Just In
Don't Miss!
- News
ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಹೊಸ ದಾಖಲೆ ಸೃಷ್ಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕರೋನಾ ಸಂಕಷ್ಟದಲ್ಲೂ ಹೊಸ ಶೋರೂಂಗಳನ್ನು ತೆರೆಯುತ್ತಿದೆ ಬೆನೆಲ್ಲಿ ಇಂಡಿಯಾ
ಬೆನೆಲ್ಲಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಬೈಕ್ ಮಾರಾಟದಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಮಾರಾಟ ಮಳಿಗೆಗಳನ್ನು ದೇಶದ ಪ್ರಮುಖ ನಗರಗಳಿಗೆ ವಿಸ್ತರಿಸುತ್ತಿದೆ.

ಕರೋನಾ ವೈರಸ್‌ನಿಂದಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಬೆನೆಲ್ಲಿ ಇಂಡಿಯಾ ಕಂಪನಿಯು ಕಳೆದ ವರ್ಷದ ಬೈಕ್ ಮಾರಾಟಕ್ಕಿಂತಲೂ ಶೇ. 103ರಷ್ಟು ಬೆಳವಣಿಗೆ ಸಾಧಿಸಿದ್ದು, ಕ್ಲಾಸಿಕ್ ಬೈಕ್ ಮಾದರಿಯಾದ ಇಂಪೀರಿಯಲ್ 400 ಆವೃತ್ತಿಯು ಬೆನೆಲ್ಲಿ ಬೈಕ್ ಮಾರಾಟದಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಕಂಪನಿಯು ಮತ್ತಷ್ಟು ಹೊಸ ಬೈಕ್ ಮಾದರಿಗಳೊಂದಿಗೆ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದ್ದು, ಇಂದು 35ನೇ ಮಾರಾಟ ಮಳಿಗೆಯನ್ನು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಹೊಸ ಬೈಕ್ ಮಾರಾಟ ಮಳಿಗೆಗೆ ಚಾಲನೆ ನೀಡಿದೆ.

ಗ್ರಾಹಕರ ಬೇಡಿಕೆ ಬೇಡಿಕೆಗೆ ಅನುಗುಣವಾಗಿ ಈ ಹಿಂದೆ ಕೆಲವೇ ಕೆಲವು ನಗರಗಳಲ್ಲಿ ಮಾತ್ರವೇ ಮಾರಾಟ ಸೌಲಭ್ಯ ಹೊಂದಿದ್ದ ಬೆನೆಲ್ಲಿ ಕಂಪನಿಯು ಹೊಸ ಉತ್ಪನ್ನಗಳ ಜೊತೆಗೆ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಿದ್ದು, ಕಳೆದ 1 ವರ್ಷದಲ್ಲಿ 20ಕ್ಕೂ ಹೆಚ್ಚು ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆನೆಲ್ಲಿಯ 35 ಮಾರಾಟ ಮಳಿಗೆಗಳು ದೇಶದ ಕೆಲವೇ ಕೆಲವು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2021ರ ಮಧ್ಯಂತರದಲ್ಲಿ ಮಾರಾಟ ಮಳಿಗೆಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಳ ಮಾಡುಲಾಗುತ್ತಿದೆ.

ಕೇವಲ ಮಾಹಾನಗರಗಳಲ್ಲಿ ಮಾತ್ರ ಟೈರ್ 1 ಮತ್ತು ಟೈರ್ 2 ನಗರಗಳಲ್ಲೂ ಮಾರಾಟ ಮಳಿಗೆ ತೆರೆಯುವ ಯೋಜನೆಯಿರುವುದಾಗಿ ಹೇಳಿಕೊಂಡಿರುವ ಬೆನೆಲ್ಲಿ ಇಂಡಿಯಾ ಕಂಪನಿಯು ಬೈಕ್ ಉತ್ಪನ್ನಗಳನ್ನು ಸಹ ಹೆಚ್ಚಿಸುತ್ತಿದೆ. ಬೆನೆಲ್ಲಿ ಕಂಪನಿಯು ಸದ್ಯ ಟಿಆರ್‌ಕೆ 502, ಟಿಆರ್‌ಕೆ 505 ಎಕ್ಸ್, ಲಿಯೊನ್ಸಿನೊ 500, 302 ಎಸ್, 302 ಆರ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಇಂಪೀರಿಯರ್ 400 ಬಿಎಸ್-6 ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇಂಪೀರಿಯರ್ 400 ಬೈಕ್ ಮಾದರಿಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಮಾಹಾವೀರ್ ಗ್ರೂಪ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿರುವ ಬೆನೆಲ್ಲಿ ಇಂಡಿಯಾ ಕಂಪನಿಯು ಮಧ್ಯಮ ಕ್ರಮಾಂಕದ ಸ್ಟ್ರೀಟ್ ಬೈಕ್ ಮಾದರಿಗಳೊಂದಿಗೆ ಕ್ಲಾಸಿಕ್ ಬೈಕ್ ಮಾದರಿಗಳ ಮಾರಾಟಕ್ಕೂ ಹೆಚ್ಚಿನ ಒತ್ತು ನೀಡುತ್ತಿದ್ದು, ಇಂಪೀರಿಯಲ್ 400 ನಂತರ ನಂತರ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಎಪ್ರಿಲ್ 1ರಿಂದ ಜಾರಿಗೆ ಬಂದಿರುವ ಹೊಸ ಬಿಎಸ್-6 ಎಮಿಷನ್ ಪ್ರಕಾರ ತನ್ನ ಪ್ರಮುಖ ಬೈಕ್ ಮಾದರಿಗಳನ್ನು ಉನ್ನತೀಕರಿಸಿರುವ ಬೆನೆಲ್ಲಿ ಕಂಪನಿಯು ಇಂಪೀರಿಯರ್ 400 ಬೈಕ್ ಮಾದರಿಯ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ಹೊಸ ಬೆನೆಲ್ಲಿ ಇಂಪೀರಿಯೇಲ್ 400 ಆರಂಭಿಕ ಬೆಲೆಯು ಭಾರತದಲ್ಲಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ.1.99 ಲಕ್ಷಗಳಾಗಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗಿರುವ ಹೊಸ ಬೈಕ್ ಮಾದರಿಯು ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುತ್ತಿದೆ.

ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಮಾದರಿಯು 374-ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ, 29-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಕ್ಲಾಸಿಕ್ ಲುಕ್ ನೀಡುವುದಕ್ಕಾಗಿ ವಿಶೇಷ ವಿನ್ಯಾಸವುಳ್ಳ ಹೆಡ್‌ಲ್ಯಾಂಪ್, ಟ್ವಿನ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಅಳವಡಿಸಲಾಗಿದ್ದು, ಸುರಕ್ಷತೆಗಾಗಿ ಎಬಿಎಸ್, ಡ್ಯುಯಲ್ ಚಾನೆಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.