ಭಾರತದಲ್ಲಿ ಬಿಡುಗಡೆಯಾದವು ಅಮೆರಿಕಾ ಮೂಲದ 2021ರ ಇಂಡಿಯನ್ ಬೈಕುಗಳು

ಅಮೆರಿಕ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಇಂಡಿಯನ್ ಮೋಟಾರ್‍‍ಸೈಕಲ್ ತನ್ನ 2021ರ ಸರಣಿಯಲ್ಲಿರುವ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇಂಡಿಯನ್ ಮೋಟಾರ್‍‍ಸೈಕಲ್ ತನ್ನ ಜನಪ್ರಿಯ ಮಾದರಿಗಳನ್ನು ಅಪ್ಡೇಟ್ ಮಾಡಿ ಭಾರತದಲ್ಲಿ ಪರಿಚಯಿಸಿದೆ.

ಭಾರತದಲ್ಲಿ ಬಿಡುಗಡೆಯಾದವು ಅಮೆರಿಕಾ ಮೂಲದ 2021ರ ಇಂಡಿಯನ್ ಬೈಕುಗಳು

2021ರ ಇಂಡಿಯನ್ ಮೋಟಾರ್‍‍ಸೈಕಲ್ ಸರಣಿಯಲ್ಲಿ ಮೊದಲಿಗೆ ಸ್ಕೌಟ್ ಬೈಕ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15.67 ಲಕ್ಷಗಳಾಗಿದೆ. ಈ ಓಲ್ಡ್ ಸ್ಕೂಲ್ ಕ್ರೂಸರ್ ಬೈಕ್ ಗಾಗಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಆಸಕ್ತ ಆಸಕ್ತ ಗ್ರಾಹಕರು ದೇಶಾದ್ಯಂತದ ಹತ್ತಿರದ ಇಂಡಿಯನ್ ಮೋಟಾರ್‍‍ಸೈಕಲ್ ಡೀಲರುಗಳ ಭೇಡಿ ನೀಡಿ ಟೋಕನ್ ಮೊತ್ತಕ್ಕೆ ರೂ.2 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಯಾದವು ಅಮೆರಿಕಾ ಮೂಲದ 2021ರ ಇಂಡಿಯನ್ ಬೈಕುಗಳು

2021ರ ಸ್ಕೌಂಟ್ ಸರಣಿಯಲ್ಲಿನ ನವೀಕರಣಗಳು ರಿಫ್ರೆಶ್ ಮಾಡಿದ ಹೊಸ ಬಣ್ಣದ ಬಣ್ಣಗಳನ್ನು ಒಳಗೊಂಡಿರುತ್ತವೆ. ಸ್ಕೌಟ್ ಮಾದರಿಯನ್ನು ಬಾಬರ್, ಸ್ಟ್ಯಾಂಡರ್ಡ್ ಮತ್ತು ಬಾಬರ್ ಟ್ವೆಂಟಿ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಬಿಡುಗಡೆಯಾದವು ಅಮೆರಿಕಾ ಮೂಲದ 2021ರ ಇಂಡಿಯನ್ ಬೈಕುಗಳು

ಸ್ಕೌಟ್ ಬೈಕ್ ಥಂಡರ್ ಬ್ಲ್ಯಾಕ್, ಡೀಪ್ ವಾಟರ್ ಮೆಟಾಲಿಕ್, ವೈಟ್ ಸ್ಮೋಕ್, ಮರೂನ್ ಮೆಟಾಲಿಕ್ ಓವರ್ ಕ್ರಿಮ್ಸನ್ ಮೆಟಾಲಿಕ್, ಬ್ಲೂ ಸ್ಲೇಟ್ ಮೆಟಾಲಿಕ್/ಕೋಬ್ರಾ ಸಿಲ್ವರ್, ಮತ್ತು ಸ್ಟೆಲ್ತ್ ಗ್ರೇ/ಥಂಡರ್ ಬ್ಲ್ಯಾಕ್ ಎಂಬ ಬಣ್ಣಗಳಲಿ ಲಭ್ಯವಿರುತ್ತದೆ.

