ಭಾರತದ ಟಾಪ್ 5 ಆಟೋಮ್ಯಾಟಿಕ್ ಸ್ಕೂಟರ್‍ಗಳಿವು
ದೇಶಿಯ ಮಾರುಕಟ್ಟೆಯ ಸ್ಕೂಟರ್ ಸೆಗ್‍ಮೆಂಟ್ ಹೆಚ್ಚು ಬೆಳವಣಿಗೆಯನ್ನು ದಾಖಲಿಸುತ್ತಿದೆ. ಹೋಂಡಾ ಕಂಪನಿಯು ಗೇರ್ ಲೆಸ್ ತಂತ್ರಜ್ಞಾನದ ಆಕ್ಟಿವಾ ಸ್ಕೂಟರ್ ಬಿಡುಗಡೆಗೊಳಿಸಿದ ನಂತರ ಸ್ಕೂಟರ್ ಸೆಗ್‍ಮೆಂಟ್ ಹೆಚ್ಚು ಪ್ರಗತಿಯನ್ನು ದಾಖಲಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಸ್ಕೂಟರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗಿವೆ. ಈ ಸ್ಕೂಟರ್‍ಗಳು ಗೇರ್‌ಲೆಸ್ ಗೇರ್‌ಬಾಕ್ಸ್ ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ದೊರೆಯುತ್ತಿವೆ. ಈ ಸ್ಕೂಟರ್‍ಗಳು ಒಳ್ಳೆಯ ಮೈಲೇಜ್ ನೀಡುವುದಾಗಿ ಹೇಳಲಾಗಿದೆ. 2019ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿರುವ ಟಾಪ್ 5 ಆಟೋಮ್ಯಾಟಿಕ್ ಸ್ಕೂಟರ್‍ಗಳ ಬಗ್ಗೆ ನೋಡೋಣ.

ಹೀರೋ ಡೆಸ್ಟಿನಿ 125
ಭಾರತದ ಎಕ್ಸ್ ಶೋರೂಂ ದರದಂತೆ ರೂ.54,650 ರಿಂದ ರೂ.57,500 ಬೆಲೆಯನ್ನು ಹೊಂದಿರುವ ಹೀರೋ ಡೆಸ್ಟಿನಿ 125 ಸ್ಕೂಟರ್ ಅನ್ನು ಎಲ್ಎಕ್ಸ್ ಹಾಗೂ ವಿಎಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸ್ಕೂಟರ್ ಸುಸಜ್ಜಿತವಾದ ಹೀರೊ ಐ3 ಎಸ್ ಸಿಸ್ಟಂ ಹೊಂದಿದೆ. ಈ ಸ್ಕೂಟರ್‍ನಲ್ಲಿರುವ 125 ಸಿಸಿಯ ಎಂಜಿನ್ 10.2 ಎನ್ಎಂ ಟಾರ್ಕ್ ಹಾಗೂ 8.7 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಸುಜುಕಿ ಆಕ್ಸೆಸ್ 125
ಮಿತವ್ಯಯದ ಆಟೋಮ್ಯಾಟಿಕ್ ಸ್ಕೂಟರ್ ಖರೀದಿಸ ಬಯಸುವವರು ಈ ಸ್ಕೂಟರ್ ಅನ್ನು ಖರೀದಿಸಬಹುದು. ಈ ಸ್ಕೂಟರ್‍ನ ಬೆಲೆಯು ಭಾರತದ ಎಕ್ಸ್ ಶೋ ರೂಂ ದರದಂತೆ ರೂ.55,459ಗಳಿಂದ ರೂ.59,118ಗಳಾಗಿದೆ. ಈ ಸ್ಕೂಟರ್‍ನಲ್ಲಿ 124 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್‌ಯಿದ್ದು, ಈ ಎಂಜಿನ್ 8.6 ಬಿಹೆಚ್‍ಪಿ ಹಾಗೂ 10.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸಸ್ಪೆಂಷನ್‍ಗಳಿಗಾಗಿ ಈ ಸ್ಕೂಟರಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಯೂನಿಟ್‍ಗಳಿದ್ದರೆ, ಹಿಂಭಾಗದಲ್ಲಿ ಮೊನೊ ಶಾಕ್‍ಗಳಿವೆ. ಟಾಪ್ ಮಾದರಿಯ ಸ್ಕೂಟರ್‍ನಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ಹೆಚ್ಚುವರಿ ಆಯ್ಕೆಯಾಗಿ ನೀಡಲಾಗುತ್ತದೆ.

