Just In
Don't Miss!
- Movies
ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಭಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?
- News
18 ಮಹಿಳೆಯರ ಕೊಲೆ ಮಾಡಿದ್ದ ಸೀರಿಯಲ್ ಕಿಲ್ಲರ್ ಬಂಧನ; ಕೊಲೆಗೆ ಕಾರಣವೇನು?
- Finance
ಸತತ 4ನೇ ದಿನ ಇಳಿಕೆ ಕಂಡು ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ ಚಿನ್ನ
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ 2021ರ ಕೆಟಿಎಂ ಆರ್‍ಸಿ 200 ಬೈಕ್
ಕೆಟಿಎಂ ಕಂಪನಿಯು ತನ್ನ ಹೊಸ ಆರ್‍ಸಿ 200 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಕೆಟಿಎಂ ಆರ್‍ಸಿ 200 ಬೈಕ್ ಹಲವು ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಇತ್ತೀಚೆಗೆ ಹೊಸ ಕೆಟಿಎಂ ಆರ್‍ಸಿ 200 ಬೈಕಿನ ಯಾವುದೇ ಮರೆಮಾಚುವಿಕೆ ಇಲ್ಲದ ಚಿತ್ರವನ್ನು ರಶ್ಲೇನ್ ಬಹಿರಂಗಪಡಿಸಿದೆ. ಈ ಚಿತ್ರದಲ್ಲಿ ಕಂಡುಬಂದ ಆರ್‍ಸಿ 200 ಬೈಕ್ ಉತ್ಪಾದನಾ ಲೈನ್ ಮಾದರಿ ಎಂದು ನಿರೀಕ್ಷಿಸುತ್ತೇವೆ. 400 ಸಿಸಿಗಿಂತ ಕಡಿಮೆ ಇರುವ ಕೆಟಿಎಂ ಆರ್‍ಸಿ ಬೈಕುಗಳನ್ನು ಪುಣೆಯ ಬಜಾಜ್ ಸ್ಥಾವರದಲ್ಲಿ ಪ್ರತ್ಯೇಕವಾಗಿ ಉತ್ಪಾದಿಸಲಾಗುತ್ತದೆ. ಈ ಚಿತ್ರ ಕೂಡ ಅದೇ ಸ್ಥಾವರದ್ದು ಎಂಬುವುದು ಖಚಿತವಾಗಿದೆ. ಈ ಚಿತ್ರದಲ್ಲಿ ಕೆಟಿಎಂ ಬೈಕುಗಳ ಹಿಂಭಾಗದಲ್ಲಿ ಹಸ್ಕ್‌ವರ್ನಾ ಬೈಕುಗಳನ್ನು ಕಾಣಬಹುದಾಗಿದೆ,

ಸ್ಪೈ ಚಿತ್ರದಲ್ಲಿ ಹೊಸ ಕೆಟಿಎಂ ಆರ್‍ಸಿ 200 ಬೈಕಿನ ಮುಂಭಾಗದ ವಿನ್ಯಾಸವು ಸ್ಪಷ್ಟವಾಗಿ ಕಾಣಬಹುದಾಗಿದೆ. ಈ ಹೊಸ ಕೆಟಿಎಂ ಆರ್‍ಸಿ 200 ಬೈಕ್ ಹ್ಯಾಲೊಜೆನ್ ಯುನಿಟ್ ಅನ್ನು ಪಡೆಯುತ್ತದೆ. ಹ್ಯಾಲೊಜೆನ್ ಯುನಿಟ್ ನೊಂದಿಗೆ ಎಲ್ಇಡಿ ಆರ್ಎಲ್ ಗಳನ್ನು ಹೊಂದಿರಲಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇನ್ನು ಹೊಸ ಕೆಟಿಎಂ ಆರ್‍ಸಿ 200 ಬೈಕಿನ ಗ್ರಾಫಿಕ್ಸ್ ಹೊಸದಾದರೆ, ಬ್ಲ್ಯಾಕ್ ಮತ್ತು ಆರೇಂಜ್ ಬಣ್ಣದಿಂದ ಕೂಡಿದೆ. ಇದರೊಂದಿಗೆ ಇತರ ಬಣ್ಣದ ಆಯ್ಕೆಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಕೆಟಿಎಂ ಆರ್‍ಸಿ 200 ಬೈಕಿನಲ್ಲಿ 199.5 ಸಿಸಿ, ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 24.6 ಬಿಹೆಚ್‌ಪಿ ಪವರ್ ಮತ್ತು 19.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಎಂಜಿನ್ ನೊಂದಿಗೆ 6-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೊಸ ಕೆಟಿಎಂ ಆರ್‍ಸಿ 200 ಬೈಕಿನ ಬೆಲೆಯನ್ನು ಪ್ರಕಿಟಿಸಲಾಗಿಲ್ಲ. ಆದರೆ ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.

ಇನ್ನು ಈ ಹೊಸ ಕೆಟಿಎಂ ಆರ್‍ಸಿ 200 ಬೈಕ್ ಇತ್ತೀಚೆಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲಿಸಿದರೆ ಅಷ್ಟು ಅಗ್ರೇಸಿವ್ ಲುಕ್ ಹೊಂದಿಲ್ಲ. ಹೆಚ್ಚು ಅರಾಮದಾಯಕ ಮತ್ತು ಸ್ಟ್ಯಾಂಡರ್ಡ್ ವಿನ್ಯಾಸವನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಸ್ಪಾಟ್ ಟೆಸ್ಟ್ ನಲ್ಲಿ ಕೆಟಿಎಂ ಆರ್‍ಸಿ 200 ಬೈಕ್ ಹೊಸ ಆಯತಾಕಾರದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಆರ್‍ಸಿ 200 ಎಲ್ಸಿಡಿ ಡಿಸ್ ಪ್ಲೇಯನ್ನು ಹೊಂದಿದ್ದರೆ, ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಹೊಸ ಬೈಕಿನಲ್ಲಿ ಟಿಎಫ್ಟಿ ಯುನಿಟ್ ಅನ್ನು ಹೊಂದಿದೆ.

ಇದು 390 ಡ್ಯೂಕ್ ಮಾದರಿಯಲ್ಲಿರುವ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಡ್ಯಾಶ್ ಆಗಿರಬಹುದು. ಬೈಕಿನ ತಾಂತ್ರಿಕ ಅಂಶಗಳ ಬಗ್ಗೆ ನೋಡುವುದಾದರೆ, ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ನಡೆಸುವುದಿಲ್ಲವೆಂದು ನಿರೀಕ್ಷಿಸುತ್ತೇವೆ

ಬಹುನಿರೀಕ್ಷಿತ 2021ರ ಕೆಟಿಎಂ ಆರ್‍ಸಿ 200 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 2021ರ ಕೆಟಿಎಂ ಆರ್‍ಸಿ 200 ಬೈಕ್ ಹಲವಾರು ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.
Image Courtesy: Tushar Kevadiya/Rushlan Spylane