ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಬಿಎಸ್-6 ಬೆನೆಲ್ಲಿ ಬೈಕುಗಳು

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಸರಣಿಯಲ್ಲಿರುವ ಎಲ್ಲಾ ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ. ಬೆನೆಲ್ಲಿ ಕಂಪನಿಯು ಇಂಪೀರಿಯಲ್ 400 ಬೈಕನ್ನು ಮಾತ್ರ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಬಿಎಸ್-6 ಬೆನೆಲ್ಲಿ ಬೈಕುಗಳು

ಕೆಲವು ವರದಿಗಳ ಪ್ರಕಾರ ಬೆನೆಲ್ಲಿ ಕಂಪನಿಯು ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಮತ್ತು ಲಿಯೊನ್ಸಿನೊ 500 ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಮತ್ತು ಲಿಯೊನ್ಸಿನೊ 500 ಬೈಕುಗಳು ಈ ವರ್ಷದ ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಬಿಎಸ್-6 ಬೆನೆಲ್ಲಿ ಬೈಕುಗಳು

ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502 ಎಕ್ಸ್ ಮತ್ತು ಲಿಯೊನ್ಸಿನೊ 500 ಎಂಬ ಮೂರು ಬೈಕುಗಳಲ್ಲಿ ಒಂದೇ ಮಾದರಿಯ ಎಂಜಿನ್ ಅನ್ನು ಹೊಂದಿರಲಿದೆ, ಆದರೆ ಗೇರ್ ವಿಭಾಗದಲ್ಲಿ ಮಾತ್ರ ಸಣ್ಣ ಪ್ರಮಾಣದ ಬದಲಾವಣೆಗಳನ್ನು ಹೊಂದಿರುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಬಿಎಸ್-6 ಬೆನೆಲ್ಲಿ ಬೈಕುಗಳು

ಬೆನೆಲ್ಲಿ ಟಿಆರ್‌ಕೆ 502 ಮತ್ತು ಟಿಆರ್‌ಕೆ 502 ಎಕ್ಸ್ ಹೆಚ್ಚು ಟಾರ್ಕ್ ಆಧಾರಿತ ಎಂಜಿನ್ ಹೊಂದಿರಬಹುದು. ಆದರೆ ಲಿಯೊನ್ಸಿನೊ 500 ಸಮತೋಲಿತ ಎಂಜಿನ್ ಸೆಟಪ್ ಹೊಂದುವ ನಿರೀಕ್ಷೆಯಿದೆ.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಬಿಎಸ್-6 ಬೆನೆಲ್ಲಿ ಬೈಕುಗಳು

ಈ ಮೂರು ಮಾದರಿಗಳ ಅದೇ 499 ಸಿಸಿ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿರಲಿದೆ. ಈ ಎಂಜಿನ್ 47.6 ಬಿಹೆಚ್‍ಪಿ ಪವರ್ ಮತ್ತು 45 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಬಿಎಸ್-6 ಬೆನೆಲ್ಲಿ ಬೈಕುಗಳು

ಸ್ಕ್ರ್ಯಾಂಬ್ಲರ್-ಶೈಲಿಯ ಲಿಯೊನ್ಸಿನೊ 500 ಬೈಕ್ ದುಂಡಗಿನ ಆಕಾರದ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಪ್-ರೈಟ್ ಹ್ಯಾಂಡಲ್‌ಬಾರ್, ಫ್ರಂಟ್ ಫೆಂಡರ್‌ನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಬಿಎಸ್-6 ಬೆನೆಲ್ಲಿ ಬೈಕುಗಳು

ಇನ್ನು ಈ ಬೈಕಿನ ಸಸ್ಪೆಂಕ್ಷನ್ ಗಾಗಿ 50 ಎಂಎಂ ಯುಎಸ್‌ಡಿ (ಅಪ್‌ಸೈಡ್ ಡೌನ್) ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿರಲಿದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಟ್ವಿನ್-ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗುತ್ತದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿರುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಬಿಎಸ್-6 ಬೆನೆಲ್ಲಿ ಬೈಕುಗಳು

ಬೆನೆಲ್ಲಿ ಟಿಆರ್‌ಕೆ 502 ಮತ್ತು ಟಿಆರ್‌ಕೆ 502ಎಕ್ಸ್ ಬೈಕುಗಳಲ್ಲಿ ಮುಂಭಾಗದಲ್ಲಿ ಡ್ಯುಯಲ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಅನ್ನು ಮುಂಭಾಗದಲ್ಲಿ ಡ್ಯುಯಲ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಬ್ರೆಕ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಬಿಎಸ್-6 ಬೆನೆಲ್ಲಿ ಬೈಕುಗಳು

ಬೆನೆಲ್ಲಿ ಕಂಪನಿಯು ಶೀಘ್ರದಲ್ಲೇ ಟಿಆರ್‌ಕೆ 502, ಟಿಆರ್‌ಕೆ 502 ಎಕ್ಸ್ ಮತ್ತು ಲಿಯೊನ್ಸಿನೊ 500 ಎಂಬ ಮೂರು ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಮೂರು ಮಾದರಿಗಳ ಬೆಲೆಗಳು ಹಿಂದಿನ ಮಾದರಿಗಳಿಗಿಂತ ತುಸು ದುಬಾರಿಯಾಗಿರಲಿದೆ.

Most Read Articles

Kannada
English summary
Benelli TRK 502, TRK 502X & Leoncino 500 BS6 Models Will Be Arriving Soon In India.
Story first published: Thursday, August 20, 2020, 17:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X