ಕರೋನಾ ಎಫೆಕ್ಟ್: ಇನ್ನಷ್ಟು ತಡವಾಗಲಿದೆ ಬಜಾಜ್ ಚೇತಕ್ ಇವಿ ಉತ್ಪಾದನೆ ಮತ್ತು ಮಾರಾಟ

ಕರೋನಾ ವೈರಸ್ ತಡೆಯಲು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಆಟೋ ಉದ್ಯಮವು ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಲಾಕ್‌ಡೌನ್ ವಿನಾಯ್ತಿ ನಡುವೆ ಆಟೋ ಉದ್ಯಮವು ಪುನಾರಂಭಗೊಂಡಿದ್ದರೂ ಪರಿಸ್ಥಿತಿಯು ಸಹಜ ಸ್ಥಿತಿಯತ್ತ ಮರಳಲು ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳಲಿದೆ.

ಕರೋನಾ ಎಫೆಕ್ಟ್: ಇನ್ನಷ್ಟು ತಡವಾಗಲಿದೆ ಬಜಾಜ್ ಚೇತಕ್ ಇವಿ ಉತ್ಪಾದನೆ ಮತ್ತು ಮಾರಾಟ

ಸದ್ಯ 4ನೇ ಹಂತದ ಲಾಕ್‌ಡೌನ್ ಮುಂದುವರಿಸಿಕೊಂಡೆ ಕೇಂದ್ರ ಸರ್ಕಾರವು ಎಲ್ಲಾ ವಲಯದಲ್ಲೂ ಕೈಗಾರಿಕಾ ಉತ್ಪಾದನಾ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡಿದ್ದು, ಆಟೋ ಉತ್ಪಾದನಾ ಚಟುವಟಿಕೆಗಳು ಸಹ ಪುನಾರಂಭಗೊಂಡಿವೆ. ಉದ್ಯೋಗ ಸ್ಥಳದಲ್ಲಿ ಶೇ.50ಕ್ಕಿಂತಲೂ ಕಡಿಮೆ ಉದ್ಯೋಗಿಗಳೊಂದಿಗೆ ಉದ್ಯಮ ವ್ಯವಹಾರ ಕೈಗೊಳ್ಳಬೇಕಿದ್ದು, ಸಂಕಷ್ಟದಲ್ಲಿರುವ ಆಟೋ ಉದ್ಯಮ ಸುಧಾರಿಸಿಕೊಳ್ಳಲು ಇನ್ನೂ ಕೆಲ ವರ್ಷಗಳೇ ಬೇಕಾಗಬಹುದು.

ಕರೋನಾ ಎಫೆಕ್ಟ್: ಇನ್ನಷ್ಟು ತಡವಾಗಲಿದೆ ಬಜಾಜ್ ಚೇತಕ್ ಇವಿ ಉತ್ಪಾದನೆ ಮತ್ತು ಮಾರಾಟ

ಒಂದೇ ಬಾರಿಗೆ ಧೀರ್ಘಾವಧಿಯ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದರಿಂದ ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ವಾಹನಗಳನ್ನು ಹೊರತುಪಡಿಸಿ ಹೊಸ ವಾಹನ ಬಿಡುಗಡೆಯಲ್ಲಿ ತುಸು ವಿಳಂಬವಾಗಲಿದೆ.

ಕರೋನಾ ಎಫೆಕ್ಟ್: ಇನ್ನಷ್ಟು ತಡವಾಗಲಿದೆ ಬಜಾಜ್ ಚೇತಕ್ ಇವಿ ಉತ್ಪಾದನೆ ಮತ್ತು ಮಾರಾಟ

ಸದ್ಯ ವಾಹನಗಳ ಉತ್ಪಾದನೆ ಅವಕಾಶವಿದ್ದರೂ ಹೊಸ ಸುರಕ್ಷಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಿರುವುದರಿಂದ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಲಿದ್ದು, ಇದೇ ಕಾರಣಕ್ಕೆ ಬಜಾಜ್ ಆಟೋ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಕರೋನಾ ಎಫೆಕ್ಟ್: ಇನ್ನಷ್ಟು ತಡವಾಗಲಿದೆ ಬಜಾಜ್ ಚೇತಕ್ ಇವಿ ಉತ್ಪಾದನೆ ಮತ್ತು ಮಾರಾಟ

ಮುಂದಿನ ಅಗಸ್ಟ್ ಅಥವಾ ಸೆಪ್ಟೆಂಬರ್ ನಂತರವಷ್ಟೇ ಹೊಸ ಇವಿ ಸ್ಕೂಟರ್ ಉತ್ಪಾದನೆಗೆ ಮರುಚಾಲನೆ ನೀಡಲಿದ್ದು, ಸದ್ಯ ಹೆಚ್ಚು ಬೇಡಿಕೆ ಇರುವ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ.

ಕರೋನಾ ಎಫೆಕ್ಟ್: ಇನ್ನಷ್ಟು ತಡವಾಗಲಿದೆ ಬಜಾಜ್ ಚೇತಕ್ ಇವಿ ಉತ್ಪಾದನೆ ಮತ್ತು ಮಾರಾಟ

ಇನ್ನು ಕೇಂದ್ರ ಸರ್ಕಾರದ ಹೊಸ ಸುರಕ್ಷಾ ನಿಯಮದಂತೆ ವಾಹನ ಉತ್ಪಾದನಾ ಪ್ರಕ್ರಿಯೆಯೂ ಆಟೋ ಕಂಪನಿಗಳಿಗೆ ಹೆಚ್ಚು ವೆಚ್ಚದಾಯಕವಾಗಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಸುರಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಕರೋನಾ ಎಫೆಕ್ಟ್: ಇನ್ನಷ್ಟು ತಡವಾಗಲಿದೆ ಬಜಾಜ್ ಚೇತಕ್ ಇವಿ ಉತ್ಪಾದನೆ ಮತ್ತು ಮಾರಾಟ

ಸಾಮಾಜಿಕ ಅಂತರದೊಂದಿಗೆ ವಾಹನ ಉತ್ಪಾದನೆ, ಒಂದೇ ಶೀಫ್ಟ್‌ನಲ್ಲಿ ವಾಹನ ಉತ್ಪಾದನೆ ಮಾಡಬೇಕಾದ ಮಾರ್ಗಸೂಚಿಗಳು ವಾಹನ ಉತ್ಪಾದನಾ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಲಿದ್ದು, ಹೆಚ್ಚು ಬೇಡಿಕೆಯಿರುವ ವಾಹನಗಳತ್ತ ಮಾತ್ರವೇ ಆಟೋ ಕಂಪನಿಗಳು ಗಮನಹರಿಸುತ್ತಿವೆ.

Most Read Articles

Kannada
English summary
Bajaj Chetak electric scooter pan India launch delayed due to COVID-19 pandemic. Read in Kannada.
Story first published: Wednesday, May 27, 2020, 21:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X