ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಹೋಂಡಾ ಆಕ್ಟಿವಾ

2019ರ ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚು ಮಾರಾಟವಾದ ಬೈಕುಗಳು ಮತ್ತು ಸ್ಕೂಟರ್‍‍ಗಳ ಟಾಪ್-10 ಪಟ್ಟಿಯಲ್ಲಿ ಹೋಂಡಾ ಆಕ್ಟಿವಾ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಹೋಂಡಾ ಆಕ್ಟಿವಾ

ಹೋಂಡಾ ಆಕ್ಟಿವಾ ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನವಾಗಿದೆ. ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹೋಂಡಾ ಆಕ್ಟಿವಾ ಸ್ಕೂಟರಿನ 2,81,273 ಯು‍ನಿ‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಹೋಂಡಾ ಆಕ್ಟಿವಾದ 2,62,260 ಯು‍‍ನಿ‍ಟ್‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ಶೇ.7.25 ಮಾರಾಟದಲ್ಲಿ ಏರಿಕೆ ಕಂಡಿದೆ.

ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಹೋಂಡಾ ಆಕ್ಟಿವಾ

ಹೋಂಡಾ ಆಕ್ಟಿವಾ ಒಂದು ದಶಕದಿಂದ ದೇಶಿಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿದೆ. ಹೋಂಡಾ ಆಕ್ಟಿವಾ ಹಲವಾರು ಬಾರಿ ನವೀಕರಣ ನಡಿಸಿದ್ದು, ಬದಲಾವಣೆಗಳನ್ನು ಮಾಡುತ್ತಲೆ ಬಂದಿದೆ. ಸ್ಕೂಟರ್ ಆಕ್ಟಿವಾ 125 ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾದ ಮೊದಲ ಬಿಎಸ್-6 ದ್ವಿಚಕ್ರ ವಾಹನವಾಗಿದೆ.

ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಹೋಂಡಾ ಆಕ್ಟಿವಾ

ಟಾಪ್-10 ಪಟ್ಟಿಯಲ್ಲಿ ಹೋಂಡಾ ಆಕ್ಟಿವಾದ ನಂತರ ಸ್ಥಾನವನ್ನು ಹೀರೋ ಸ್ಪ್ಲೆಂಡರ್ ಪಡೆದುಕೊಂಡಿದೆ. ಹೀರೋ ಸ್ಪ್ಲೆಂಡರ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಬೈಕ್ ಇದಾಗಿದೆ. ಹಿಂದಿನ ಅಕ್ಟೋಬರ್ ತಿಂಗಳಲ್ಲಿ ಹೀರೋ ಸ್ಪ್ಲೆಂಡರ್‍ ಬೈಕಿನ 2,64,137 ಯುನಿಟ್‍‍ಗಳು ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ 2018 ರಲ್ಲಿ ಹೀರೋ ಸ್ಪ್ಲೆಂಡರ್‍ ಬೈಕಿನ 2,68,377 ಯುನಿ‍‍ಟ್‍ಗಳು ಮಾರಾಟವಾಗಿತ್ತು.

ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಹೋಂಡಾ ಆಕ್ಟಿವಾ

ಈ ಟಾಪ್-10 ಪಟ್ಟಿಯಲ್ಲಿ ಹೀರೋ ಎಚ್‍ಎಫ್ ಡಿಲಕ್ಸ್ ಬೈಕ್ ಮೂರನೇ ಸ್ಥಾನವನ್ನು ಪಡೆದಿದೆ. ಹೀರೋ ಮೊಟೊಕಾರ್ಪ್‍‍ಗೆ ಸ್ಪ್ಲೆಂಡರ್ ನಂತರ ಸ್ಥಿರವಾಗಿ ಮಾರಾಟವಾಗು ಮತ್ತೂಂದು ಬೈಕ್ ಇದಾಗಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಹೀರೋ ಎಚ್ಎಫ್ ಡಿಲಕ್ಸ್ ಮಾದರಿಯ 1,85,751 ಯು‍‍ನಿ‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಹೀರೋ ಎಚ್ಎಫ್ ಡಿಲಕ್ಸ್ ಬೈಕಿನ 2,00,312 ಯು‍‍ನಿ‍ಟ್‍‍ಗಳು ಮಾರಾಟವಾಗಿತ್ತು. ಕಳೆದ ವರ್ಷದ ಅಕ್ಟೋಬರ್ ತಿಂಗಳಿನ ಮಾರಾಟಕ್ಕೆ ಹೋಲಿಸಿದರೆ ಶೇ.7 ರಷ್ಟು ಕಡಿಮೆಯಾಗಿದೆ.

ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಹೋಂಡಾ ಆಕ್ಟಿವಾ

ಈ ಪಟ್ಟಿಯಲ್ಲಿ ಬಜಾಜ್ ಪಲ್ಸರ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕುಗಳಲ್ಲಿ ಇದು ಒಂದಾಗಿದೆ. ಪಲ್ಸರ್ ಸರಣಿಯು ಕಳೆದ ಅಕ್ಟೋಬರ್ ತಿಂಗಳಲ್ಲಿ 95,509 ಯು‍‍ನಿ‍ಟ್‍ಗಳು ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ 90,363 ಯು‍‍ನಿ‍ಟ್‍ಗಳು ಮಾರಾಟವಾಗಿತ್ತು. ಬಜಾಜ್ ಪಲ್ಸರ್ ಸರಣಿಯ 125, 150, ಎನ್‍ಎಸ್ 160, 180 ಎಫ್, ಎನ್‍ಎಸ್ 200, ಆರ್‍ಎಸ್ 200 ಮತ್ತು 220 ಎಫ್ ಅನ್ನು ಒಳಗೊಂಡಿದೆ.

ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಹೋಂಡಾ ಆಕ್ಟಿವಾ

ಅಕ್ಟೋಬರ್ ತಿಂಗಳಲ್ಲಿ ಹೋಂಡಾ ಸಿಬಿ ಶೈನ್ 87,783 ಯು‍‍ನಿ‍‍ಟ್‍ಗಳು ಮಾರಾಟವಾಗಿ ಐದನೇ ಸ್ಥಾನವನ್ನು ಪಡೆದಿದೆ. ಸಿಬಿ ಶೈನ್ ದೇಶಿಯ ಮಾರುಕಟ್ಟೆಯಲ್ಲಿ ಜಪಾನಿನ ಬ್ರ್ಯಾಂಡ್‍‍ನ ಪ್ರೀಮಿಯಂ ಪ್ರಯಾಣಿಕರ ವಿಭಾಗದ ಬೈಕ್ ಇದಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಹೋಂಡಾ ಆಕ್ಟಿವಾ

ಟಾಪ್-10 ಪಟ್ಟಿಯಲ್ಲಿ ಟಿ‍ವಿಎಸ್ ಜ್ಯುಪಿಟರ್ ಮತ್ತು ಬಜಾಜ್ ಪ್ಲಾಟಿನಾ ಆರನೇ ಮತ್ತು ಏಳನೇ ಸ್ಥಾನವನ್ನು ಪಡೆದುಕೊಂಡಿದೆ. ಟಿ‍ವಿಎಸ್ ಜ್ಯುಪಿಟರ್ ಕಳೆದ ಅಕ್ಟೋಬರ್ ತಿಂಗಳಲ್ಲಿ 74.560 ಯು‍‍ನಿ‍ಟ್‍ಗಳು ಮಾರಾಟವಾಗಿದೆ. ಬಜಾಜ್ ಪ್ಲಾಟಿನಾ ಬೈಕು ಕಳೆದ ತಿಂಗಳಿನಲ್ಲಿ 70,466 ಯು‍‍ನಿ‍ಟ್‍ಗಳು ಮಾರಾಟವಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಹೋಂಡಾ ಆಕ್ಟಿವಾ

ಈ ಟಾಪ್-10 ಪಟ್ಟಿಯಲ್ಲಿ ಕ್ರಮವಾಗಿ ಬಜಾಜ್ ಸಿಟಿ 100, ಟಿವಿಎಸ್ ಲೂನಾ ಎಕ್ಸ್‌ಎಲ್ ಮತ್ತು ಸುಜುಕಿ ಆಕ್ಸೆಸ್ 125 ತದನಂತರದ ಸ್ಥಾನಗಳನ್ನು ಪಡೆದುಕೊಂಡಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಬಜಾಜ್ ಸಿಟಿ 100 ಬೈಕು 61,483 ಯು‍‍ನಿ‍‍ಟ್‍ಗಳು ಮಾರಾಟವಾಗಿದ್ದರೆ, ಟಿ‍ವಿಎಸ್ ಲೂನಾ ಎಕ್ಸ್‌ಎಲ್ ಬೈಕಿನ 60,127 ಯು‍‍ನಿ‍‍ಟ್‍‍ಗಳು ಮಾರಾಟವಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದ ಹೋಂಡಾ ಆಕ್ಟಿವಾ

ಕಳೆದ ಅಕ್ಟೋಬರ್ ತಿಂಗಳಲ್ಲಿ ಸುಜುಕಿ ಆಕ್ಸೆಸ್ 125 ಬೈಕಿನ 53,552 ಯು‍‍ನಿ‍‍ಟ್‍‍ಗಳು ಮಾರಾಟವಾಗಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಇನ್ನೂ ಕಳೆದ ವರ್ಷದ ಅಕ್ಟೋಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.18.77 ರಷ್ಟು ಬೆಳವಣಿಗೆಯನ್ನು ಕಂಡಿದೆ.

Most Read Articles

Kannada
English summary
Top-Selling Two-Wheelers In India For October 2019: Honda Activa Tops The Chart Yet Again! - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X