ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಹೋಂಡಾ ಮೋಟಾರ್‌ಸೈಕಲ್ಸ್ ಅಂಡ್ ಸ್ಕೂಟರ್ಸ್ ಇಂಡಿಯಾ ಕಂಪನಿಯು ಇತ್ತೀಚೆಗೆ ತನ್ನ ಹೈನೆಸ್ ಸಿಬಿ 350 ಪ್ರೀಮಿಯಂ ಕ್ರೂಸರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಈ ಬೈಕಿನ ಬೆಲೆ ಸುಮಾರು ಎಕ್ಸ್ ಶೋರೂಂ ದರದಂತೆ ರೂ.1.85 ಲಕ್ಷಗಳಾಗಿದೆ. ಈ ಹೊಸ ಕ್ರೂಸರ್ ಬೈಕ್ ಅನ್ನು ಕಂಪನಿಯ ಬಿಗ್ ವಿಂಗ್ ಡೀಲರ್ ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದು. ಇತ್ತೀಚಿಗೆ ಈ ಬೈಕ್ ಅನ್ನು ಬೆಂಗಳೂರಿನಲ್ಲಿರುವ ಕಂಪನಿಯ ಡೀಲರ್ ಗಳ ಬಳಿ ಪರೀಕ್ಷಿಸಲಾಯಿತು. ಹೊಸ ಹೈನೆಸ್ ಸಿಬಿ 350 ಬೈಕಿನ ಫಸ್ಟ್ ಲುಕ್ ಹಾಗೂ ವಾಕ್‌ರೌಂಡ್ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಡಿಸೈನ್ ಹಾಗೂ ಸ್ಟೈಲಿಂಗ್

ಈ ಬೈಕ್ 350 ಕ್ಲಾಸಿಕ್ ರೆಟ್ರೊ-ಡಿಸೈನ್ ಥೀಮ್ ವಿನ್ಯಾಸವನ್ನು ಹೊಂದಿದೆ. ಈ ಬೈಕಿನಲ್ಲಿ ಹಲವಾರು ಅಡ್ವಾನ್ಸ್ದ್ ಫೀಚರ್ ಹಾಗೂ ಟೆಕ್ನಾಲಜಿಗಳನ್ನು ಅಳವಡಿಸಲಾಗಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಹೈನೆಸ್ ಸಿಬಿ 350 ಬೈಕಿನ ವಿನ್ಯಾಸವು ಹಳೆಯ ಕ್ಲಾಸಿಕ್ ಸಿಬಿ ಬೈಕ್ ಸರಣಿಯನ್ನು ನೆನಪಿಸುತ್ತದೆ. ಈ ಬೈಕಿನ ಮುಂಭಾಗದಲ್ಲಿ ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್ ಕ್ರೋಮ್ ಫ್ರಂಟ್ ಫೆಂಡರ್‌ ಹಾಗೂ ಫೋರ್ಕ್‌ಗಳನ್ನು ನೀಡಲಾಗಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಈ ಬೈಕ್ ದೊಡ್ಡದಾದ 15-ಲೀಟರಿನ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಬೈಕಿನ ಸೈಡ್ ಗಳಲ್ಲಿ ಹೊಂಡಾ ಬ್ಯಾಡ್ಜಿಂಗ್ ಅಳವಡಿಸಲಾಗಿದೆ. ಹೈನೆಸ್ ಸಿಬಿ 350 ಬೈಕಿನಲ್ಲಿ ಆರಾಮದಾಯಕವಾದ ಸಿಂಗಲ್ ಸೀಟ್ ನೀಡಲಾಗಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಎಂಜಿನ್ ಕವರ್, ಎಕ್ಸಾಸ್ಟ್ ಸೇರಿದಂತೆ ಈ ಬೈಕಿನ ಹಲವು ಭಾಗಗಳಲ್ಲಿ ಕ್ರೋಮ್ ಬಣ್ಣವನ್ನು ನೀಡಲಾಗಿದೆ. ಎಕ್ಸಾಸ್ಟ್ ಕ್ಲಾಸಿಕ್ ಲೋ-ಪಿಚ್ ಥಂಪಿ ನೋಟ್ ಹೊಂದಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ವಿನ್ಯಾಸವನ್ನು ಸರಳಗೊಳಿಸಲು ಹಿಂಭಾಗವನ್ನು ಚಿಕ್ಕದು ಮಾಡಲಾಗಿದೆ. ಈ ಸೆಗ್ ಮೆಂಟಿನಲ್ಲಿ ಮೊದಲ ಬಾರಿಗೆ ಈ ಬೈಕಿನಲ್ಲಿ ರಿಂಗ್-ಟೈಪ್ ವಿಂಕರ್ ಗಳನ್ನು ನೀಡಲಾಗಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಮಾದರಿಗಳು ಹಾಗೂ ಫೀಚರ್ ಗಳು

