ಆಟೋ ಎಕ್ಸ್‌ಪೋ 2020: ಇ‍ಎಫ್ 1 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವಾರ್ವ್

ಪುಣೆ ಮೂಲದ ಇವಾರ್ವ್ ಕಂಪನಿಯು 2020ರ ಆಟೋ ಎಕ್ಸ್ ಪೋದಲ್ಲಿ ಇ‍ಎಫ್ 1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಇದು ಇವಾರ್ವ್ ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.

ಆಟೋ ಎಕ್ಸ್‌ಪೋ 2020: ಇ‍ಎಫ್ 1 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವಾರ್ವ್

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ರೆಗ್ಯುಲರ್ ಚಾಸೀಸ್ ಹಾಗೂ ಮೋಟರ್ ಅನ್ನು ಈ ಸ್ಕೂಟರಿನಲ್ಲಿ ಅಳವಡಿಸಲಾಗಿದೆ. ಇವಾರ್ವ್ ಕಂಪನಿಯು ಇ‍ಎಫ್ 1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ಒಂದು ವರ್ಷದಿಂದ ಅಭಿವೃದ್ಧಿಪಡಿಸುತ್ತಿದೆ.

ಆಟೋ ಎಕ್ಸ್‌ಪೋ 2020: ಇ‍ಎಫ್ 1 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವಾರ್ವ್

ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಸ್ಟೀಲ್ ಅಲ್ಯುಮಿನಿಯಂ ಅಲಾಯ್ ವ್ಹೀಲ್, 3.3 ಕಿ.ವ್ಯಾ ಹಾಗೂ 5 ಕಿ.ವ್ಯಾನ ಎರಡು ಎಲೆಕ್ಟ್ರಿಕ್ ಮೋಟರ್‍‍ಗಳನ್ನು ಅಳವಡಿಸಲಾಗಿದೆ. 5 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್‍‍ನಿಂದ ಚಾಲನೆ ಮಾಡಿದಾಗ ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 110 ಕಿ.ಮೀಗಳಾಗಿರಲಿದೆ.

ಆಟೋ ಎಕ್ಸ್‌ಪೋ 2020: ಇ‍ಎಫ್ 1 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವಾರ್ವ್

3.3 ಕಿ.ವ್ಯಾನ ಎಲೆಕ್ಟ್ರಿಕ್ ಮೋಟರ್‍‍ನಿಂದ ಚಾಲನೆ ಮಾಡಿದಾಗ ಈ ಎಲೆಕ್ಟ್ರಿಕ್ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 90 ಕಿ.ಮೀಗಳಾಗಿರಲಿದೆ. ಇ‍ಎಫ್ 1 ಎಲೆಕ್ಟ್ರಿಕ್ ಸ್ಕೂಟರ್ 0 - 60 ಕಿ.ಮೀ ವೇಗವನ್ನು ಕೇವಲ 8.73 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.

ಆಟೋ ಎಕ್ಸ್‌ಪೋ 2020: ಇ‍ಎಫ್ 1 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವಾರ್ವ್

ಇವಾರ್ವ್ ಕಂಪನಿಯು ಈ ಸ್ಕೂಟರಿನಲ್ಲಿರುವ ಬ್ಯಾಟರಿಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಬ್ಯಾಟರಿಯನ್ನು ಸ್ಕೂಟರ್‍‍ನಿಂದ ಹೊರತೆಗೆಯಲು ಸಾಧ್ಯವಿಲ್ಲ ಹಾಗೂ ಈ ಬ್ಯಾಟರಿಯು ಫಾಸ್ಟ್ ಚಾರ್ಜರ್‍‍ಗಳನ್ನು ಹೊಂದಿರಲಿದೆ.

ಆಟೋ ಎಕ್ಸ್‌ಪೋ 2020: ಇ‍ಎಫ್ 1 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವಾರ್ವ್

ಈ ಬ್ಯಾಟರಿಯನ್ನು ಒಂದೂವರೆ ಗಂಟೆಯಲ್ಲಿ 50%ನಷ್ಟು ಚಾರ್ಜ್ ಮಾಡಬಹುದು. ಈ ಬ್ಯಾಟರಿಯನ್ನು 3 - 5 ವರ್ಷಗಳವರೆಗೆ ಬಳಸಬಹುದು. ಈ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಮುನ್ನ ಇವಾರ್ವ್ ಕಂಪನಿಯು ಸ್ಕೂಟರಿನ ಬೆಲೆಯನ್ನು ಬಹಿರಂಗಪಡಿಸಲಿದೆ.

ಆಟೋ ಎಕ್ಸ್‌ಪೋ 2020: ಇ‍ಎಫ್ 1 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಇವಾರ್ವ್

ಮೂಲಗಳ ಪ್ರಕಾರ, ಈ ಸ್ಕೂಟರಿನ ಬೆಲೆಯು ಸುಮಾರು ರೂ.2 ಲಕ್ಷಗಳಾಗುವ ಸಾಧ್ಯತೆಗಳಿವೆ. ಇ‍ಎಫ್ 1 ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಚೇತಕ್ ಹಾಗೂ ಎಥೆರ್ 450 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ. ಈ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುವುದಾದರೆ ಇವಾರ್ವ್ ಈ ಸ್ಕೂಟರಿನ ಚಾರ್ಜಿಂಗ್ ಸಮಯವನ್ನು ಕಡಿಮೆಗೊಳಿಸಬೇಕಿದೆ.

Most Read Articles

Kannada
English summary
Everve unveils EF1 electric scooter at 2020 Auto Expo. Read in Kannada.
Story first published: Friday, February 7, 2020, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X