ಭಾರತದಲ್ಲಿ ಬಿಡುಗಡೆಯಾದವು ಅಮೆರಿಕಾ ಮೂಲದ 2021ರ ಇಂಡಿಯನ್ ಬೈಕುಗಳು

ಸ್ಕೌಟ್ ಲೈನ್-ಅಪ್ ವಿ-ಟ್ವಿನ್ 1133 ಸಿಸಿ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 5600 ಆರ್ಪಿಎಂನಲ್ಲಿ 97 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಆರು-ವೇಗದ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಬಿಡುಗಡೆಯಾದವು ಅಮೆರಿಕಾ ಮೂಲದ 2021ರ ಇಂಡಿಯನ್ ಬೈಕುಗಳು

ಇನ್ನು ಇಂಡಿಯನ್ ವಿಂಟೇಜ್ ಮತ್ತು ವಿಂಟೇಜ್ ಡಾರ್ಕ್ ಹಾರ್ಸ್ ಕ್ರಮವಾಗಿ ರೂ.25.81 ಲಕ್ಷ ಮತ್ತು ರೂ.26.63 ಲಕ್ಷಗಳಾಗಿದೆ. ವಿಂಟೇಜ್ ಮಾದರಿಯು ಕ್ರಿಮ್ಸನ್ ಮೆಟಾಲಿಕ್ ಮತ್ತು ಡೀಪ್ ವಾಟರ್/ಡರ್ಟ್ ಟ್ರ್ಯಾಕ್ ಟ್ಯಾನ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ವಿಂಟೇಜ್ ಡಾರ್ಕ್ ಹಾರ್ಸ್ ಒಂದೇ ಥಂಡರ್ ಬ್ಲ್ಯಾಕ್ ಸ್ಮೋಕ್ ಬಣ್ಣದಲ್ಲಿ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಯಾದವು ಅಮೆರಿಕಾ ಮೂಲದ 2021ರ ಇಂಡಿಯನ್ ಬೈಕುಗಳು

ಇಂಡಿಯನ್ ಸ್ಪ್ರಿಂಗ್‌ಫೀಲ್ಡ್ ಲೈನ್‌ಅಪ್‌ ಬೈಕುಗಳು ಸ್ಟ್ಯಾಂಡರ್ಡ್ ಮತ್ತು ಡಾರ್ಕ್ ಹಾರ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಸ್ಪ್ರಿಂಗ್‌ಫೀಲ್ಡ್ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ರೂ.33.06 ಲಕ್ಷಗಳಾದರೆ, ಡಾರ್ಕ್ ಹಾರ್ಸ್ ರೂಪಾಂತರದ ಬೆಲೆಯು ರೂ.29.23 ಲಕ್ಷಗಳಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಭಾರತದಲ್ಲಿ ಬಿಡುಗಡೆಯಾದವು ಅಮೆರಿಕಾ ಮೂಲದ 2021ರ ಇಂಡಿಯನ್ ಬೈಕುಗಳು

ಈ ಪಟ್ಟಿಯಲ್ಲಿ ಮುಂದಿನ ಮಾದರಿ ಜನಪ್ರಿಯ ಚೀಪ್ಟೆನ್ ಅನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬೈಕ್ ಸ್ಟ್ಯಾಂಡರ್ಡ್, ಡಾರ್ಕ್ ಹಾರ್ಸ್ ಮತ್ತು ಲಿಮಿಟೆಡ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ

ಭಾರತದಲ್ಲಿ ಬಿಡುಗಡೆಯಾದವು ಅಮೆರಿಕಾ ಮೂಲದ 2021ರ ಇಂಡಿಯನ್ ಬೈಕುಗಳು

ಕೊನೆಯದಾಗಿ 2021ರ ರೋಡ್ ಮಾಸ್ಟರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ 021ರ ರೋಡ್ ಮಾಸ್ಟರ್ ಬೈಕ್ ಸ್ಟ್ಯಾಂಡರ್ಡ್, ಡಾರ್ಕ್ ಹಾರ್ಸ್ ಮತ್ತು ಲಿಮಿಟೆಡ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇಂಡಿಯನ್ ರೋಡ್ ಮಾಸ್ಟರ್ ಆರಂಭಿಕ ಬೆಲೆಯು ರೂ.43.21 ಲಕ್ಷ ಗಳಾಗಿದೆ.

ಭಾರತದಲ್ಲಿ ಬಿಡುಗಡೆಯಾದವು ಅಮೆರಿಕಾ ಮೂಲದ 2021ರ ಇಂಡಿಯನ್ ಬೈಕುಗಳು

ಇಂಡಿಯನ್ ಮೋಟಾರ್‍‍ಸೈಕಲ್ ತನ್ನ 2021ರ ಸರಣಿಯಲ್ಲಿರುವ ಎಲ್ಲಾ ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ತನ್ನ ಪ್ರತಿಸ್ಪರ್ಧಿ ಹಾರ್ಲೆ ಡೇವಿಡ್ಸನ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದರಿಂದ ಇಂಡಿಯನ್ ಮೋಟಾರ್‍‍ಸೈಕಲ್ ಮಾರಾಟವನ್ನು ಹೆಚ್ಚಿಸಲು ಉತ್ತಮ ಅವಕಾಶವಾಗಿದೆ.

Most Read Articles

Kannada
English summary
2021 Indian Motorcycle Line-up Launched In India Details. Read In Kannada.
Story first published: Thursday, November 12, 2020, 19:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X