ಹೋಂಡಾ ಹೈನೆಸ್ ಸಿಬಿ 350 ಬೈಕ್ ಅಸಿಸ್ಟ್ ಸ್ಲಿಪ್ಪರ್-ಕ್ಲಚ್, ಎಂಜಿನ್ ಸ್ಟಾರ್ಟ್ / ಸ್ಟಾಪ್ ಸ್ವಿಚ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಹೋಂಡಾ ಹೈನೆಸ್ ಸಿಬಿ 350 ಬೈಕ್ ಅನ್ನು ಡಿಎಲ್‌ಎಕ್ಸ್ ಹಾಗೂ ಡಿಎಲ್‌ಎಕ್ಸ್ ಪ್ರೊ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಬೇಸ್ ಮಾದರಿಯನ್ನು ಪ್ರೆಷಿಯಸ್ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಹಾಗೂ ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಎಂಬ ಮೂರು ಸಿಂಗಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಟಾಪ್-ಎಂಡ್ ಡಿಎಲ್ಎಕ್ಸ್ ಪ್ರೊ ಮಾದರಿಯನ್ನು ಮ್ಯಾಟ್ ಗ್ರೇ ಮೆಟಾಲಿಕ್, ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್, ವರ್ಚುವಸ್ ವೈಟ್ ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಹಾಗೂ ಸ್ಪಿಯರ್ ಸಿಲ್ವರ್ ಮೆಟಾಲಿಕ್ ಪರ್ಲ್ ನೈಟ್ ಸ್ಟಾರ್ ಮೆಟಾಲಿಕ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಈ ಬೈಕ್ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂಗಳನ್ನು ಹೊಂದಿದೆ. ಇವುಗಳನ್ನು ಟಾಪ್-ಎಂಡ್ ಮಾದರಿಯಾದ ಡಿಎಲ್‌ಎಕ್ಸ್ ಪ್ರೊ ಮಾದರಿಯಲ್ಲಿ ನೀಡಲಾಗುವುದು.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಎಂಜಿನ್, ಸಸ್ಪೆಂಷನ್ ಹಾಗೂ ಬ್ರೇಕಿಂಗ್

ಹೋಂಡಾ ಹೈನೆಸ್ ಸಿಬಿ 350 ಬೈಕ್ 348.36 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 5500 ಆರ್‌ಪಿಎಂನಲ್ಲಿ 20.8 ಬಿಹೆಚ್‌ಪಿ ಪವರ್ ಹಾಗೂ 3000 ಆರ್‌ಪಿಎಂನಲ್ಲಿ 30 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡಿನ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಹೋಂಡಾ ಹೆನೆಸ್ ಸಿಬಿ 350 ಹೊಸದಾಗಿ ತಯಾರಿಸುವ ಸ್ಟೀಲ್ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಫ್ರೇಮ್ ಅನ್ನು ಹೊಂದಿದೆ. ಈ ಫ್ರೇಮ್ ಎಂಜಿನ್ ಅನ್ನು ಲೋ ಮೌಂಟ್ ಮಾಡಲು ನೆರವಾಗುತ್ತದೆ. ಜೊತೆಗೆ ವೇಗದ ಸವಾರಿಯನ್ನು ಮೇಂಟೆನ್ ಮಾಡಲು ಸಹಾಯ ಮಾಡುತ್ತದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಈ ಬೈಕ್ ಉಳಿದ ಕಂಪನಿಗಳ ಬೈಕಿಗಿಂತ ಕಡಿಮೆ ತೂಕವನ್ನು ಅಂದರೆ 181 ಕೆ.