ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

ಟ್ರಯಂಫ್ ಮೋಟಾರ್‍‍‍ಸೈಕಲ್ಸ್ ಉತ್ಪಾದನಾ ಹಂತದಲ್ಲಿರುವ ರಾಕೆಟ್ 3 ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದೆ. ಈ ಸರಣಿಯ ಬೈಕುಗಳನ್ನು ಆರ್ ಹಾಗೂ ಜಿಟಿ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ರಾಕೆಟ್ 3 ಆರ್ ರಸ್ತೆಯಾಧಾರಿತ ಬೈಕ್ ಆಗಿದ್ದರೆ, ರಾಕೆಟ್ 3 ಜಿಟಿ ಟೂರಿಂಗ್ ಬೈಕ್ ಆಗಿರಲಿದೆ.

ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

ಎರಡೂ ಬೈಕುಗಳು ಪವರ್ ಕ್ರೂಸರ್ ವಿನ್ಯಾಸವನ್ನು ಹೊಂದಿರಲಿವೆ. ಈ ವಿನ್ಯಾಸವನ್ನು ಮಾರುಕಟ್ಟೆಯಲ್ಲಿರುವ ರಾಕೆಟ್ 3 ಬೈಕ್ ಸಹ ಹೊಂದಿದೆ. ರಾಕೆಟ್ 3 ಆರ್ ಹಾಗೂ ಜಿಟಿ ಬೈಕುಗಳು ಟ್ವಿನ್ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್, ಚಿಕ್ಕದಾಗಿರುವ ಇಂಟಿಗ್ರೇಟೆಡ್ ಟೇಲ್‍‍ಲ್ಯಾಂಪ್ ಹಾಗೂ ಟ್ವಿನ್ ಕಟ್ ಎಕ್ಸಾಸ್ಟ್ ಗಳ ಜೊತೆಗೆ ಟ್ರಯಂಫ್‍‍ನ ಹೊಸ ಡಿಸೈನ್ ಲ್ಯಾಂಗ್ವೇಜ್ ಹೊಂದಿರಲಿವೆ.

ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

ಟ್ರಯಂಫ್ ರಾಕೆಟ್ 3 ಆರ್ ಹಾಗೂ ಟ್ರಯಂಫ್ ರಾಕೆಟ್ 3 ಜಿಟಿ ಎರಡೂ ಬೈಕುಗಳು ಪ್ರತ್ಯೇಕವಾದ ಬಿಡಿಭಾಗಗಳನ್ನು ಹೊಂದಿವೆ. ಗಮನಿಸಬೇಕಾದ ಸಂಗತಿಯೆಂದರೆ ಜಿಟಿ ಬೈಕ್ ಫಾರ್ವರ್ಡ್ ಮೌಂಟ್ ಫುಟ್ ಪೆಗ್‌ಗಳನ್ನು ಹೊಂದಿದ್ದರೆ, ಆರ್ ಮಾದರಿಯ ಬೈಕ್ ಮಿಡ್ ಮೌಂಟ್ಸ್ ಗಳನ್ನು ಹೊಂದಿದೆ.

ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

ರಾಕೆಟ್ 3 ಆರ್ ಫ್ಲಾಟ್ ಹ್ಯಾಂಡಲ್‌ಬಾರ್‍‍ಗಳನ್ನು ಹೊಂದಿದ್ದರೆ, ರಾಕೆಟ್ 3 ಜಿಟಿ ಟೂರಿಂಗ್ ಶೈಲಿಯ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ. ಇವುಗಳನ್ನು ದೂರ ಪ್ರಯಾಣದಲ್ಲಿನ ಅನುಕೂಲಕ್ಕಾಗಿ ಅಳವಡಿಸಲಾಗಿದೆ. ಜಿಟಿ ಎತ್ತರದ ಫ್ಲೈ ಸ್ಕ್ರೀನ್, ಅಡ್ಜಸ್ಟಬಲ್ ಪಿಲಿಯನ್ ಫುಟ್ ಪೆಗ್, ಹೀಟೆಡ್ ಗ್ರಿಪ್ ಹಾಗೂ ಹೆಚ್ಚು ಆರಾಮದಾಯಕವಾದ ಸೀಟುಗಳನ್ನು ಹೊಂದಿದೆ.

ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

ಈ ಬೈಕುಗಳು ಪಿಲಿಯನ್ ಬ್ಯಾಕ್‌ರೆಸ್ಟ್ ಹಾಗೂ ಕ್ರೋಮ್ ಅಲಾಯ್‍‍ಗಳನ್ನು ಹೊಂದಿವೆ. ರಾಕೆಟ್ 3 ಸರಣಿಯ ಈ 2 ಅವಳಿ ಬೈಕುಗಳು ಹೊಸ 2.5-ಲೀಟರ್‍‍ನ, ಇನ್‍‍ಲೈನ್ ​​ 3 ಸಿಲಿಂಡರ್ ಎಂಜಿನ್ ಹೊಂದಿದ್ದು, 165ಬಿ‍‍ಹೆಚ್‍‍ಪಿ ಪವರ್ ಹಾಗೂ 221 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ.

ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

ರಾಕೆಟ್ 3 ಆರ್ ಮತ್ತು ರಾಕೆಟ್ 3 ಜಿಟಿ ಮಾರುಕಟ್ಟೆಯಲ್ಲಿರುವ ಬೈಕಿಗಿಂತ ಸುಮಾರು 40 ಕೆಜಿ ಕಡಿಮೆ ತೂಕವನ್ನು ಹೊಂದಿವೆ. ಎರಡೂ ಬೈಕುಗಳು ಮುಂಭಾಗದಲ್ಲಿ ಪೂರ್ಣವಾಗಿ ಅಡ್ಜಸ್ಟ್ ಮಾಡಬಹುದಾದ 47 ಎಂಎಂ ತಲೆಕೆಳಗಾದ ಫೋರ್ಕ್‌ಗಳನ್ನು ಹೊಂದಿವೆ. ಹಿಂಭಾಗದಲ್ಲಿ ಶೋವಾ ತಯಾರಿಸಿರುವ ರಿಮೋಟ್ ಪ್ರಿ ಲೋಡ್ ಅಡ್ಜಸ್ಟಬಲ್ ಮೊನೊ-ಶಾಕ್‍‍ಗಳನ್ನು ಹೊಂದಿವೆ.

ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

ಬ್ರೇಕಿಂಗ್ ಕಾರ್ಯಗಳನ್ನು ಮುಂಭಾಗದಲ್ಲಿರುವ ಟ್ವಿನ್ 320 ಎಂಎಂ ಬ್ರೆಂಬೊ ಕ್ಯಾಲಿಪರ್‌ಗಳು ಹಾಗೂ ಹಿಂಭಾಗದಲ್ಲಿ ಸಿಂಗಲ್ 300 ಎಂಎಂ ಡಿಸ್ಕ್ ಅನ್ನು ನಿರ್ವಹಿಸುತ್ತವೆ. ಟ್ರಯಂಫ್ ಬ್ಲೂಟೂತ್ ಎನೇಬಲ್ ಆಗಿರುವ ಪೂರ್ಣ ಪ್ರಮಾಣದ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ಗಳನ್ನು ರಾಕೆಟ್ 3 ಆರ್ ಹಾಗೂ ರಾಕೆಟ್ 3 ಜಿಟಿ ಬೈಕುಗಳಲ್ಲಿ ಅಳವಡಿಸಿದೆ.

ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

ಈ ಬೈಕುಗಳು ನಾಲ್ಕು ರೈಡಿಂಗ್ ಮೋಡ್‌ಗಳನ್ನು, ಟ್ರಾಕ್ಷನ್ ಕಂಟ್ರೊಲ್ ಸಿಸ್ಟಂ, ಕಾರ್ನರಿಂಗ್ ಎಬಿಎಸ್ ಹಾಗೂ ಹಿಲ್-ಹೋಲ್ಡ್ ಕಂಟ್ರೋಲ್‍‍ಗಳನ್ನು ಹೊಂದಿವೆ. ಟ್ರಯಂಫ್‍‍ನ ಈ ಬೈಕುಗಳನ್ನು 2019ರ ಐಸಿಎಂಎಯಲ್ಲಿ ಜಾಗತಿಕವಾಗಿ ಬಿಡುಗಡೆಗೊಳಿಸಲು ಯೋಜಿಸಲಾಗಿದೆ.

ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

2020ರ ಮೊದಲ ಭಾಗದಲ್ಲಿ ಈ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಬೈಕುಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಡುಕಾಟಿ ಡಯಾವೆಲ್ 1260 ಬೈಕ್ ಏಕೈಕ ಪ್ರತಿಸ್ಪರ್ಧಿಯಾಗಿರಲಿದೆ.

ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

ರಾಕೆಟ್ 3 ಸರಣಿಯ ಬೈಕುಗಳನ್ನು ಯಾವ ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗುವುದು ಹಾಗೂ ಬೆಲೆ ಎಷ್ಟಿರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಈ ಬೈಕುಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.25 ಲಕ್ಷದಿಂದ ರೂ.29 ಲಕ್ಷಗಳಾಗುವ ಸಾಧ್ಯತೆಗಳಿವೆ.

ರಾಕೆಟ್ ಸರಣಿಯ ಬೈಕುಗಳನ್ನು ಅನಾವರಣಗೊಳಿಸಿದ ಟ್ರಯಂಫ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಈ ಎರಡೂ ಬೈಕುಗಳು ಅದ್ಭುತವಾಗಿ ಕಾಣುತ್ತವೆ. ಮೊದಲು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ನಂತರ ಈ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Triumph Unveils The Rocket III R and GT Siblings — India Launch Expected 2020 - Read in kannada
Story first published: Thursday, August 1, 2019, 13:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X