ದೀಪಾವಳಿ ಸಂಭ್ರಮ: ಜನಪ್ರಿಯ ಹೀರೋ ಮಾದರಿಗಳ ಮೇಲೆ ಭರ್ಜರಿ ಆಫರ್

ಹೀರೋ ಮೋಟೊಕಾರ್ಪ್ ತನ್ನ ಸರಣಿಯಲ್ಲಿರುವ ಜನಪ್ರಿಯ ಸ್ಕೂಟರ್ ಮತ್ತು ಬೈಕುಗಳ ಮೇಲೆ ದೀಪಾವಳಿ ಸಂಭ್ರಮಾಚರಣೆಯ ಪ್ರಯುಕ್ತ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಇದರಲ್ಲಿ ಕಡಿಮೆ ಬಡ್ಡಿದರ, ನಗದು ರಿಯಾಯಿತಿ ಮತ್ತು ಇತರ ಹೆಚ್ಚಿನ ಕೊಡುಗೆಳನ್ನು ಒಳಗೊಂಡಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ ಹೀರೋ ಮಾದರಿಗಳ ಮೇಲೆ ಭರ್ಜರಿ ಆಫರ್

ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ ಬ್ರ್ಯಾಂಡ್ ಮಾರಾಟ ಮಾಡುವ ಆಯ್ದ ಬೈಕುಗಳು ಮತ್ತು ಸ್ಕೂಟರ್ ಸರಣಿಗಳಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಈ ಆಫರ್ ಗಳನ್ನು ನೀಡುವಾಗ ಕಮ್ಯೂಟರ್ ಬೈಕುಗಳು, ಸ್ಕೂಟರ್‌ಗಳು ಮತ್ತು ಹೀರೋ ಮೊಟೊಕಾರ್ಪ್ ಮಾರಾಟ ಮಾಡುವ ಪರ್ಫಾಮೆನ್ಸ್ ಬೈಕುಗಳು ಎಂಬ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ ಹೀರೋ ಮಾದರಿಗಳ ಮೇಲೆ ಭರ್ಜರಿ ಆಫರ್

ಕಮ್ಯೂಟರ್ ಬೈಕುಗಳ ವಿಭಾಗದ ಆಫರ್ ನಿಂದ ಪ್ರಾರಂಭಿಸುವುದಾದರೆ, ಈ ವಿಭಾಗದ ಸ್ಪ್ಲೆಂಡರ್ ಪ್ಲಸ್, ಸೂಪರ್ ಸ್ಪ್ಲೆಂಡರ್, ಸ್ಪ್ಲೆಂಡರ್ ಐಸ್ಮಾರ್ಟ್, ಎಚ್‌ಎಫ್ ಡಿಲಕ್ಸ್, ಪ್ಯಾಶನ್ ಪ್ರೊ ಮತ್ತು ಗ್ಲ್ಯಾಮರ್ ಬೈಕುಗಳು ಒಳಗೊಂಡಿವೆ. ಕಂಪನಿಯು ರೂ.4,999 ಗಳವರೆಗಿನ ಆಕರ್ಷಕ ಡೌನ್ ಪೇಮೆಂಟ್ ಅನ್ನು ಶೇ.6.99 ರಷ್ಟು ಬಡ್ಡಿದರದೊಂದಿಗೆ ನೀಡುತ್ತಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ದೀಪಾವಳಿ ಸಂಭ್ರಮ: ಜನಪ್ರಿಯ ಹೀರೋ ಮಾದರಿಗಳ ಮೇಲೆ ಭರ್ಜರಿ ಆಫರ್

ಹೆಚ್ಚುವರಿಯಾಗಿ ಈ ಬೈಕುಗಳಿಗೆ ರೂ.3,100 ಗಳವರೆಗೆ ಇತರ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಇದರಲ್ಲಿ ರೂ.2,100 ನಗದು ರಿಯಾಯಿತಿ ಮತ್ತು ರೂ.1,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡುತ್ತಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ ಹೀರೋ ಮಾದರಿಗಳ ಮೇಲೆ ಭರ್ಜರಿ ಆಫರ್

