ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಭಾರತದಲ್ಲಿ ಮೊದಲ ಬಿಎಸ್-6 ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದ ಹೆಗ್ಗಳಿಕೆ ಹೀರೋ ಮೋಟೊಕಾರ್ಪ್ ಅವರಿಗೆ ಸಲ್ಲುತ್ತದೆ. ಹೀರೋ ಮೋಟೊಕಾರ್ಪ್ ತನ್ನ ಜನಪ್ರಿಯ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ಬಿಎಸ್-6 ಆವೃತ್ತಿಯಲ್ಲಿ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಳಿಸಿತು.

ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ಎರಡನೇ ಬಾರಿ ಹೆಚ್ಚಿಸಿದೆ. ಈ ವರ್ಷದ ಮೇ ತಿಂಗಳಲ್ಲಿ ಈ ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ರೂ.750 ಗಳವರೆಗೆ ಹೆಚ್ಚಿಸಿದ್ದರು. ಇದೀಗ ಸ್ಪ್ಲೆಂಡರ್ ಪ್ಲಸ್ ಬೈಕಿನ ಎಲ್ಲಾ ರೂಪಾಂತರಗಳ ಬೆಲೆಯನ್ನು ರೂ.150 ಗಳವರೆಗೆ ಹೆಚ್ಚಿಸಿದೆ. ಇದೀಗ ಈ ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಆರಂಭಿಕ ಬೆಲೆಯು ರೂ.60,500 ಗಳಾಗಿದೆ.

ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೀರೋ ಸ್ಪ್ಲೆಂಡರ್ ಪ್ಲಸ್ ದಶಕಗಳಿಂದ ಸಾಮಾನ್ಯ ವರ್ಗದ ಜನರ ಮೆಚ್ಚಿನ ಬೈಕ್‍‍ಗಳಲ್ಲಿ ಒಂದಾಗಿದೆ. ಈ ಬೈಕ್ ಸರಳವಾದ ವಿನ್ಯಾಸ ಮತ್ತು ಉತ್ತಮ ಮೈಲೇಜ್‍‍ನಿಂದ ಈ ಬೈಕ್ ಗ್ರಾಹಕರ ಗಮನಸೆಳೆದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ 100 ಸಿಸಿ ಏರ್-ಕೂಲ್ಡ್, ಫೋರ್-ಸ್ಟ್ರೋಕ್, ಕಾರ್ಬ್ಯುರೇಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 7.91 ಬಿ‍‍ಹೆಚ್‍‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 8.05 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಈ ಎಂಜಿನ್‍‍ನೊಂದಿಗೆ 4 ಸ್ಫೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಎಂಜಿನ್ ನೊಂದಿಗೆ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ. ಈ ಬೈಕಿನ 11 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರ್

ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಹೊಸ ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ನೀಡಿದೆ.

ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಇನ್ನು ಈ ಬೈಕಿನ ಎರಡು ಟಯರುಗಳಲಿ ಡ್ರಮ್ ಬ್ರೇಕ್‌ಗಳನ್ನು ಅಳವಡಿಸಿದೆ. ಮಾಲಿನ್ಯ ಉಂಟುಮಾಡುವುದನ್ನು ಕಡಿಮೆ ಮಾಡಲು ಹೆಚ್ಚುವರಿಯಾಗಿ ಕಟಲ್ಯಾಟಿಕ್ ಕರ್ನ್‍ವಾಟರ್ ಸಿಸ್ಟಂ ಅನ್ನು ಕೂಡ ಅಳವಡಿಸಿದ್ದಾರೆ. ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕ್ ರೆಡ್ ಮತ್ತು ಬ್ಲ್ಯಾಕ್ ಸೇರಿದಂತೆ ವಿವಿಧ ರೀತಿಯ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಇದರೊಂದಿಗೆ ಹೀರೋ ಮೋಟೊಕಾರ್ಪ್ ಕಂಪನಿಯು ಹೆಚ್‌ಎಫ್ ಡೀಲಕ್ಸ್ ನ ಕಿಕ್ ಸ್ಟಾರ್ಟ್ ವಿತ್ ಸ್ಪೋಕ್ ವ್ಹೀಲ್ ಹಾಗೂ ಕಿಕ್ ಸ್ಟಾರ್ಟ್ ವಿಥ್ ಅಲಾಯ್ ವ್ಹೀಲ್ ಎಂಬ ಎರಡು ಮಾದರಿಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಸ್ಪೋಕ್ ವ್ಹೀಲ್ ಹೊಂದಿರುವ ಕಿಕ್ ಸ್ಟಾರ್ಟ್ ಮಾದರಿಯ ಬೆಲೆ ರೂ.48,000ಗಳಾದರೆ, ಅಲಾಯ್ ವ್ಹೀಲ್ ಹೊಂದಿರುವ ಕಿಕ್ ಸ್ಟಾರ್ಟ್ ಮಾದರಿಯ ಬೆಲೆ ರೂ.49,000ಗಳಾಗಿದೆ.

ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಹೀರೋ ಮೋಟೊಕಾರ್ಪ್

ಬಿಎಸ್-6 ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಭಾರತದಲ್ಲಿ ಬಜಾಜ್ ಪ್ಲಾಟಿನಾ ಮತ್ತು ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್‍‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.ಬಿಎಸ್-6 ಸ್ಪ್ಲೆಂಡರ್ ಪ್ಲಸ್ ಬೈಕ್ ಹೊಸ ಬಣ್ಣಗಳ ಆಯ್ಕೆಯೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

Most Read Articles

Kannada
English summary
Hero Splendor Plus BS6 Gets Another Price Hike Details. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X