ದೋಷ ಕಂಡು ಬಂದ ಹಿನ್ನೆಲೆ: ಸ್ಕೂಟರ್ ಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಹೋಂಡಾ ಕಂಪನಿಯು ತನ್ನ ಆಕ್ಟಿವಾ 6 ಜಿ ಹಾಗೂ ಡಿಯೋ ಸ್ಕೂಟರ್ ಗಳನ್ನು ಕಳೆದ ಜನವರಿಯಲ್ಲಿ ಬಿಎಸ್ -6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿತ್ತು. ಇದಕ್ಕೂ ಮುನ್ನ ಆಕ್ಟಿವಾದ 125 ಮಾದರಿಯನ್ನು ಬಿಎಸ್ 6 ಎಂಜಿನ್ ನಲ್ಲಿ ಮಾರಾಟ ಮಾಡಲಾಗುತ್ತಿತ್ತು.

ದೋಷ ಕಂಡು ಬಂದ ಹಿನ್ನೆಲೆ: ಸ್ಕೂಟರ್ ಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಈಗ ಎಲ್ಲಾ ಮೂರು ಮಾದರಿಗಳು ಮಾರಾಟದಲ್ಲಿವೆ. ಇದುವರೆಗೂ ಹತ್ತು ಲಕ್ಷಕ್ಕೂ ಹೆಚ್ಚು ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಈಗ ಬಿಎಸ್ 6 ಆಕ್ಟಿವಾ 125 ಸ್ಕೂಟರ್ ಗಳನ್ನು ರಿಕಾಲ್ ಮಾಡಲಾಗಿದೆ. ಕೂಲಿಂಗ್ ಫ್ಯಾನ್ ಹಾಗೂ ಆಯಿಲ್ ಗೇಜ್‌ನಲ್ಲಿರುವ ದೋಷವನ್ನು ಸರಿಪಡಿಸುವ ಉದ್ದೇಶದಿಂದ ರಿಕಾಲ್ ಮಾಡಲಾಗಿದೆ.

ದೋಷ ಕಂಡು ಬಂದ ಹಿನ್ನೆಲೆ: ಸ್ಕೂಟರ್ ಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಕಳಪೆ ಕಾರ್ಯನಿರ್ವಹಣೆಯನ್ನು ಹೊಂದಿರುವ ಗ್ರಾಹಕರು ತಮ್ಮ ಸ್ಕೂಟರ್ ಗಳನ್ನು ಡೀಲರ್ ಗಳ ಬಳಿ ಪರೀಕ್ಷಿಸಿ ಕೊಳ್ಳಬಹುದು.

ದೋಷ ಕಂಡು ಬಂದ ಹಿನ್ನೆಲೆ: ಸ್ಕೂಟರ್ ಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಆಕ್ಟಿವಾ 125, 110ಸಿಸಿಯ ಆಕ್ಟಿವಾ 6 ಜಿ ಹಾಗೂ ಡಿಯೋ ಸ್ಕೂಟರ್‌ಗಳನ್ನು ರಿಕಾಲ್ ಮಾಡಲಾಗಿದೆ. ಈ ಮೂರು ಸ್ಕೂಟರ್ ಗಳಲ್ಲಿರುವ ಹಿಂಭಾಗದ ಸಸ್ಪೆಂಷನ್ ಗಳಲ್ಲಿ ತೊಂದರೆಯುಂಟಾಗಿದೆ.

ದೋಷ ಕಂಡು ಬಂದ ಹಿನ್ನೆಲೆ: ಸ್ಕೂಟರ್ ಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಮಾರ್ಚ್ 15ರಿಂದ 24ರವರೆಗೆ ಈ ಎಲ್ಲಾ ಮೂರು ಮಾದರಿಗಳನ್ನು ರಿಕಾಲ್ ಮಾಡುವ ಯೋಜನೆಯನ್ನು ಹೊಂದಿದೆ.

ದೋಷ ಕಂಡು ಬಂದ ಹಿನ್ನೆಲೆ: ಸ್ಕೂಟರ್ ಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಗ್ರಾಹಕರಿಗೆ ಡೀಲರ್ ಗಳ ಮೂಲಕ ಇ-ಮೇಲ್, ಫೋನ್ ಅಥವಾ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು. ದೋಷಯುಕ್ತ ಸ್ಕೂಟರ್ ಕಂಡುಕೊಂಡರೆ ಸ್ಕೂಟರ್ ಅನ್ನು ಬದಲಾಯಿಸುವುದಾಗಿ ಹೋಂಡಾ ಮೋಟಾರ್‌ಸೈಕಲ್ ಕಂಪನಿ ಹೇಳಿದೆ.

ದೋಷ ಕಂಡು ಬಂದ ಹಿನ್ನೆಲೆ: ಸ್ಕೂಟರ್ ಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಹೋಂಡಾ ಆಕ್ಟಿವಾ 125, ಆಕ್ಟಿವಾ 6 ಜಿ ಹಾಗೂ ಡಿಯೋ ಸ್ಕೂಟರ್ ಗಳನ್ನು ಹೊಂದಿರುವ ಗ್ರಾಹಕರು ತಮ್ಮ ಸ್ಕೂಟರ್ ಗಳು ದೋಷವಾಗಿದೆಯೇ ಇಲ್ಲವೇ ಎಂಬುದನ್ನು ಹೋಂಡಾ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ದೋಷ ಕಂಡು ಬಂದ ಹಿನ್ನೆಲೆ: ಸ್ಕೂಟರ್ ಗಳನ್ನು ರಿಕಾಲ್ ಮಾಡಲು ಮುಂದಾದ ಹೋಂಡಾ

ಯಾವ ಸಮಯದಲ್ಲಿ ಸೇವೆಯನ್ನು ಪಡೆಯಬಹುದೆಂಬುದನ್ನು ಕಾಯ್ದಿರಿಸುವ ಮೂಲಕ ಸ್ಕೂಟರ್ ಗಳನ್ನು ಪರೀಕ್ಷಿಸಿಕೊಳ್ಳಬಹುದು. ಇದರಿಂದಾಗಿ ಸಮಯ ವಿಳಂಬವಾಗುವುದನ್ನು ಹಾಗೂ ವ್ಯರ್ಥವಾಗುವುದನ್ನು ತಪ್ಪಿಸಬಹುದು.

Most Read Articles

Kannada
English summary
Honda recalls three scooter models in India. Read in Kannada.
Story first published: Monday, March 16, 2020, 13:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X