ವಿನೂತನ ವಿನ್ಯಾಸದ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ

ಭಾರತದಲ್ಲಿ ಸದ್ಯ ಪ್ರೀಮಿಯಂ ಸ್ಕೂಟರ್‌ಗಳ ಮಾರಾಟ ಜೋರಾಗಿದ್ದು, ಇಟಲಿ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಪಿಯಾಗ್ಗೊ ತನ್ನ ವೆಸ್ಪಾ ಸ್ಕೂಟರ್‌ಗಳಲ್ಲಿ ಹೊಸ ಬ್ರಾಂಡ್ ಪರಿಚಯಿಸಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಎಕ್ಸ್ 125 ಸ್ಕೂಟರ್‌ಗಿಂತಲೂ ವಿಭಿನ್ನ ವಿನ್ಯಾಸ ಹೊಂದಿರುವ ಅರ್ಬನ್ ಕ್ಲಬ್ 125 ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ವಿನೂತನ ವಿನ್ಯಾಸದ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ

ಪ್ರೀಮಿಯಂ ವೈಶಿಷ್ಟ್ಯತೆಯುಳ್ಳ ಸ್ಕೂಟರ್ ಮಾದರಿಗಳನ್ನು ಉತ್ಪಾದನೆ ಮಾಡುವುದರಲ್ಲಿ ಈಗಾಗಲೇ ಮುಂಚೂಣಿ ಸಾಧಿಸಿರುವ ವೆಸ್ಪಾ ಸಂಸ್ಥೆಯು ಇದುವರೆಗೆ 150 ಸಿಸಿ ಸಾಮಾರ್ಥ್ಯದ ಸ್ಕೂಟರ್‌ಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು. ಆದ್ರೆ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸೌಲಭ್ಯವುಳ್ಳ 125 ಸಿಸಿ ಸ್ಕೂಟರ್‌ಗಳ ಮಾರಾಟ ಹೆಚ್ಚುತ್ತಿದ್ದಂತೆ ವೆಸ್ಪಾ ಸಹ ಕಳೆದ ವರ್ಷದಿಂದ ಎಲ್ಎಕ್ಸ್ 125 ಪರಿಚಯಿಸಿದ್ದಲ್ಲದೇ ಇದೀಗ ಅರ್ಬನ್ ಕ್ಲಬ್ 125 ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ವಿನೂತನ ವಿನ್ಯಾಸದ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ 125ಸಿಸಿ ಸ್ಕೂಟರ್‌ಗಳಿಂತಲೂ ಭಿನ್ನವಾದ ವಿನ್ಯಾಸ ಹೊಂದಿರುವ ಅರ್ಬನ್ ಕ್ಲಬ್ 125 ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 73,732 ಬೆಲೆ ಹೊಂದಿದ್ದು, ವೆಸ್ಪಾ ನಿರ್ಮಾಣದ ಮತ್ತೊಂದು ಜನಪ್ರಿಯ ಸ್ಕೂಟರ್ ನೊಟ್ಟೆ ಬ್ಲ್ಯಾಕ್ ಎಡಿಷನ್‌ನಲ್ಲಿರುವಂತೆ ಹಲವು ತಾಂತ್ರಿಕ ಸೌಲಭ್ಯಗಳು ಅರ್ಬನ್ ಕ್ಲಬ್ 125 ಸ್ಕೂಟರ್‌ನಲ್ಲಿವೆ.

ವಿನೂತನ ವಿನ್ಯಾಸದ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

124.6-ಸಿಸಿ ಎಂಜಿನ್ ಹೊಂದಿರುವ ಅರ್ಬನ್ ಕ್ಲಬ್ 125 ಸ್ಕೂಟರ್ ಮಾದರಿಯು ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ 9.5-ಬಿಎಚ್‌ಪಿ ಮತ್ತು 9.9-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಮುಂಭಾಗದ ಚಕ್ರದಲ್ಲಿ ಸಿಬಿಯು ಬ್ರೇಕಿಂಗ್ ಸಿಸ್ಟಂ ಮತ್ತು ಹಿಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್ ಇರಲಿದೆ.