ಜಿ ತೂಕವನ್ನು ಹೊಂದಿದೆ. ಎತ್ತರವಾಗಿರುವ ಹಾಗೂ ಕುಳ್ಳಗಿರುವ ಸವಾರರಿಗಾಗಿ ಈ ಬೈಕಿನಲ್ಲಿ 800 ಎಂಎಂ ಎತ್ತರದ ಸೀಟ್ ನೀಡಲಾಗಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಈ ಬೈಕ್ ಈ ಸೆಗ್ ಮೆಂಟಿನಲ್ಲಿಯೇ ಅತ್ಯುತ್ತಮವಾದ 166 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇದರಿಂದಾಗಿ ಬೈಕಿನ ತಳ ಭಾಗವು ಹಾನಿಯಾಗುವುದು ತಪ್ಪುತ್ತದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಹೋಂಡಾ ಹೈನೆಸ್ ಸಿಬಿ 350 ಬೈಕಿನ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್-ಅಬ್ಸಾವರ್ ಗಳನ್ನು ಅಳವಡಿಸಲಾಗಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಬ್ರೇಕಿಂಗ್ ಗಳಿಗಾಗಿ ಬೈಕಿನ ಮುಂಭಾಗದಲ್ಲಿ 310 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಗಳನ್ನು ನೀಡಲಾಗಿದೆ. ಈ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಈ ಬೈಕ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಮುಂಭಾಗದಲ್ಲಿ 100/90 ಆರ್ 19 ಹಾಗೂ ಹಿಂಭಾಗದಲ್ಲಿ 130/80 ಆರ್ 18 ಟಯರ್ ಗಳನ್ನು ಅಳವಡಿಸಲಾಗಿದೆ. ಈ ಬೈಕ್ ಕ್ಲಾಸಿಕ್ ರೆಟ್ರೊ-ಡಿಸೈನ್ ಥೀಮ್ ಹೊಂದಿದ್ದರೂ, ಹೊಸ ಟೆಕ್ನಾಲಜಿಗಳನ್ನು ಹೊಂದಿದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಪ್ರತಿಸ್ಪರ್ಧಿ

ಈ ಸೆಗ್ ಮೆಂಟಿನಲ್ಲಿ ಹೋಂಡಾ ಹೈನೆಸ್ ಸಿಬಿ 350 ಬೈಕ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಜಾವಾ ಸ್ಟ್ಯಾಂಡರ್ಡ್ ಹಾಗೂ ಬೆನೆಲ್ಲಿ ಇಂಪೀರಿಯೇಲ್ 400 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಹೋಂಡಾ ಹೈನೆಸ್ ಸಿಬಿ 350 ಫಸ್ಟ್ ಲುಕ್ ರಿವ್ಯೂ: ಕ್ಲಾಸಿಕ್ ರೆಟ್ರೋ ವಿನ್ಯಾಸದಲ್ಲಿ ಮೋಡಿ ಮಾಡುವ ಬೈಕ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೋಂಡಾ ಹೈನೆಸ್ ಸಿಬಿ 350 ದೇಶಿಯ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೊಸ ಆಧುನಿಕ-ಕ್ಲಾಸಿಕ್ ಬೈಕ್ ಆಗಿದೆ. ಈ ಸೆಗ್ ಮೆಂಟಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಪ್ರಾಬಲ್ಯವನ್ನು ಹೊಂದಿದೆ. ಹೋಂಡಾ ಹೈನೆಸ್ ಇದನ್ನು ಹೇಗೆ ಮೆಟ್ಟಿ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Honda Hness CB 350 first look review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X