ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆ ಮಾಡಲಿವೆ ಊಬರ್ ಮತ್ತು ಯೂಲು

ಸಂಶೋಧನೆಗಳ ಪ್ರಕಾರ ಬೆಂಗಳೂರು ಮಹಾನಗರದಲ್ಲಿ ವಾಹನಗಳ ಸರಾಸರಿ ವೇಗವು ಪ್ರತಿ ಗಂಟೆಗೆ 20 ಕಿ.ಮೀ ಗಿಂತ ಕಡಿಮೆ ಇದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಇದಕ್ಕೆಲ್ಲಾ ಕಾರಣ. ಸಂಚಾರ ದಟ್ಟಣೆಯ ಜೊತೆಗೆ ವಾಯು ಮಾಲಿನ್ಯವು ಸಹ ಹೆಚ್ಚಾಗುತ್ತಿದೆ.

ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆ ಮಾಡಲಿವೆ ಊಬರ್ ಮತ್ತು ಯೂಲು

ಜನರು ಸೈಕಲ್‍‍ಗಳನ್ನು ಉಪಯೋಗಿಸಿದರೆ, ನಗರದ ವ್ಯಾಪ್ತಿಯಲ್ಲಿ ವೇಗವಾಗಿ ಸಂಚರಿಸಬಹುದು. ನಗರದಲ್ಲಿನ ಸಂಚಾರವನ್ನು ಸರಾಗವಾಗಿಸಲು ಮತ್ತು ರಸ್ತೆಯ ಮೇಲಿನ ಸಮಯವನ್ನು ಉಳಿಸಲು , ಕ್ಯಾಬ್ ಸೇವಾ ಸಂಸ್ಥೆ ಊಬರ್, ಮೊಬಿಲಿಟಿ ಟೆಕ್ನಾಲಜಿಯಲ್ಲಿ ಮುಂಚೂಣಿಯಲ್ಲಿರುವ ಯೂಲು ಜೊತೆ ಕೈಜೋಡಿಸಿದೆ. ಜನರಿಗೆ ಇ ಬೈಕ್ ಅಥವಾ ಸೈಕಲ್ ಸೇವೆಯನ್ನು ಒದಗಿಸುವುದು ಈ ಸಹಭಾಗಿತ್ವದ ಮುಖ್ಯ ಉದ್ದೇಶವಾಗಿದೆ. ಊಬರ್ ಮತ್ತು ಯೂಲು ಕಂಪನಿಗಳು ಈ ಯೋಜನೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಿವೆ.

ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆ ಮಾಡಲಿವೆ ಊಬರ್ ಮತ್ತು ಯೂಲು

ಈ ಕಂಪನಿಗಳು ಒದಗಿಸುವ ಇ-ಬೈಕಿನ ಸರಾಸರಿ ವೇಗವು 25 ಕಿ.ಮೀ ಗಿಂತ ಸ್ವಲ್ಪ ಹೆಚ್ಚಿರಲಿದೆ. ಈ ವಾಹನಗಳನ್ನು ಚಲಾಯಿಸಲು ಯಾವುದೇ ಡ್ರೈವಿಂಗ್ ಲೈಸೆನ್ಸ್ ನ ಅಗತ್ಯವಿಲ್ಲ. ಈ ವಾಹನಗಳನ್ನು ಪೇ ಪರ್ ಯೂಸ್ ಬೇಸಿಸ್ ಅಂದರೆ ಎಷ್ಟು ಅವಧಿಯವರೆಗೆ ಉಪಯೋಗಿಸಲಾಗುವುದೇ ಅಷ್ಟು ಅವಧಿಗೆ ಪಾವತಿ ಮಾಡುವ ಆಧಾರದಲ್ಲಿ ಬಾಡಿಗೆಗೆ ನೀಡಲಾಗುವುದು.

ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆ ಮಾಡಲಿವೆ ಊಬರ್ ಮತ್ತು ಯೂಲು

ಈ ಪರಿಸರ ಸ್ನೇಹಿ ವಾಹನಗಳನ್ನು ಉಪಯೋಗಿಸುವುದರಿಂದ ಅನೇಕ ಪ್ರಯೋಜನಗಳಿವೆ. ಗ್ರಾಹಕರು ವಾಹನಗಳಿಂದ ಕಾರ್ಬನ್ ಉಗುಳುವುದನ್ನು ತಪ್ಪಿಸಿ, ಪರಿಸರ ಮಾಲಿನ್ಯವನ್ನು ಸ್ವಲ್ಪ ಮಟ್ಟಿಗಾದರೂ ತಡೆಗಟ್ಟಬಹುದು. ಇದರ ಜೊತೆಯಲ್ಲಿ ತಮ್ಮ ವೈಯಕ್ತಿಕ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು.

ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆ ಮಾಡಲಿವೆ ಊಬರ್ ಮತ್ತು ಯೂಲು

ಊಬರ್ ಗ್ರಾಹಕರು, ಊಬರ್ ಅಪ್ಲಿಕೇಶನ್ ನಲ್ಲಿರುವ ಟ್ರೈ ಯೂಲು ಆಯ್ಕೆಯನ್ನು ಒತ್ತುವ ಮೂಲಕ ಇ-ಬೈಕ್ ಅನ್ನು ಬುಕ್ ಮಾಡಿಕೊಳ್ಳಬಹುದು. ಇ-ಬೈಕ್‍‍ಗಳ ಮೇಲಿರುವ ಕ್ಯೂ‍ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಅನ್‍‍ಲಾಕ್ ಮಾಡಬಹುದು. ಈ ವಿಧಾನವು ಇ-ಬೈಕ್ ಬಳಕೆಯನ್ನು ಸರಳವಾಗಿಸಲಿದ್ದು, ನಗರದಾದ್ಯಂತ ಎಲ್ಲಿ ಬೇಕಾದರೂ ವಾಪಸ್ ಮಾಡಬಹುದು. ಬೆಂಗಳೂರಿನಲ್ಲಿ ಇ-ಬೈಕ್‍‍ಗಳ ಬಳಕೆಯನ್ನು ಉತ್ತೇಜಿಸಲು, ಉಬರ್ ಹಾಗೂ ಯೂಲು ಕಂಪನಿಗಳು, ಮನೆಗಳಲ್ಲಿ ಮೂರು ರೈಡ್‍‍ಗಳನ್ನು ಮಾಡಿ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

MOST READ: 150 ಸಿಸಿ ಮೋಟಾರ್‍‍ಸೈಕಲ್ ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆ ಮಾಡಲಿವೆ ಊಬರ್ ಮತ್ತು ಯೂಲು

ಇದರಿಂದ ಜನರಿಗೆ ಈ ವಾಹನಗಳನ್ನು ಬಳಕೆ ಮಾಡುವ ವಿಧಾನದ ಬಗ್ಗೆ ಅರಿವು ಮೂಡಿ, ಯೂಲು ವಾಹನಗಳನ್ನು ಹೆಚ್ಚಾಗಿ ಬಳಸಬಹುದು.

ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆ ಮಾಡಲಿವೆ ಊಬರ್ ಮತ್ತು ಯೂಲು

ಪರಿಸರ ಸ್ನೇಹಿಯಾಗುವತ್ತ ಉಬರ್ ಇಟ್ಟಿರುವ ಈ ಹೆಜ್ಜೆಯು ಸ್ವಾಗತಾರ್ಹ. ಗ್ರಾಹಕರು ಈ ಆಪ್ ಅನ್ನು ಹೇಗೆ ಬಳಸುವುದು ಎಂಬುದನ್ನು ಅರಿಯಬೇಕಿದೆ. ಉಬರ್ ಆಪ್‍‍ನಲ್ಲಿರುವ ಟ್ರೈ ಯೂಲು ಆಯ್ಕೆಯನ್ನು ಒತ್ತಿ, ಅಲ್ಲಿ ತಿಳಿಸುವಂತೆ ಆಯ್ಕೆ ಮಾಡಿಕೊಳ್ಳಬೇಕು. ಇ-ವಾಹನಗಳು, ಸಾಂಪ್ರಾದಾಯಕವಾದ ಸಾರಿಗೆಗೆ ಪರ್ಯಾಯವಾಗಿ ಬರುತ್ತಿವೆ.

ಪರಿಸರ ಸ್ನೇಹಿ ವಾಹನಗಳನ್ನು ಬಿಡುಗಡೆ ಮಾಡಲಿವೆ ಊಬರ್ ಮತ್ತು ಯೂಲು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಊಬರ್ ಮತ್ತು ಯೂಲು ಅದ್ಭುತವಾದ ಯೋಜನೆಯನ್ನು ಒದಗಿಸುತ್ತಿವೆ. ಕೆಲವು ಕಂಪನಿಗಳು ಪೇ ಆಸ್ ಯೂಸ್‍‍‍ನಡಿ ಸೈಕಲ್‍‍ಗಳನ್ನು ನೀಡುತ್ತಿದ್ದರೆ, ಇದೇ ಮೊದಲ ಬಾರಿಗೆ ಇ-ಬೈಕುಗಳನ್ನು ನೀಡಲಾಗುತ್ತಿದೆ. ಈ ಯೋಜನೆಯು ಸರಳವು, ಸುಲಭವೂ ಆಗಿದ್ದು, ಕೈಗೆಟುಕುವ ದರದಲ್ಲಿ ದೊರೆಯಲಿವೆ. ಈ ಯೋಜನೆಯು ಯಶಸ್ವಿಯಾದರೆ, ಬೆಂಗಳೂರು ತನ್ನ ಗಾರ್ಡನ್ ಸಿಟಿ ಎಂಬ ಹೆಸರನ್ನು ಮರಳಿ ಪಡೆಯಲಿದೆ.

Most Read Articles

Kannada
English summary
Uber And Yulu Offer Eco-friendly Commuting In Bangalore — Will We See The Garden City Again? - Read in kannada
Story first published: Thursday, May 16, 2019, 10:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X