ವಿನೂತನ ವಿನ್ಯಾಸದ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ

ಜೊತೆಗೆ ವೆಸ್ಪಾ ಅರ್ಬನ್ ಕ್ಲಬ್‌ನಲ್ಲಿ ಒಂದು ಸೈಡಿನ ಆರ್ಮ್ ಹೈಡ್ರಾಲಿಕ್ ಸಸ್ಪೆಂಷನ್ ಯೂನಿಟ್ ಅನ್ನು ಮುಂಭಾಗದಲ್ಲಿ ಮತ್ತು ಹೈಡ್ರಾಲಿಕ್ ಶಾಕ್ ಅಬ್ಸರ್ವರ್ ಗಳನ್ನು ಹಿಂಭಾಗದಲ್ಲಿ ಹೊಂದಿರಲಿದ್ದು, ಇದೇ ರೀತಿಯ ಸಸ್ಪೆಂಷನ್ ಗಳನ್ನು ವೆಸ್ಪಾ ಎಲ್ ಎಕ್ಸ್ 125 ನಲ್ಲೂ ಅಳವಡಿಸಲಾಗಿದೆ. ಹೀಗಾಗಿ ಎಲ್‌ಎಕ್ಸ್ 125 ಮತ್ತು ಅರ್ಬನ್ ಕ್ಲಬ್ 125 ಹೆಸರನ್ನು ಹೊರತುಪಡಿಸಿ ಬಹುತೇಕ ತಾಂತ್ರಿಕ ಅಂಶಗಳು ಒಂದೇ ಆಗಿವೆ.

ವಿನೂತನ ವಿನ್ಯಾಸದ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ

ಇನ್ನು ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್‌ಗಳು ಒಟ್ಟು ನಾಲ್ಕು ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವ್ಹೀಲ್ ಗಳು, ಮಿರರ್ ಸ್ಟೆಮ್ ಗಳು, ಹೌಸಿಂಗ್, ಫ್ರಂಟ್ ಫೆಂಡರ್ ಗಾರ್ನಿಷ್, ಏಪ್ರಾನ್ ಹೈ ಲೈಟ್ಸ್ ಗಳು ಕಪ್ಪು ಬಣ್ಣದಲ್ಲಿರಲಿವೆ.

ವಿನೂತನ ವಿನ್ಯಾಸದ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ

ಹಾಗೆಯೇ ಹಿಂಭಾಗದ ಲೈಟ್ ಕ್ಲಷ್ಟರ್ ಭಾಗದಲ್ಲೂ ಸಹ ಸುತ್ತಲೂ ಕಪ್ಪು ಬಣ್ಣ ಹೊಂದಿರಲಿದ್ದು, ಸ್ಕೂಟರಿನ ಹೆಡ್ ಲೈಟ್ ಮಾಸ್ಕ್ ಮಾತ್ರ ಕ್ರೋಮ್ ಬಣ್ಣ ಹೊಂದಿರಲಿದೆ. ಒಟ್ಟಿನಲ್ಲಿ ವಿಶೇಷ ವಿನ್ಯಾಸಗಳು ಪ್ರೀಮಿಯಂ ಸ್ಕೂಟರ್ ಗ್ರಾಹಕರನ್ನು ಸೆಳೆಯಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರಲಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ವಿನೂತನ ವಿನ್ಯಾಸದ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ

ಕೆಲವು ಮಾಹಿತಿಗಳ ಪ್ರಕಾರ, ಅರ್ಬನ್ ಕ್ಲಬ್ 125 ಮಾದರಿಯನ್ನು ಸೀಮಿತ ಅವಧಿಗೆ ಮಾತ್ರ ಮಾರಾಟ ಮಾಡಲಾಗುತ್ತೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಸ್ಕೂಟರ್ ಮುಂದಿನ ಕೆಲವು ದಿನಗಳವರೆಗೆ ಮಾತ್ರ ಮಾರುಕಟ್ಟೆಯಲ್ಲಿ ಇರಲಿವೆ.

MOST READ: ಮಾಡಿಫೈ ವಾಹನಗಳನ್ನು ಉಳಿಸುವಂತೆ ಬೀದಿಗಿಳಿದು ಪ್ರತಿಭಟಿಸಿದ ಯುವಕರು..!

ವಿನೂತನ ವಿನ್ಯಾಸದ ವೆಸ್ಪಾ ಅರ್ಬನ್ ಕ್ಲಬ್ 125 ಸ್ಕೂಟರ್ ಬಿಡುಗಡೆ

ಬುಕ್ಕಿಂಗ್ ಆರಂಭ

ದೇಶಾದ್ಯಂತ ಈಗಾಗಲೇ ಪಿಯಾಗ್ಗೊ ಮಾರಾಟ ಮಳಿಗೆಗಳಲ್ಲಿ ವೆಸ್ಪಾ ಅರ್ಬನ್ ಕ್ಲಬ್ 125 ಖರೀದಿಗೆ ಬುಕ್ಕಿಂಗ್ ಆರಂಭಿಸಲಾಗಿದ್ದು ಆಸಕ್ತ ಗ್ರಾಹಕರು ರೂ. 2 ಸಾವಿರ ಮುಂಗಡ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

Images are for representation purpose only

Most Read Articles

Kannada
Read more on ವೆಸ್ಪಾ vespa
English summary
Vespa 125 Urban Club price revealed. Read In Kannada.
Story first published: Friday, May 10, 2019, 14:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X