Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ಹೊಸ ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕ್
ಅಮೆರಿಕ ಮೂಲದ ದಿಚಕ್ರ ವಾಹನ ತಯಾರಕ ಕಂಪನಿಯಾದ ಇಂಡಿಯನ್ ಮೋಟಾರ್‍ಸೈಕಲ್ ತನ್ನ 2021 ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕನ್ನು ಅನಾವರಣಗೊಳಿಸಿದೆ. ಹೊಸ ಬಣ್ಣಗಳ ಆಯ್ಕೆ ಮತ್ತು ಇತರ ನೂತನ ಫೀಚರ್ ಗಳೊಂದಿಗೆ 2021 ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕ್ ಅನಾವರಣವಾಗಿದೆ.

ಹೊಸ ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕ್ ಹೊಸ ಕ್ರಿಮ್ಸನ್ ಮೆಟಾಲಿಕ್ ಮತ್ತು ಥಂಡರ್ ಬ್ಲ್ಯಾಕ್ ಅಜೂರ್ ಕ್ರಿಸ್ಟಲ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕ್ ಹೊಸ ಫೇರಿಂಗ್ ವಿನ್ಯಾಸ, ಸ್ಲಿಮ್ಮರ್ ಫ್ರಂಟ್ ಫೆಂಡರ್, ಕ್ಲೈಮಲ್ ಕಮಾಂಡ್ ಸೀಟ್, ಹಿಟಿಂಗ್ ಮತ್ತು ಕೂಲಿಂಗ್ ಜೊತೆ ಸ್ಲ್ಯಾಮ್ಡ್ ಸ್ಯಾಡಲ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಇನ್ನು ಹೊಸ ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕಿನಲ್ಲಿ ಆಪಲ್ ಕಾರ್ ಪ್ಲೇಯೊಂದಿಗೆ ಹೊಸ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ರೈಡ್ ಕಮಾಂಡ್ ಡಿಸ್ ಪ್ಲೇ ಸಿಸ್ಟಂ ಮೂಲಕ ನ್ಯಾವಿಗೇಷನ್ ಜೊತೆಗೆ, ಸವಾರರಿಗೆ ಮ್ಯೂಸಿಕ್ ಆಯ್ಕೆ ಮತ್ತು ಕರೆಗಳನ್ನು ಸ್ವೀಕರಿಸುವ ಬಟನ್ ಆಯ್ಕೆಯನ್ನು ನೀಡಲಾಗಿದೆ.
MOST READ: ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

ಹೊಸ ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕಿನಲ್ಲಿ ಕ್ರೂಸ್ ಕಂಟ್ರೋಲ್, ಜೊತೆಗೆ ಫುಲ್ ಎಲ್ಇಡಿ ಲೈಟಿಂಗ್, ಅಡ್ಜೆಸ್ಟಬಲ್ ಏರ್ ವೆಂಟ್ಸ್ ಮತ್ತು ಹಿಟೆಡ್ ಗ್ರಿಪ್ಸ್ ಅನ್ನು ಒಳಗೊಂಡಿದೆ.

ಹೊಸ ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕಿನಲ್ಲಿ ಕ್ರೂಸ್ ಕಂಟ್ರೋಲ್, ಜೊತೆಗೆ ಫುಲ್ ಎಲ್ಇಡಿ ಲೈಟಿಂಗ್, ಅಡ್ಜೆಸ್ಟಬಲ್ ಏರ್ ವೆಂಟ್ಸ್ ಮತ್ತು ಹಿಟೆಡ್ ಗ್ರಿಪ್ಸ್ ಅನ್ನು ಒಳಗೊಂಡಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇದರ ಜೊತೆಗೆ ಪುಶ್ ಬಟನ್ ಹೊಂದಾಣಿಕೆ ಮಾಡಬಹುದಾದ ವಿಂಡ್‌ಶೀಲ್ಡ್ ಅನ್ನು ಸಹ ನೀಡುತ್ತದೆ. ಎಲ್ಲಾ ಹೊಸ ಪಾಥ್‌ಫೈಂಡರ್ ಅಡಾಪ್ಟಿವ್ ಎಲ್ಇಡಿ ಹೆಡ್‌ಲೈಟ್ ಮತ್ತು ಹೆಚ್ಚಿನ ಬೆಳಕಿಗಾಗಿ ಪ್ರತ್ಯೇಕ ಎಲ್ಇಡಿ ಪ್ರೊಜೆಕ್ಟರ್ ಅನ್ನು ಒಳಗೊಂಡಿದೆ

ಈ ಹೊಸ ಬೈಕಿನಲ್ಲಿ 1890 ಸಿಸಿ, 49 ಡಿಗ್ರಿ, ಏರ್ ಮತ್ತು ಆಯಿಲ್-ಕೂಲ್ಡ್ ವಿ-ಟ್ವಿನ್ ಥಂಡರ್ ಸ್ಟ್ರೋಕ್ 116 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಕೇವಲ 2,900 ಆರ್‌ಪಿಎಂನಲ್ಲಿ 170 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಹೊಸ ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 46 ಎಂಎಂ ಫೋರ್ಕ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಏರ್ ಶಾಕ್ ಅನ್ನು ಹೊಂದಿದೆ.

ಇನ್ನು ಹೊಸ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕಿನ ಬ್ರೇಕಿಂಗ್ ಸಿಸ್ಟಂ, ಮುಂಭಾಗದ ಟಯರ್ ನಲ್ಲಿ 300 ಎಂಎಂ ಫ್ಲೋಟಿಂಗ್ ಡಿಸ್ಕ್, ನಾಲ್ಕು-ಪಿಸ್ಟನ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ 300 ಎಂಎಂ ಫ್ಲೋಟಿಂಗ್ ಡಿಸ್ಕ್ ಅನ್ನು ಎರಡು ಪಿಸ್ಟನ್ ಕ್ಯಾಲಿಪರ್ ಅನ್ನು ಹೊಂದಿದೆ.
MOST READ: ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಕಟಿಸಿದ ಸುಜುಕಿ ಮೋಟಾರ್ಸೈಕಲ್

ಇದರೊಂದಿಗೆ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಈ ಹೊಸ ಇಂಡಿಯನ್ ರೋಡ್‌ಮಾಸ್ಟರ್ ಲಿಮಿಟೆಡ್ ಬೈಕನ್ನು ಅಮೆರಿಕಾದಲ್ಲಿ ಬಿಡುಗಡೆಗೊಳಿಸಿದ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಇನ್ನು ಇಂಡಿಯನ್ ಮೋಟಾರ್‍ಸೈಕಲ್ ಕಂಪನಿಯು ತನ್ನ ಸರಣಿಯಲ್ಲಿರುವ 7 ಇಂಚಿನ ರೈಡ್ ಕಮಾಂಡ್ ಸಿಸ್ಟಂ ಹೊಂದಿದ ಎಲ್ಲಾ ಬೈಕುಗಳಲ್ಲಿ ಆ್ಯಪಲ್ ಕಾರ್‌ಪ್ಲೇ ಫೀಚರ್ ಅನ್ನು ಅಳವಡಿಸಲಿದೆ. ಇಂಡಿಯನ್ ರೋಡ್ ಮಾಸ್ಟರ್ ಮತ್ತು ಇಂಡಿಯನ್ ಚಾಲೆಂಜರ್‌ನಂತಹ ಬೈಕುಗಳು ಈ ಫೀಚರು ಅನ್ನು ಪಡೆದುಕೊಳ್ಳಲಿದೆ.