Just In
Don't Miss!
- News
ಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಸಿಎಂ ಯಡಿಯೂರಪ್ಪ ಭೇಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ವರ್ಷದಿಂದ ದುಬಾರಿಯಾಗಲಿವೆ ಕವಾಸಕಿ ಬೈಕುಗಳು
ಭಾರತದಲ್ಲಿ ಕರೋನಾ ವೈರಸ್ ಆರ್ಭಟ ಇಳಿಮುಖವಾಗುತ್ತಿರುವಾಗ ವಾಹನಗಳ ಮಾರಾಟದಲ್ಲಿ ಹಲವು ತಿಂಗಳು ಬಳಿಕ ಚೇತರಿಕೆಯನ್ನು ಕಾಣುತ್ತಿದೆ. ವರ್ಷಾಂತ್ಯದಲ್ಲಿ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ಮಾದರಿಗಳ ಮೇಲೆ ಭರ್ಜರಿ೦ ಆಫರ್ ನೀಡುವ ಮೂಲಕ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

ಆದರೆ ವೆಚ್ಚ ನಿರ್ವಹಣೆಗಾಗಿ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಿವಿಧ ಮಾದರಿಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ನಡುವೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ಸರಿದೂಗಿಸಲು ಜನವರಿ 1 ರಿಂದ ತನ್ನ ಸರಣಿಯಲ್ಲಿರುವ ಕೆಲವು ಆಯ್ದ ಮಾದರಿಗಳ ಬೆಲೆಯನ್ನು ಹೆಚ್ಚಿಸಲು ಕವಾಸಕಿ ಕಂಪನಿಯು ನಿರ್ಧರಿಸಿದೆ.

2021ರ ಜನವರಿ 1 ರಿಂದ ಕವಾಸಕಿ ಕಂಪನಿಯು ತನ್ನ ಸರಣಿಯಲ್ಲಿರುವ ನಿಂಜಾ 650 ಮತ್ತು ನಿಂಜಾ 1000 ಎಸ್‌ಎಕ್ಸ್ ಬೈಕುಗಳ ಬೆಲೆಯನ್ನು ಹೆಚ್ಚಿಸಲಾಗುತ್ತದೆ. ಇದರೊಂದಿಗೆ ಕವಸಾಕಿ ಕಂಪನಿಯ ಝಡ್650 ಮತ್ತು 900 ಬೈಕುಗಳು ಕೂಡ ದುಬಾರಿಯಾಗಲಿವೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಕವಾಸಕಿ ಕಂಪನಿಯು ಭಾರತದಲ್ಲಿ ವಲ್ಕನ್ ಸರಣಿಯಲ್ಲಿ ವಲ್ಕನ್ ಎಸ್ ಮಾದರಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಈ ವಲ್ಕನ್ ಎಸ್ ಬೈಕ್ ಕೂಡ ದುಬಾರಿಯಾಗಲಿದೆ. ಇನ್ನು ಈ ಬೆಲೆ ಏರಿಕೆಯ ಪಟ್ಟಿಯಲ್ಲಿ ಕವಾಸಕಿಯ ವರ್ಸಿಸ್ ಸರಣಿಯ ವರ್ಸಿಸ್ 650 ಮತ್ತು ವರ್ಸಿಸ್ 1000 ಬೈಕುಗಳು ಕೂಡ ಇವೆ. ಇದರೊಂದಿಗೆ ಕವಾಸಕಿ ಡಬ್ಲ್ಯು800 ಬೈಕ್ ಕೂಡ ಹೊಸ ವರ್ಷದಿಂದ ದುಬಾರಿಯಾಗಲಿದೆ.

ಈ ಮೇಲೆ ಹೇಳಿರುವ ಎಲ್ಲಾ ಬೈಕುಗಳ ಬೆಲೆಯು 2021ರ ಜನವರಿ 1 ರಿಂದ ಬೆಲೆ ಏರಿಕೆಯಾಗುತ್ತದೆ. ಆದರೆ ಕವಾಸಕಿ ಕಂಪನಿ ವರ್ಷಾಂತ್ಯದಲ್ಲಿ ಮಾರಾಟವನ್ನು ಹೆಚ್ಚಿಸಲು ರಿಯಾಯಿತಿಯನ್ನು ಘೋಷಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ ಆಯ್ದ ಬೈಕುಗಳಿಗೆ ಕವಾಸಕಿ ಕಂಪನಿಯು ರೂ.50,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕವಾಸಕಿ ಕಂಪನಿಯು ತನ್ನ ಕೆಎಲ್‌ಎಕ್ಸ್ 110, ಕೆಎಲ್‌ಎಕ್ಸ್ 140, ಕೆಎಕ್ಸ್ 100, ಡಬ್ಲ್ಯು 800, ಝಡ್ 650 ವರ್ಸಿಸ್ 650, ಮತ್ತು ವಲ್ಕನ್ ಎಸ್ ಮಾದರಿಗಳ ಬೆಲೆ ರಿಯಾಯಿಗಳನ್ನು ಘೋಷಿಸಿದೆ.