ಸ್ಕೂಟರ್‌ಗಳ ವಿಭಾಗದ ಬಗ್ಗೆ ಹೇಳುವುದಾದರೆ, ಮೆಸ್ಟ್ರೋ ಎಡ್ಜ್ 110, ಡೆಸ್ಟಿನಿ 125, ಮೆಸ್ಟ್ರೋ ಎಡ್ಜ್ 125 ಮತ್ತು ಪ್ಲೆಷರ್ ಸ್ಕೂಟರ್ ಗಳಿಗೆ ಆಫರ್ ಅನ್ನು ನೀಡಲಾಗಿದೆ. ಕಮ್ಯೂಟರ್ ಬೈಕುಗಳಿಗೆ ನೀಡಲಾಗುವಂತಹ ಡೌನ್ ಪೇಮೆಂಟ್ ಮತ್ತು ಆರ್‌ಒಐ ಅನ್ನು ನೀಡಲಾಗುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ದೀಪಾವಳಿ ಸಂಭ್ರಮ: ಜನಪ್ರಿಯ ಹೀರೋ ಮಾದರಿಗಳ ಮೇಲೆ ಭರ್ಜರಿ ಆಫರ್

ಆದರೆ ಈ ಸ್ಕೂಟರ್ ಗಳಿಗೆ ನಗದು ರಿಯಾಯಿತಿಗಳು ಕಮ್ಯೂಟರ್ ಬೈಕುಗಳಿಗಿಂತ ಹೆಚ್ಚಿದೆ. ಈ ಹೀರೋ ಸ್ಕೂಟರ್ ಗಳಿಗೆ ರೂ.6,100 ಪ್ರಯೋಜನವನ್ನು ಘೋಷಿಸಿದೆ. ಇದರಲ್ಲಿ ರೂ.2,100 ಗಳವರೆಗೆ ನಗದು ರಿಯಾಯಿತಿ ಮತ್ತು ರೂ.2,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದೆ. ಇದರೊಂದಿಗೆ ರೂ.2,000 ಗಳವರೆಗೆ ಕಾರ್ಪೋರೇಟ್ ರಿಯಾಯಿತಿಯನ್ನು ನೀಡಲಾಗುತ್ತದೆ.

ದೀಪಾವಳಿ ಸಂಭ್ರಮ: ಜನಪ್ರಿಯ ಹೀರೋ ಮಾದರಿಗಳ ಮೇಲೆ ಭರ್ಜರಿ ಆಫರ್

ಕೊನೆಯದಾಗಿ ಬ್ರ್ಯಾಂಡ್ ಪರ್ಫಾಮೆನ್ಸ್ ಬೈಕುಗಳ ವಿಭಾಗದ ಆಫರ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಎಕ್ಸ್‌ಟ್ರಿಮ್ 160ಆರ್ ಮತ್ತು ಜನಪ್ರಿಯ ಎಂಟ್ರಿ ಲೆವೆಲ್ ಎಕ್ಸ್‌ಪಲ್ಸ್ 200 ಬೈಕುಗಳು ಒಳಗೊಂಡಿದೆ. ಎರಡು ಬೈಕುಗಳಿಗೆ ಆಕರ್ಷಕ ಆಫರ್ ಗಳನ್ನು ನೀಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ದೀಪಾವಳಿ ಸಂಭ್ರಮ: ಜನಪ್ರಿಯ ಹೀರೋ ಮಾದರಿಗಳ ಮೇಲೆ ಭರ್ಜರಿ ಆಫರ್

ಹೀರೋ ಎಕ್ಸ್‌ಟ್ರಿಮ್ 160ಆರ್ ಮತ್ತು ಎಕ್ಸ್‌ಪಲ್ಸ್ 200 ಬೈಕುಗಳಿಗೆ ಒಟ್ಟು ರೂ.7,000 ಗಳವರೆಗೆ ರಿಯಾಯಿತಿ ಘೋಷಿಸಿದೆ. ಇದರಲ್ಲಿ ರೂ.3,000 ಗಳವರೆಗೆ ನಗದು ರಿಯಾಯಿತಿ ಮತ್ತು ರೂ.2,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದೆ.

ದೀಪಾವಳಿ ಸಂಭ್ರಮ: ಜನಪ್ರಿಯ ಹೀರೋ ಮಾದರಿಗಳ ಮೇಲೆ ಭರ್ಜರಿ ಆಫರ್

ಹೀರೋ ಮೋಟೊಕಾರ್ಪ್ ಈ ಹಬ್ಬದ ಸೀಸನ್ ನಲ್ಲಿ ತನ್ನ ಜನಪ್ರಿಯ ಮಾದರಿಗಳಿಗೆ ಆಕರ್ಷಕ ಆಫರ್ ಅನ್ನು ಘೋಷಿಸಿದೆ. ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಹೀರೋ ಕಂಪನಿಗೆ ಈ ಆಫರ್ ಗಳು ನೆರವಾಗುತ್ತದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Hero MotoCorp Bikes & Scooters Festive Offers. Read In Kannada.
Story first published: Saturday, October 31, 2020, 19:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X