Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಆಂಪಿಯರ್
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಬೆಂಗಳೂರಿನ ಆಂಪಿಯರ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದು, ಕ್ರೆಡರ್ ಕಂಪನಿ ಜೊತೆಗೂಡಿ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.

ಕ್ರೆಡರ್ ಕಂಪನಿಯು ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ವಿವಿಧ ರಾಜ್ಯಗಳಲ್ಲಿ ಮಾರಾಟ ಮಳಿಗೆಗಳನ್ನು ಹೊಂದಿದೆ. ಇದೀಗ ಆಂಪಿಯರ್ ಜೊತೆಗೂಡಿ ಹೊಸ ಯೋಜನೆಗೆ ಚಾಲನೆ ನೀಡಿರುವ ಕ್ರೆಡರ್ ಕಂಪನಿಯು ಸಾಮಾನ್ಯ ಪೆಟ್ರೋಲ್ ಬೈಕ್ ಮತ್ತು ಸ್ಕೂಟರ್ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಎಕ್ಸ್‌ಚೆಂಜ್ ಆಫರ್ ನೀಡುತ್ತಿದ್ದು, ಆಸಕ್ತ ಗ್ರಾಹಕರು ತಮ್ಮ ಸಾಮಾನ್ಯ ದ್ವಿಚಕ್ರ ವಾಹನಗಳನ್ನು ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಬದಲಾಯಿಸಿಕೊಳ್ಳಲು ಸುವರ್ಣಾವಕಾಶ ಎನ್ನಬಹುದು.

ಕ್ರೆಡರ್ ಕಂಪನಿಯು ಸಾಮಾನ್ಯ ಬೈಕ್‌ಗಳನ್ನು ಆಕರ್ಷಕ ಬೆಲೆಗಳೊಂದಿಗೆ ಖರೀದಿ ಮಾಡಲಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಸುಲಭವಾಗಿ ಎಕ್ಸ್‌ಚೆಂಜ್ ಆಫರ್ ನೀಡಲಿದೆ. ಜೊತೆಗೆ ಕರೋನಾ ವೈರಸ್ ಹಿನ್ನಲೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹೊಸ ಸೇವೆಗಳನ್ನು ಒದಗಿಸಲಿದೆ.

ಹೀಗಾಗಿ ನಿಮ್ಮ ಬಳಿಯಿರುವ ಸಾಮಾನ್ಯ ಬೈಕ್ ಮಾದರಿಗಳನ್ನು ಉತ್ತಮ ಬೆಲೆಯೊಂದಿಗೆ ಮಾರಾಟ ಮಾಡುವ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬದಲಾಯಿಸಿಕೊಳ್ಳಬಹುದಾಗಿದ್ದು, ಜೊತೆಗೆ ಕ್ರೆಡರ್ ಮೂಲಕ ಬರುವ ಗ್ರಾಹಕರಿಗೆ ಆಂಪಿಯರ್ ಕಂಪನಿಯು ಕೂಡಾ ವಿಶೇಷ ಆಫರ್‌ಗಳನ್ನು ಸಹ ನೀಡುತ್ತಿದೆ.

ಇನ್ನು ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯು ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯುತ್ತಿದ್ದು, ಹೊಸ ಸ್ಕೂಟರ್ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಹೊಸ ಯೋಜನೆಗಳಿಗೆ ಚಾಲನೆ ನೀಡಿದೆ. ಕರೋನಾ ವೈರಸ್‌ನಿಂದಾಗಿ ಸ್ವಂತ ಬಳಕೆಯ ವಾಹನಗಳ ಸಂಖ್ಯೆಯು ಹೆಚ್ಚುತ್ತಿದ್ದು, ಬಹುತೇಕ ಆಟೋ ಕಂಪನಿಗಳು ಹೊಸ ಆಫರ್‌ಗಳ ಮೂಲಕ ವಾಹನ ಮಾರಾಟವನ್ನು ಹೆಚ್ಚಿಸುವತ್ತ ಯೋಜನೆ ರೂಪಿಸಿವೆ.

ಜೊತೆಗೆ ವಾಹನ ಖರೀದಿ ಯೋಜನೆಯಿದ್ದರೂ ಸದ್ಯ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲದ ಗ್ರಾಹಕರಿಗಾಗಿ ಲೀಸ್ ಆಯ್ಕೆಗಳನ್ನು ಹೆಚ್ಚಿಸಲಾಗುತ್ತಿದ್ದು, ಆಂಪಿಯರ್ ಕಂಪನಿಯು ಕೂಡಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳ ಮೇಲೆ ಗ್ರಾಹಕರ ಬೇಡಿಕೆ ಅನುಸಾರವಾಗಿ ಲೀಸ್ ಆಯ್ಕೆಯನ್ನು ಶುರು ಮಾಡಿದೆ.
MOST READ: 2020ರ ಅಂತ್ಯಕ್ಕೆ 100 ಹೊಸ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ ಎಥರ್ ಎನರ್ಜಿ

ವೆಹಿಕಲ್ ಲೀಸ್ ಸ್ಟಾರ್ಟ್ಅಪ್ ಕಂಪನಿಯಾದ ಒಟ್ಟೊ ಕ್ಯಾಪಿಟಲ್ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿರುವ ಆಂಪಿಯರ್ ಕಂಪನಿಯು ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಲೀಸ್ ಆಯ್ಕೆ ನೀಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ತಿಂಗಳು, ವರ್ಷದ ಆಧಾರದ ಮೇಲೆ ಮಾಲೀಕತ್ವವನ್ನು ಹೊಂದಬಹುದು.

ಆಂಪಿಯರ್ ಕಂಪನಿಯು ಹೊಸ ಲೀಸ್ ಕಾರ್ಯಕ್ರಮವನ್ನು ನಮ್ಮ ಬೆಂಗಳೂರಿನಲ್ಲಿ ಅಗಸ್ಟ್ 1ರಿಂದಲೇ ಆರಂಭಿಸಿದ್ದು, ಬೆಂಗಳೂರಿನ ನಂತರ ಗ್ರಾಹಕರ ಪ್ರಕ್ರಿಯೆ ಆಧಾರದ ಮೇಲೆ ಚೆನ್ನೈ, ಪುಣೆ, ದೆಹಲಿ, ಹೈದ್ರಾಬಾದ್ ನಗರಗಳಲ್ಲಿ ವಿಸ್ತರಣೆ ಮಾಡಲು ಸಿದ್ದವಾಗಿದೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಗ್ರಾಹಕರು ಆಂಪಿಯರ್ ಗುತ್ತಿಗೆ ಇವಿ ಸ್ಕೂಟರ್‌ಗಳನ್ನು ಒಟ್ಟೊ ಕ್ಯಾಪಿಟಲ್ ವೆಬ್‌ತಾಣ ಮೂಲಕ ಬುಕ್ ಮಾಡಬಹುದು ಇಲ್ಲವೇ ಆಂಪಿಯರ್ ಮಾರಾಟ ಮಳಿಗೆ ನೇರವಾಗಿ ಭೇಟಿ ನೀಡಿ ಬುಕ್ ಕೂಡಾ ಮಾಡಬಹುದಾಗಿದೆ.