆಗೆ ಈ ಸ್ಕೂಟರ್‍‍ನಲ್ಲಿ ಈ ಬಾರಿ ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಎಂಜಿನ್ ಇನ್‍ಹಿಬಿಟರ್, ರಿಯಲ್ ಟೈಮ್ ಮಾಹಿತಿ, ಫ್ಯುಯೆಲ್ ಎಕಾನಮಿ ಮತ್ತು ಎಷ್ಟು ದೂರ ಚಲಿಸಿದ್ದೀರ ಎಂದು ತೋರಿಸುವ ಹೊಸ ಸೆಮಿ ಡಿಜಿಟನ್ ಇಸ್ಟ್ರೂಮೆಂಟ್ ಕಂಸೋಲ್ ಅನ್ನು ನೀಡಲಾಗಿದೆ.

ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಬಗ್ಗೆ ತಿಳಿಯಬೇಕಾದ ಟಾಪ್ 5 ಸಂಗತಿಗಳಿವು

ಎಂಜಿನ್ ಸಾಮರ್ಥ್ಯ

ಮಾಹಿತಿಗಳ ಪ್ರಕಾರ ಅನಾವರಣಗೊಂಡ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಅಕ್ಟೀವಾ ಫ್ಯುಯೆಲ್ ಇಂಜೆಕ್ಟೆಡ್ 125 ಸ್ಕೂಟರ್ 125ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 8.4 ಬಿಹೆಚ್‍ಪಿ ಮತ್ತು 10.54 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

Most Read Articles

Kannada
English summary
Top 5 Things To Know About upcoming Honda Activa 6G
Story first published: Saturday, June 15, 2019, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X