ಕವಾಸಕಿ ಕಂಪನಿಯು ವರ್ಷಾಂತ್ಯದ ಮಾರಾಟವನ್ನು ಹೆಚ್ಚಿಸಲು ತನ್ನ ಆಯ್ದ ಜನಪ್ರಿಯ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಗ್ರಾಹಕರು ಆಯ್ದ ಮಾದರಿಗಳ ಅಕ್ಸೆಸರೀಸ್ ಖರೀದಿಸಲು ಕೂಪನ್ ಅನ್ನು ಸಹ ಬಳಸಬಹುದು. ಕಂಪನಿಯು ನೀಡುವ ಕೆಲವು ಅಕ್ಸೆಸರೀಸ್ ಗಳನ್ನು ಗ್ರಾಹಕರು ಆಯ್ಕೆ ಮಾಡಬಹುದು.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಕವಾಸಕಿ ಕಂಪನಿಯ ಆಯ್ದ ಮಾದರಿಗಳ ಮೇಲಿನ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಮಾತ್ರ ಲಭ್ಯವಿರುತ್ತದೆ. ಈ ಆಯ್ದ ಮಾದರಿಗಳನ್ನು ಗ್ರಾಹಕರು ಖರೀದಿಸುವಾಗ ಕೂಪನ್ ಅನ್ನು ದೇಶದಾದ್ಯಂತದ ಯಾವುದೇ ಕವಾಸಕಿ ಡೀಲರುಗಳ ಬಳಿ ಪಡೆದುಕೊಳ್ಳಬಹುದು.

ಮಾದರಿವಾರು ಹೇಳಬೇಕಾದರೆ, ಮೊದಲಿಗೆ ಕವಾಸಕಿ ವರ್ಸಿಸ್ 650 ಅಡ್ವೆಂಚರ್ ಟೂರರ್ ಬೈಕಿನ ಮೇಲೆ ರೂ.30,000 ಗಳ ಮೌಲ್ಯದ ‘ಅಡ್ವೆಂಚರ್ ವೋಚರ್' ಎಂಬ ರಿಯಾಯಿತಿಯೊಂದಿಗೆ ನೀಡಲಾಗುತ್ತದೆ. ಈ ವೋಚರ್' ನಲ್ಲಿ ಅಕ್ಸೆಸರೀಸ್ ಕೂಡ ಆಯ್ಕೆ ಮಾಡಿಕೊಳ್ಳಬಹುದು.

ಬ್ರ್ಯಾಂಡ್‌ನ ಆಫ್-ರೋಡ್ ಮಾದರಿ ಕೆಎಲ್‌ಎಕ್ಸ್ 110 ಮತ್ತು ಕೆಎಲ್‌ಎಕ್ಸ್ 140 ಬೈಕುಗಳ ಮೇಲೆ ಕ್ರಮವಾಗಿ ರೂ.30,000 ಮತ್ತು ರೂ.40,000 ಗಳ ರಿಯಾಯಿತಿ ‘ಆಫ್-ರೋಡ್ ವೋಚರ್' ಎಂದು ನೀಡಲಾಗುತ್ತದೆ.

ಕವಾಸಕಿ ತನ್ನ ಡಬ್ಲ್ಯು800 ಮತ್ತು ನೇಕೆಡ್ ಮಾದರಿಯಾದ ಝಡ್650 ಬೈಕುಗಳ ಮೇಲೆ ರೂ.30,000 ಮೌಲ್ಯದ ವೋಚರ್ ಸಹ ನೀಡುತ್ತದೆ. ಇನ್ನು ಕವಾಸಕಿ ವಲ್ಕನ್ ಎಸ್ ಬೈಕಿನ ಮೇಲೆ ರೂ.20,000 ಮೌಲ್ಯದ ವೋಚರ್ ಸಹ ನೀಡುತ್ತದೆ