ಹೋಂಡಾ ಆಕ್ಟಿವಾ 5 ಜಿ
ಹೋಂಡಾ ಆಕ್ಟಿವಾ ಬಿಡುಗಡೆಯಾದಾಗಿನಿಂದ ಸ್ಕೂಟರ್ ಸೆಗ್‍ಮೆಂಟಿನಲ್ಲಿ ಮುಂಚೂಣಿಯಲ್ಲಿರುವ ಸ್ಕೂಟರ್ ಆಗಿದೆ. ಸದ್ಯಕ್ಕೆ 5ನೇ ತಲೆಮಾರಿನ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಆಕ್ಟಿವಾ 5ಜಿ ಸ್ಕೂಟರ್‍ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಅಳವಡಿಸಲಾಗಿದೆ.

ಟಾಪ್ ಮಾದರಿಯ ಸ್ಕೂಟರ್‍ಗಳು ಡಿಜಿಟಲ್ ಡಿಸ್‍ಪ್ಲೇ ಹಾಗೂ ಹೊಸ ಬಗೆಯ ಕೀ ಸ್ಲಾಟ್ ಹೊಂದಿವೆ. ಈ ಸ್ಕೂಟರ್‍ನಲ್ಲಿರುವ 109 ಸಿಸಿಯ ಎಂಜಿನ್, 7.88 ಬಿಹೆಚ್‍ಪಿ ಹಾಗೂ 9 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರ್‍ನ ಬೆಲೆಯನ್ನು ಭಾರತದ ಎಕ್ಸ್ ಶೋರೂಂ ದರದಂತೆ ರೂ.53,565ಗಳಿಂದ ರೂ.55,430ಗಳವರೆಗೆ ನಿಗದಿಪಡಿಸಲಾಗಿದೆ.
MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಟಿವಿಎಸ್ ಜೂಪಿಟರ್
ಟಿವಿಎಸ್ ಕಂಪನಿಯ ಜೂಪಿಟರ್ ಸ್ಕೂಟರ್, ಹೋಂಡಾ ಆಕ್ಟಿವಾ ಸ್ಕೂಟರಿಗೆ ತೀವ್ರವಾದ ಪೈಪೋಟಿ ನೀಡುತ್ತಿದೆ. ಪ್ರೀಮಿಯಂ ಜೂಪಿಟರ್ ಗ್ರಾಂಡ್ ಮಾದರಿಯ ಸ್ಕೂಟರ್‍ನಲ್ಲಿ ಅಧಿಕ ಫೀಚರ್‍ಗಳನ್ನು ನೀಡಲಾಗುತ್ತಿದೆ.
MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಈ ಸ್ಕೂಟರ್‍ನಲ್ಲಿರುವ 109.7 ಸಿಸಿಯ ಎಂಜಿನ್ 7.88 ಬಿಹೆಚ್‍ಪಿ ಪವರ್ ಹಾಗೂ 8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರ್‍ನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.51,163 ರಿಂದ ರೂ.56,726ಗಳಾಗಿದೆ.
MOST READ: ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಸುಜುಕಿ ಬರ್ಗ್ಮನ್ ಸ್ಟ್ರೀಟ್
ಟಾಪ್ 5 ಆಟೋಮ್ಯಾಟಿಕ್ ಸ್ಕೂಟರ್‍ಗಳ ಪಟ್ಟಿಯಲ್ಲಿರುವ ಇನ್ನೊಂದು ಸ್ಕೂಟರ್ ಸುಜುಕಿ ಬರ್ಗ್ಮನ್ ಸ್ಟ್ರೀಟ್. ಈ ಸ್ಕೂಟರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.68,836ಗಳಾಗಿದೆ. ಸಾಕಷ್ಟು ಸ್ಟೈಲಿಶ್ ಆಗಿರುವ ಈ ಸ್ಕೂಟರ್ ದೊಡ್ಡ ಗಾತ್ರದ ಏಪ್ರನ್ ಹಾಗೂ ವಿಂಡ್‌ಸ್ಕ್ರೀನ್‍ಗಳನ್ನು ಹೊಂದಿದೆ.

ಈ ಸ್ಕೂಟರಿನಲ್ಲಿ 21.5 ಲೀಟರಿನ ಅಂಡರ್ ಸೀಟ್ ಸ್ಟೋರೇಜ್ ಹಾಗೂ ಮುಂಭಾಗದಲ್ಲಿ 1 ಲೀಟರಿನ ಎರಡು ಪಾಕೆಟ್‌ಗಳಿವೆ. ಈ ಸ್ಕೂಟರ್ 124.3 ಸಿಸಿ ಎಂಜಿನ್ ಹೊಂದಿದ್ದು, 8.5 ಬಿಹೆಚ್‍ಪಿ ಹಾಗೂ 10.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.


Click it and Unblock the Notifications








